Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮಹಿಳೆರನ್ನು ವಿವಸ್ತ್ರಗೊಳಿಸಿದ ಕಿಡಗೇಡಿಗಳು! ಶೂನ್ಯ FIR ದಾಖಲು!
ಎಫ್ಐಆರ್ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತೆ. ಆದರೆ ಜೀರೋ ಎಫ್ಐಆರ್ ಅಥವಾ ಶೂನ್ಯ ಎಫ್ಐಆರ್ ಬಗ್ಗೆ ಹೆಚ್ಚಿನವರಿಗೆ ಗೊತ್ತಿರೋದಿಲ್ಲ. ಮಣಿಪುರ ಅತ್ಯಾಚಾರ ಪ್ರಕರಣದ ನಂತರ ಈ ಶೂನ್ಯ ಎಫ್ಐಆರ್ ದೇಶದಾದ್ಯಂತ ಸಂಚಲನ ಮೂಡಿಸುತ್ತಿದೆ. ಅಷ್ಟಕ್ಕು ಶೂನ್ಯ ಎಫ್ಐಆರ್ ಎಂದರೇನು? ಇದು ಯಾವ ರೀತಿ ಕೆಲಸ ಮಾಡುತ್ತೆ ಅನ್ನೋದನ್ನು ತಿಳಿಯೋಣ.
ಮಣಿಪುರದಲ್ಲಿ ಮೇ 4 ರಂದು ಮೂವರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಅವರ ಮೇಲೆ ಹಲ್ಲೆ ನಡೆಸಿ, ಮೆರವಣಿಗೆ ಮಾಡಿದ ಆರೋಪದ ಮೇಲೆ ನಾಲ್ಕು ಜನ ಆರೋಪಿಗಳನ್ನು ಮಣಿಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಪ್ರಕರಣ ನಡೆದು ತಿಂಗಳಾದರೂ ಕೂಡ ಬೆಳಕಿಗೆ ಬಂದಿರ್ಲಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು ಶೂನ್ಯ ಎಫ್ಐಆರ್ ದಾಖಲಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

ಶೂನ್ಯ ಎಫ್ಐಆರ್ ಎಂದರೇನು?
ಶೂನ್ಯ ಎಫ್‌ಐಆರ್ ಎಂದರೆ ಅಪರಾಧ ಎಸಗಿರುವ ಪ್ರದೇಶವನ್ನು ಲೆಕ್ಕಿಸದೆ ನೋಂದಾಯಿಸಲಾದ ಎಫ್‌ಐಆರ್. ಈ ಸಂದರ್ಭದಲ್ಲಿ ಪೊಲೀಸರು ತಮ್ಮ ಅಧಿಕಾರ ವ್ಯಾಪ್ತಿಗೆ ಈ ಪ್ರದೇಶ ಬರುವುದಿಲ್ಲವೆಂದು ಹೇಳಿಕೊಳ್ಳುವಂತಿಲ್ಲ. ಬದಲಾಗಿ ತಕ್ಷಣವೇ ಪ್ರಕರಣ ದಾಖಲು ಮಾಡಿಕೊಳ್ಳಬೇಕು. ಇದಾದ ಬಳಿಕ ಎಫ್‌ಐಆರ್ ಅನ್ನು ನಿಜವಾದ ನ್ಯಾಯವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.
