Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಯಶೋದಾ ಜಯಂತಿ 2025: ಕೃಷ್ಣನ ಸಾಕುತಾಯಿಯ ಜಯಂತಿ ಆಚರಿಸೋದ್ಯಾಕೆ? ಇದರ ಕಥೆ ಗೊತ್ತಾ?
ಶ್ರೀಕೃಷ್ಣನ ತಾಯಿ ಯಶೋದೆಯ ಜಯಂತಿಯನ್ನು ದೇಶದಲ್ಲಿ ಆಚರಿಸುವುದು ನಿಮಗೆ ಗೊತ್ತಾ? ಇಂದು ಕೃಷ್ಣನ ತಾಯಿಯಾಗಿರುವ ಯಶೋದೆಯ ಜಯಂತಿಯಾಗಿದೆ. ಯಶೋದೆಯ ಜನನವು ಫಾಲ್ಗುಣಿ ಮಾಸದ ಕೃಷ್ಣ ಪಕ್ಷದ ಆರನೇ ದಿನದಂದು ಆಗಿದೆ ಎಂದು ನಂಬಲಾಗಿದೆ. ದೇವಕಿ ಕೃಷ್ಣನ ತಾಯಿಯಾಗಿದ್ದರೂ ಯಶೋದೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಯಶೋದೆ ಕೃಷ್ಣನ ಸಾಕು ತಾಯಿ.
ಈ ದಿನ ಉಪವಾಸ, ಪೂಜೆ ನೆರವೇರಿಸಲಾಗುತ್ತದೆ. ಹಾಗೆ ಕೃಷ್ಣನಂತಹ ಮಕ್ಕಳು ಜನಿಸಲಿ ಎಂಬ ಕಾರಣಕ್ಕೆ ವಿವಾಹವಾಗಿರುವ ಮಹಿಳೆ ವ್ರತ ಮಾಡುವುದು ಕೂಡ ನೋಡಬಹುದು. ಕಂಸನಿಂದ ಶ್ರೀಕೃಷ್ಣನನ್ನು ಕಾಪಾಡುವ ಉದ್ದೇಶದಿಂದ ಬಾಲಕನಾಗಿದ್ದ ಕೃಷ್ಣನನ್ನು ಆಶ್ರಮದಲ್ಲಿ ಯಶೋದೆ ಬಳಿ ಬಿಟ್ಟು ಹೋಗಲಾಗಿತ್ತು. ಯಶೋದೆ ಸಾಕು ತಾಯಿಯಾಗಿ ಕೃಷ್ಣನ ಬೆಳೆಸಿದಳು ಎಂದು ನಂಬಲಾಗಿದೆ.

ಯಶೋದಾ ಜಯಂತಿಯ ಉಪವಾಸ ಮಾಡುವುದರಿಂದ ಕೃಷ್ಣನಂತೆ ಗುಣವುಳ್ಳ ಮಕ್ಕಳು ಜನಿಸುತ್ತಾರೆ ಎಂದು ನಂಬಲಾಗಿದೆ. ಹಾಗೆ ಮಕ್ಕಳಿರುವ ತಾಯಂದಿರು ಈ ಉಪವಾಸ ಮಾಡುವುದು ಮಕ್ಕಳ ಆಯಸ್ಸು ಹೆಚ್ಚಾಗುತ್ತದೆ ಎಂದು ಸಹ ಹೇಳಲಾಗಿದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಷಷ್ಠಿ ತಿಥಿಯಂದು ಯಶೋದಾ ಜಯಂತಿ ಆಚರಿಸಲಾಗುತ್ತದೆ. ಹೀಗಾಗಿ ಪ್ರತಿ ವರ್ಷವೂ ಈ ದಿನಾಂಕ ಬದಲಾಗುತ್ತದೆ. ಈ ವರ್ಷ ಫೆ.18ರಂದು ಆಚರಿಸಲಾಗುತ್ತಿದೆ.
