Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Year Ender 2025: ಈ ವರ್ಷ ಸಂಭವಿಸಿದ ಕೆಲವು ಕಹಿ ಘಟನೆಗಳಿವು!
2025ನೇ ವರ್ಷ ಮುಗಿಯುತ್ತಾ ಬಂದಿದೆ. 2025ರಲ್ಲಿ ಹಲವು ರೀತಿಯ ಘಟನೆಗಳು ಸಂಭವಿಸಿದೆ. ಅದ್ರಲ್ಲೂ ಇಡೀ ವಿಶ್ವದಾದ್ಯಂತ ಈ ವರ್ಷ ಹತ್ತು ಹಲವು ಅಹಿತಕರ ಘಟನೆಗಳು ಸಹ ನಡೆದಿವೆ. ಒಂದಿಷ್ಟು ಪ್ರಾಣ ಹಾನಿ ಆಸ್ತಿ ಹಾನಿ ಕೂಡ ಸಂಭವಿಸಿರುವುದು ನೆನೆಯಬಹುದು. ಪ್ರಪಂಚದ ಹಲವು ಕಡೆಗಳಲ್ಲಿ ಒಂದಿಷ್ಟು ದುರ್ಘಟನೆಗಳು ಸಹ ಸಂಭವಿಸಿದೆ. ಹಾಗಾದ್ರೆ 2025ರಲ್ಲಿ ವಿಶ್ವದ ಯಾವ ಮೂಲೆಯಲ್ಲಿ ಯಾವ ರೀತಿ ಘಟನೆಗಳು ನಡೆದಿವೆ ಅನ್ನೋದನ್ನು ನಾವಿಲ್ಲಿ ತಿಳಿಯೋಣ.
ಈ ವರ್ಷ ಹಲವು ರೀತಿ ರಾಜಕೀಯ ವಿದ್ಯಮಾನಗಳು, ನೈಸರ್ಗಿಕ ವಿಪ್ಪತ್ತುಗಳು ಸಂಭವಿಸಿದೆ. ಅಂತಹ ಘಟನೆಗಳನ್ನು ನಾವು ಈ ವರ್ಷದ ಅಂತ್ಯದಲ್ಲಿ ಒಮ್ಮೆ ನೆನಪಿಸಿಕೊಳ್ಳೋಣ.
ಭಾರತ ಪಾಕ್ ಕಲಹ/ ಆಪರೇಷನ್ ಸಿಂದೂರ್
2025ರಲ್ಲಿ ಭಾರತ ಹಲವು ರೀತಿಯ ಭಯೋತ್ಪಾದನಾ ದಾಳಿ ಎದುರಿಸಿದೆ. ವರ್ಷದ ಆರಂಭದಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಘಟನೆ ನಡೆದಿತ್ತು. ಏಪ್ರಿಲ್‌ನಲ್ಲಿ ಕಾಶ್ಮೀರದಲ್ಲಿ 25 ಮಂದಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದು ವಿಶ್ವದಾದ್ಯಂತ ಸುದ್ದಿಯಾಗಿತ್ತು, ಇದಾದ ಕೆಲಸ ದಿನದಲ್ಲಿ ಭಾರತವು ಪ್ರತಿಯಾಗಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿತ್ತು, ಇದಕ್ಕೆ ಆಪರೇಷನ್ ಸಿಂದೂರ ಆರಂಭಿಸಿದ್ದರು.

ಲಾಸ್ ಏಂಜಲಸ್ ಬೆಂಕಿ
ವರ್ಷದ ಆರಂಭದಲ್ಲಿ ಜನವರಿಯಲ್ಲಿ ಅಮೆರಿಕದ ಲಾಸ್ ಏಂಜಲಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಮನುಕುಲಕ್ಕೆ ಆಪತ್ತು ತಂದಿತ್ತು, ಅದ್ರಲ್ಲೂ ಸಾವಿರಾರು ಎಕರೆ ಪ್ರದೇಶಕ್ಕೆ ಹರಡಿದ ಬೆಂಕಿಯು ಜೀವಸಂಕುಲಕ್ಕೆ ದಾಳಿ ಮಾಡಿತ್ತು.
ಮ್ಯಾನ್ಮಾರ್ ಭೂಕಂಪ
ಮಾರ್ಚ್‌ಲ್ಲಿ ಮ್ಯಾನ್ಮಾರ್‌ನ ಮಂಡಲೇ ಬಳಿ 7.7 ತೀವ್ರತೆಯ ಭೂಕಂಪ ಸಂಭವಿಸಿ, ಸಾವಿರಾರು ಜನರು ಸಾವನ್ನಪ್ಪಿದರು ಮತ್ತು ಆಗ್ನೇಯ ಏಷ್ಯಾದಾದ್ಯಂತ ವ್ಯಾಪಕ ಹಾನಿಗೆ ಇದು ಕಾರಣವಾಗಿತ್ತು.
ಏರ್ ಇಂಡಿಯಾ ವಿಮಾನ ದುರಂತ
ಭಾರತದ ಪಾಲಿಗೆ ಈ ದುರಂತ ಅತ್ಯಂತ ದೊಡ್ಡ ಘಟನೆಯಾಗಿದೆ. ವಿಮಾನ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ. ಈ ವರ್ಷದ ಜೂನ್ 12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 260 ಮಂದಿ ಮೃತಪಟ್ಟು ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದ.
