Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
ಭಾರತದಲ್ಲಿ ಸ್ವಚ್ಚ್ ಭಾರತ್ ಅಭಿಯಾನ ಆರಂಭಿಸಿ ವರುಷಗಳೇ ಉರುಳಿವೆ. ಆದರೆ ಈವರೆಗೆ ಒಂದೂ ನಗರವನ್ನು ಸ್ವಚ್ಛತಾ ನಗರ ಎಂದು ಗುರುತಿಸಲು ಸಾಧ್ಯವಾಗಿಲ್ಲ. ಹೆಸರಿಗೆ ಮಾತ್ರ ಸ್ವಚ್ಛ ನಗರ ಎಂಬ ಘೋಷಣೆ ಆ ನಗರಕ್ಕೆ ಸಿಗುತ್ತದೆ. ಆದ್ರೆ ಎಲ್ಲಿ ನೋಡಿದರು ಕಸ ಹಾಕುತ್ತಾರೆ, ಎಲ್ಲೆಂದರಲ್ಲಿ ಉಗುಳುತ್ತಾರೆ.
ಅದರಲ್ಲೂ ಪಾನ್ ಮಸಾಲ ಹಾಕುವ ಅಭ್ಯಾಸ ಇಟ್ಟುಕೊಂಡಿರುವ ಮಂದಿ ಎಲ್ಲೆಂದರಲ್ಲಿ ಉಗುಳುತ್ತಾರೆ. ಅದು ಸಾರ್ವಜನಿಕ ಸ್ಥಳವಾಗಿರುವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಶೌಚಾಲಯಗಳು ಅಷ್ಟೆ ಏಕೆ ಪ್ರವಾಸಿ ಸ್ಥಳಗಳೂ ಸೇರಿ ದೇವಾಲಯದಲ್ಲಿಯೂ ಜನ ಉಗಿಯುವುದನ್ನು ನಾವು ನೋಡಬಹುದು.

ಇದನ್ನು ತಪ್ಪಿಸಲೆಂದು ಸರ್ಕಾರ 'ಇಲ್ಲಿ ಉಗುಳಬಾರದು ಉಗುಳಿದರೆ ದಂಡ' ಎಂದು ಕಂಡ ಕಂಡಲ್ಲಿ ಬೋರ್ಡ್ ಹಾಕಿರುತ್ತದೆ ಇಷ್ಟಾದರು ಜನ ಮಾತ್ರ ತಮ್ಮ ನಡೆತೆಯನ್ನು ಸರಿ ಮಾಡಿಕೊಳ್ಳುವುದಿಲ್ಲ. ಯಾರಾದರು ಉಗುಳಿರುವ ಗುರುತು ಕಂಡರೆ ಸಾಕು ಅಲ್ಲಿಯೇ ಉಗುಳಲು ಆರಂಭಿಸುತ್ತಾರೆ. ಆ ಇಡೀ ಪ್ರದೇಶವನ್ನು ಹಾಳು ಮಾಡುತ್ತಾರೆ.
ಆದ್ರೆ ಇಲ್ಲೊಂದು ಕಡೆ ಜನ ಉಗುಳಿರುವ ಕಲೆಯನ್ನು ಸ್ವಚ್ಚ ಮಾಡುತ್ತಿರುವ ಸಿಬ್ಬಂದಿಯ ವಿಡಿಯೋವೊಂದು ವೈರಲ್ ಆಗಿದ್ದು, ಜನ ಈ ವಿಡಿಯೋ ನೋಡಿ ಪಾನ್ ಮಸಾಲ ಸೇವಿಸಿ ಎಲ್ಲೆಂದರಲ್ಲಿ ಉಗುಳುವ ಮಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ? ಅಲ್ಲಿ ನಡೆದಿದ್ದೇನು ಎಂಬುದನ್ನು ನೋಡಿ.
