Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
ಮಹಿಳಾ ದಿನದ ವಿಶೇಷ 2024: ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ರಿಯಲ್ ಬದುಕಿನಲ್ಲಿ ಹೀರೋಯಿನ್ ಆದ ದಿಟ್ಟೆ
ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು. ಮಹಿಳೆ ಎಂಬುವುದೇ ಶಕ್ತಿ, ಆ ಶಕ್ತಿ ಅಸಾಧ್ಯವಾದದ್ದು ಯಾವುದೂ ಇಲ್ಲ, ಅವಳು ಧೈರ್ಯದಿಂದ ನಿಂತರೆ ಎಂಥ ಸವಾಲು ಆದರೂ ನಿಭಾಯಿಸುತ್ತಾಳೆ. ಈ ದಿನದ ವಿಶೇಷವಾಗಿ ನಾವು ಸಾವನ್ನೇ ಎದುರಿಸಿ ನಿಂತು ಇಂದು ಹಲವಾರು ಮಹಿಳೆಯರಗೆ ಸ್ಪೂರ್ತಿಯಾದ ಮಹಿಳೆ ಬಗ್ಗೆ ಹೇಳುತ್ತಿದ್ದೇವೆ.
ಸಿನಿಮಾದಲ್ಲಿ ಹೀರೋಯಿನ್ ಆಗಬೇಕೆಂಬ ಮುದ್ದು ಚೆಲುವೆ ರೀಲ್‌ನಲ್ಲಿ ಅಲ್ಲ ನಿಜ ಜೀವನದಲ್ಲಿ ಹೀರೋಯಿನ್ ಆದ ಸ್ಪೂರ್ತಿದಾಯಕ ಕತೆ ಇದು.

ಇವರ ಹೆಸರು ರಿತಿಕ್ಷಾ, ರೂಪವಂತೆ, ಮುದ್ದಾದ ಮಗು, ರೆಪ್ಪೆಯಂತೆ ಜೋಪಾನ ಮಾಡುವ ಗಂಡ, ಇವರು ಕಲಬುರಗಿಯ ಹೆಣ್ಣು ಮಗಳು. ಮಾಡಲಿಂಗ್ ಇವರ ಪ್ಯಾಷನ್, ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು, ಸಿನಿಮಾ ಕ್ಷೇತ್ರದಲ್ಲಿಯೂ ಅವಕಾಶ ಸಿಕ್ಕರೆ ಒಳ್ಳೆಯ ಸಿನಿಮಾದಲ್ಲಿ ಕೆಲಸ ಮಾಡಬೇಕೆಂಬ ಆಸೆಯಿತ್ತು. ದಿನದಲ್ಲಿ 2-3 ಗಂಟೆ ವ್ಯಾಯಾಮ, ಆರೋಗ್ಯಕರ ಆಹಾರಕ್ರಮ ಮೂಲಕ ಒಂದು ಮಗುವಿನ ತಾಯಿಯಾದರು ಹೀರೋಯಿನ್ ಆಗುವ ಎಲ್ಲಾ ಲಕ್ಷಣ ಅವರಲ್ಲಿತ್ತು, ಅವರ ಆಸೆಗೆ ತಕ್ಕಂತೆ ಸಿನಿಮಾವು ಬಂತು, ಅಲ್ಲಿಯವರೆಗಿನ ಬದುಕು ತುಂಬಾನೇ ಕಲರ್‌ಫುಲ್... ಆದರೆ ಅವರು ಕನಸಿನಲ್ಲಿಊಹಿಸಿರದ ತಿರುವು ಅವರ ಬದುಕಿನಲ್ಲಿ ಬರುತ್ತೆ ಅಂದುಕೊಂಡಿರಲಿಲ್ಲ.
