Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರಸ್ತೆ ಬದಿ ಮೋಮೊಸ್ ತಿಂದಾಕೆ ಸಾವು..! ಅಂಗಡಿಯಾತ ಮಾಡಿದ್ದೇನು ಗೊತ್ತಾ?
ರಸ್ತೆ ಬದಿಯ ಆಹಾರಗಳು ಎಷ್ಟು ಹಾನಿ ಮಾಡುತ್ತವೆ, ನಮ್ಮ ಆರೋಗ್ಯದ ಮೇಲೆ ಯಾವೆಲ್ಲಾ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ನಾವು ತಿಳಿದಿದ್ದೇವೆ. ಅದರಲ್ಲೂ ಭಾರತದಲ್ಲಿ ರಸ್ತೆ ಬದಿಯ ಆಹಾರಗಳು ಅನಾರೋಗ್ಯ ಮಾತ್ರವಲ್ಲ ಸಾವಿಗೂ ಕಾರಣವಾಗುತ್ತಿದೆ. ಹೀಗಾಗಿ ಕೃತಕ ಬಣ್ಣ ಬಳಸಿದ ಗೋಬಿ, ಬಾಂಬೆ ಮಿಠಾಯಿ ಸೇರಿ ಕೆಲವು ಆಹಾರ ಪದಾರ್ಥಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ.
ಹಾಗೆ ಈಗ ಹೈದರಾಬಾದ್‌ನಲ್ಲಿ ನಡೆದಿರುವ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಅದರಲ್ಲೂ ರಸ್ತೆ ಬದಿಯ ತಿಂಡಿ ತಿನಿಸುಗಳ ಸವಿಯುವವರಲ್ಲಿ ಆಘಾತ ಉಂಟು ಮಾಡಿದೆ. ನೀವು ಮೋಮೊಸ್ ಪ್ರಿಯರಾಗಿದ್ದರೆ ಈ ಸುದ್ದಿಯನ್ನು ಓದಲೇ ಬೇಕಿದೆ. ರಸ್ತೆ ಬದಿಯಲ್ಲಿ ಮೋಮೊಸ್ ಸವಿದ ಮಹಿಳೆ ಮೃತಪಟ್ಟ ಘಟನೆ ಹೈದರಾಬಾದ್‌ನ ಬಂಜಾರ್ ಹಿಲ್ಸ್‌ನಲ್ಲಿ ವರದಿಯಾಗಿದೆ.

ಈ ಮೋಮೊಸ್ ಅನ್ನು ಆಕೆ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದವನ ಬಳಿ ಸವಿದಾಗ ಮನೆಗೆ ಬರುವಷ್ಟರಲ್ಲೇ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಹಾಗಾದ್ರೆ ಆಕೆಯ ಸಾವಿಗೆ ಕಾರಣವಾಗಿದ್ದೇನು? ಮೋಮೊಸ್ ಮಾರಾಟಗಾರ ಏನು ಮಾಡಿದ್ದ ಎಂಬುದನ್ನು ನೋಡಿ.
ಈಗ ಹಣದ ಹಿಂದೆ ಬಿದ್ದಿರುವ ಮಂದಿ ಜನರ ಆರೋಗ್ಯದ ಕುರಿತು ಎಳ್ಳಷ್ಟು ಯೋಚಿಸುವುದಿಲ್ಲ. ಇಲ್ಲಿಯೂ ಆಗಿರುವುದು ಇದೆ. ಮೋಮೊಸ್ ಮಾರಾಟಗಾರನ ನಿರ್ಲಕ್ಷ್ಯ ಆಕೆಯ ಜೀವವನ್ನೇ ಕಸಿದಿದೆ. ಇಲ್ಲಿನ ಖೈರತಾಬಾದ್‌ನಲ್ಲಿ ರಸ್ತೆ ಬದಿ ಮಾರಾಟ ಮಾಡುತ್ತಿದ್ದ ಮೋಮೊಸ್ ಅನ್ನು ತಾಯಿ ಹಾಗೂ ಇಬ್ಬರು ಮಕ್ಕಳು ಸವಿದಿದ್ದಾರೆ. ತಾಯಿ ಸುಮಾರು 8 ಮೋಮೊಸ್ ತಿಂದಿರಬಹುದು ಎಂದು ಅಂದಾಜಿಸಲಾಗಿದೆ.
ಮೋಮೊಸ್ ಸವಿದ ತಾಯಿಗೆ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಹಾಗೆ ಮಕ್ಕಳು ಕೂಡ ಹೊಟ್ಟೆನೋವಿನಿಂದ ಒದ್ದಾಡಿದ್ದಾರೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ತಾಯಿ ಮೃತಪಟ್ಟಿದ್ದರೆ ಮಕ್ಕಳ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವರದಿಯಾಗಿದೆ. ಹಾಗೆ ಈ ಅಂಗಡಿಯಲ್ಲಿ ಮೋಮೊಸ್ ತಿಂದ 20ಕ್ಕೂ ಹೆಚ್ಚು ಮಂದಿ ಫುಡ್ ಪಾಯಿಸನ್‌ನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಮ್ ಬಾಬು ಅವರು ತಿಳಿಸಿರುವ ಪ್ರಕಾರ, ಘಟನೆ ಸಂಬಂಧ ಮಾರಾಟಗಾರನ ವಿರುದ್ಧ ಕೇಸ್ ದಾಖಲಾಗಿದೆ. ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಅಂಗಡಿ ಮೇಲೆ ದಾಳಿ ಅಧಿಕಾರಿಗಳು ಶಾಕ್
ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಅಂಗಡಿ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಅಧಿಕಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. ಏಕೆಂದರೆ ಅಂಗಡಿಯಾತ ಸ್ಥಳದಲ್ಲಿ ಅತ್ಯಂತ ಕೊಳಕು ಪ್ರದೇಶದಲ್ಲಿ ಮೋಮೊಸ್ ರೆಡಿ ಮಾಡುತ್ತಿದ್ದ. ಹಾಗೆ ಆತನ ಅಂಗಡಿಯಲ್ಲಿದ್ದ ಫ್ರಿಡ್ಜ್‌ನಲ್ಲಿ ಮೋಮೊಸ್ ಸಹ ಹಾಗೆಯೆ ಬಿದ್ದಿತ್ತು. ಅಂದ್ರೆ ಯಾವುದೇ ಬಾಕ್ಸ್, ಪ್ಲಾಸ್ಟಿಕ್ ಒಳಗೆ ಹಾಕಿ ಆತ ಇಟ್ಟಿರಲಿಲ್ಲ. ಹಾಗೆ ಆ ಫ್ರಿಡ್ಜ್‌ಗೆ ಸರಿಯಾದ ಬಾಗಿಲು ಕೂಡ ಇರಲಿಲ್ಲ. ಈ ಕಾರಣದಿಂದ ಆ ಮೊಮೊಸ್‌ಗಳು ಹಾಳಾಗಿರಬಹುದು ಎಂದು ಅಂದಾಜಿಸಲಾಗಿದೆ.
ಆತನ ಅಂಗಡಿಯಲ್ಲಿ ಸಿಕ್ಕಿರುವ ವಸ್ತುಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಹಾಗೆ ಮತ್ತೊಂದಿಷ್ಟು ಅಂಗಡಿಗಳ ಮೇಲೆ ಕಣ್ಣಿಡಲಾಗಿದೆ. ಹಾಗೆ ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಹಲವು ಕಡೆಗಳಲ್ಲಿ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.



Click it and Unblock the Notifications
