Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ತರಕಾರಿ ಮಾರುಕಟ್ಟೆಯಲ್ಲಿ ಈ ಮಹಿಳೆಯೇ ದೃಷ್ಟಿಗೊಂಬೆ..! ಯಾರು ಈ ಮಹಿಳೆ.?
ನೀವು ಮಾರುಕಟ್ಟೆಗೆ ಹೋದಾಗ ಅಲ್ಲಿ ವಿವಿಧ ರೀತಿಯ ತರಕಾರಿ, ಹಣ್ಣು ಹಂಪಲು ನೋಡುತ್ತೀರಿ. ಜೊತೆಗೆ ನಿಮಗೆ ಇಷ್ಟವಾದ ತರಕಾರಿಯೋ ಅಥವಾ ಹಣ್ಣು ಮನೆಗೆ ತರುತ್ತೀರಿ. ಆದ್ರೆ ಮಾರುಕಟ್ಟೆಯಲ್ಲಿ ಯಾವಾತ್ತಾದ್ರು ಈ ರೀತಿ ಮಹಿಳೆಯ ಫೋಟೋ ಹಾಕಿರೋದನ್ನ ನೋಡಿದ್ದೀರಾ?
ಬೆಂಗಳೂರಿನ ಸ್ಥಳೀಯ ತರಕಾರಿ ಅಂಗಡಿಯಲ್ಲಿ ಈ ಮಹಿಳೆಯ ಫೋಟೋವೊಂದು ನೇತಾಡುತ್ತಿದೆ. ದೊಡ್ಡ ದೊಡ್ಡ ಕಣ್ಣುಗಳ ತೆರೆದಿರುವ ಫೋಟೋ ಅದಾಗಿದೆ. ಈ ಫೋಟೋವನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದ್ದು, ಜನರಿಗೆ ಇದ್ಯಾಕೆ ಹಾಕಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಸವಾಲು ಎದುರಾಗಿದೆ.
ನಿಹಾರಿಕಾ ಎಂಬುವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಟೊಮೆಟೋ ರಾಶಿಯ ಮೇಲೆ ಈ ಮಹಿಳೆಯ ಫೋಟೋ ಹಾಕಿರುವುದು ಕಾಣಬಹುದು. ಅಲ್ಲಿ ಮಹಿಳೆಯ ಚಿತ್ರ ರಾರಾಜಿಸುತ್ತಿದೆ. ಸಿಸಿಟಿವಿಯಂತೆ ಆ ಫೋಟೋ ಟೊಮೆಟೋ ರಾಶಿಯನ್ನೇ ದಿಟ್ಟಿಸಿ ನೋಡುತ್ತಿದೆ.

ಈ ಫೋಟೋವನ್ನ ಅಂಗಡಿ ಮುಂದೆ ಏಕೆ ಹಾಕಿದ್ದಾರೆ? ಅಸಲಿಗೆ ಈ ಫೋಟೋ ಯಾರದ್ದು? ಅದರ ಉದ್ದೇಶ ಏನು? ಎಂಬುದು ಜನರ ಪ್ರಶ್ನೆಯಾಗಿದೆ.
ಬೆಂಗಳೂರಿನ ಹಲವು ಮಾರುಕಟ್ಟೆಯಲ್ಲಿ ಈ ಮಹಿಳೆಯ ಫೋಟೋ ರಾರಾಜಿಸುತ್ತಿದೆ. ಹಲವರು ಗ್ರಾಹಕರ ಸೆಳೆಯಲು ಈ ಫೋಟೋ ಬಳಸುತ್ತಿದ್ದಾರಂತೆ. ಇನ್ನು ಕೆಲವರು ವ್ಯಾಪಾರದ ಮೇಲೆ ಯಾರು ಕಣ್ಣು ಬೀಳದಿರಲಿ ಎಂಬ ಕಾರಣಕ್ಕೆ ಈ ಫೋಟೋ ಹಾಕುತ್ತಿದ್ದಾರಂತೆ.
