Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕೊಡಗಿನ 7ನೇ ಹೊಸಕೋಟೆಯಲ್ಲಿ ಕಾಡಾನೆಗೆ ಗೇಟ್ ತೆಗೆದ ಯುವಕ, ನಿಂತಿದ್ದ ಕಾರಿಗೆ ಹಾನಿ: ಕಾಡಾನೆ ಪುಂಡಾಟದ ವೀಡಿಯೋ
ಕೊಡಗು ಪ್ರಕೃತಿ ರಮಣೀಯ ನಾಡು, ಕರ್ನಾಟಕದ ಕಾಶ್ಮೀರ ಎಂದರೆ ಪ್ರಸಿದ್ಧ, ತನ್ನ ನೈಸರ್ಗಿಕ ಸೌಂದರ್ಯದಿಂದಲೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ, ಆದರೆ ಈ ಸುಂದರ ಜಿಲ್ಲೆಯಲ್ಲಿ ಮನುಷ್ಯ ಮತ್ತು ಕಾಡಾನೆಗಳ ಸಂಘರ್ಷಕ್ಕೆ ಕೊನೆಯಿಲ್ಲ. ಆಹಾರವನ್ನರಿಸಿ ಕಾಡಿನಿಂದ ನಾಡಿಗೆ ಬಂದು ಲೂಟಿ ಮಾಡಿ ಹೋಗುವ ಕಾಡಾನೆಗಳನ್ನು ಪ್ರತಿದಿನ ನೋಡಬಹುದು.

ಕೊಡಗಿನ ಕೆಲವೊಂದು ಸ್ಥಳಗಳಲ್ಲಿ ಆನೆ ಎಷ್ಟೊತ್ತಿಗೆ ಬರುತ್ತದೆ, ಎಷ್ಟೊತ್ತಿಗೆ ಕಾಡಿಗೆ ಮತ್ತೆ ಹಿಂತಿರುಗುತ್ತದೆ ಎಂಬುವುದು ಅಲ್ಲಿರುವ ನಿವಾಸಿಗಳಿಗೆ ತುಂಬಾ ಚೆನ್ನಾಗಿರುತ್ತದೆ. ಉಳಿದೆಲ್ಲಾ ಸಮಯಕ್ಕಿಂತ ಈ ಹಲಸಿನಹಣ್ಣು, ಮಾವಿನಹಣ್ಣು, ಕಣಲೆ ಬರುವ ಈ ಸೀಸನ್‌ನಲ್ಲಿ ಕಾಡಾನೆಗಳ ಕಾಟ ತುಸು ಅಧಿಕವಿರುತ್ತದೆ.
ಕಾಡಾನೆಗಳು ನಾಡಿಗೆ ಬಂದು ಹೀಗೆ ಹಲಸು-ಬಾಳೆ ಅಂತ ನಾಶ ಮಾಡುತ್ತದೆ, ಆದರೆ ಸಾಮಾನ್ಯವಾಗಿ ಮನುಷ್ಯನ ತಂಟೆಗೆ ಹೋಗಲ್ಲ, ಆದರೆ ಅದು ಗಲಿಬಿಲಿಯಾದಾಗ ತುಂಬಾನೇ ಅಪಾಯಕಾರಿ. ಜನ ಅದರ ಮೇಲೆ ದಾಲಿ ಮಾಡಲು ಯತ್ನಿಸಿದಾಗ ಅದು ಮನುಷ್ಯರ ಮೇಲೆ ದಾಳಿ ಮಾಡುತ್ತದೆ.
7th Hoskote, Karnataka pic.twitter.com/jtWMq2F7Ol
— [email protected] (@reenamanjuks) June 10, 2024
ಕೊಡಗಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರು ಆನೆ ಇದೆಯೇ ಎಂದು ಸೂಕ್ಷ್ಮವಾಗಿ ಪರಿಶೀಲಿಸಿ ಮತ್ತೆ ಕೆಲಸಕ್ಕೆ ಹೋಗುತ್ತಾರೆ, ಸಮೀಪದಲ್ಲಿ ಆನೆ ಬಂದಿದೆ ಎಂದಾದರೆ ತೋಟಕ್ಕೆ ಹೋಗುವುದಿಲ್ಲ. ಅದರಂತೆ ಇತ್ತೀಚೆಗೆ ಕೊಡಗಿನ 7ನೇ ಹೊಸಕೋಟೆಗೆ ಬಂದ ಕಾಡಾನೆ ವೀಡಿಯೋ ಗಮನ ಸೆಳೆದಿದೆ...
