Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ವಿಷಯದಲ್ಲಿ ಪೋಷಕರು ಮಾಡಲೇಬಾರದ 6 ತಪ್ಪುಗಳಿವು
ಕುಟುಂಬ ಸುಂದರವಾಗಿರಬೇಕಾದರೆ, ಅಥವಾ ಕುಟುಂಬದಲ್ಲಿ ಸಂತೋಷ ನೆಲೆ ನಿಲ್ಲಲು ಮಕ್ಕಳಿರಬೇಕು. ಮನೆತುಂಬ ಮಕ್ಕಳಿರಬೇಕು ಅನ್ನೋ ಕಾಲ ಇದಲ್ಲ. ಪರಿಸ್ಥಿತಿ ಬದಲಾಗಿದೆ. ಒಂದಿಬ್ಬರು ಮಕ್ಕಳನ್ನು ಪಾಲನೆ ಮಾಡುವುದು ಸಾಹಸವಾಗುತ್ತಿದೆ. ಆದರೆ ಕುಟುಂಬ ಚಿಕ್ಕದಾಗುತ್ತಿದೆ, ಮಕ್ಕಳು ಒಂದು, ಹೆಚ್ಚೆಂದರೆ ಎರಡು. ಆದರೆ ಪಾಲನೆಯಲ್ಲಿ ಎಡವಿ ಬೀಳುತ್ತಿರುವ ಪೋಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳ ಪಾಲನೆ ಪೋಷಕರಿಗೆ ಸವಾಲಾಗುತ್ತಿದೆ. ಇದು ಮಕ್ಕಳ ಬೆಳವಣಿಗೆ ಮಾತ್ರವಲ್ಲ, ಭವಿಷ್ಯದಲ್ಲೂ ಮಾರಕವಾಗುತ್ತಿದೆ.

ಉತ್ತಮ ಪೋಷಕರಾಗುವುದು ಹೇಗೆ? ಇದಕ್ಕೆ ಇಂತದ್ದೇ ನಿಯಮ, ಮಾರ್ಗಸೂಚಿಗಳಿಲ್ಲ. ಕಾರಣ ಪ್ರತಿ ಮಗು ವಿಶೇಷ ಹಾಗೂ ಭಿನ್ನ. ಪ್ರತಿ ಮನೆಯಲ್ಲಿನ ಸವಾಲು ಬೇರೆ, ಪರಿಸ್ಥಿತಿ, ಸರಿ ತಪ್ಪುಗಳು ಬೇರೆ ಬೇರೆ. ಆದರೆ ಮಕ್ಕಳ ಪಾಲನೆ ಹಾಗೂ ಪೋಷಣೆಯಲ್ಲಿ ಕೆಲ ತಪ್ಪುಗಳಿಂದ ದೂರವಿದ್ದರೆ ಉತ್ತಮ ಪೋಷಕರಾಗಲು ಸಾಧ್ಯವಿದೆ. ಮಕ್ಕಳು ಸರಿದಾರಿಯಲ್ಲಿ ಸಾಗಲು ಸುಲಭವಾಗಲಿದೆ.
ಮಕ್ಕಳ ಪಾಲನೆಗೆ ಪೋಷಕರು ಇನ್ನಿಲ್ಲದ ಪರಿಪಾಠ ಅನುಭವಿಸುತ್ತಿರುವುದು ಹೊಸದೇನಲ್ಲ. ಎಲ್ಲಾ ಕಾಲದಲ್ಲೂ ಪೋಷಕರ ಪಾಡು ಹೇಳತೀರದು. ಆದರೆ ಡಿಜಿಟಲ್ ಜಗತ್ತಿನಲ್ಲಿ ಪೋಷಕರ ಸವಾಲು ದುಪ್ಪುಟ್ಟು. ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ಪೋಷಕರೇ ತಪ್ಪು ಮಾಡಿದರೆ ಮಕ್ಕಳ ಗತಿ ಏನು? ಎಲ್ಲಿ ತಪ್ಪು ಮಾಡುತ್ತಿದ್ದಾರೆ ಅನ್ನೋ ಅರಿವು ಪೋಷಕರಿಗೆ ಆಗದಿದ್ದರೆ ಮಕ್ಕಳ ಪಾಲನೆಯಲ್ಲಿ ಸಮಸ್ಯೆಗಳಾಗುವುದು ಖಚಿತ.
