Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ನೇಪಾಳದ ರಾಷ್ಟ್ರೀಯ ಚಿಹ್ನೆಯಾಗಿ 'ಯತಿ' ನಾಮನಿರ್ದೇಶನ..! ಹಿಮಾಲಯ ಕಾಯುವ ಯತಿ ಯಾರು..?
ಭಾರತದ ಮತ್ತು ನೇಪಾಳದ ನಡುವೆ ಬಹಳಷ್ಟು ಸಾಮ್ಯತೆ ಇದೆ. ಅಲ್ಲಿನ ಆಚರಣೆಗಳು, ರೂಢಿಗಳು ಭಾರತದ ನೆಲದ ಸಂಸ್ಕೃತಿಯೇ ಆಗಿದೆ. ಈಗ ಅಲ್ಲಿನ ನೇಪಾಳ ಸರ್ಕಾರ ತಮ್ಮ ರಾಷ್ಟ್ರೀಯ ಚಿಹ್ನೆಯನ್ನಾಗಿ ಯತಿಯನ್ನು ನಾಮ ನಿರ್ದೇಶನ ಮಾಡಿದೆ. ಯತಿ ಹಿಂದೂ ಪುರಾಣಗಳಲ್ಲಿ ಕಂಡುಬರುವ ಒಂದು ಪಾತ್ರವಾಗಿದೆ. ಜೊತೆಗೆ ಯತಿ ಎಂಬ ಹೆಸರಿನ ಹಿಂದೆ ಹಲವು ಕಥೆಗಳಿವೆ, ಉಪ ಕಥೆಗಳು ಸಹ ಇದೆ.
ಹಾಗಾದ್ರೆ ನೇಪಾಳ ಯತಿ ಹೆಸರನ್ನು ರಾಷ್ಟ್ರೀಯ ಚಿಹ್ನೆಯನ್ನಾಗಿ ನಾಮ ನಿರ್ದೇಶನ ಮಾಡಿರುವುದೇಕೆ? ಈ ಯತಿ ಹೆಸರಿನ ಹಿಂದಿರುವ ಕಥೆ ಏನು? ಯತಿಗೂ ಹಿಂದೂ ಧರ್ಮದಲ್ಲಿರುವ ಉಲ್ಲೇಖವೇನು ಎಂಬುದನ್ನು ನಾವಿಂದು ತಿಳಿಯೋಣ.

ಯತಿ ಅಂದರೆ ಅದೊಂದು ಗೊರಿಲ್ಲಾ ಜಾತಿಗೆ ಸೇರಿದ್ದ ಪ್ರಾಣಿ ಅಂತಲೂ ದಾಖಲೆ ಇದೆ. ಆದರೆ ಪುರಾಣಗಳ ಪ್ರಕಾರ ಹಿಮಾಲಯ ಕಾಯುವ ಕಾವಲುಗಾರ ಅಂತಲೂ ಹೆಸರಾಗಿದೆ. ನೇಪಾಳ ಹಿಮಾಲಯ ತಟದಲ್ಲಿರುವುದರಿಂದ ಇದಕ್ಕೆ ಯತಿಯನ್ನೇ ರಾಷ್ಟ್ರೀಯ ಚಿಹ್ನಿಯಾಗಿ ಮಾಡುವ ನಿರ್ಧಾರ ಮಾಡಿದೆ.
ಈ ನಿರ್ಧಾರದ ಪರಿಣಾಮವಾಗಿ, ದೇಶ ಮತ್ತು ವಿದೇಶಗಳಲ್ಲಿ ನೇಪಾಳದ ಎಲ್ಲಾ ಬ್ರ್ಯಾಂಡಿಂಗ್‌ನಲ್ಲಿ ಯತಿ ಪ್ರಧಾನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಪೌರಾಣಿಕ ಜೀವಿಗಳ ಕಲಾತ್ಮಕ ವ್ಯಾಖ್ಯಾನವು ಹೊಸ ಕರೆನ್ಸಿ ನೋಟುಗಳ ಮೇಲೆ ಕೂಡ ಕಾಣಿಸುತ್ತದೆ, ಇವುಗಳನ್ನು ಇನ್ನು ಮುಂದೆ ಮುದ್ರಿಸಲಾಗುತ್ತದೆ.
