Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಿಡಿಯೋಗಾಗಿ ನವಜಾತ ಶಿಶುವಿನ ಹೊಕ್ಕುಳ ಬಳ್ಳಿ ಕತ್ತರಿಸಿದ ಯ್ಯೂಟೂಬರ್ ತಂದೆ..! ಆಮೇಲೆ ಆಗಿದ್ದೇನು ಗೊತ್ತಾ?
ಸಾಮಾಜಿಕ ಜಾಲತಾಣ ಬೆಳವಣಿಗೆ ಹೊಂದಿದಷ್ಟು ಅದರಿಂದ ಅನುಕೂಲಕ್ಕಿಂತಲೂ ಅನಾನುಕೂಲವೇ ಹೆಚ್ಚಾಗುತ್ತಿದೆ. ಕೆಲವರು ಆನ್ಲೈನ್ ಮೀಡಿಯಾಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಡೆಯುತ್ತಲೇ ಇದೆ. ಹಲವು ಬಾರಿ ಚಿತ್ರ ವಿಚಿತ್ರ ಘಟನೆಗಳು ನಡೆಯುವುದನ್ನು ಕೂಡ ನಾವು ನೋಡಿರುತ್ತೇವೆ. ಕೆಲವರು ಆನ್‌ಲೈನ್‌ನಲ್ಲಿ ವಿಡಿಯೋ ನೋಡಿಕೊಂಡು ಅತ್ಯುತ್ತಮ ಸ್ಕಿಲ್‌ಗಳ ಕಲಿಯುತ್ತಾರೆ. ಆದ್ರೆ ಮತ್ತೆ ಕೆಲವರು ಇದರಿಂದ ಸಮಾಜಕ್ಕೆ ಹಾನಿಯಾಗುವಂತಹ ಪ್ರಯೋಗಗಳ ಮಾಡಲು ಮುಂದಾಗುತ್ತಾರೆ.
ಇಲ್ಲಿಯೂ ಕೂಡ ಒಬ್ಬ ಯ್ಯೂಟೂಬರ್ ಲೈಕ್, ವೀವ್ಸ್ ಗಾಗಿ ಯಾರು ಮಾಡದ ಕೆಲಸ ಮಾಡಿ ಈಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಆತ ತನ್ನ ಹೆಂಡತಿಯ ಹೆರಿಗೆಯ ವೇಳೆ ವಿಚಿತ್ರ ವಿಡಿಯೋ ಮಾಡಿ ಈಗ ಸುದ್ದಿಯಾಗಿದ್ದಾರೆ. ಆತ ತನ್ನ ಹೆಂಡತಿ ಹಾಗೂ ನವಜಾತ ಮಗುವಿನ ನಡುವಿನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿ ಅದರ ವಿಡಿಯೋ ಮಾಡಿ ಅಪ್‌ಲೋಡ್ ಮಾಡಿರುದು ಕೆಂಗಣ್ಣಿಗೆ ಗುರಿಯಾಗಿದೆ.

ಫುಡ್ ವ್ಲಾಗರ್ ಆಗಿರುವ ಇರ್ಫಾನ್ ಎಂಬ ತಮಿಳುನಾಡಿನ ಚೆನ್ನೈನ ಯುವಕ ತನ್ನ ಮಡದಿಗೆ ಹೆರಿಗೆಯಾದಾಗ ಆಪರೇಷನ್ ಥಿಯೇಟರ್‌ನಲ್ಲಿಯೇ ವಿಡಿಯೋ ಮಾಡಿದ್ದಾನೆ. ಹಾಗೂ ನವಜಾತ ಶಿಶುವಿನ ಹೊಕ್ಕಳು ಬಳ್ಳಿಯನ್ನು ಆತನೆ ಕತ್ತರಿಯಿಂದ ಕತ್ತರಿಸಿ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಹಾಗೂ ವೈದಕೀಯ ಸಂಸ್ಥೆಗಳ ಕಣ್ಣು ಕೆಂಪಾಗಿಸಿದೆ.
