ಮದುವೆ ಮುಂತಾದ ಸಮಾರಂಭಗಳಲ್ಲಿ ನೀರಿನ ಬಾಟಲಿ ಬಳಕೆ: ಈ ಲೇಖನ ಓದಿದರೆ ಖಂಡಿತ ಪಶ್ಚಾತಾಪವಾಗುತ್ತೆ

ಪ್ರತಿವರ್ಷ ಜೂನ್‌ 5ಕ್ಕೆ ಪರಿಸರ ದಿನ ಆಚರಿಸಿ, ಗಿಡ ನೆಡುವ ಫೋಟೋಗಳನ್ನು ಕ್ಲಿಕ್ಕಿಸಿ ನಂತರ ನಮ್ಮ ದಿನನಿತ್ಯದ ಜೀವನದಲ್ಲಿ ತುಂಬಾನೇ ಬ್ಯುಸಿಯಾಗಿರುತ್ತೇವೆ. ಆದರೆ ಈಗ ಎದುರಿಸುತ್ತಿರುವ ಮಳೆ ಸಮಸ್ಯೆ, ಬೆಳೆ ಸಮಸ್ಯೆ, ವಾತಾವರಣದಲ್ಲಿ ಉಷ್ಣಾಂಶದಲ್ಲಿನ ಬದಲಾವಣೆ ಇವೆಲ್ಲಾ ಪರಿಸರ ನಾಶದಿಂದಾಗಿ ಉಂಟಾಗಿರುವ ಸಮಸ್ಯೆಯಾಗಿದೆ. ನಮ್ಮ ಪರಿಸರದ ಕಾಳಜಿ ಒಂದು ದಿನಕ್ಕಷ್ಟೇ ಮೀಸಲಾದರೆ ಮುಂದೆ ನಮ್ಮ , ನಮ್ಮ ಮಕ್ಕಳ ಭವಿಷ್ಯ ಊಹಿಸುವುದೇ ಭೀಕರವಾಗಿರುತ್ತದೆ.

Using Water Bottle Affects For Nature

ಅಜ್ಜ, ಅಪ್ಪ ನೆಟ್ಟ ಮಾವಿನ ಗಿಡದಿಂದ ಮಾವಿನ ಹಣ್ಣು ಸವಿಯುತ್ತೇವೆ, ಅವರ ನೆಟ್ಟ ತೆಂಗಿನ ಸಸಿಯ ಫಲ ಪಡೆಯುತ್ತಿರುವವರು ನಾವು. ನಾವು ನಮಗಾಗಿ ಮಾತ್ರ ಮಾಡುತ್ತೇವೆ ಎಂದು ಯೋಚಿಸಿದ್ದರೆ ಹೆಮ್ಮರವಾಗಿ ಬೆಳೆದ ಗಿಡಗಳೇ ಇರುತ್ತಿರಲಿಲ್ಲ, ಅಲ್ಲದೆ ಆ ಕಾಲಗಳಲ್ಲಿ ಪ್ಲಾಸ್ಟಿಕ್‌ ಬಳಕೆಯೂ ಕಡಿಮೆ ಇತ್ತು, ಆದರೆ ಈಗ ಪ್ಲಾಸ್ಟಿಕ್‌ ಕವರ್‌ ಬ್ಯಾನ್ ಆಗಿರುವುದಕ್ಕೆ ಬಳಸುತ್ತಿಲ್ಲ, ಊಟದ ಬಾಟಲಿ, ವಾಟರ್ ಡಬ್ಬ, ತಟ್ಟೆ ಹೀಗೆ ಪ್ಲಾಸ್ಟಿಕ್‌ ಅನ್ನು ತುಂಬಾನೇ ಬಳಸುತ್ತಿದ್ದೇವೆ.