ಕಾಡಾನೆಗೆ ಗೇಟ್ ತೆಗೆದುಕೊಟ್ಟು ವೀಡಿಯೋ ಚಿತ್ರೀಕರಣ ಮಾಡಿದ ಯುವಕ
ಈ ವೀಡಿಯೋವನ್ನು ಹೊಸಕೋಟೆಯ ರಫೀಕ್ ಎಂಬ ಯುವಕ ಚಿತ್ರೀಕರಿಸಿರುವುದು. ಆತ ಆನೆ ಬರುತ್ತಿರುವುದು ನೋಡಿದ್ದಾನೆ, ತಾನು ಗೇಟ್ ತೆಗೆಯದಿದ್ದರೆ ಗೇಟ್ ಅಥವಾ ಕಾಪೌಂಡ್ ಮುರಿಯುವುದು ಖಂಡಿತ ಅಂತ ಗೊತ್ತಾಗಿದೆ, ಹಾಗಾಗಿ ಆನೆ ಸುಲಭವಾಗಿ ಹೋಗಲಿ ಎಂದು ಗೇಟ್ ತೆರೆದು ಓಡಿದ್ದಾನೆ, ಇದು ಸ್ವಲ್ಪ ರಿಸ್ಕ್ ಕೂಡ ಹೌದು, ಆದರೂ ಸಾಹಸ ಮಾಡಿದ್ದಾನೆ, ಈ ಆನೆ ಆರಾಮವಾಗಿ ಓಡಾಡಿರುವುದು ಮಡಿಕೇರಿ ಮೈಸೂರಿನ ಹೆದ್ದಾರಿಯಲ್ಲಿ.
ಆನೆ ಬಂತೊಂದು ಆನೆ ...7th Hoskote, Karnataka pic.twitter.com/p4lVLY3Rng
— [email protected] (@reenamanjuks) June 10, 2024
ಆ ದಾರಿಯಲ್ಲಿ ಬಂದ ಬಿಳಿ ಕಾರಿನವ ಜಸ್ಟ್ ಮಿಸ್
5 ನಿಮಿಷದಲ್ಲಿ ನೂರಾರು ಗಾಡಿಗಳು ಓಡಾಡುವ ಜಾಗ, ಬೆಳಗ್ಗಿನ ಜಾವ ಆದ ಕಾರಣ ಗಾಡಿಗಳು ಕಡಿಮೆಯಿತ್ತು. ಆದರೆ ಆನೆ ಹೋಗುತ್ತಿರುವ ಅದೇ ದಾರಿಯಲ್ಲಿ ಬಿಳಿ ಬಣ್ಣದ ಕಾರು ಬಂದು ಜಸ್ಟ್ ಪಾಸಾಗಿದೆ ಪುಣ್ಯಕ್ಕೆ ಆನೆ ಏನೂ ಮಾಡಿಲ್ಲ.
ರಸ್ತೆ ಬದಿಯಲ್ಲಿ ನಿಂತಿದ್ದ ಗಾಡಿಗೆ ಹಾನಿ ಮಾಡಿದೆ
ಆನೆ ಸಾಗುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಚುಚ್ಚಿ ಹಾನಿ ಮಾಡಿದೆ, ಪುಣ್ಯಕ್ಕೆ ಅದರಲ್ಲಿ ಯಾರೂ ಇರಲಿಲ್ಲ, ಒಟ್ಟಿನಲ್ಲಿ ಈ ಕಾಡಾನೆಯ ಪುಂಡಾಟದ ವೀಡಿಯೋ ವೈರಲ್ ಆಗುತ್ತಿದೆ.
ಆನೆ ಮತ್ತು ಕಾಡಾನೆ ನಡುವಿನ ಸಂಘರ್ಷ ಇಲ್ಲಿಯ ಪ್ರತಿನಿತ್ಯದ ದೃಶ್ಯ
ಆಹಾರವನ್ನು ಹುಡುಕಿ ಬರುವ ಕಾಡಾನೆಯಿಂದ ತಮ್ಮ ಬೆಳೆಗಳನ್ನು ರಕ್ಷಣೆ ಮಾಡುವುದೇ ಇಲ್ಲಿಯ ರೈತರಿಗೆ ತುಂಬಾನೇ ಸವಾಲಿನ ಕೆಲಸ, ಆನೆ ತಿಂದು ಅಥವಾ ತುಳಿದು ನಾಶ ಮಾಡಿ ಬಿಡುತ್ತದೆ. ಕಾಡುಗಳಲ್ಲಿ ಆಹಾರದ ಕೊರತೆ ಹಾಗಾಗಿ ನಾಡಿಗೆ ಬರುತ್ತಿದೆ. ಆದರೆ ಆನೆ ನಾಡಿಗೆ ಬಂದು ಬೆಳೆ ನಾಶ ಮಾಡಿದಾಗ ಆ ರೈತನ ಹೊಟ್ಟೆಪಾಡಿಗೆ ಕಷ್ಟವಾಗುತ್ತೆ, ಈ ಸಂಘರ್ಷಕ್ಕೆ ಹೊಣೆ ಯಾರು?



Click it and Unblock the Notifications