Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಶದ ಇತಿಹಾಸದಲ್ಲಿ ನಡೆದ ಅತ್ಯಂತ ಘೋರ ಆಸ್ಪತ್ರೆ ದುರಂತಗಳಿವು..!
ಆಸ್ಪತ್ರೆಗಳು ಜೀವ ಉಳಿಸುವ ದೇವಾಲಯವೆಂದು ಕರೆಯಲಾಗುತ್ತದೆ. ನಮಗೆ ಅನಾರೋಗ್ಯ ಎದುರಾದಾಗ ಆಸ್ಪತ್ರೆಗಳಿಗೆ ಓಡುತ್ತೇವೆ. ಆಸ್ಪತ್ರೆಗಳಲ್ಲಿ ವೈದ್ಯರನ್ನು ಸಹ ದೇವರಿಗೆ ಹೋಲಿಸುವತ್ತೇವೆ. ಏಕೆಂದರೆ ಅವರು ಜನರಿಗೆ ಮರುಜೀವ ನೀಡುತ್ತಾರೆ ಎಂದು. ಆದ್ರೆ ಅದೇ ಆಸ್ಪತ್ರೆಗಳು ಸ್ಮಶಾನಗಳಾಗಿ ಮಾರ್ಪಟ್ಟರೆ ಹೇಗಾಗುತ್ತದೆ.
ಹೌದು ಆಸ್ಪತ್ರೆಗಳಲ್ಲೂ ದುರಂತಗಳು ಸಂಭವಿಸಿ ನೂರಾರು ಜನರು ಪ್ರಾಣ ಕಳೆದುಕೊಂಡು ಉದಾಹರಣೆಗಳಿವೆ. ಭಾರತದಲ್ಲಿಯೂ ಸಹ ಇಂತಹ ಹತ್ತಾರು ದುರಂತಗಳು ನಡೆದಿವೆ. ಹಾಗಾದರೆ ನಾವಿಂದು ಭಾರತದಲ್ಲಿ ನಡೆದ 5 ಅತ್ಯಂತ ಆಸ್ಪತ್ರೆ ದುರಂತಗಳು ಯಾವುದು? ಎಷ್ಟು ಮಂದಿ ಆ ದುರಂತದಲ್ಲಿ ಪ್ರಾಣ ಕಳೆದುಕೊಂಡರು ಎಂಬುದನ್ನು ನೋಡೋಣ.
ಗೋರಖ್‌ಪುರ ಆಸ್ಪತ್ರೆ ದುರಂತ
ಉತ್ತರ ಪ್ರದೇಶದ ಗೋರಖ್‌ಪುರ ಹೆಸರು ಕೇಳಿದಾಗ ನಿಮಗೆ ಯೋಗಿ ಆದಿತ್ಯನಾಥ್ ನೆನಪಾಗಬಹುದು. ಏಕೆಂದರೆ ಈ ಕ್ಷೇತ್ರದಿಂದಲೇ ಅವರು ಚುನಾವಣೆ ಸ್ಪರ್ಧಿಸೋದು. ಆದರೆ ಅವರ ಕ್ಷೇತ್ರದಲ್ಲಿ ಸರ್ಕಾರಿ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಾಗದ ಕಾರಣ 60 ಮಂದಿ ಮಕ್ಕಳು ಮೃತಪಟ್ಟಿದ್ದವು. ಇದನ್ನು ಭಾರತದ ಅತ್ಯಂತ ದೊಡ್ಡ ದುರಂತ ಎನ್ನಲಾಯಿತು. ಪೀಡಿಯಾಟ್ರಿಕ್ಸ್ ವಾರ್ಡ್‌ನಲ್ಲಿ ಆಮ್ಲಜನಕದ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ 6 ದಿನಗಳ ಅಂತರದಲ್ಲಿ ಕನಿಷ್ಠ 60 ಮಕ್ಕಳು ಸಾವನ್ನಪ್ಪಿದ್ದರು.

ಛತ್ತೀಸ್‌ಗಢ ಸಂತಾನಹರಣ ಅಭಿಯಾನ ದುರಂತ
ನವೆಂಬರ್ 2014ರಲ್ಲಿ ಛತ್ತೀಸ್‌ಗಢದಲ್ಲಿ ಸರ್ಕಾರ ನಡೆಸುತ್ತಿದ್ದ ಸಾಮೂಹಿಕ ಸಂತಾನಹರಣ ಅಭಿಯಾನವು ಭೀಕರವಾಗಿ ಸಾವಿನ ಮನೆಯಾಗಿತ್ತು. ಈ ಅಭಿಯಾನದಲ್ಲಿ ಭಾಗಿಯಾಗಿದ್ದ ಮಹಿಳೆಯರ ಪೈಕಿ 11 ಮಂದಿ ಮೃತಪಟ್ಟರೆ 20 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಶಿಬಿರದಲ್ಲಿ ಲ್ಯಾಪರೊಸ್ಕೋಪಿಕ್ ಟ್ಯೂಬೆಕ್ಟಮಿಗೆ ಶಸ್ತ್ರಚಿಕಿತ್ಸೆಗೆ ಒಳಗಾದ 80 ಮಹಿಳೆಯರಲ್ಲಿ, 60 ಮಂದಿಗೆ ಶಸ್ತ್ರಚಿಕಿತ್ಸೆ ಪೂರ್ಣಗೊಂಡ ಬಳಿಕ ಅಸ್ವಸ್ಥರಾದರು. ಅವರಲ್ಲಿ ರಕ್ತಸ್ರಾವ ಮತ್ತು ಆಂತರಿಕ ರಕ್ತಸ್ರಾವದಿಂದ ಮೃತಪಟ್ಟಿದ್ರು, ಇಲ್ಲಿ ವೈದ್ಯರ ಯಡವಟ್ಟಿನಿಂದ 11 ಮಹಿಳೆಯರು ಸಾವನಪ್ಪಿದ್ದರು.