ಒಂದು ಮದುವೆ ಮನೆಯಲ್ಲಿ ಈಗ ಲೋಟದಲ್ಲಿ ನೀರು ಕೊಟ್ಟರೆ ಅವರಿಗೆ ನೀರಿನ ಬಾಟಲಿ ಇಡಬಹುದಿತ್ತು ಎಂದು ಹೇಳುತ್ತೇವೆ, ಆದರೆ ಒಂದು 500-600 ಜನ ಸೇರುವ ಮದುವೆಯಲ್ಲಿ ನೀರಿನ ಬಾಟಲಿ ಬಳಸುವುದರಿಂದ ನಾವು ಪರಿಸರಕ್ಕೆ ಮಾಡುತ್ತಿರುವ ದೊಡ್ಡ ದ್ರೋಹದ ಬಗ್ಗೆ ಪ್ರಕಾಶ್ ಮಲ್ಪೆ ಎಷ್ಟೊಂದು ಮನಮುಟ್ಟುವಂತೆ ಬರೆದಿದ್ದಾರೆ, ಇದನ್ನು ಓದಿದ ಮೇಲೆ ಪ್ಲಾಸ್ಟಿಕ್‌ ಬಳಕೆ ಬಗ್ಗೆ ಖಂಡಿತ ಯೋಚಿಸುತ್ತೇವೆ...

ಅವರು ಬರೆದಿರುವ ಲೇಖನವನ್ನು ಇಲ್ಲಿ ನೀಡಲಾಗಿದೆ, ಪ್ರತಿಯೊಬ್ಬರು ಯೋಚಿಸಲೇಬೇಕಾದ ಗಂಭೀರ ವಿಷಯವಿದು

