Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
ದೆಹಲಿ ಮುಂದಿನ ಸಿಎಂ ಆಗುತ್ತಾರಾ ಸುನಿತಾ ಕೇಜ್ರಿವಾಲ್.? ಯಾರು ಈಕೆ ಗೊತ್ತಾ?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಹೊರಬಂದ ಎರಡು ದಿನಗಳಲ್ಲೇ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಎರಡು ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ್ದು, ಈಗ ದೆಹಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಆರಂಭಗೊಂಡಿದೆ. ದೆಹಲಿಯಲ್ಲಿ ದೀರ್ಘಕಾಲದ ಆಡಳಿತ ನಡೆಸುತ್ತಿರುವ ಆಪ್‌ನಲ್ಲಿ ಸಿಎಂ ರೇಸ್‌ಗೆ ಹಲವರು ಹೆಸರು ಕೇಳಿಬರುತ್ತಿದೆ.
ತಿಹಾರ್ ಜೈಲಿನಿಂದ ಹೊರಬಂದ ಎರಡು ದಿನಗಳ ನಂತರ ದೆಹಲಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಕೇಜ್ರಿವಾಲ್ ಈ ಘೋಷಣೆ ಮಾಡಿದರು. ಎರಡು ದಿನಗಳ ನಂತರ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಜನರು ತೀರ್ಪು ಪ್ರಕಟಿಸುವವರೆಗೂ ನಾನು ಆ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ, ದೆಹಲಿಯಲ್ಲಿ ಚುನಾವಣೆಗೆ ತಿಂಗಳುಗಳು ಬಾಕಿ ಇವೆ, ನನಗೆ ಕಾನೂನು ನ್ಯಾಯಾಲಯದಿಂದ ನ್ಯಾಯ ಸಿಕ್ಕಿತು, ಈಗ ನನಗೆ ಜನತಾ ನ್ಯಾಯಾಲಯದಿಂದ ನ್ಯಾಯ ಸಿಗುತ್ತದೆ. ಜನರ ಆದೇಶದ ನಂತರವೇ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಆದರೆ ಕೆಲವೇ ತಿಂಗಳುಗಳಿಗಾದರು ಸಿಎಂ ಹುದ್ದೆಗೇರಲು ಹಲವರು ಸಾಲಿನಲ್ಲಿ ನಿಂತಿದ್ದಾರೆ. ಅವರಲ್ಲಿ ಕೇಳಿಬರುತ್ತಿರುವ ಪ್ರಮುಖ ಹೆಸರುಗಳಂದರೆ ಅತಿಶಿ, ಸೌರಭ್ ಭಾರದ್ವಾಜ್, ಗೋಪಾಲ್ ರೈ, ಸುನಿತಾ ಕೇಜ್ರಿವಾಲ್ ಹೆಸರು ಕೇಳಿಬರುತ್ತಿದೆ. ಆದರೆ ಇದರಲ್ಲಿ ಮಹಿಳಾ ಸಿಎಂ ಕೂಗು ಹೆಚ್ಚಾಗಿದೆ. ಅದರಲ್ಲೂ ಕೇಜ್ರಿವಾಲ್ ಪತ್ನಿ ಮುಂದಿನ ಸಿಎಂ ಆಗುವ ಎಲ್ಲಾ ಲಕ್ಷಣಗಳು ಹೆಚ್ಚಾಗಿದೆ ಎಂದು ವರದಿಯಾಗುತ್ತಿದೆ.
ಯಾರು ಅರವಿಂದ್ ಕೇಜ್ರಿವಾಲ್ ಪತ್ನಿ.?
ಸುನಿತಾ ಕೇಜ್ರಿವಾಲ್ ಅವರು ಮಾಜಿ ಭಾರತೀಯ ಕಂದಾಯ ಸೇವೆಗಳ (IRS) ಅಧಿಕಾರಿಯಾಗಿದ್ದು, ಅವರು 22 ವರ್ಷಗಳ ಕಾಲ ಆದಾಯ ತೆರಿಗೆ (ಐ-ಟಿ) ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಭೋಪಾಲ್‌ನಲ್ಲಿ ನಡೆದ ತರಬೇತಿ ಕಾರ್ಯಕ್ರಮದ ವೇಳೆ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾದರು. ಸುನೀತಾ 1994 ರ ಬ್ಯಾಚ್ ಐಆರ್ಎಸ್ ಅಧಿಕಾರಿಯಾಗಿದ್ದು, ಶ್ರೀ ಕೇಜ್ರಿವಾಲ್ 1995 ಬ್ಯಾಚ್ ಅಧಿಕಾರಿಯಾಗಿದ್ದರು.