ಭುವನೇಶ್ವರ ಆಸ್ಪತ್ರೆಯಲ್ಲಿ ಬೆಂಕಿ
ಅಕ್ಟೋಬರ್ 18, 2011 ರಂದು ಒಡಿಶಾದ ಭುವನೇಶ್ವರದ SUM ಆಸ್ಪತ್ರೆಯಲ್ಲಿ 22 ಜನರು ಸಾವನ್ನಪ್ಪಿದರು ಮತ್ತು 120 ಜನರು ಗಾಯಗೊಂಡರು. ಆಸ್ಪತ್ರೆಯಲ್ಲಿನ ಹೆಚ್ಚಿನ ವಾರ್ಡ್‌ಗಳಲ್ಲಿ ಬೆಂಕಿ ಮತ್ತು ಹೊಗೆ ಆವರಿಸಿದ್ದರಿಂದ ಉಸಿರುಗಟ್ಟಿ ಸಾವುಗಳು ಸಂಭವಿಸಿದವು, 100ಕ್ಕೂ ಹೆಚ್ಚು ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಬೆಂಕಿ ಬಿದ್ದಾಗ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸುವುದು ತಡವಾಗಿ ಸಾವು ನೋವು ಹೆಚ್ಚಾಗಿತ್ತು. ಮೃತಪಟ್ಟವರಲ್ಲಿ ನಾಲ್ವರು ಆಸ್ಪತ್ರೆ ಸಿಬ್ಬಂದಿಯೂ ಸೇರಿದ್ದರು. 15 ಸದಸ್ಯರ ವಿಶೇಷ ತನಿಖಾ ತಂಡ (SIT) ನಡೆಸಿದ ತನಿಖೆ ನಂತರ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿತು. ಮೂಲಭೂತ ಸುರಕ್ಷತಾ ಮಾನದಂಡಗಳನ್ನು ನಿರ್ಲಕ್ಷಿಸುವುದು. ಕಟ್ಟಡದ ಸ್ಮೋಕ್ ಡಿಟೆಕ್ಟರ್‌ಗಳು ಮತ್ತು ಅಗ್ನಿಶಾಮಕ ಎಚ್ಚರಿಕೆಗಳು ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಆಸ್ಪತ್ರೆಯ ಅಧಿಕಾರಿಗಳು ತುರ್ತು ನಿರ್ಗಮನ ಮತ್ತು ಮೆಟ್ಟಿಲುಗಳ ಸ್ಥಳಗಳನ್ನು ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಲು ಸಾಧ್ಯವಾಗಲಿಲ್ಲ, ಇದು ಪರಿಸ್ಥಿತಿಯನ್ನು ಹದಗೆಡಿಸಿತು ಮತ್ತು ರಕ್ಷಣಾ ಕಾರ್ಯವನ್ನು ವಿಳಂಬಗೊಳಿಸಿತು.
ಎರವಾಡಿ ಮಾನಸಿಕ ರೋಗಿಗಳ ಆಶ್ರಯ ಕೇಂದ್ರದ ದುರಂತ
ಹದಿನಾರು ವರ್ಷಗಳ ಹಿಂದೆ ಆಗಸ್ಟ್ 6, 2001 ರಂದು, ಎರವಾಡಿಯ ಮೊಯ್ದೀನ್ ಬಾದುಷಾ ಮಾನಸಿಕ ರೋಗಿಗಳ ಅತ್ಯಂತ ಕೆಟ್ಟ ಆಸ್ಪತ್ರೆ ದುರಂತಕ್ಕೆ ಸಾಕ್ಷಿಯಾಯಿತು, ಅಲ್ಲಿ ಆಶ್ರಯದಲ್ಲಿದ್ದ 28 ರೋಗಿಗಳು ಬೆಂಕಿಯಲ್ಲಿ ಬೆಂದು ಮೃತಪಟ್ಟಿದ್ದರು. ರೋಗಿಗಳ ಕಾಲುಗಳಿಗೆ ಸರಪಳಿ ಹಾಕಿ ಕಟ್ಟಲಾಗಿತ್ತು, ಹೀಗಾಗಿ ಅವರು ತಪ್ಪಿಸಿಕೊಳ್ಳಲಾಗದೆ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದರು. ಈ ಘಟನೆಯಿಂದ ಇಡೀ ದೇಶದಲ್ಲಿ ಮಾನಸಿಕ ರೋಗಿಗಳ ಆಸ್ಪತ್ರೆಗಳಲ್ಲಿ ಹೊಸ ನಿಯಮ ಜಾರಿಯಾಗಿತ್ತು. ಅಲ್ಲದೆ ಎರಪಾಡಿ ಬಳಿ ಇದ್ದ 500ಕ್ಕೂ ಹೆಚ್ಚು ರೋಗಿಗಳನ್ನು ಸ್ಥಳಾಂತರಿಸಲಾಗಿತ್ತು ಮತ್ತು ಈ ಆಶ್ರಯ ತಾಣಗಳ ಮುಚ್ಚಲಾಗಿತ್ತು.



Click it and Unblock the Notifications

