Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಅಟ್ಟಿಸಿಕೊಂಡು ಬಂದ ಕಾಡಾನೆ, ದಾಳಿಯಿಂದ ಜಸ್ಟ್ ಮಿಸ್: ವೀಡಿಯೋ ಸಿಕ್ಕಾಪಟ್ಟೆ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಆನೆ ಇಬ್ಬರು ವ್ಯಕ್ತಿಗಳನ್ನು ಅಟ್ಟಿಸಿಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ, ಆ ವೀಡಿಯೋ ನೋಡುವಾಗ ಮೈಜುಮ್ ಅನಿಸುತ್ತೆ, ಇನ್ನೇನು ಆ ವ್ಯಕ್ತಿಯ ಪ್ರಾಣ ಹೋಯ್ತು ಅಂದುಕೊಳ್ಳುತ್ತೇವೆ, ಸಾವಿನಿಂದ ಜಸ್ಟ್ ಮಿಸ್ ಅಷ್ಟೇ...
ಈ ವೀಡಿಯೋ ನೋಡಿದವರು ಆ ವ್ಯಕ್ತಿಗಳ ವರ್ತನೆಗೆ ಬೈಯ್ಯುತ್ತಿದ್ದಾರೆ, ಅಷ್ಟಕ್ಕೂ ಕಾಡು ಪ್ರಾಣಿಗಳ ಬೌಂಡರಿಯೊಳಗೆ ನಾವು ಮನುಷ್ಯರು ಹೋಗುವಾಗ ಅವಳಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ಪರಿಜ್ಞಾನವಿರಬೇಕು, ಅಲ್ಲಿ ಕುಚೇಷ್ಠೆ ಮಾಡಿದರೆ ಕಾಡುಪ್ರಾಣಿಗಳ ದಾಳಿಗೆ ಬಲಿಯಾಗಬಹುದು.

ಈ ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳನ್ನು ಆನೆ ಅಟ್ಟಿಸಿಕೊಂಡು ಬರುತ್ತಿದೆ, ಅವರು ಪ್ರಾಣ ಉಳಿಸಿಕೊಳ್ಳಲು ಎದ್ನೋ ಬಿದ್ನೋ ಅಂತ ಓಡುತ್ತಿದ್ದಾರೆ, ಅವರ ಜೊತೆ ಕೆಂಪು ಕಾರು ಕೂಡ ನಿಧಾನಕ್ಕೆ ಬರುತ್ತಿದೆ, ಆನೆ ಅಟ್ಟಿಸಿಕೊಂಡು ಅವರ ಹಿಂದೆಯೇ ಇದೆ.
ನೋಡಿದರೆ ಅದೊಂದು ರಸ್ತೆ, ರಸ್ತೆಯಲ್ಲಿ ಮನುಷ್ಯರು ಓಡಾಡಬಾರದಾ ಎಂದು ಅನಿಸಬಹುದು, ಆದರೆ ಅದು ರಸ್ತೆ ನಿಜ, ಆ ರಸ್ತೆಯನ್ನು ಕಾಡಿನೊಳಗೆ ಓಡಾಟಕ್ಕೆ ಮಾಡಲಾಗಿದೆ. ಅಂಥ ರಸ್ತೆಯಲ್ಲಿ ಹೋಗುವಾಗ ತಮ್ಮ ಪಾಡಿಗೆ ಹೋಗಬೇಕು, ಗಾಡಿಯಿಂದ ಇಳಿಯುವುದು ಅಥವಾ ಕುಚೇಷ್ಠೆ ಮಾಡುವುದು ಮಾಡುವುದಕ್ಕೆ ಹೋಗಬಾರದು.
ವಯನಾಡ್ ರಸ್ತೆ
ಇದು ವಯನಾಡ್‌ಗೆ ಹೋಗುವಾಗ ಸಿಗುವ ರಸ್ತೆ, ಇಲ್ಲಿ ಕಾಡೆಮ್ಮೆ , ಕಾಡಾನೆ, ಜಿಂಕೆಗಳು ಎಲ್ಲಾ ಕಂಡು ಬರುತ್ತದೆ, ಈ ರಸ್ತೆಯಲ್ಲಿ ಹೋಗುವಾಗ ಗಾಡಿಯಿಂದ ಇಳಿಯಲೇಬಾರದು. ಇವರು ಬಹುಶಃ ಮೂತ್ರವಿಸರ್ಜನೆಗೆ ಇಳಿದಿರಬಹುದು ಅಥವಾ ಕಾಡು ನೋಡೋಣ ಎಂದು ಇಳಿದಿರಬಹುದು, ಆದರೆ ನಂತರ ಅವರು ಊಹಿಸಿರದ ಘಟನೆ ನಡೆದೇ ಬಿಟ್ಟಿತ್ತು, ಜಗವೊಂದು ಇವರನ್ನು ಅಟ್ಟಿಸಿಕೊಂಡು ಬಂತು, ಆ ದೃಶ್ಯವನ್ನು ಎದುರಿನಲ್ಲಿ ಬರುತ್ತಿರುವವರು ಸೆರೆ ಹಿಡಿದಿದ್ದಾರೆ, ಇದೀಗ ಅದೇ ವೀಡಿಯೋ ವೈರಲ್ ಆಗಿದೆ.
ಜಸ್ಟ್ ಮಿಸ್
ಆನೆ ಅಟ್ಟಿಸಿಕೊಂಡು ಬರುವಾಗ ಒಬ್ಬರು ಬಿದ್ದು ಹೋಗುತ್ತಾರೆ, ಆನೆ ಅವರನ್ನು ತುಳಿಯಲು ನೋಡುತ್ತದೆ ಆದರೆ ತೆವಳಿಕೊಂಡು ಅತ್ತ ಸರಿಯುತ್ತಾರೆ, ಅಷ್ಟರಲ್ಲಿ ಮತ್ತೊಂದು ಜೀಪ್ ಪಾಸ್ ಆಯ್ತು, ಆನೆ ಗಮನ ಅತ್ತ ಹೋಗಿದ್ದಕ್ಕೆ ಇಬ್ಬರ ಜೀವ ಉಳಿಯಿತು.
ಕಾಡು ಪ್ರಾಣಿಗಳಿರುವ ಜಾಗಕ್ಕೆ ನಾವು ಹೋದಾಗ ಅವುಗಳಿಗೆ ತೊಂದರೆ ಮಾಡದಂತೆ ಜಾಗ್ರತೆವಹಿಸೋಣ...



Click it and Unblock the Notifications