ಹಿಂದೂ ಪುರಾಣದಲ್ಲಿ ಯತಿಯ ಉಲ್ಲೇಖ ಎಲ್ಲಿದೆ.?
ದೇವಲೋಕದ ರಾಜನಾಗಿದ್ದ ಇಂದ್ರ ಒಮ್ಮೆ ತನ್ನ ದೇವಲೋಕಕ್ಕೆ ಸಂಚಕಾರ ತಂದಿದ್ದ ರಾಕ್ಷಸ ವೃತ್ರಾಸುರ ಎಂಬಾತನನ್ನು ಕೊಲ್ಲುತ್ತಾನೆ. ಆದರೆ ಈ ರಾಕ್ಷಸ ಬ್ರಹ್ಮನಿಂದ ವರ ಪಡೆದವನಾಗಿರುತ್ತಾನೆ. ಹೀಗಾಗಿ ಬ್ರಹ್ಮನ ಕೋಪಕ್ಕೆ ಕಾರಣನಾಗುತ್ತಾನೆ. ಇಂದ್ರನು ಬ್ರಹ್ಮಹತ್ಯೆ ದೋಷದ ಪ್ರಾಯಶ್ಚಿತಕ್ಕಾಗಿ ಒಂದು ಸಾವಿರ ವರ್ಷಗಳ ಕಾಲ ಸ್ವರ್ಗವನ್ನು ಬಿಡುತ್ತಾನೆ. ಈ ವೇಳೆ ತನ್ನ ಲೋಕ ನೋಡಿಕೊಳ್ಳಲು ಇಂದ್ರ ಭೂಲೋಕದ ಪ್ರಬಲ ರಾಜ ನಹುಷನನ್ನು ಕೂರಿಸುತ್ತಾನೆ. ಈ ನಹುಷನಿಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ. ಒಬ್ಬ ಯಯಾತಿ ಇನ್ನೋರ್ವ ಯತಿ.
ಯತಿ ಎಂಬ ಪದದ ಮೊದಲ ಉಲ್ಲೇಖ ಸಿಗುವುದು ಈ ಕಥೆಯಲ್ಲಿಯೇ ಮುಂದೆ ಈ ಯತಿ ರಾಜನಾಗುವ ಸಂದರ್ಭ ಬಂದಾಗ ಅದನ್ನು ನಿರಾಕರಿಸುತ್ತಾನೆ. ಆದ್ರೆ ಯಯಾತಿ ರಾಜನಾಗುತ್ತಾನೆ. ಮುಂದೆ ಇದೇ ಯಯಾತಿ ಪುರು ಎಂಬ ಮಗನ ಜನ್ಮಕ್ಕೆ ಕಾರಣನಾಗಿತ್ತಾನೆ. ಈ ಪುರು ಎಂಬ ಪುತ್ರ ಕೌರವರು ಹಾಗೂ ಪಾಂಡವರ ಹುಟ್ಟಿಗೂ ಕಾರಣನಾಗುತ್ತಾನೆ. ಇದೊಂದು ಅತ್ಯಂತ ವಿಸ್ತಾರ ಕಥೆಯಾಗಿದೆ. ಆದ್ರೆ ನಮಗಿಲ್ಲಿ ಯತಿ ಎಂಬ ಪದ ಮೊದಲು ಕಾಣಿಸುವುದು ಇದೇ ಕಥೆಯಲ್ಲಿ.
ಯತಿ ಹೆಜ್ಜೆ ಗುರಿತು ಎಂದಿದ್ದ ಭಾರತೀಯ ಸೇನೆ
2019ರಲ್ಲಿ ಭಾರತೀಯ ಸೇನೆ ಇಡೀ ವಿಶ್ವದ ಗಮನ ಸೆಳೆದಿದ್ದು, ಹಿಮಾಲಯ ಶ್ರೇಣಿಯ ಬಳಿ ಬೃಹತ್ ಗಾತ್ರದ ಪ್ರಾಣಿಯೊಂದರ ಹೆಜ್ಜೆ ಗುರುತುಗಳ ಗುರುತಿಸಿ ನಿಗೂಢ ಹೆಜ್ಜೆ ಗುರುತುಗಳು ಎಂದು ಪೋಸ್ಟ್ ಮಾಡಿತ್ತು. ಜೊತೆಗೆ ಇದು 'ಯತಿ'ಯ ಗುರುತು ಎಂದು ಹೇಳುವ ಮೂಲಕ ಸಂಚಲನಕ್ಕೆ ಕಾರಣವಾಗಿತ್ತು.