58 ವರ್ಷ ವಯಸ್ಸಿನವರು 2016 ರಲ್ಲಿ I-T ಇಲಾಖೆಯಿಂದ ಸ್ವಯಂ ನಿವೃತ್ತಿ ಘೋಷಿಸಿದ ಅವರು ರಾಜಕೀಯದತ್ತ ಮುಖ ಮಾಡಿದರು. ಭ್ರಷ್ಟಾಚಾರದ ವಿರುದ್ಧ ಭಾರತೀಯ ಚಳವಳಿಯ ಸಮಯದಲ್ಲಿ ಮತ್ತು ಆಮ್ ಆದ್ಮಿ ಪಕ್ಷದ ಆರಂಭಿಕ ದಿನಗಳಲ್ಲಿ ಅವರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಆಗಾಗ್ಗೆ ಕಾಣಿಸಿಕೊಂಡರು. 2014 ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಿಂದ ನರೇಂದ್ರ ಮೋದಿ ವಿರುದ್ಧ ಕೇಜ್ರಿವಾಲ್ ಸ್ಪರ್ಧಿಸುವಾಗ ಅವರ ಬೆನ್ನಿಗೆ ನಿಂತು ಪ್ರಚಾರದಲ್ಲಿ ಭಾಗಿಯಾಗಿದ್ದರು.
2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗಳಿಸಿದ ನಂತರ, ಅರವಿಂದ್ ಕೇಜ್ರಿವಾಲ್ ಅವರ ಮೊದಲ ಟ್ವೀಟ್ ಅನ್ನು ಸುನಿತಾ ಅವರಿಗೆ ಅರ್ಪಿಸಿದ್ದರು.
ಆದರೆ ಇತ್ತೀಚಿಗೆ ಸಿಎಂ ಸ್ಥಾನದಲ್ಲಿದ್ದಾಗಲೇ ಕೇಜ್ರಿವಾಲ್ ಜಯಲು ಸೇರಿದಾಗ ಅವರ ಪರವಾಗಿ ಪತ್ನಿ ಕಣಕ್ಕಿಳಿದರು. ಅವರು ಜೈಲಿನಿಂದಲೇ ಚುನಾವಣೆ ಸ್ಪರ್ಧಿಸಿದ್ದರೆ ಪತಿಯ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದು ಸುನಿತಾ ಕೇಜ್ರಿವಾಲ್. ಹೀಗಾಗಿ ಪತಿಯ ಗೆಲುವು ಕಂಡ ಪಕ್ಷ ಇದು ಸುನಿತಾ ಗೆಲುವು ಎಂದೇ ಪರಿಗಣಿಸಿತ್ತು. ಇದಕ್ಕಾಗಿ ಅವರಿಗೆ ಆಪ್‌ನಲ್ಲಿ ಸ್ಥಾನಮಾನ ಗಟ್ಟಿಯಾಗಿತ್ತು.
ಈಗ ಮುಂದಿನ ಸಿಎಂ ಹುದ್ದೆಗೇರುವಲ್ಲಿಯೂ ಅವರ ಹೆಸರು ಕೇಳಿಬರುತ್ತಿದೆ. ದೆಹಲಿ ಆಪ್‌ನಲ್ಲಿ ಕೇಜ್ರಿವಾಲ್ ಬಿಟ್ಟರೆ ಅವರ ನಂತರ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಇವರ ಹೆಸರು ಕೂಡ ಇದೆ. ಆದರೆ ಈ ಸಾಲಿನಲ್ಲಿ ಇತರರ ಹೆಸರು ಕೂಡ ಇದ್ದು ಮುಂದೆ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.



Click it and Unblock the Notifications











