Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಈ ಅಣಬೆಗಳ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತಿರಾ.? ಚಿನ್ನಕ್ಕೂ ಇಷ್ಟು ಬೆಲೆ ಇಲ್ಲ..!
ಅಣಬೆಗಳು ಸಮೃದ್ಧ ಪೌಷ್ಟಿಕಾಂಶದಿಂದ ಕೂಡಿರುವ ಆಹಾರಗಳು, ಇದು ಸಸ್ಯಹಾರಿಗಳು ಹಾಗೂ ಮಾಂಸಹಾರಿಗಳ ಅತ್ಯಂತ ರುಚಿಕರ ಖಾದ್ಯದಲ್ಲಿ ಒಂದು. ಇತ್ತಿಚಿಗೆ ಅಣಬೆ ಖಾದ್ಯಗಳು ಎಲ್ಲೆಡೆ ಫೇಮಸ್ ಆಗುತ್ತಿವೆ. ಅದರಲ್ಲೂ ಹತ್ತಾರು ವಿಧದ ಖಾದ್ಯ ನಾವಿಂದು ಸವಿಯಬಹುದು.
ಅಣಬೆಗಳು 90% ನೀರು, ಇದು ತೂಕ ನಷ್ಟ ಮತ್ತು ಕ್ಯಾಲೋರಿ ನಿಯಂತ್ರಣಕ್ಕೆ ಉತ್ತಮವಾಗಿದೆ. ಇದಲ್ಲದೆ, ಅಣಬೆಗಳು ಕಡಿಮೆ ಕೊಬ್ಬು, ಹೆಚ್ಚಿನ ಪ್ರೋಟೀನ್ ಮತ್ತು ಪೋಷಕಾಂಶ-ಭರಿತ ಆಹಾರವಾಗಿವೆ, ಹೀಗಾಗಿ ಈ ಆಹಾರ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅಣಬೆಗಳನ್ನು ಪ್ರತಿದಿನ ಸೇವಿಸುವುದರಿಂದಾಗಿ ನಿಮಗೆ ನಿಯಾಸಿನ್, ಸೆಲೆನಿಯಂ ಮತ್ತು ರೈಬೊಫ್ಲಾವಿನ್‍ನಂತಹ ಪೋಷಕಾಂಶಗಳು ದೊರೆಯುತ್ತವೆ.

ಅಣಬೆಗಳನ್ನು ವಿಶ್ವದ ಆರೋಗ್ಯಕರ ತರಕಾರಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇತ್ತಿಚಿಗೆ ಅಣಬೆ ಇಂದು ವಾಣಿಜ್ಯ ಬೆಳೆಯಾಗಿ ರೈತರಿಗೆ ಆದಾಯ ತರುವ ಕೃಷಿಯಾಗಿಯೂ ಹೆಸರು ಮಾಡುತ್ತಿದೆ. ಕಡಿಮೆ ಬಂಡವಾಳದಲ್ಲಿ ಅತೀ ಹೆಚ್ಚು ಆದಾಯ ಗಳಿಸುವ ಮೂಲ ಎಂದರೆ ಅದು ಅಣಬೆ ವ್ಯವಹಾರವಾಗಿದೆ.
ಸಾವಯವ ಕೃಷಿಯ ಮೂಲಕ ಬೆಳೆಯಬಹುದಾದ ಈ ಅಣಬೆಗಳಿಗೆ ಮಾರುಕಟ್ಟೆಯಲ್ಲೀಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅದರಲ್ಲೂ ಕೆಲವೊಂದು ಜಾತಿಯ ಅಣಬೆಗಳಿಗೆ ನೀವು ಉಹಿಸದಷ್ಟು ದರವಿದೆ. ವಿಶ್ವದಲ್ಲೇ ಅತ್ಯಂತ ದುಬಾರಿ ಅಣೆಬೆಯನ್ನು ಜಪಾನ್‌ನಲ್ಲಿ ಬೆಳೆಯಲಾಗುತ್ತದೆ. ಇದರ ದರ ಕೇಳಿದರೆ ನಿಮಗೆ ಅಚ್ಚರಿಯಾಗುತ್ತೆ.
ಜಪಾನ್‌ನ ಮ್ಯಾಟ್ಸುಟೇಕ್ ಅಣಬೆಗಳು ವಿಶ್ವದ ಅತ್ಯಂತ ದುಬಾರಿ ಅಣಬೆಗಳು ಎನಿಸಿವೆ, ಇದು ಜಪಾನ್ ಮಾತ್ರವಲ್ಲ ಕೊರಿಯಾ, ಚೀನಾ ಹಾಗೂ ಅಮೆರಿಕದಲ್ಲೂ ಬೆಳೆಯಲಾಗುತ್ತದೆ. ಇವುಗಳ ದರ ಪ್ರತಿ ಪೌಂಡ್‌ಗೆ ಬರೋಬ್ಬರಿ 41,700 ರೂಪಾಯಿಗಳಿಗೂ ಅಧಿಕವಾಗಿದೆ.
