Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ದೆಹಲಿಯಿಂದ ಆಗ್ರಾಗೆ ಕೇವಲ 13 ನಿಮಿಷ..! ಯಮುನಾ ನದಿಯಲ್ಲಿ ಸೀಪ್ಲೇನ್ ಹಾರಾಟಕ್ಕೆ ತಯಾರಿ!!
ಭಾರತದಲ್ಲಿ ವಿಮಾನಯಾನ ಸೇವೆ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಪ್ರತಿಯೊಂದು ಮಹಾ ನಗರಗಳಲ್ಲಿ ವಿಮಾನ ನಿಲ್ದಾಣಗಳಿವೆ. ಹಾಗೆ ಕೆಲವು ಕಡೆ ಹೊಸ ವಿಮಾನ ನಿಲ್ದಾಣಗಳು ಇನ್ನು ನಿರ್ಮಾಣ ಹಂತದಲ್ಲಿವೆ. ಹಾಗೆ ಬೆಂಗಳೂರಿನಲ್ಲಿ ಎರಡನೇ ವಿಮಾಣ ನಿಲ್ದಾಣಕ್ಕೆ ಕೇಂದ್ರದ ಒಪ್ಪಿಗೆಯೊಂದೇ ಬಾಕಿ ಉಳಿದಿದೆ. ಇನ್ನು ಹೊಸ ಹೊಸ ವಿನೂತನ ರೀತಿಯ ಸಂಪರ್ಕದತ್ತ ಭಾರತ ಮುಖ ಮಾಡಿದೆ.
ಇಗ ನದಿಗಳಲ್ಲಿ ವಿಮಾನ ಲ್ಯಾಂಡಿಂಗ್ ಮಾಡುವ ಕಡೆಗೂ ಯೋಜನೆಗಳ ರೂಪಿಸಲಾಗಿದೆ. ಕೆಲ ದಿನದ ಹಿಂದೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಬಜೆಟ್‌ನಲ್ಲೂ ಕೂಡ ಹೊಸ ವಿಮಾನ ನಿಲ್ದಾಣಗಳು, ಹಾಗೆ ಈ ಸೀ ಪ್ಲೇನ್ ಕುರಿತಂತೆ ಹಲವು ಯೋಜನೆಗಳ ಪ್ರಸ್ತಾಪವಾಗಿದೆ. ನೀರಿನ ಮೇಲೆ ಲಘು ವಿಮಾನ ಲ್ಯಾಂಡಿಂಗ್ ಮಾಡುವ ಮೂಲಕ ವಿಮಾನಯಾನ ಸೇವೆ, ಹಾಗೂ ಸಂಪರ್ಕಕ್ಕೆ ಹೊಸ ಆಯಾಮ ನೀಡಲು ಮುಂದಾಗಲಾಗಿದೆ.

ಈಗ ದೆಹಲಿ ಹಾಗೂ ಆಗ್ರಾ ನಡುವೆ ಹೊಸದಾಗಿ ಸೀ ಪ್ಲೇನ್ ಹಾರಾಟಕ್ಕೆ ಮುಂದಾಗಲಾಗಿದ್ದು, ಎನ್‌ಡಿಟಿವಿ ನೀಡಿದ್ದ ಸಂದರ್ಶನದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಕುರಿತು ಹೇಳಿಕೊಂಡಿದ್ದಾರೆ. ದೆಹಲಿಯಲ್ಲಿ ಹರಿಯುವ ಯಮುನಾ ನದಿಯಲ್ಲಿ ಸೀ ಪ್ಲೇನ್ ಹಾರಾಟಕ್ಕೆ ಮುಂದಾಗಲಾಗಿದೆ ಎಂದಿದ್ದಾರೆ. ನದಿ ಸ್ವಚ್ಛಗೊಳಿಸುವ ಯೋಜನೆ ಕುರಿತು ಮಾತನಾಡುವಾಗ ಈ ಸೀ ಪ್ಲೇನ್ ಯೋಜನೆ ಕುರಿತು ಸುಳಿವು ನೀಡಿದ್ದಾರೆ.
ದೆಹಲಿಯಿಂದ ಆಗ್ರಾಕ್ಕೆ ಪ್ರವಾಸೋಧ್ಯಮ ಉದ್ದೇಶವಾಗಿ ಈ ಸೀ ಪ್ಲೇನ್ ಯೋಜನೆ ಜಾರಿ ಆಗಲಿದೆಯಂತೆ. ಇದರಿಂದ ನೀವು ಕೇವಲ 13 ನಿಮಿಷದಲ್ಲಿ ದೆಹಲಿಯಿಂದ ಆಗ್ರಾಗೆ ತಲುಪಬಹುದಂತೆ. ಹಾಗೆ ಅದೇ ದಿನ ಮರಳಿ ದೆಹಲಿಗೆ ಬರಬಹುದು ಎಂದು ಅವರು ಹೇಳಿದ್ದಾರೆ. ಇದು ಪ್ರವಾಸೋಧ್ಯಮಕ್ಕೆ ಹೊಸ ರೂಪ ನೀಡಲಿದೆ ಎಂದು ವಿಶ್ಲೇಷಿಸಲಾಗಿತ್ತಿದೆ.