ಈ ಫೋಟೋ ಹಂಚಿಕೊಂಡ ಬಳಿಕ 85 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ. ಜೊತೆಗೆ ಹತ್ತಾರು ಬಗೆಯ ಕಮೆಂಟ್ ಮಾಡಿದ್ದಾರೆ. ಈ ಫೋಟೋ ಕತ್ರಿಗುಪ್ಪೆ ಬಳಿಯ ಜಾಗದಲ್ಲಿ ಹಾಕಿದ್ದಾರೆಯೇ ಎಂದು ಒಬ್ಬರು ಕೇಳಿದ್ದಾರೆ. ಜೊತೆಗೆ ಇದು ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಹತ್ತಿರವೇ? ಎಂದು ಟ್ವಿಟ್ಟರ್ ಬಳಕೆದಾರೊಬ್ಬರು ಕೇಳಿದ್ದು, ಹೌದು, ಇದರ ಹಿಂದಿನ ಕಥೆ ನಿನಗೆ ಗೊತ್ತಾ?" ಎಂದು ನಿಹಾರಿಕಾ ಪ್ರಶ್ನಿಸಿದ್ದಾರೆ.
ಆದರೆ ಈ ಫೋಟೋ ಹಿಂದೆ ಯಾವುದೇ ಕಥೆಯಿಲ್ಲ tbh, ಇದು ದುಷ್ಟ ಕಣ್ಣುಗಳಿಂದ ದೂರವಿರಲು. ಈ ಫೋಟೋ ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ ಮತ್ತು ಅನೇಕ ಇತರ ಅಂಗಡಿಗಳಲ್ಲಿ ಇರಿಸಲಾಗಿದೆ ಎಂದು ಉತ್ತರಿಸಿದ್ದಾರೆ. ಈ ರೀತಿ ಹಲವು ಕಡೆ ಫೋಟೋಗಳ ಹಾಕಲಾಗಿದೆಯಂತೆ.
ಈ ಫೋಟೊ ನೋಡಿದ ಮಂದಿ ಒಂದೊಂದು ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಮಹಿಳೆ ಯಾರು? ಆಕೆ ಈ ಪೋಟೋವನ್ನ ನೋಡಿದ್ರೆ ನಿಜವಾಗ್ಲು ಇನ್ನು ಮುಂದೆ ಮಾರುಕಟ್ಟೆಗೆ ಕಾಲಿಡುವುದಿಲ್ಲ. ಆ ಮಹಿಳೆಗೆ ಈ ವಿಚಾರ ತಿಳಿದಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಈ ರೀತಿ ದೃಷ್ಟಿ ಗೊಂಬೆ ಈಗ ಮಾರುಕಟ್ಟೆಗೆ ಬಂದಿದೆ. ಅಂಗಡಿ ನೋಡುವ ಬದಲು ಜನ ಆ ಫೋಟೋ ಕಡೆಯೇ ಹೆಚ್ಚಾಗಿ ನೋಡುತ್ತಾರೆ. ಇದು ಒಳ್ಳೆಯ ಐಡಿಯಾ ಎಂದು ಕೆಲವರು ಹೇಳಿದ್ಧಾರೆ. ಇನ್ನು ಇದು ಸಿಸಿಟಿವಿ ಆವಿಷ್ಕಾರಕ್ಕೂ ಮೊದಲು ಇದ್ದ ಸಿಸಿಟಿವಿ ಎಂದು ಮತ್ತೊಬ್ಬರು ತಮಾಷೆಯ ಕಮೆಂಟ್ ಮಾಡಿದ್ದಾರೆ.
ಈ ಫೋಟೋವನ್ನು ನೋಡಿದಾಗ ನಿಮಗೆ ಏನು ನೆನಪಿಗೆ ಬರುತ್ತಿದೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ನಾನು ಈ ಫೋಟೋ ನೋಡಿದ ತಕ್ಷಣ ದರ ಏರಿಕೆಯಿಂದ ಮಾರುಕಟ್ಟೆಗೆ ಬಂದು ತರಕಾರಿ ಖರೀದಿಸಲಾಗದ ಮಹಿಳೆಯ ನೋಟ ಇದೇ ರೀತಿ ಇರಲಿದೆ ಎಂಬುದನ್ನು ಈ ಫೋಟೋ ತೋರಿಸುತ್ತಿದೆ ಎಂದಿದ್ದಾರೆ.
ಈ ಫೋಟೋದಲ್ಲಿರುವ ಮಹಿಳೆ ಮುಂದೊಂದು ದಿನ ಭಾರತದ ಸೆಲೆಬ್ರಿಟಿ ಆದರೂ ಅಚ್ಚರಿಯಿಲ್ಲ. ಇತ್ತೀಚಿಗೆ ಆನ್‌ಲೈನ್ ಜಗತ್ತು ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎಂದು ಮತ್ತೊಬ್ಬರು ಅಚ್ಚರಿಯ ಕಮೆಂಟ್ ಮಾಡಿದ್ದಾರೆ.



Click it and Unblock the Notifications