ಈ ಮಶ್ರೂಮ್ ಅದರ ವಿಶಿಷ್ಟ ವಾಸನೆಗೆ ಹೆಸರುವಾಸಿಯಾಗಿದೆ. ಈ ಮಶ್ರೂಮ್ ಮಾಂಸದಂತೆ ರುಚಿ ಹಿಡಿಸುತ್ತದೆ. ಈ ಅಣಬೆ ಪ್ರತಿ ಕೆ,ಜಿಗೆ 1ರಿಂದ 1.5 ಲಕ್ಷ ರೂಪಾಯಿಗೆ ಮಾರಾವಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ಅಣಬೆ ಎಂಬ ಕೀರ್ತಿ ಪಡೆದಿದೆ.
ಜಪಾನ್‌ನಲ್ಲಿ ಮಾಟ್ಸುಟೇಕ್ ಅಣಬೆಗಳು ಎಲ್ಲೆಂದರಲ್ಲಿ ಬೆಳೆಯುವುದಿಲ್ಲ. ಇವು ಕೆಂಪು ಪೈನ್ ಕಾಡುಗಳಲ್ಲಿ ಮಾತ್ರ ಬೆಳೆಯುತ್ತವೆ. ಆದರೆ ಇತ್ತೀಚಿಗೆ ಈ ಕಾಡುಗಳೇ ಮರೆಯಾಗುತ್ತಿವೆ. ಹೀಗಾಗಿ ಈ ಅಣಬೆಗಳಿಗೆ ಚಿನ್ನಕ್ಕಿಂತ ದುಬಾರಿ ಬೆಲೆ ಬಂದಿದೆ. ಇದಲ್ಲದೆ ಇತ್ತೀಚಿಗೆ ಈ ಅಣಬೆಗಳಿಗೆ ರೋಗ ತಗುಲುತ್ತಿದೆ, ಅಲ್ಲದೆ ಹುಳುಗಳು ಈ ಅಣಬೆಗಳ ತಿಂದು ಮುಗಿಸುತ್ತಿವೆ. ಹೀಗಾಗಿ ಈ ಅಣಬೆಯನ್ನು ಕಾಪಾಡುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.
ಜಪಾನ್‌ನಲ್ಲಿ ಈ ಅಣಬೆ ಕೃಷಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುವ ಬದಲು ಇಳಿಕೆಯಾಗುತ್ತಿದೆ. ಈಗ ಜಪಾನ್‌ನಲ್ಲಿ 1000 ಮೆಟ್ರಿಕ್ ಟನ್‌ಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಈ ಅಣಬೆಗಳ ಬೆಳೆಯಲಾಗುತ್ತಿದೆ. ಹೀಗಾಗಿ ಇವುಗಳ ದರ ಗಗನಕ್ಕೇರಿದೆ.
ಜಪಾನ್‌ನಲ್ಲಿ ಈ ಅಣಬೆ ಬಳಸಿ ತಯಾರಿಸುವ ಖಾದ್ಯಗಳನ್ನು ಕೇವಲ ಐಷಾರಾಮಿ ಹೋಟೆಲ್‌ಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಅಲ್ಲಿ ಈ ಖಾದ್ಯಕ್ಕೆ ಸಾವಿರಾರು ರೂಪಾಯಿ ಇದೆ. ಅದರಲ್ಲೂ ಒಂದೇ ಒಂದು ಅಣಬೆ ಹಾಕಿರುವ ಖಾದ್ಯಕ್ಕೂ ಸಾವಿರಾರು ರೂಪಾಯಿ ಬಿಲ್ ಆಗಲಿದೆ.
ಸದ್ಯ ಈ ಅಣಬೆಯನ್ನು ಅವರು ಕೃತಕವಾಗಿ ಪಡೆಯುತ್ತಿದ್ದರೂ ಅತ್ಯಂತ ನಾಜೂಕಾದ ಹಾಗೂ ಪ್ರತಿ ಕ್ಷಣ ಕೃಷಿಯ ಮೇಲೆ ಗಮನ ಹರಿಸಬೇಕಾಗಿದೆ.
ಇನ್ನು ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೋರೆಲ್ಸ್ ಎಂದು ಕರೆಯಲ್ಪಡುವ ಗುಚ್ಚಿ ಅಣಬೆಗಳು ಭಾರತದ ಅತ್ಯಂತ ದುಬಾರಿ ಅಣಬೆಗಳು ಎಂಬ ಕೀರ್ತಿ ಪಡೆದಿವೆ. ಇದು ಪ್ರತಿ ಕೆ.ಜಿ ಸುಮಾರು 30 ಸಾವಿರ ವರೆಗೂ ದರವಿದ್ದು, ಭಾರತದ ಜೆ & ಕೆ ಯ ಪೂಂಚ್, ದೋಡಾ, ಕಿಶ್ತ್ವಾರ್, ರಾಂಬನ್, ಅನಂತನಾಗ್, ಬಂಡಿಪೋರಾ, ಕುಪ್ವಾರಾ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಕಂಡುಬರುತ್ತವೆ.



Click it and Unblock the Notifications