ಮಲ್ಪೆಯ ಶ್ರೀನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಆತ್ಮೀಯರೊಬ್ಬರ ಮದುವೆ ಸಮಾರಂಭ ....
ಊಟದ ಸಮಯದಲ್ಲಿ ಪ್ಲಾಸ್ಟಿಕ್ ಬಾಟಲಿಯ ಬದಲಿಗೆ ಲೋಟದಲ್ಲಿ ನೀರನ್ನು ನೀಡಿದರು....
ಆ ದೃಶ್ಯ ನೋಡುತ್ತಿದ್ದಂತೆ ಮನಸ್ಸಿನಲ್ಲಿ ಒಂದಷ್ಟು ಅಂಕಿಅಂಶಗಳು ಓಡತೊಡಗಿದವು....
* ಒಂದು ಮದುವೆಗೆ ಬರುವ ಜನರ ಸರಾಸರಿ ಸಂಖ್ಯೆ - 600
* ಅಲ್ಲಿ ಉಪಯೋಗಿಸಲ್ಪಡುವ 300 ml ನ ನೀರಿನ ಬಾಟಲಿಗಳ ಸಂಖ್ಯೆ ಸುಮಾರು 1000, ಅಂದರೆ ಸುಮಾರು 300 ಲೀಟರ್ ನೀರು
* 90% ಮಂದಿ ನೀರನ್ನು ಪೂರ್ಣ ಉಪಯೋಗ ಮಾಡದೆ, ಅಥವಾ ಉಳಿದದ್ದನ್ನು ತಮ್ಮ ಜೊತೆ ಕೊಂಡು ಹೋಗದೆ (ಮರ್ಯಾದೆ ಪ್ರಶ್ನೆ!!!) ನೀರನ್ನು ಹಾಳು ಮಾಡುತ್ತಾರೆ.
* ಒಂದು 300 ml ಬಾಟಲಿ 20 ಗ್ರಾಮ್ ತೂಕವಿದೆ.
*ಅಂದರೆ ಒಂದು ಮದುವೆಯಲ್ಲಿ ನಾವು ಪೋಲು ಮಾಡುವ ನೀರು ಸುಮಾರು 150 ಲೀ ಮತ್ತು ಭೂಮಿಗೆ 20 ಕಿ.ಲೋ ಪ್ಲಾಸ್ಟಿಕ್‌ ತ್ಯಾಜ್ಯ!!!
ಇನ್ನು ಮದುವೆಯ ಜೊತೆ ಮೆಹೆಂದಿ ಮತ್ತು ಆರತಕ್ಷತೆ (reception??) ಸಮಾರಂಭಗಳನ್ನೂ ಸೇರಿಸಿದಾಗ ನಾವು ಪೋಲುಮಾಡುವುದು 450 ಲೀ ನೀರು ಮತ್ತು ಭೂತಾಯಿಯ ಗರ್ಭದೊಳಗೆ 60 ಕಿಲೋ ದರಿದ್ರ ಪ್ಲಾಸ್ಟಿಕ್ಕು!!!!
* ಯೋಚಿಸಿ ... 'ಒಬ್ಬ' ವ್ಯಕ್ತಿಯ ವಿವಾಹ ಸಮಾರಂಭದಲ್ಲಿ ಆತ ಮಾಡುವ ನೀರಿನ ಪೋಲು ಹಾಗೂ ಭೂಮಿಯೊಳಗೆ ಹುದುಗಿಸುವ ಪ್ಲಾಸ್ಟಿಕ್ಕಿನ ಪ್ರಮಾಣವೇ ಇಷ್ಟು ಬೃಹತ್ ಆಗಿರುವಾಗ , ಇನ್ನು ದೇಶದಲ್ಲಿ ಪ್ರತೀ ವರ್ಷ ನಡೆಯುವ ಮದುವೆಗಳ ಸಂಖ್ಯೆ ಸುಮಾರು 30 ಲಕ್ಷ!!!!!
*ಇನ್ನು ಮದುವೆಯ ಹೊರತಾಗಿ, ಸಾವಿರಾರು ಜನ ಸೇರುವ ನಾಗಮಂಡಲಗಳು, ಬ್ರಹ್ಮಕಲಶ, ಗೃಹಪ್ರವೇಶ, ಪೂಜೆಗಳು, ಉದ್ಘಾಟನೆ, ರಾಜಕೀಯ ಕಾರ್ಯಕ್ರಮಗಳು, ತಿಥಿ, ಸೀಮಂತ, ಹುಟ್ಟು ಹಬ್ಬ.. ಅಬ್ಬಬ್ಬಾ.........
* ನಿಧಾನಕ್ಕೆ ಗುಣಿಸಿ/ಭಾಗಿಸಿ / ಬಾಗಿಸಿ ನೋಡಿ .... ಘನತೆಗಾಗಿ ನಾವು ಈ ಭೂಮಿಗೆ, ಪ್ರಕೃತಿಗೆ ಮಾಡುತ್ತಿರುವ ಅಪಚಾರ ಯಾವ ಪರಿಯದ್ದು ಯೋಚಿಸಿ....
ಈ ದೃಷ್ಟಿಯಿಂದ ಮಲ್ಪೆಯ ಶ್ರೀ ನಾರಾಯಣಗುರು ಸಭಾಭವನದ ಆಡಳಿತ ಮಂಡಳಿ ಇಟ್ಟಿರುವ ಪರಿಣಾಮಕಾರಿ ಹೆಜ್ಜೆಗೆ ಸಾಷ್ಟಂಗ ಪ್ರಣಾಮಗಳು. ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ನೀರು ಕೊಡುವ ಘನಂಧಾರಿಗಳಿಗೆ ಇವರ ನಡೆ ಮಾದರಿಯಾಗಲಿ....
'' ಲೋಟಗಳಲ್ಲಿ ನೀರನ್ನು ನೀಡುವವರೇ ಘನವೆತ್ತವರು, ನಿಜವಾದ ಪ್ರಜ್ಞಾವಂತರು " ಎಂಬ ಸತ್ಯವನ್ನು ಎಲ್ಲರೂ ಒಪ್ಪಕೊಳ್ಳುವಂತಾಗಲಿ

English summary

Why Using Water Bottle Instead Of Glass In Function Not Good For Family

Why using plastic water bottle not good for environment, read on.
Story first published: Thursday, May 23, 2024, 17:30 [IST]
X
Desktop Bottom Promotion