Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಡಬ್ಬಿಗಳ ಮುಚ್ಚಳ ಬಿಗಿಯಾಗಿ ಹಾಕುತ್ತಾನೆಂದು ವಿಚ್ಛೇದನ ಪಡೆದ ಪತ್ನಿ..!
ಮದುವೆ ಅನ್ನೋದು ಏಳೇಳು ಜನ್ಮದ ಬಂಧ ಎನ್ನಲಾಗುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ, ವಿಚ್ಛೇದನ ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೂ ಈಗ ವಿಚ್ಛೇದನ ಪಡೆಯವುದು ನಡೆಯುತ್ತಲೇ ಇದೆ. ಅದ್ರಲ್ಲೂ ಯಾರು ಊಹಿಸದಂತಹ ಕಾರಣಗಳಿಗೆ ಈಗ ವಿಚ್ಛೇದನ ಪಡೆಯುತ್ತಿರುವುದನ್ನು ನಾವು ನೋಡಬಹುದು.
ಇತ್ತೀಚೆಗೆ ಮದುವೆಯಾದ ಒಂದು ವರ್ಷದೊಳಗೇ ವಿಚ್ಛೇದನಕ್ಕೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿದ್ಯಾವಂತರೇ ಇದರಲ್ಲಿ ಮುಂದಿರುತ್ತಾರೆ ಎನ್ನುವುದೂ ಕಹಿ ಸತ್ಯ. ಆದರೆ ಈ ನಡುವೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲೂ ಸಹ ಪತ್ನಿ ವಿಚಿತ್ರ ಕಾರಣಕ್ಕೆ ಪತಿಯಿಂದ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.

ಮನೆಯಲ್ಲಿರುವ ಉಪ್ಪಿನಕಾಯಿ ಡಬ್ಬಿಯ ಮುಚ್ಚಳವನ್ನು ಬಿಗಿಯಾಗಿ ಹಾಕುತ್ತಾನೆ ಎಂದು ಪತಿಯಿಂದ ವಿಚ್ಛೇದನ ಪಡೆಯಲು ಮುಂದಾಗಿರುವ ವಿಚಿತ್ರ ಘಟನೆ ವರದಿಯಾಗಿದೆ. ಹೌದು ನಿಮಗಿದು ಅಚ್ಚರಿ ಎನಿಸಬಹುದು. ಆದರೆ ಆಕೆಯ ಪತಿ ಉದ್ದೇಶ ಪೂರ್ವಕವಾಗಿಯೇ ಕೆಲವೊಂದು ಡಬ್ಬಿಗಳ ಮುಚ್ಚಳ ಬಿಗಿಯಾಗಿ ಹಾಕುತ್ತಿದ್ದನಂತೆ. ಅಂತಿಮವಾಗಿ ಪತಿಯಿಂದ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.
ಮೊದ ಮೊದಲು ಆಹಾರ, ವಸ್ತುಗಳು ಹೆಚ್ಚು ದಿನ ಬಾಳಿಕೆ ಬರಲಿ ಎಂಬ ಕಾರಣಕ್ಕೆ ಈ ರೀತಿ ಎಲ್ಲಾ ಡಬ್ಬಿಗಳ ಮುಚ್ಚಳ ಬಿಗಿಯಾಗಿ ಹಾಕುತ್ತಿದ್ದಾನೆ ಎಂದುಕೊಂಡಿದ್ದರಂತೆ. ಆದರೆ ಆತ ಉದ್ದೇಶ ಪೂರ್ವಕವಾಗಿಯೇ ಎಲ್ಲಾ ಬಾಟಲಿಗಳ ಮುಚ್ಚಳ ಬಿಗಿಯಾಗಿ ಹಾಕುತ್ತಿದ್ದನಂತೆ.
ರೆಡ್ ಇಟ್ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬರು ಈ ಕುರಿತ ಪೋಸ್ಟ್ ಹಂಚಿಕೊಂಡಿದ್ದಾರೆ. ಮೊದಲು ತನ್ನ ಪತಿಯ ಈ ರೀತಿಯ ವರ್ತನೆಯಿಂದಾಗಿ ಆಕೆ ಅನುಮಾನಗೊಂಡಿರಲಿಲ್ಲವಂತೆ. ಆದರೆ ಈ ರೀತಿಯ ಕೆಲಸ ಯಾವಾಗಲು ಮಾಡಲು ಮುಂದಾಗಿದ್ದರಂತೆ. ಇದೇ ವಿಚಾರಕ್ಕೆ ಮನೆಯಲ್ಲಿ ಯಾವಾಗಲು ಗಲಾಟೆ ನಡೆಯುತ್ತಿತ್ತಂತೆ. ಆಕೆ ತನ್ನಿಷ್ಟದ ಆಹಾರ ಅಥವಾ ಅಗತ್ಯ ವಸ್ತುಗಳಿಟ್ಟ ಡಬ್ಬದ ಮುಚ್ಚಳ ತೆಗೆಯಲು ಆಗುತ್ತಿರಲಿಲ್ಲವಂತೆ. ಇದರಿಂದ ಬೇಸತ್ತ ಆಕೆ ಅಂತಿಮವಾಗಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ.