ಸುಂಟರಗಾಳಿಯ ಹಾನಿ
ಜೂನ್‌ನಲ್ಲಿ ಉತ್ತರ ಯುನೈಟೆಡ್ ಸ್ಟೇಟ್ಸ್ ಮತ್ತು ದಕ್ಷಿಣ ಕೆನಡಾದ ಕೆಲವು ಭಾಗಗಳಲ್ಲಿ ಪ್ರಮುಖ ಸುಂಟರಗಾಳಿ ಮತ್ತು ಡೆರೆಕೊ ಸಂಭವಿಸಿತು. ಇದು ಸಾವಿರಾರು ಮಂದಿ ಮನೆ, ಆಸ್ತಿ ಕಳೆದುಕೊಳ್ಳುವಂತೆ ಮಾಡಿತ್ತು.
ರಷ್ಯಾ ದ್ವೀಪದಲ್ಲಿ ಭೂಕಂಪ
2025ರಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪನದಲ್ಲಿ ಇದು ಒಂದು ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ 8.8 ತೀವ್ರತೆಯ ಪ್ರಮುಖ ಭೂಕಂಪ ಸಂಭವಿಸಿತು.
ಉತ್ತರಾಖಂಡ್ ಮೇಘಸ್ಪೋಟ
ಆಗಸ್ಟ್ ತಿಂಗಳಲ್ಲಿ ಉತ್ತರಾಖಂಡದಲ್ಲಿ ಮೋಡಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹವು ಸಾವು ಮತ್ತು ಕಾಣೆಯಾದ ವ್ಯಕ್ತಿಗಳಿಗೆ ಕಾರಣವಾಯಿತು.
ಸಿರಿಯಾದಲ್ಲಿ ಅಸ್ಸಾದ್ ಆಡಳಿತ ಪತನ
ವಿಶ್ವದ ರಾಜಕೀಯ ಆಗುಹೋಗುಗಳಲ್ಲಿ ಸಿರಿಯಾದಲ್ಲಿ ದೊಡ್ಡ ರಾಜಕೀಯ ಬದಲಾವಣೆ ಸಂಭವಿಸಿತು. ಹಯಾತ್ ತಹ್ರಿರ್ ಅಲ್-ಶಾಮ್ (HTS) ನೇತೃತ್ವದ ಬಂಡಾಯ ಪಡೆಗಳು ಡಿಸೆಂಬರ್ ಆರಂಭದಲ್ಲಿ ಡಮಾಸ್ಕಸ್ ಮತ್ತು ಇತರ ಪ್ರಮುಖ ನಗರಗಳನ್ನು ವಶಪಡಿಸಿಕೊಂಡವು, ಇದು ಬಶರ್ ಅಲ್-ಅಸ್ಸಾದ್ ಸರ್ಕಾರದ ಪತನಕ್ಕೆ ಕಾರಣವಾಯಿತು.
ಥೈಲ್ಯಾಂಡ್-ಕಾಂಬೋಡಿಯಾ ಗಡಿ ವಿವಾದ
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ಗಡಿ ವಿವಾದ ಈಗ ದೊಡ್ಡ ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ, ಅದ್ರಲ್ಲೂ ದೇವಾಲಯ ಮೇಲಿನ ಹಿಡಿತಕ್ಕಾಗಿ ಎರಡೂ ದೇಶಗಳ ನಡುವೆ ಕದನ ನಡೆಯುತ್ತಿದೆ. ಇದು ಹಿಂಸಾತ್ಮಕ ರೂಪಕ್ಕೂ ತಿರುಗಿದೆ. ಆ ಪ್ರದೇಶದಲ್ಲಿನ ಲಕ್ಷಾಂತರ ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.
ಪೋಪ್ ಫ್ರಾನ್ಸಿಸ್ ಸಾವು
ಈ ವರ್ಷದ ಏಪ್ರಿಲ್‌ನಲ್ಲಿ ಪೋಪ್ ಫ್ರಾನ್ಸಿಸ್ 88 ನೇ ವಯಸ್ಸಿನಲ್ಲಿ ನಿಧನರಾದರು, ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಅವರ ಉತ್ತರಾಧಿಕಾರಿಯಾಗಿ, ಮೊದಲ ಉತ್ತರ ಅಮೆರಿಕಾದ ಪೋಪ್ ಪೋಪ್ ಲಿಯೋ XIV ಆಗಿ ಆಯ್ಕೆಯಾದರು.
ದೆಹಲಿ ಕಾರ್ ಬಾಂಬ್ ಸ್ಪೋಟ
ನವೆಂಬರ್‌ನಲ್ಲಿ ಕೆಂಪು ಕೋಟೆ ಬಳಿ ಕಾರ್ ಬಾಂಬ್ ಸ್ಪೋಟಗೊಂಡು ದುರಂತ ಸಂಭವಿಸಿತ್ತು. ಘಟನೆಯಲ್ಲಿ 15 ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.



Click it and Unblock the Notifications






