Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಎರಡು ವರ್ಷದಿಂದ ಮಹಿಳೆ ಕಣ್ಣಲ್ಲಿತ್ತು ಹುಳು..! ಈ ಮಾಂಸ ತಿಂದಿದ್ದೆ ಇದಕ್ಕೆ ಕಾರಣ..!
ಕೆಲವೊಂದು ವಿಚಿತ್ರ ಹಾಗೂ ಆಘಾತಕಾರಿಯಾಗಿರುವ ವಿಷಯಗಳನ್ನು ನೀವು ಕೇಳಿರಬಹುದು. ಮಾನವರ ದೇಹದಲ್ಲಿ ಹುಳುಗಳಿರುವುದು, ಅವು ಗೂಡು ಕಟ್ಟುವುದು, ಮೊಟ್ಟೆ ಇಡುವುದು, ಸಾವಿಗೆ ಕಾರಣವಾಗುವುದು ಹೀಗೆ. ಕೆಲವು ಬಾರಿ ಕಿವಿಯೊಳಗೆ ಕೀಟಗಳು ಹೋಗುವುದು, ಜೇಡ ಬಲೆ ಹಣೆಯುವುದು ಹೀಗೆ ಹತ್ತಾರು ಪ್ರಕರಣಗಳ ನೋಡಿದ್ದೇವೆ.
ಇನ್ನು ಕೆಲವು ಬಾರಿ ಎಂತಹ ವಿಚಿತ್ರ ಘಟನೆ ನಡೆಯುತ್ತದೆ ಎಂದರೆ ಮೂಗಿನೊಳಗೆ ದೊಡ್ಡ ಕೀಟ ಸೇರುವುದು, ಕಿವಿಯೊಳಗೆ ಸೇರಿಕೊಂಡು ಶಸ್ತ್ರಚಿಕಿತ್ಸೆ ನೆರವೇರಿಸುವುದು ಹೀಗೆ ಚಿತ್ರ ವಿಚಿತ್ರ ಘಟನೆಗಳ ನೋಡಿದ್ದೇವೆ.

ಆದರೆ ನೀವೆಂದಾದರು ಮಾನವರ ಕಣ್ಣಿನೊಳಗೆ ಹುಳುವೊಂದು ಬರೋಬ್ಬರಿ 2 ವರ್ಷ ನೆಲೆಸಿದ್ದ ಘಟನೆ ಕೇಳಿದ್ದೀರಾ? ಹೌದು ಇಲ್ಲೊಬ್ಬ ಮಹಿಳೆಯ ಕಣ್ಣಲ್ಲಿ ಹುಳು 2 ವರ್ಷಗಳ ಕಾಲ ನೆಲೆಸಿತ್ತು ಎಂದು ತಿಳಿದುಬಂದಿದೆ.
ವೈದ್ಯರು ಎರಡು ವರ್ಷಗಳ ಕಾಲ ಮಹಿಳೆಯ ಕಣ್ಣಿನಲ್ಲಿ ವಾಸಿಸಿದ್ದ ಅಪರೂಪದ ಪರಾವಲಂಬಿಯನ್ನು ಕಂಡುಹಿಡಿದರು ಮತ್ತು ಶಸ್ತ್ರ ಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆದಿರುವ ಘಟನೆ ನಡೆದಿದೆ.
ಕಾಂಗೋದ ಬಸಂಕುಸುವಿನ 28 ವರ್ಷದ ಮಹಿಳೆ ತನ್ನ ಎಡಗಣ್ಣಿನ ವಿಪರೀತ ನೋವು ಹಾಗೂ ನೀರು ಬರುತ್ತಿದ್ದ ಕಾರಣ ಆಸ್ಪತ್ರೆಗೆ ಪರೀಕ್ಷೆಗೆಂದು ಆಗಮಿಸಿದ್ದಳು. ಆದರೆ ಕಣ್ಣಿನ ಒಳಪದರದಲ್ಲಿ ಒಂದು ಸಣ್ಣ ಗಡ್ಡೆ ಆಕೃತಿ ಬೆಳೆದಿದ್ದು ಬಿಟ್ಟರೆ ಬೇರೆ ಯಾವ ರೋಗಲಕ್ಷಣವೂ ಆಕೆಗೆ ಇರಲಿಲ್ಲ.
ಆದರೆ ಕಣ್ಣಿನಿಂದ ವಿಪರೀತ ನೀರು ಸುರಿಯುತ್ತಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ವೈದ್ಯರು ಸಂಪೂರ್ಣ ಪರಿಶೀಲನೆಗೆ ಇಳಿದಾಗ ಕಣ್ಣಿನ ಒಳಪದರಲ್ಲಿ ಹುಳುವೊಂದು ಸೇರಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿತು. ಅದು ಸುಮಾರು 0.4 ಇಂಚುಗಳಷ್ಟು ದೊಡ್ಡದಾಗಿತ್ತು. ಇದು ನಿರಂತರ ಲಾವಾವನ್ನು ಉತ್ಪಾದಿಸುವ ಪರಾವಲಂಬಿ ಹುಳು ಆಗಿತ್ತು.