ಕೆಲವೊಮ್ಮೆ ಅಡುಗೆಗೆ ಬೇಕಾದ ಅಗತ್ಯ ವಸ್ತುಗಳ ಡಬ್ಬಿಯ ಮುಚ್ಚಳ ತೆಗೆಯಲು ಆಕೆ ಅಕ್ಕಪಕ್ಕದ ಮನೆಯವರ ಸಹಾಯ ಪಡೆಯುತ್ತಿದ್ದಳಂತೆ. ಇದು ತಿಂಗಳುಗಳ ವರೆಗೆ ಮುಂದುವರೆದಿತ್ತು. ಆತ ಪ್ರತಿಯೊಂದು ಡಬ್ಬಿಯ ಮುಚ್ಚಳವನ್ನು ಎಷ್ಟು ಗಟ್ಟಿಯಾಗಿ ಹಾಕುತ್ತಿದ್ದ ಅಂದ್ರೆ ಅದನ್ನು ತೆರೆಯಲು ಗಂಟೆಗಳ ಕಾಲ ಹರಸಾಹಸ ಮಾಡಬೇಕಿತ್ತಂತೆ. ಇದರಿಂದ ಬೇಸತ್ತ ಆಕೆ ಕೊನೆಯದಾಗಿ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.
ಮೊದಲು ಆಕೆ ಈ ರೀತಿ ಮನೆಯ ಡಬ್ಬಿಗಳ ಮುಚ್ಚಳ ಬಿಗಿಯಾಗುತ್ತಿರುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕಾಗಿತ್ತು. ಅಲ್ಲದೆ ಇದಕ್ಕಾಗಿ ಪತಿ ಮೇಲೆ ಕಣ್ಣಿಟ್ಟಿದ್ದಳಂತೆ. ಈ ವೇಳೆ ಆತ ಜಾರ್‌ಗಳ ಮುಚ್ಚಳ ಎಷ್ಟು ಸಾಧ್ಯವೋ ಅಷ್ಟು ಬಿಗಿಯಾಗಿ ಹಾಕುತ್ತಿರುವುದು ಕಂಡುಬಂದಿತ್ತು.
ಇದೆಲ್ಲಾ ಆದ ಬಳಿಕ ಆಕೆ ವಿಚ್ಛೇದನ ಪಡೆಯಲು ನಿರ್ಧಾರ ಮಾಡಿ ವಕೀಲರ ನೇಮಿಸಿದ್ದಳಂತೆ. ಬಳಿಕ ವಕೀಲರು ಇಬ್ಬರ ನಡುವೆ ಮಾತುಕತೆಗೆ ಮುಂದಾಗಿದ್ದರಲ್ಲದೆ ಆಪ್ತ ಸಮಾಲೋಚನೆಗೆ ಮುಂದಾದರು. ಈ ವೇಳೆ ಪತಿ ತಾನು ಉದ್ದೇಶ ಪೂರ್ವಕವಾಗಿ ಜಾರ್‌ಗಳ ಮುಚ್ಚಳ ಬಿಗಿಯಾಗಿ ಹಾಕುತ್ತಿರುವುದಾಗಿ ಒಪ್ಪಿಕೊಂಡಿದ್ದ.
"ಅವನು ಉದ್ದೇಶಪೂರ್ವಕವಾಗಿ ಮುಚ್ಚಳಗಳನ್ನು ಬಿಗಿಗೊಳಿಸಿದ್ದಾನೆ ಎಂದು ಅವನು ಇನ್ನೂ ಒಪ್ಪಿಕೊಳ್ಳುವುದಿಲ್ಲ" ಎಂದು ಅವರು ಬರೆದಿದ್ದಾರೆ. "ಅವನು ಪ್ರತಿ ಜಾರ್ ಮುಚ್ಚಳವನ್ನು ಏಕೆ ಬಿಗಿಯಾಗಿ ಬಿಗಿಗೊಳಿಸುತ್ತಾನೆ ಎಂದು ನನಗೆ ತಿಳಿದಿಲ್ಲ, ನಾನು ಅದನ್ನು ತೆರೆಯಲು ಸಾಧ್ಯವಾಗಲಿಲ್ಲ. ಅವರು ನನಗೆ ಯಾವುದೇ ಕಾರಣ ನೀಡಿಲ್ಲ. ಅವನು ಉದ್ದೇಶಪೂರ್ವಕವಾಗಿ ಅದನ್ನು ಮಾಡಿದ್ದೇನೆ ಎಂದು ಅವನು ಇನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ಮಹಿಳೆ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಘಟನೆ ಕಂಡ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಈ ರೀತಿ ವಿಚಿತ್ರ ಘಟನೆ ಎಂದಿಗೂ ಕೇಳಿರಲಿಲ್ಲ ಎಂದಿದ್ದಾರೆ. ಆದರೆ ಆಕೆ ಇದರಿಂದ ಎಷ್ಟು ಸಮಸ್ಯೆ ಎದುರಿಸಿರಬಹುದು ಎಂದು ಆಕೆಯ ಕುರಿತು ಜನರು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.



Click it and Unblock the Notifications
