Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ತ್ರಿವಳಿ ಮಕ್ಕಳಿಗೆ ಜನ್ಮ ನೀಡಿ ಮಹಿಳೆ ಸಾವು:ಅಚ್ಚರಿಯೆಂಬಂತೆ 45 ನಿಮಿಷದ ಬಳಿಕ ಮತ್ತೆ ಬದುಕಿದಳು!
ಆಯಸ್ಸು ಇದ್ದರೆ ಯಮ ಬಂದರೂ ಏನೂ ಮಾಡಕ್ಕಾಗಲ್ಲ ಎಂದು ಹೇಳುತ್ತಾರೆ, ಕೆಲವೊಂದು ಘಟನೆಗಳನ್ನು ನೋಡುವಾಗ ಅದು ನಿಜ ಅನಿಸುತ್ತದೆ, ಈ ಸ್ಟೋರಿಯೂ ಅಷ್ಟೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡುವಾಗ ಮಹಿಳೆ ತೀರಿ ಹೋಗುತ್ತಾಳೆ, ವೈದ್ಯರು ಕೂಡ ಆಕೆ ಸಾವನ್ನಪ್ಪಿರುವ ವಿಷಯ ದೃಢ ಪಡಿಸುತ್ತಾರೆ, ಆದರೆ ಅದಾಗಿ 45 ನಿಮಿಷದ ಬಳಿಕ ಹೋದ ಪ್ರಾಣ ಮರಳಿ ಬಂದಿದೆ.

ಈ ಘಟನೆ ನಡೆದಿರುವುದು ಟೆಕ್ಸಾಸ್‌ನಲ್ಲಿ
ಈ ಘಟನೆ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದೆ, ಕೆಲವೊಂದು ಮಿರಾಕಲ್ ನಡೆಯುತ್ತೆ ಎಂಬುವುದನ್ನು ಈ ಘಟನೆ ಮತ್ತೊಮ್ಮೆ ಸಾಬೀತು ಮಾಡಿದೆ. ಆ ಮಹಿಳೆಯ ಹೆಸರು ಮರೇಸಾ ಕ್ರಿಸ್ಟೆ, ಅರಿಗೆ ಹರಿಗೆ ನೋವು ಬಂದು ಆಸ್ಪತ್ರೆಗೆ ದಾಖಲಾಗಿದ್ದರು, ತ್ರಿವಳಿ ಮಕ್ಕಳಿಗೆ ಜನ್ಮ ನೀಡುವಾಗ ಸಾವನ್ನಪ್ಪಿದ್ದರು, ಆದರೆ ಅದಾದ ಸ್ವಲ್ಪ ಸಮಯದಲ್ಲಿಯೇ ಹೋದ ಪ್ರಾಣ ಮರಳಿ ಬಂದಿದೆ. ಮಹಿಳೆಗೆ ಹೆರಿಗೆಯ ಬಳಿಕ ತೊಂದರೆಗಳು ಕಾಣಿಸಿಕೊಂಡಿದ್ದರಿಂದ ಸಾವು ಉಂಟಾಗಿತ್ತು, ಅದಾಗಿ 45 ನಿಮಿಷದ ಬಳಿಕ ಅವರಲ್ಲಿ ಮತ್ತೆ ಉಸಿರಾಟ ಕಂಡು ಬಂದಿದೆ. ಆಕೆಗೆ ಸಿ ಸೆಕ್ಷನ್ ಮಾಡಿ ಮಕ್ಕಳನ್ನು ಹೊರ ತೆಗೆಯಲಾಗಿತ್ತು,ಅದಾದ ಸ್ಲ್ಪ ಹೊತ್ತಿನಲ್ಲಿಯೇ ಕೈಗಳು ಬಿದ್ದು ಹೋದಂತೆ ಅನಿಸಲಾರಂಭಿಸಿತು, ಹೃದಯ ಬಡಿತ ನಿಂತು ಹೋಯ್ತು ಅಂತಾರೆ ಮರಿಸಾ.
45 ನಿಮಿಷದ ಬಳಿಕ ಮರಳಿದ ಉಸಿರಾಟ
ಮಹಿಳೆ ಸತ್ತು ಹೋಗಿದ್ದಳು, ವೈದ್ಯರು ಪರೀಕ್ಷೆ ಮಾಡಲಾಗಿ ಆಕೆಯ ಹೃದಯದ ಬಡಿತ ಸಂಪೂರ್ಣ ನಿಂತಿತ್ತು, ಅದಾಗಿ 45 ನಿಮಿಷದ ಬಳಿಕ ಆಕೆಯ ದೇಹದಲ್ಲಿ ಉಸಿರಾಟದ ಪ್ರಕ್ರಿಯೆ ಕಂಡು ಬಂದಾಗ ಎಲ್ಲರಿಗೂ ಅಚ್ಚರಿ, ಆದರೆ ಆಕೆಯ ಜೀವ ಮರಳಿ ಬಂದ ಮೇಲೆ ಒಂದು ವಾರದವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಮೂವರು ಮಕ್ಕಳಿಗೆ ಜನ್ಮ ನೀಡಿದ್ದೇನೆ ಎಂಬ ನೆನಪು ಕೂಡ ಆಕೆಗೆ ಪ್ರಜ್ಞೆ ಬಂದಾಗ ಇರಲಿಲ್ಲ, ಆ ಅನುಭವವೇ ಭಯಾನಕವಾಗಿತ್ತು ಅಂತಾರೆ ಮರೇಸಾ.