32X15 ಇಂಚುಗಳು ಅಥವಾ 81X38 ಸೆಂ.ಮೀ ಅಳತೆಯ "ನಿಗೂಢ ಹೆಜ್ಜೆಗುರುತುಗಳ" ಚಿತ್ರ. ಮಕಾಲು-ಬರುನ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಮೀಪದಲ್ಲಿ ಕಂಡುಬರುವ "ಯತಿ" ಎಂಬ ಪೌರಾಣಿಕ ಪ್ರಾಣಿಗೆ ಸೇರಿದ ಹೆಜ್ಜೆಗುರುತುಗಳು ಎಂದು ಅದು ಸೂಚಿಸುತ್ತದೆ. ಯತಿಯನ್ನು "ದೃತ್ಯ ಹಿಮಮಾನವ" ಎಂದು ನಂಬಲಾಗಿದೆ, ಇದು ಜಾನಪದ ಕಥೆಗಳು ಮತ್ತು ಜನಪ್ರಿಯ ಕಥೆಗಳಲ್ಲಿ ಕಾಣಿಸಿಕೊಂಡಿದೆ. ದಶಕಗಳಿಂದ ಅನೇಕರು ಯತಿಯನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ, ಆದರೆ ಹೆಚ್ಚಿನ ಪುರಾವೆಗಳಿಲ್ಲದೆ. ಈ "ಎಲೆಸ್ಸಿವ್ ಯತಿ ಹಿಮಮಾನವನ" ಬಗ್ಗೆ ಹೆಚ್ಚಿನ ಪುರಾವೆಗಳಿಲ್ಲದ ಕಾರಣ, ವೈಜ್ಞಾನಿಕ ಸಮುದಾಯವು ಇದನ್ನು ದಂತಕಥೆ ಎಂದು ಕರೆದಿದೆ. "ಮೊದಲ ಬಾರಿಗೆ, #IndianArmy ಪರ್ವತಾರೋಹಣ ಎಕ್ಸ್‌ಪೆಡಿಶನ್ ತಂಡವು 09 ಏಪ್ರಿಲ್ 2019 ರಂದು ಮಕಾಲು ಬೇಸ್ ಕ್ಯಾಂಪ್‌ನ ಸಮೀಪ 32x15 ಇಂಚುಗಳಷ್ಟು ಅಳತೆಯ ಪೌರಾಣಿಕ ಪ್ರಾಣಿ 'ಯತಿ'ಯ ನಿಗೂಢ ಹೆಜ್ಜೆಗುರುತುಗಳನ್ನು ಪತ್ತೆ ಮಾಡಿದೆ ಎಂದು ಭಾರತೀಯ ಸೇನೆ ಎಕ್ಸ್ (ಟ್ವೀಟ್) ಮಾಡಿತ್ತು.
ಇದು ನೇಪಾಳದ ಜಾನಪದ ಕಥೆಗಳಲ್ಲೂ ಯತಿ ಉಲ್ಲೇಖಗಳು ಕಾಣಸಿಗುತ್ತವೆ, ಯತಿ ಎಂದರೆ ಅದೊಂದು ದೈತ್ಯ ಪ್ರಾಣಿ. ನಮ್ಮ ಹಿಮಾಲಯವನ್ನು ಸದಾ ಕಾವಲು ಕಾಯುತ್ತಿದೆ ಎಂದು ನೇಪಾಳದ ಕಥೆಯಲ್ಲಿದೆ. ಈಗಲೂ ಅಲ್ಲಿನ ಜನ ಇದನ್ನು ನಂಬುತ್ತಾರೆ.



Click it and Unblock the Notifications