ಜನ ಉಗುಳಿರುವುದರಿಂದ ಕಲೆಯಾಗಿರುವ ಸ್ಥಳವನ್ನು ಸ್ವಚ್ಛಗೊಳಿಸಲು ಸ್ವಚ್ಛತಾ ಸಿಬ್ಬಂದಿ ಹೆಣಗಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವೇಳೆ ಆ ಮಹಿಳೆ ಬಳಿ ತೆರಳಿದ ವ್ಯಕ್ತಿಯೊಬ್ಬ ಆಕೆಯನ್ನು ಮಾತನಾಡಿಸುತ್ತಿದ್ದಾನೆ. ಉಗುಳುವ ಕಲೆಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಆಕೆಗೆ ಹೇಗೆ ಅನಿಸುತ್ತದೆ ಎಂದು ಕೇಳುತ್ತಾರೆ.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಎಂಬುವರು ಹಂಚಿಕೊಂಡಿದ್ದಾರೆ. ಆಕೆಗೆ ನಿಮಗೆ ಈ ಉಗುಳಿದ ಕಲೆ ಸ್ವಚ್ಛ ಮಾಡುವಾಗ ಏನು ಅನಿಸುತ್ತದೆ ಎಂದು ಪ್ರಶ್ನಿಸಿದರೆ. ಆಕೆ ನನ್ನ ನಿತ್ಯದ ಕೆಲಸ ಇದಾಗಿದೆ. ಈ ಕಲೆಗಳನ್ನು ಸ್ವಚ್ಛ ಮಾಡಲು ಒತ್ತಾಯವಾಗಿ ಬರಬೇಕಾಗುತ್ತದೆ. ಜನರಿಗೆ ಎಷ್ಟು ಹೇಳಿದರು ಕೇಳುವುದಿಲ್ಲ, ಏನು ಮಾಡೋದು ಇದು ನನ್ನ ಕೆಲಸ ಎಂದು ಆಕೆ ಹೇಳುತ್ತಿದ್ದಾಳೆ.
ಆದರೆ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಹಂಚಿಕೊಂಡ ಬಳಿಕ ವೈರಲ್ ಆಗಿದೆ. ಜೊತೆಗೆ ದಯವಿಟ್ಟು ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಉಗಿಯಬೇಡಿ. ನಮ್ಮ ಸ್ಥಳಗಳನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ, ಅದನ್ನು ಹಾಳು ಮಾಡುವುದು ಕೊಳಕು ಮಾಡುವುದು ನಮ್ಮ ಕೆಲಸವಲ್ಲ. ಅದನ್ನು ಸ್ವಚ್ಛ ಮಾಡುವುದು ಅವರ ಕೆಲಸವಲ್ಲ. ಎಂದು ಬಳಕೆದಾರರು ಮನವಿ ಮಾಡಿಕೊಂಡಿದ್ದಾರೆ.
ಇದರ ಜೊತೆ ಸಾರ್ವಜನಿಕ ಸ್ಥಳದಲ್ಲಿ ಉಗುಳುವವ ವಿರುದ್ಧ ಕಠಿಣ ಕ್ರಮಕ್ಕೆ ಕಾನೂನು ತರಬೇಕು ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ. ಹೀಗೆ ಸಾರ್ವಜನಿಕ ಸ್ಥಳದಲ್ಲಿ ಉಗುಳುವವರನ್ನು ಗುರುತಿಸಿ ದಂಡ ಹಾಕಬೇಕು. ಆ ದಂಡದ ಹಣವನ್ನು ಸ್ವಚ್ಛಗೊಳಿಸುವ ಸಿಬ್ಬಂದಿಗೆ ನೀಡಬೇಕು ಹೇಳಿದ್ದಾರೆ.
ಇದಕ್ಕೂ ಮೊದಲು ಮೇ 2022ರಲ್ಲಿ ವಿಮಾನದ ಕಿಟಕಿಯ ಕೆಳಗೆ ಪಾನ್ ಮಸಾಲ ಹಾಕಿ ಉಗುಳಿದ ಚಿತ್ರವೊಂದು ಭಾರೀ ವೈರಲ್ ಆಗಿತ್ತು. ಜನ ಇತ್ತೀಚಿಗೆ ವಿಮಾನವನ್ನೂ ಬಿಡದೆ ಉಗಿಯುತ್ತಿರುವುದಕ್ಕೆ ಭಾರೀ ಆಕ್ರೋಶ ಕೇಳಿಬಂದಿತ್ತು. ಇಷ್ಟಾದರು ಜನ ಮಾತ್ರ ಇಂದಿಗೂ ತಮ್ಮ ಹಳೆ ಚಾಳಿ ಮುಂದುವರೆಸಿದ್ದು, ಎಲ್ಲೆಂದರಲ್ಲಿ ಉಗುಳುವುದನ್ನು ಮಾಡುತ್ತಲೇ ಇದ್ದಾರೆ. ಇನ್ನಾದರು ಜನ ಎಚ್ಚೆತ್ತು ಗಾಂಧೀಜಿ ಅವರ ಕನಸಾಗಿದ್ದ ಸ್ವಚ್ಛತೆ ಕಡೆಗೆ ಒಂದು ಹೆಜ್ಜೆ ಇಡಲಿ.



Click it and Unblock the Notifications