ಸತ್ತು ಹೋದವರು ಜೀವನಕ್ಕೆ ಮರಳಿ ಬಂದಿರುವುದು ಇದೇ ಮೊದಲಲ್ಲ
ಸತ್ತು ಹೋದರು ಎಂದು ಭಾವಿಸಿದ್ದ ವ್ಯಕ್ತಿ ಜೀವನಕ್ಕೆ ಮರಳಿರುವುದು ಇದೇ ಮೊದಲಲ್ಲ, ತುಂಬಾ ಘಟನೆಗಳ ನಡೆದಿದೆ. ಶವ ಸಂಸ್ಕಾರ ಕ್ರಿಯೆ ನಡೆಯುವಾಗ ಎದ್ದು ಕುಳಿತಿರುವ ಘಟನೆಗಳಿವೆ, ವೈದ್ಯರು ತೀರಿ ಹೋಗಿದೆ ಎಂದ ಮಗುವನ್ನು ಮನೆಗೆ ತಂದಾಗ ಮತ್ತೆ ಮಗುವಿನಲ್ಲಿ ಉಸಿರಾಟ ಕಂಡು ಬಂದಿರುವ ಘಟನೆಗಳಿವೆ. ಕೆಲವು ಕಡೆ ವೈದ್ಯರ ನಿರ್ಲಕ್ಷ್ಯ ಎಂದು ಗಲಾಟೆ ಮಾಡಿದರೆ ಇನ್ನು ಕೆಲವು ಕಡೆ ಇದನ್ನು ಚಮತ್ಕಾರ ಎಂದು ಭಾವಿಸಿದ್ದು ಇದೆ. ಮರೇಸಾ ಕುಟುಂಬ ಇದು ವೈದ್ಯರ ನಿರ್ಲಕ್ಷ್ಯವಲ್ಲ, ಅವರ ಹೃದಯ ಸಂಪೂರ್ಣ ನಿಂತು ಹೋಗಿತ್ತು, ಅವರು ಮರಳಿ ಬಂದಿರುವುದು ಚಮತ್ಕಾರ ಎಂದು ನಂಬಿದ್ದಾರೆ.
ಇನ್ನು ಕೆಲವರು ಸತ್ತು ಹೋಗಿ ಸ್ವರ್ಗನೋಡಿ ಮತ್ತೆ ಜೀವನಕ್ಕೆ ಮರಳಿದಡೇರ್ರಿಯಲ್ ಪೆರ್ರಿ. ಇವರು ಸ್ವರ್ಗದ ಅನುಭವದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ,
ಅವುಗಳೆಂದರೆ ...
Book 1: Heavenly Encounters
Book 2: Messages from Heaven
Book 3: Transformed by Heaven
Book 4: A Love Beyond Words
Book 5: A Choir of Angels
Book 6: Scenes from Heaven
Book 7: A Joy Like No Other Book
8: A Glorious Light
ಪೆರಿ ಸ್ವರ್ಗದ ಅನುಭವದ ಬಗ್ಗೆ ಹೇಳುತ್ತಾ ನಾನು ಸ್ವರ್ಗದಲ್ಲಿ ನನ್ನ ಅಜ್ಜ, ಅಜ್ಜಿ, ಅಂಕಲ್ ಎಲ್ಲರನ್ನೂ ನೋಡಿದ ಆ ಸ್ಥಳ ತುಂಬಾನೇ ಶಾಂತವಾಗಿತ್ತು ಎಂಬುವುದಾಗಿ ಹೇಳಿದ್ದಾರೆ. ಆದರೆ ಪೆರ್ರಿ ಸತ್ತಿರಲಿಲ್ಲ, ಕೋಮಾದಲ್ಲಿದ್ದ, 11 ದಿನ ಕೋಮಾದಲ್ಲಿದ್ದ ಪೆರ್ರಿ ನಂತರ ನಿದ್ದೆಯಿಂದ ಎಚ್ಚರವಾದಂತೆ ಎಚ್ಚರವಾಗುತ್ತಾರೆ ಎಂಬುವುದಾಗಿ ಹೇಳಿದ್ದಾರೆ.



Click it and Unblock the Notifications