ಈ ಹುಳುವನ್ನು ಅರ್ಮಿಲ್ಲಿಫರ್ ಗ್ರಾಂಡಿಸ್ ಎಂದು ಗುರುತಿಸಲಾಗಿದೆ, ಇದು ಆಫ್ರಿಕಾದಲ್ಲಿ ಮಾನವರಿಗೆ ಸೋಂಕು ತಗುಲಿಸುವ ಪರಾವಲಂಬಿಯಾಗಿದೆ. ಈ ಪರಾವಲಂಬಿಗಳು ಸಾಮಾನ್ಯವಾಗಿ ಹಾವುಗಳನ್ನು ತಮ್ಮ ಪ್ರಾಥಮಿಕ ಅತಿಥೇಯಗಳಾಗಿ ಅವಲಂಬಿಸಿವೆ, ದಂಶಕಗಳು ಮಧ್ಯಂತರ ಅತಿಥೇಯಗಳಾಗಿ ಕಾರ್ಯನಿರ್ವಹಿಸುತ್ತವೆ.
ಇವು ಕಲುಷಿತ ಆಹಾರ ಅಥವಾ ನೀರಿನಿಂದ ಆಕಸ್ಮಿಕವಾಗಿ ಮೊಟ್ಟೆಗಳನ್ನು ಸೇವಿಸುವುದರಿಂದ ಅಥವಾ ಸೋಂಕಿತ ಹಾವುಗಳ ನಿಕಟ ಸಂಪರ್ಕದ ಮೂಲಕ ಮನುಷ್ಯರು ಸಾಮಾನ್ಯವಾಗಿ ಸೋಂಕಿಗೆ ಒಳಗಾಗುತ್ತಾರೆ. ಬೇಯಿಸದ ಹಾವಿನ ಮಾಂಸವನ್ನು ಸೇವಿಸುವುದರಿಂದಲೂ ಇವು ದೇಹದೊಳಗೆ ಸೇರುತ್ತವೆ ಎಂದು ತಿಳಿದುಬಂದಿದೆ.
ಮೊಸಳೆ ಮಾಂಸ ತಿಂದಿದ್ದ ಮಹಿಳೆ
ಆದರೆ ಈ ಪ್ರಕರಣದಲ್ಲಿ ಈ ಹುಳು ಹೇಗೆ ದೇಹ ಸೇರಿದೆ ಎಂದು ಕೇಸ್ ಸ್ಟಡಿ ಮಾಡಲು ಹೊರಟಾಗ ಆಕೆ ಎರಡು ವರ್ಷದ ಹಿಂದೆ ಮೊಸಳೆ ಮಾಂಸ ಸೇವಿಸಿರುವುದಾಗಿ ಹೇಳಿದ್ದಾಳೆ. ಆದರೆ ಆ ಬಳಿಕ ಹಾವು, ಗೋವಿನ ಮಾಂಸ ಸೇವನೆ ಮಾಡಿಲ್ಲ ಎಂದಿದ್ದಾಳೆ. ಹೀಗಾಗಿ ಈ ಹುಳು ಆಕೆಗೆ ಮೊಸಳೆ ಮಾಂಸದಿಂದಲೇ ದೇಹ ಸೇರಿದೆ ಎಂದು ಖಚಿತವಾಗಿದೆ.
ಏಕೆಂದರೆ ಮೊಸಳೆಗಳ ದೇಹದಲ್ಲಿ ಈ ಹುಳುಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡಲು ಅನುಕೂಲಕರ ವಾತಾವರಣ ಹಾಗೂ ಅವು ಈ ಹುಳುಗಳನ್ನು ತಮ್ಮೊಳಗೆ ಪೋಷಿಸುವುದು ದೃಢವಾಗಿದೆ. ಹೀಗಾಗಿ ಆಕೆ ಆಗಾಗ ಮೊಸಳೆ ಮಾಂಸ ಸೇವಿಸುತ್ತಿದ್ದೆ ಎಂದಿದ್ದಳು.
ವ್ಯಕ್ತಿಯ ಮೂಗಿನಲ್ಲಿದ್ದವು ಜೀವಂತ ಹುಳುಗಳು
ಇದಕ್ಕೂ ಮೊದಲು ಇನ್ನೊಂದು ವಿಚಿತ್ರ ಘಟನೆಯಲ್ಲಿ ಫ್ಲೋರಿಡಾದ ಜಾಕ್ಸನ್ ಎಂಬಾತನ ಮೂಗಿನಲ್ಲಿ ರಕ್ತ ಬರುತ್ತಿದ್ದ ಕಾರಣ ಆತ ವೈದ್ಯರ ಬಳಿ ಹೋದಾಗ ವೈದ್ಯರೇ ಶಾಕ್ ಆಗಿದ್ದರು. ಏಕೆಂದರೆ ಆತನ ಮೂಗಿನ ಒಳಗೆ ಬರೋಬ್ಬರಿ 150ಕ್ಕೂ ಅಧಿಕ ಜೀವಂತ ಹುಳುಗಳಿದ್ದವು.



Click it and Unblock the Notifications