ಸಿನಿಮಾ ಕತೆಯೇ ಜೀವನವಾದಾಗ
ಅವರಿಗೆ ಒಂದು ಸಿನಿಮಾ ಅವಕಾಶ ಬಂದಾಗ ಅದರ ಕ್ಯಾರೆಕ್ಟರ್ ಇಷ್ಟವಾಗಿ ಒಪ್ಪಿಕೊಂಡಿದ್ದರು, ಅದರಲ್ಲಿ ಸಿನಿಮಾ ಮಧ್ಯದಲ್ಲಿ ಕೂದಲು ಕತ್ತರಿಸುವ ಸ್ಟೋರಿಯಿತ್ತು. ಆವಾಗ ಇವರು ನಾನು ಕೂದಲು ನಿಜವಾಗಿಯೂ ಕತ್ತರಿಸುತ್ತೇನೆ, ನನ್ನ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ನೀಡುತ್ತೇನೆ ಎಂದು ತೀರ್ಮಾನಿಸುತ್ತಾರೆ, ಹೀಗೆ ಸಿನಿಮಾಗೆ ಬೇಕಾದ ತಯಾರಿಗೆ ವರ್ಕೌಟ್ ಕಡೆಗೆ ಇನ್ನಷ್ಟು ಗಮನ ನೀಡುತ್ತಾರೆ, ಆವಾಗ ಎದೆ ಭಾಗದಲ್ಲಿ ಏನೋ ಒಂದು ರೀತಿಯ ನೋವು ಕಂಡು ಬರುತ್ತದೆ, ವರ್ಕೌಟ್ ಮಾಡುವುದು ಕಷ್ಟವಾದಾಗ ವೈದ್ಯರಿಗೆ ತೋರಿಸುತ್ತಾರೆ, ಅಷ್ಟೊತ್ತಿಗೆ ಸ್ತನದಲ್ಲಿ ಒಂದು ರೀತಿಯ ಗಂಟು ಬಂದಿರುತ್ತದೆ, ವೈದ್ಯರು ಇದು ಸಾಧಾರಣ ಗಂಟು ಭಯ ಪಡಬೇಕಾಗಿಲ್ಲ ಮಾತ್ರೆ ತೆಗೆದುಕೊಳ್ಳಿ ಎಂದರು, ಆದರೆ ಮಾತ್ರೆ ತೆಗೆದರೂ ಏನೂ ಪ್ರಯೋಜನವಾಗಿಲ್ಲ, ಕೊನೆಗೆ ಗೆಡ್ಡೆ ತೆಗೆಯಬೇಕೆಂದು ಹೇಳಿದರು, ಅಲ್ಲಿಯವರೆಗೆ ಗೆಡ್ಡೆ ಎಂದೇ ಭಾವಿಸಿದ್ದೆವು, ಸೆಕೆಂಡ್ ಒಪಿನೀಯನ್ ಕೂಡ ಪಡೆದಿರಲಿಲ್ಲ, ಶಸ್ತ್ರ ಚಿಕಿತ್ಸೆ ಬಳಿಕ ತಿಳಿದ ಆಘಾತಕಾರಿ ಅಂಶವೆಂದರೆ ಅದು ಸಾಮಾನ್ಯ ಗೆಡ್ಡೆಯಲ್ಲಿ ಕ್ಯಾನ್ಸರ್ ಗೆಡ್ಡೆ, 3ನೇ ಹಂತದಲ್ಲಿದೆ.
ಕ್ಯಾನ್ಸರ್‌ಗೆ ಭಯಪಡಲಿಲ್ಲ
ಸ್ತನ ಕ್ಯಾನ್ಸರ್ ಇದೆ ಎಂದು ತಿಳಿದಾಗ ಭಯ ಪಡಲಿಲ್ಲ, ಅದಕ್ಕೆ ಯಾವ ಚಿಕಿತ್ಸೆ ಎಂದು ತಿಳಿದು ಅದನ್ನು ಪಡೆಯಲು ಇಚ್ಛಿಸುತ್ತಾರೆ, ಅವರ ಮನೋಧೈರ್ಯವೇ ಅವರನ್ನು ಇಂದು ಕ್ಯಾನ್ಸರ್ ವಿರುದ್ಧ ಗೆಲ್ಲುವಂತೆ ಮಾಡಿದೆ. ಅವರು ಬರೋಬರಿ 16 ಕೀಮೋ ಪಡೆದಿದ್ದಾರೆ, ಪ್ರತಿಯೊಂದು ಬಾರಿ ಕೀಮೋ ಮಾಡಿದಾಗಲೂ ಆ ಅಸಾಧ್ಯ ನೋವಿನ ನಡುವೆಯೂ ತಮ್ಮ ಮುಖದಲ್ಲಿ ನಗು ತಂದು ಮನೆಯವರ ಮುಖದಲ್ಲಿ ನಗು ಮೂಡಿಸುವ ಪ್ರಯತ್ನ ಮಾಡಿದ್ದಾರೆ, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಕೀಮೋ ಮಾಡಿದ ದಿನ ಹೊರತು ಪಡಿಸಿ ಉಳಿದ ದಿನಗಳಲ್ಲಿ ತಮ್ಮ ಮನೆ ಕೆಲಸ ತಾವೇ ಮಾಡುತ್ತಿದ್ದರು, ಹೊಸ ಅಡುಗೆ ಟ್ರೈ ಮಾಡುತ್ತಿದ್ದರು, ತುಂಬಾ ಧನಾತ್ಮಕವಾಗಿರಲು ಪ್ರಯತ್ನಿಸುತ್ತಿದ್ದರು. ವೈದ್ಯುರು ಇಮ್ಯೂನೋ ಥೆರಪಿ ತೆಗೆದುಕೊಳ್ಳಬೇಕೆಂದು ಹೇಳಿದಾಗಲೂ ಅಷ್ಟು ದುಬಾರಿ ವೆಚ್ಚ ಭರಿಸಿದರೆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತೆ ಎಂದು ಅದನ್ನು ನಿರಾಕರಿಸಿ ತಮ್ಮ ಆಹಾರಕ್ರಮದತ್ತ ಗಮನಹರಿಸುತ್ತಾರೆ. ಆ ದಿನಗಳ ಬಗ್ಗೆ ನೆನೆಯುತ್ತಾ ಅವರು ಹೇಳುತ್ತಾರೆ ಪ್ರತಿಬಾರಿಯೂ ಕೀಮೋ ತೆಗೆದುಕೊಳ್ಳುವಾಗ ಅಸಾಧ್ಯ ನೋವು ಹಾಗೂ ದೇಹ ಶಕ್ತಿಹೀನವಾಗುತ್ತೆ, ಆದರೆ ಮುಂದಿನ ಕೀಮೋಗೆ ನಾವು ನಮ್ಮ ದೇಹವನ್ನು ಸಿದ್ಧಮಾಡಬೇಕೆಂದರೆ ಆರೋಗ್ಯಕರ ಆಹಾರಕ್ರಮ ಸೇವಿಸಬೇಕು. ಇವರ ಈ ಸಲಹೆ ಎಷ್ಟೋ ಕ್ಯಾನ್ಸರ್ ರೋಗಿಗಳಿಗೆ ಸಹಾಯವಾಗುತ್ತೆ, ಇದೀಗ ಅವರು ಕ್ಯಾನ್ಸರ್ ಗೆದ್ದಿದ್ದಾರೆ, ಅಲ್ಲದೆ ಮುಂದೆ ಈ ಕಾಯಿಲೆ ಮರುಕಳಿಸದಿರಲು ಡಯಟ್ ಹಾಗೂ ವ್ಯಾಯಾಮದ ಮೂಲಕ ಜಾಗ್ರತೆಯೂ ವಹಿಸುತ್ತಿದ್ದಾರೆ.
