Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನವೆಂಬರ್ 15ಕ್ಕೆ ಯಮದ್ವಿತೀಯ: ಈ ದಿನ ದೀರ್ಘಾಯುಷ್ಯಕ್ಕಾಗಿ ಏನು ಮಾಡಬೇಕು?
ನವೆಂಬರ್ 15ರಂದು ಯಮದ್ವಿತೀಯ ಆಚರಿಸಲಾಗುತ್ತಿದೆ, ಈ ದಿನಕ್ಕೆ ದೀಪಾವಳಿ ಆಚರಣೆ ಮುಕ್ತಾಯವಾಗುವುದು. ಇದನ್ನು ಉತ್ತರ ಭಾರತದ ಕಡೆ ಭಾಯಿ ದೂಜ್ ಎಂದು ಆಚರಿಸಲಾಗುವುದು. ಈ ದಿನ ಯಮಧರ್ಮನಿಗೆ ಪೂಜೆ ಸಲ್ಲಿಸಲಾಗುವುದು. ಈ ದಿನದ ವಿಶೇಷತೆಯೇನು ಎಂದು ನೋಡೋಣ ಬನ್ನಿ:
ಈ ದಿನದ ವಿಶೇಷತೆಯೇನು?
ಈ ದಿನದಂದು ಸಹೋದರ, ಸಹೋದರಿಯರನ್ನು ಮನೆಗೆ ಕರೆದು ಹಬ್ಬದ ಊಟ ಬಡಿಸಲಾಗುವುದು. ಈ ದಿನ ಈ ರೀತಿ ಸಹೋದರ ಸಹೋದರಿಯರಿಗೆ ಊಟ ಬಡಿಸುವುದರಿಂದ ಅವರ ಆಯುಷ್ಯ ಹೆಚ್ಚಾಗಲಿ ಎಂಬುವುದು ಈ ಆಚರಣೆಯ ಹಿಂದಿರುವ ಉದ್ದೇಶವಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಕತೆಯಿದೆ
ಯಮ ಎಂದರೆ ಪ್ರಾನವನ್ನು ತೆಗೆಯುವವನು ಎಂದು ಭಯಪಡುತ್ತಾರೆ. ಈ ಯಮಧರ್ಮರಾಜನಿಗೆ ಒಬ್ಬ ತಂಗಿ ಇರುತ್ತಾಳೆ ಅವಳ ಹೆಸರು ಯಮುನೆ. ಆಕೆಯನ್ನು ಮದುವೆ ಮಾಡಿ ಕೊಟ್ಟಿರುತ್ತಾನೆ ಯಮ. ಆದರೆ ತಂಗಿ ಮನೆಗೆ ಅವಳನ್ನು ವಿವಾಹ ಮಾಡಿ ಕೊಟ್ಟ ಮೇಲೆ ಒಂದು ದಿನವೂ ಹೋಗಿರಲಿಲ್ಲ, ಅವಳು ಕೂಡ ಅನೇಕ ಬಾರಿ ಕರೆದರೂ ಯಮ ಹೋಗಿರಲಿಲ್ಲ, ಆದರೆ ಒಮ್ಮೆ ಕಾರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಯಮನು ತನ್ನ ತಂಗಿಯ ಮನೆಗೆ ಹೋಗುತ್ತಾನೆ. ದ್ವಿತೀಯ ಎಂದರೆ ಬಿದಿಗೆ ತಿಥಿ ಎಂದರ್ಥ, ಅಣ್ಣ ಮನೆಗೆ ಬಂದಿದ್ದಕ್ಕೆ ಸಂಭ್ರಮಪಟ್ಟ ತಂಗಿ ಅವನಿಗೆ ಹಬ್ಬದ ಅಡುಗೆ ಮಾಡಿ ಬಡಿಸುತ್ತಾಳೆ.
ಇದರಿಂದ ಖುಷಿಯಾದ ಯಮ ತಂಗಿ ಬಳಿ ನಿನಗೆ ಏನು ವರಬೇಕು ಎಂದು ಕೇಳಿದಾಗ ಯಮುನೆ ನನ್ನಂತೆ ಸಹೋದರನ್ನು ತುಂಬಾ ಪ್ರೀತಿಸುವ ಸಹೋದರಿಯ ಮನೆಗೆ ಬಂದು ರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಆಹಾರ ಸೇವಿಸಿದರಿಗೆ ದೀರ್ಘಾಯುಷ್ಯ ನೀಡು ಎಂದು ಕೇಳುತ್ತಾಳೆ. ಆವಾಗ ಯಮನು ಯಾರು ಸಹೋದರಿಯ ಕೈಯಿಂದ ಕಾರ್ತಿಕ ಮಾಸದ ಶುಕ್ಲಪಕ್ಷದ ಬಿದಿಗೆಯ ದಿನ ಸಹೋದರಿಯ ಮನೆಯಿಂದ ಆಹಾರ ಸೇವಿಸುತ್ತಾರೋ ಅವರು ಅಕಾಲಿಕ ಸಾವಿನಿಂದ ಪಾರಾಗುತ್ತಾರೆ. ಹಾಗಾಗಿ ಈ ದಿನವನ್ನು ಯಮದ್ವಿತೀಯ ಎಂದು ಕರೆಯಲಾಗುವುದು.
ಯಮದ್ವಿತೀಯ ದಿನಾಂಕ ಮತ್ತು ಸಮಯ
ನವೆಂಬರ್ 15
ಯಮ ದ್ವಿತೀಯ ಅಪರಾಹ್ನ ಮುಹೂರ್ತ: ಮಧ್ಯಾಹ್ನ 12:38ರಿಂದ 02:53ರವರೆಗೆ
ಯಮ ದ್ವಿತೀಯ ಮಹತ್ವ
ಯಮ ದ್ವಿತೀಯ ಆಚರಣೆಯಿಂದ ಸಹೋದರ-ಸಹೋದರಿ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ತವರು ಮನೆಯವರನ್ನು ಅದರಲ್ಲೂ ಅಣ್ಣನನ್ನು ಮನೆಗೆ ಕರೆದು ಹಬ್ಬದ ಅಡುಗೆ ಬಡಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಅಣ್ಣ ಮನೆಗೆ ಬಂದಾಗ ಅವನ್ನು ಬರಮಾಡಿ ಹಣೆಗೆ ತಿಲಕವನ್ನು ಇಟ್ಟು ಉಡುಗೊರೆ ನೀಡಲಾಗುವುದು. ಸಹೋದರನೂ ಈ ದಿನ ಸಹೋದರಿಗೆ ಉಡುಗೊರೆ ತಂದಿರುತ್ತಾನೆ, ಈ ದಿನ ರಕ್ಷಾಬಂಧನದಂತೆ ಅಣ್ಣ ತಂಗಿಯ ಬಾಂಧವ್ಯ ಗಟ್ಟಿಯಾಗಿಸುವ ದಿನ, ಅಲ್ಲದೆ ಸಹೋದರಿ ಮನೆಯಿಂದ ಹಬ್ಬದ ಅಡುಗೆ ಸವಿಯುವ ಸಹೋದರ ಆಯುಷ್ಯ ಕೂಡ ಹೆಚ್ಚಾಗುತ್ತೆ ಎಂಬ ನಂಬಿಕೆಯಿದೆ.



Click it and Unblock the Notifications