ಮಕ್ಕಳ ಆರೈಕೆ, ಬೆಳವಣಿಗೆ ಪೋಷಕರಿಗೂ ಹೊಸದು. ಪೋಷಕರ ಸಣ್ಣ ತಪ್ಪು ಮಕ್ಕಳ ಮೇಲೂ ಪರಿಣಾಮ ಬೀರಲಿದೆ. ಕೆಲವೊಮ್ಮೆ ಅಳೆದು ತೂಗಿ ತೆಗೆದುಕೊಂಡ ಉತ್ತಮ ನಿರ್ಧಾರ ಸಂಪೂರ್ಣವಾಗಿ ಬುಡಮೇಲಾದ ಉದಾಹರಣೆಗಳಿವೆ. ಹೀಗಾಗಿ ಸೆಟ್ ಆಫ್ ರೂಲ್ಸ್ ಅನ್ನೋದು ಇಲ್ಲಿಲ್ಲ.
1 ಮಗುವಿನ ಭಾವನೆಗಳನ್ನು ನಿಯಂತ್ರಿಸುವುದು ಮಾಡಬಾರದು
ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ಮಗು ಬೇಸರ ಪಟ್ಟು ಅಳುವಾಗ ಏಕೆ ಅಳುತ್ತೀಯಾ ಎಂದು ಕೇಳುವುದು ಅಥವಾ ಮಕ್ಕಳು ಅಳುತ್ತಿದ್ದರೆ ಮತ್ತಷ್ಟು ಅಳುವಂತೆ ಮಾಡುವುದು ಸೂಕ್ತವಲ್ಲ. ಮಕ್ಕಳನ್ನು ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡಿ ಹೇಳುವುದು ಮಾಡಬೇಡಿ.
ಬದಲಿಗೆ ಅಳುವಿಗೆ ಕಾರಣವನ್ನು ಕೇಳಿ ಧೈರ್ಯ ತುಂಬಬೇಕು ಇದರಿಂದ ಮಕ್ಕಳು ಏಳು ಬೀಳುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ.
2 ಮಗುವಿನ ಮಾತನ್ನು ಪರಿಗಣಿಸದೇ ಇರುವುದು
ಬಹುತೇಕ ಬಾರಿ ಮಕ್ಕಳು ಅನಗತ್ಯವಾಗಿ ಪೋಷಕರ ಗಮನ ಸೆಳೆಯಲು ಅಥವಾ ತಮ್ಮ ವಾದ ಮಂಡಿಸುವ ಪ್ರಯತ್ನ ಮಾಡುತ್ತಾರೆ. ಪೋಷಕರು ಅತೀ ಮುಖ್ಯ ಕೆಲಸದಲ್ಲಿ ಅಥವಾ ಮಕ್ಕಳ ಹೇಳುತ್ತಿರುವ ವಿಚಾರ ಗಮನಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರಬಹುದು. ಆದರೂ ಮಕ್ಕಳು ಏನು ಹೇಳುತ್ತಿದ್ದಾರೆ ಅನ್ನೋದನ್ನು ಅಷ್ಟೇ ಗಂಭೀರವಾಗಿ ಆಲಿಸಬೇಕು. ಯಾವತ್ತೂ ಮಕ್ಕಳಿಗೆ ತಮ್ಮ ಮಾತು ಪೋಷಕರು ಆಲಿಸುತ್ತಿಲ್ಲ, ಪರಿಗಣಿಸುತ್ತಿಲ್ಲ ಅನ್ನೋ ಭಾವನೆ ಬರಬಾರದು. ಮಕ್ಕಳ ಹೇಳುತ್ತಿರುವ ವಿಚಾರ ಕ್ಷುಲ್ಲಕವಾಗಿರಬಹುದು, ಅಥವಾ ಅಸಂಬದ್ಧವಾಗಿರಬಹುದು. ಆದರೆ ಕೇಳಿಸಿಕೊಳ್ಳುವುದು ಅತೀ ಮುಖ್ಯ. ಇದು ಸರ್ವತೋಮುಖ ಅಭಿವೃದ್ಧಿಗೂ ಸಹಕಾರಿಯಾಗಿದೆ. ಮಗುವಿನ ಈ ಮಾತುಗಳನ್ನು ಆಲಿಸದೆ ನಿರ್ಲಕ್ಷಿಸಿದ್ದರೆ ಬೆಳೆಯುತ್ತಾ ಮಗುವ ಪೋಷಕರಲ್ಲಿ ಯಾವುದೇ ವಿಚಾರ ಹಂಚಿಕೊಳ್ಳುವುದಿಲ್ಲ.