ಸದ್ಯ ಈಗ ದೆಹಲಿಯಿಂದ ಆಗ್ರಾ ಪ್ರಯಾಣ ಬಹಳ ಕಷ್ಟಕರವಾಗಿದೆ. ಸರಿ ಸುಮಾರು 3ರಿಂದ 4 ಗಂಟೆಗೂ ಅಧಿಕ ಸಮಯ ನೀವು ಪ್ರಯಾಣದಲ್ಲಿ ಕಳೆಯಬೇಕಾಗಿದೆ. ಆದರೆ ಈ ಸೀ ಪ್ಲೇನ್ ಮೂಲಕ ಕೇವಲ 13ರಿಂದ 15 ನಿಮಿಷದಲ್ಲಿ ತಲುಪಬಹುದು. ಹಾಗೆ ವಾಪಾಸು ಕೂಡ ಬರಬಹುದು, ಇದರಿಂದ ಪ್ರವಾಸಿಗರಿಗೆ ಮಾತ್ರವಲ್ಲ ಸಾಮಾನ್ಯರಿಗೂ ಸಹಕಾರಿಯಾಗಲಿದೆ.
ಗುಜರಾತ್‌ನಲ್ಲಿ ಸೀ ಪ್ಲೇನ್ ಯಶಸ್ವಿ
ಈ ಹಿಂದೆ ಗುಜರಾತ್‌ನ ಕೆವಾಡಿಯಾದ ನರ್ಮದಾ ಸರೋವರದಲ್ಲಿ ದೇಶದ ಮೊಟ್ಟ ಮೊದಲ ಸೀ ಪ್ಲೇನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜನ್ಮದಿನಾಚರಣೆ ಅಂಗವಾಗಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಸೀ ಪ್ಲೇನ್ ಕೆವಾಡಿಯಾ ಕಾಲೋನಿಯಲ್ಲಿರುವ ಏಕತೆ ಪ್ರತಿಮೆ ಸ್ಥಳದಿಂದ ಅಹಮದಾಬಾದ್‍ನ ಸಬರಮತಿ ನಡುವೆ ಸಂಚರಿಸಲಿದೆ. ಇದು ಕೂಡ ಗುಜರಾತ್ ಪ್ರವಾಸೋಧ್ಯಮಕ್ಕೆ ದೊಡ್ಡ ಕೊಡುಗೆ ನೀಡಿದೆ. ಪ್ರವಾಸಿಗರು ಗಾಂಧಿ ಅವರ ಸಬರಮತಿ ಆಶ್ರಮಕ್ಕೆ ತೆರಳುವಾಗ ಈ ವಿಮಾನಯಾನ ಸೇವೆ ಬಳಸಿದ್ದಾರೆ.
ಈ ಸೀ ಪ್ಲೇನ್ ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ಪ್ರಯಾಣಿಸಲು ನಾಲ್ಕು ಗಂಟೆ ಸಮಯವನ್ನು ಅರ್ಧ ಗಂಟೆಗೆ ಇಳಿಸಲಿದೆ. ನೀರಿನ ಮೇಲೆ ಟೇಕಾಫ್, ಲ್ಯಾಂಡಿಂಗ್ ಮಾಡಲು ಸಾಧ್ಯವಿರುವ ಏರೋಪ್ಲೇನ್ ಆಗಿರಲಿದೆ.
ರಾಜ್ಯದಲ್ಲೂ ಪರೀಕ್ಷಾರ್ಥ ಹಾರಾಟ
ರಾಜ್ಯದಲ್ಲೂ ಈ ಸೀಪ್ಲೇನ್ ಹಾರಾಟ ಮಾಡಿತ್ತು. ಕಳೆದ ವರ್ಷ ಮಂಡ್ಯದ ಶ್ರೀರಂಗಪಟ್ಟಣದಲ್ಲಿನ ಕೆಆರ್‌ಎಸ್ ಹಿನ್ನೀರಿನಲ್ಲಿ ಪ್ರಾಯೋಗಿಕ ಹಾರಾಟ ಕೂಡ ನಡೆಸಲಾಗಿತ್ತು. ಆದರೆ ಈ ಯೋಜನೆ ಇಂದಿಗೂ ಜಾರಿಯಾಗಿಲ್ಲ, ಆದ್ರೆ ಇತ್ತೀಚಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ಯೋಜನೆ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರ ಬಳಿ ಚರ್ಚಿಸಿದ್ದರು.



Click it and Unblock the Notifications