ಕ್ಯಾನ್ಸರ್ ರೋಗಿಗಳಲ್ಲಿ ಭರವಸೆ ಮೂಡುವ ಪ್ರಯತ್ನ ಮಾಡುತ್ತಿದ್ದಾರೆ
ಕ್ಯಾನ್ಸರ್ ರೋಗಿಗೆ ಚಿಕಿತ್ಸೆ ಜೊತೆಗೆ ಬೇಕಾಗಿರುವುದು ಬದುಕುವ ಭರವಸೆ. ಇವರು ತಮ್ಮ ಕತೆಯ ಮೂಲಕ ಈ ಭರವಸೆ ಮುಡಿಸುತ್ತಿದ್ದಾರೆ, ಎಷ್ಟೋ ಕ್ಯಾನ್ಸರ್ ರೋಗಿಗಳು ಅಥವಾ ಅವರ ಮನೆಯವರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬೆಲ್ಲಾ ಮಾಹಿತಿ ಕೇಳುವಾಗ ತಾನು ಅನುಸರಿಸುವ ಆಹಾರಕ್ರಮದ ಬಗ್ಗೆ ಅವರಿಗೆ ತಿಳಿಸುತ್ತಿದ್ದಾರೆ, ಇವರು ಸಾಮಾಜಿಕ ತಾಣದಲ್ಲಿ ರೀಲ್ಸ್ ಮುಖಾಂತರವೂ ಕ್ಯಾನ್ಸರ್ ರೋಗಿಗಳಿಗೆ ಬದುಕಿನ ಭರವಸೆ ಮಾಡುತ್ತಿದ್ದಾರೆ.
ಸಾಕಷ್ಟು ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ, ಕ್ಯಾನ್ಸರ್ ಬಗ್ಗೆ ಜಾಗ್ರತೆ ಮೂಡಿಸುವ ಬಯಕೆ
ಇವರು ಹಲವಾರು ವೇದಿಕೆಗಳಲ್ಲಿ ತಮ್ಮ ಜೀವನ ಕತೆ ಹೇಳಿ ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ, ಇದರ ಜೊತೆಗೆ ಹಳ್ಳಿ-ಹಳ್ಳಿಗಳಿಗೆ ಹೋಗಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗ್ರತೆ ಮೂಡಿಸುವ ಪ್ರಯತ್ನ ಮಾಡಬೇಕೆಂದಿದ್ದಾರೆ, ಸ್ತನ ಕ್ಯಾನ್ಸರ್ ಬಗ್ಗೆ ಜಾಗ್ರತೆ ಮೂಡಿಸುವ ಪ್ರಯತ್ನ ಮಾಡಬೇಕೆಂದಿದ್ದಾರೆ, ಇವರ ಈ ಸಾಮಾಜಿಕ ಕಳಕಳಿ ಮೂಲಕ ಸ್ತನ ಕ್ಯಾನ್ಸರ್ ರೋಗಿಗಳಿಗೆ ಭರವಸೆ ಮೂಡಿಸುತ್ತಿದ್ದಾರೆ, ಒಂದಲ್ಲಾ ಒಂದು ಕಷ್ಟ ಎಲ್ಲರಿಗೆ ಬರುತ್ತದೆ ಆದರೆ ಅದನ್ನು ಹೇಗೆ ಎದುರಿಸುತ್ತೇವೆ ಎನ್ನುವುದರ ಮೇಲೆ ನಾವು ಹೀರೋ ಆಗುತ್ತೇವೆ, ಇವರು ಕೂಡ ಈ ಮೂಲಕ ರಿಯಲ್ ಬದುಕಿನಲ್ಲಿ ಹೀರೋ ಆಗಿದ್ದಾರೆ.



Click it and Unblock the Notifications