ಎರಡು ದಿನದಲ್ಲಿ ಈ ವಿಡಿಯೋ ಬರೋಬ್ಬರಿ 1.4 ಮಿಲಿಯನ್ ವೀಕ್ಷಣೆ ಕಂಡಿದೆ. ಈ ನಡುವೆ ಈ ವಿಡಿಯೋ ವೈದ್ಯಕೀಯ ಮತ್ತು ಗ್ರಾಮೀಣ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಗಮನಕ್ಕೂ ಬಂದಿದೆ. ತಮಿಳುನಾಡು ಆರೋಗ್ಯ ಇಲಾಖೆ ವೈದ್ಯರು ಮತ್ತು ಖಾಸಗಿ ಆಸ್ಪತ್ರೆ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಆಪರೇಷನ್ ಥಿಯೇಟರ್ ಒಳಗೆ ಇಂತಹ ಕೃತ್ಯಗಳಿಗೆ ಅವಕಾಶ ನೀಡಿದ ವೈದ್ಯರ ಮೇಲೂ ನಿಷೇಧ ಹೇರಬೇಕು ಎಂದು ಒತ್ತಾಯಿಸಲಾಗಿದೆ.
ಇರ್ಫಾನ್ ಮತ್ತು ಆಸ್ಪತ್ರೆ ಎರಡೂ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆಯನ್ನು ಉಲ್ಲಂಘಿಸಿವೆ ಎಂದು ರಾಜ್ಯ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಸಹ ಹೇಳಿದ್ದಾರೆ . ಹಾಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಆದರೆ ವೈದ್ಯರ ಪ್ರಕಾರ ಇರ್ಫಾನ್ ಒತ್ತಾಯ ಪೂರ್ವಕವಾಗಿ ತಾನೇ ಕರುಳ ಬಳ್ಳಿ ಕತ್ತರಿಸುವುದಾಗಿ ವಿನಂತಿ ಮಾಡಿದ್ದನಂತೆ. ವಿಡಿಯೋ ಮಾಡುವ ಉದ್ದೇಶದಿಂದ ಆತ ಈ ರೀತಿ ಮಾಡಿದ್ದಾನೆ ಎಂದು ವರದಿಯಾಗಿದೆ.
ಘಟನೆ ಕುರಿತಂತೆ ಇರ್ಫಾನ್ ಸಹ ಕ್ಷಮೆಯಾಚಿಸಿದ್ದಾರೆ. ಆದರೆ ಈ ಸಂಬಂಧ ದೂರು ದಾಖಲಾಗಿದ್ದು ಆತನ ಮೇಲೆ ಕ್ರಮವಾಗಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಈ ವಿಡಿಯೋ ನೋಡಿದ ಮಂದಿ ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ಎಂತಹ ಮನುಷ್ಯನೇ ಆದರೂ ಈ ಸಮಯದಲ್ಲಿ ವಿಡಿಯೋ ಮಾಡುವ ಸಾಹಸ ಮಾಡುವುದಿಲ್ಲ. ಅದರಲ್ಲೂ ಇದು ನಿಯಮ ಉಲ್ಲಂಘನೆ ಮಾಡಿ ಆತ ಈ ರೀತಿಯ ವಿಡಿಯೋಗಳ ಮಾಡಿರುವುದು ತಪ್ಪು, ಮುಂದೆ ಮತ್ತೊಂದಿಷ್ಟು ಜನ ಇದೇ ರೀತಿ ಹುಚ್ಚುತನ್ನಕೆ ಮುಂದಾಗುತ್ತಾರೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಹೊಕ್ಕುಳ ಬಳ್ಳಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುತ್ತದೆ, ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೂಡ ಮಗುವಿನ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗೆ ಹೊಕ್ಕುಳ ಬಳ್ಳಿಯ ಸರಿಯಾದ ಆರೈಕೆ ಇಲ್ಲದಿದ್ದರೆ ಸೋಂಕು ಉಂಟಾಗುವ ಹಲವು ಪ್ರಕರಣವನ್ನ ನಾವು ನೋಡಿರುತ್ತೇವೆ. ಈ ಬಳ್ಳಿಯಲ್ಲಿ ಉಂಟಾಗುವ ಸೋಂಕು ಇಡೀ ದೇಹಕ್ಕೆ ಹರಡುವ ಸಾಧ್ಯತೆ ಇರುತ್ತದೆ. ಹಾಗೆ ಇದಕ್ಕೆ ಕಡಿವಾಣ ಹಾಕುವುದು ಕೂಡ ಕಷ್ಟವಾಗಲಿದೆ.



Click it and Unblock the Notifications