ಆ ಮೂಲಕ ಶೂನ್ಯ ಎಫ್‌ಐಆರ್ ಅನ್ನು ಸಾಮಾನ್ಯ ಎಫ್‌ಐಆರ್ ಆಗಿ ಪರಿವರ್ತಿಸಲಾಗುತ್ತದೆ. ಶೂನ್ಯ ಎಫ್‌ಐಆರ್ ನಲ್ಲಿ ಎಫ್‌ಐಆರ್‌ಗಿಂತ ಭಿನ್ನವಾಗಿ ಅವುಗಳಿಗೆ ಸರಣಿ ಸಂಖ್ಯೆಗಳನ್ನು ನಿಗದಿಪಡಿಸಲಾಗಿದೆ. ಶೂನ್ಯ ಎಫ್‌ಐಆರ್‌ಗಳಿಗೆ '0' ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಆದ್ದರಿಂದ ಈ ಹೆಸರು ಬಂದಿರುತ್ತದೆ. ಇನ್ನೂ ಪ್ರಕರಣವನ್ನು ವರ್ಗಾಯಿಸಿದ ನಂತರ ಸೂಕ್ತ ಅಧಿಕಾರ ವ್ಯಾಪ್ತಿಯ ಪೊಲೀಸ್ ಠಾಣೆಯು ಕ್ರಮ ಕೈಗೊಳ್ಳುತ್ತದೆ.
ಶೂನ್ಯ ಎಫ್ಐಆರ್ ಜಾರಿಗೆ ಬಂದಿದ್ದು ಯಾವಾಗ?
2012ರಲ್ಲಿ ದೆಹಲಿಯ ಭೀಕರ ಗ್ಯಾಂಗ್ ರೇಪ್ ಪ್ರಕರಣದ ಬಳಿಕ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಜೆಎಸ್ ವರ್ಮಾ ಅವರ ನೇತೃತ್ವದಲ್ಲಿ ಮೂರು ಸದಸ್ಯರ ಸಮಿತಿಯನ್ನು ರಚಿಸಿತು. ಈ ಸಮಿತಿಯು ಶೂನ್ಯ ಎಫ್‌ಐಆರ್ ಪರಿಕಲ್ಪನೆಯನ್ನು ಶಿಫಾರಸು ಮಾಡಿದೆ. ಇದರ ಪ್ರಕಾರ ಒಂದು ಪ್ರಕರಣ ಪೊಲೀಸರ ನ್ಯಾಯ ವ್ಯಾಪ್ತಿಗೆ ಬಾರದಿದ್ದರೂ ಪ್ರಕರಣವನ್ನು ದಾಖಲಿಸಿ, ತನಿಖೆ ಪ್ರಾರಂಭಿಸಬೇಕು ಎಂದು ಹೇಳುತ್ತದೆ. ನಂತರದ ದಿನಗಳಲ್ಲಿ ಸಂಬಂಧ ಪಟ್ಟ ಠಾಣೆಗೆ ಪ್ರಕರಣವನ್ನು ವರ್ಗಾಯಿತಕ್ಕದ್ದು ಎಂದು ಹೇಳುತ್ತದೆ.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ 5,960ಕ್ಕೂ ಹೆಚ್ಚು ಬೆಂಕಿ ಮತ್ತು ಹಿಂಸಾಚಾರದಂತಹ ಪ್ರಕರಣಗಳು ದಾಖಲಾಗಿವೆ. ಪ್ರತಿದಿನ ಸರಾಸರಿ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಅಂತಹ ಒಟ್ಟು ಪ್ರಕರಣಗಳಲ್ಲಿ 1,771 ಪ್ರಕರಣಗಳು ಅಂದರೆ ಸುಮಾರು 30 ಪ್ರತಿಶತ ಎಫ್‌ಐಆರ್‌ಗಳು ಶೂನ್ಯ ಎಫ್‌ಐಆರ್‌ಗಳಾಗಿವೆ. ನ್ಯಾಯವ್ಯಾಪ್ತಿಯನ್ನು ಲೆಕ್ಕಿಸದೆ ಪೊಲೀಸರು ಇಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುತ್ತಿದ್ದಾರೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಪ್ರಕರಣ ಆದಷ್ಟು ಬೇಗ ಸುಖಾಂತ್ಯವನ್ನು ಕಾಣಲಿ ಎನ್ನುವುದೇ ಎಲ್ಲರ ಆಶಯ.



Click it and Unblock the Notifications