3. ಇತರ ಮಕ್ಕಳ ಜೊತೆ ಹೋಲಿಕೆ ಮಾಡುವುದು
ನಿಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡಬೇಡಿ. ಯಾವುದೇ ವಿಚಾರ ಆಗಿರಬಹುದು, ಕಾರಣ ಇರಬಹುದು, ಹೋಲಿಕೆ ಅತೀ ದೊಡ್ಡ ಅಪಾಯಕ್ಕೆ ನಾಂದಿ ಹಾಡಲಿದೆ. ಅಂಕದ ವಿಚಾರದಲ್ಲಿ, ಕ್ರೀಡೆ, ಇತರ ಚಟುವಟಿಕೆಗಳಲ್ಲಿ ತರಗತಿಯ ಟಾಪರ್, ಪಕ್ಕದ ಮನೆಯ ಮಕ್ಕಳು ಅಥವಾ ಬೇರೆ ಮಕ್ಕಳ ಜೊತೆ ಹೋಲಿಕೆ ಬೇಡ. ಇದು ನಿಮ್ಮ ಮಗುವಿನ ಆತ್ಮವಿಶ್ವಾಸ ಕುಂದಿಸಲಿದೆ. ಮಗುವಿನ ಮೇಲೆ ನೆಗಟೀವ್ ಪರಿಣಾಮ ಬೀರಲಿದೆ. ಇದರಿಂದ ಹೆಜ್ಜೆ ಹೆಜ್ಜೆಗೂ ಮಗವಿನಲ್ಲಿ ಹಿಂಜರಿಕೆ ಗಟ್ಟಿಯಾಗಿ ಬೇರೂರಲಿದೆ.
4. ಜೀವನ ಮೌಲ್ಯ, ಕಷ್ಟ, ಶ್ರಮದ ಅರಿವು ಮೂಡಿಸದಿರುವುದು
ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುವುದು ಅತೀ ಅಗತ್ಯ. ಮಕ್ಕಳು ಕೇಳಿದ್ದನ್ನೆಲ್ಲಾ ಕ್ಷಣಮಾತ್ರದಲ್ಲಿ ಕೊಡುವುದು ಉತ್ತಮ ಪೋಷಕರ ಲಕ್ಷಣವಲ್ಲ. ಮಕ್ಕಳು ಕೇಳಿದ ವಸ್ತು ಅಥವಾ ವಿಚಾರ ಪಡೆಯಲು ಹಿಂದಿರುವ ಶ್ರಮದ ಕುರಿತು ಮಕ್ಕಳಿಗೆ ಅರಿವು ಇರಬೇಕು. ಇದು ಮಕ್ಕಳಲ್ಲಿ ಶಿಸ್ತು ಬೆಳೆಸುತ್ತದೆ. ಜೊತೆಗೆ ಮಾನಸಿಕವಾಗಿ ಬಲಿಷ್ಠರಾಗುತ್ತಾರೆ.
5 ಮಕ್ಕಳಿಗೆ ಹೊಡೆಯುವುದು
ಮಕ್ಕಳಿಗೆ ಶಿಸ್ತು ಕಲಿಸಲು ದಂಡ ಪ್ರಯೋಗ ಎಲ್ಲರು ಮೊದಲ ಹಾಗೂ ಪ್ರಮುಖ ಆಯ್ಕೆ. ಆದರೆ ಮಕ್ಕಳಿಗೆ ಹೊಡೆಯುವುದರಿಂದ ಅಥವಾ ಥಳಿಸುವುದರಿಂದ ಶಿಸ್ತು ಕಲಿಸಲು ಸಾಧ್ಯವಿಲ್ಲ. ದಂಡ ಆ ಕ್ಷಣಕ್ಕೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆಧರೆ ಭವಿಷ್ಯದಲ್ಲಿ ಪುನಾರರ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು. ಅವರಿಗೆ ತಪ್ಪುಗಳನ್ನು ತಿಳಿಸಿ ಹೇಳಬೇಕು. ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ತಪ್ಪುಗಳನ್ನು ತಿಳಿಸಿ ಸರಿದಾರಿಗೆ ತರಬೇಕು.
6.ಮಕ್ಕಳ ಮುಂದೆ ಜಗಳವಾಡಬೇಡಿ
ಮಕ್ಕಳ ಮುಂದೆ ಪೋಷಕರ ಜಗಳ ಕೂಡ ಉತ್ತಮವಲ್ಲ. ಇದು ಅವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಲಿದೆ. ನಿಮ್ಮ ಆಸೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರಬೇಡಿ. ಅವರ ಆಸೆ ಆಸಕ್ತಿಯನ್ನು ಗಮನದಲ್ಲಿಡಿ.



Click it and Unblock the Notifications