ಈ ದಿನದಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ತಲೆ ಸ್ನಾನ ಮಾಡಿ ನಂತರ ಶುಚಿ ಬಟ್ಟೆ ಧರಿಸಿ, ಆ ಕ್ಷಣದಿಂದ ಉಪವಾಸ ಮಾಡಬೇಕು. ಹಾಗೆ ಕೃಷ್ಣ ಮತ್ತು ಯಶೋದೆಯ ಫೋಟೋಗೆ ಪೂಜೆ ಮಾಡುವುದು ಈ ದಿನದ ವಿಶೇಷ. ಅದರಲ್ಲೂ ಬೆಣ್ಣೆ, ಶ್ರೀಗಂಧ, ಅಕ್ಷತೆ, ತುಪ್ಪದ ದೀಪ ಹಚ್ಚುವುದು ಪೂಜೆಯ ಸಾಮಾನ್ಯ ನಿಯಮವಾಗಿದೆ.
ಯಶೋದಾ ಜಯಂತಿಯಂದು ಪಠಿಸಬೇಕಾದ ಮಂತ್ರ
"ಓಂ ಕ್ಲೀಂ ಕೃಷ್ಣಾಯ ನಮಃ", "ಓಂ ನಮೋ ಭಗವತೇ ವಾಸುದೇವಾಯ" ಮತ್ತು "ಓಂ ಶ್ರೀ ಯಶೋದಾದೇವ್ಯೈ ನಮಃ" ಮುಂತಾದ ಮಂತ್ರಗಳನ್ನು ದೈವಿಕ ಆಶೀರ್ವಾದವನ್ನು ಪಡೆಯಲು ಹೇಳಲಾಗುತ್ತದೆ.
ಯಶೋದೆ ಕುರಿತ ಅಚ್ಚರಿಯ ವಿಚಾರಗಳು
ಯಶೋದೆ ಶ್ರೀಕೃಷ್ಣನ ಸಾಕು ತಾಯಿ. ಕೃಷ್ಣನು ದೇವಕಿ ಮತ್ತು ವಾಸುದೇವರಿಗೆ ಜನಿಸಿದ ಮಗು. ಆದರೆ ಗೋಕುಲದಲ್ಲಿ ಯಶೋದೆ ಬಳಿ ನಂದ ಮಹರಾಜರ ಬಳಿ ಬೆಳೆದಿದ್ದ. ಯಶೋದೆ ತನ್ನ ಸಾಕು ತಾಯಿ ಎಂದು ಕೃಷ್ಣನಿಗೂ ತಿಳಿದಿತ್ತು ಆದರೆ ಆತ ತಾಯಿಯಂತೆಯೇ ನೋಡಿದ್ದನು. ಶ್ರೀಕೃಷ್ಣ ಮೊದಲ ಬಾರಿಗೆ ತನ್ನ ವಿಶ್ವರೂಪ ತೋರಿದ್ದು ಈ ಯಶೋದೆಯ ಮುಂದೆ. ಆತ ತನ್ನ ಚೇಷ್ಠೆಯ ನಡುವೆ ಬಾಯಿಯಲ್ಲಿ ಗೋಲಿಯ ಹಾಕಿಕೊಂಡು ಹೊರೆತೆಗೆಯಲು ನಿರಾಕರಿಸಿದಾಗ ಯಶೋದೆ ಬಂದು ಗದರಿಸಿದಳು. ಆತ ಆತ ಬಾಯಿ ತೆರೆದಾಗ ವಿಶ್ವವೇ ಕಂಡಿತು ಎಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ ಜೀವನ ಪಾಠ ಮಾಡಿದ್ದು ಕೂಡ ಯಶೋದೆಯೇ.
ಹಾಗೆ ಈ ದಿನದಂದು ಮಥುರಾ, ವೃಂದಾವನ, ನಂದಗಾಂವ್, ಗೋಕುಲ ಮತ್ತು ದ್ವಾರಕದಂತಹ ಇತಿಹಾಡಸ ಪ್ರಸಿದ್ಧ ಸ್ಥಳಗಳಿಗೆ ಭಕ್ತರು ಭೇಟಿ ನೀಡುತ್ತಾರೆ, ಇಲ್ಲಿ ಕೃಷ್ಣ ಹಾಗೂ ಯಶೋದೆಯ ಹಲವು ನೆನಪುಗಳನ್ನು ನೋಡಬಹುದು.



Click it and Unblock the Notifications
