Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಂಜನೇಯನಿಗೆ ತುಳಸಿಯನ್ನು ಅರ್ಪಿಸೋದ್ಯಾಕೆ? ಇದರ ಹಿಂದಿನ ಕಥೆಯೇನು?
ತುಳಸಿಗೆ ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸಾಮಾನ್ಯವಾಗಿ ಎಲ್ಲಾ ದೇವರಿಗೂ ಪೂಜಾ ಸಮಯದಲ್ಲಿ ತುಳಸಿಯನ್ನು ಅರ್ಪಣೆ ಮಾಡಲಾಗುತ್ತದೆ. ತುಳಸಿಯನ್ನು ಅರ್ಪಣೆ ಮಾಡೋದ್ರಿಂದ ದೇವಾನು ದೇವತೆಗಳು ಸಂತುಷ್ಠರಾಗುತ್ತಾರೆ ಎನ್ನುವ ನಂಬಿಕೆ ಕೂಡ ಇದೆ.

ಭಗವಾನ್ ವಿಷ್ಣುವಿಗೆ ತುಳಸಿಯು ಅತ್ಯಂತ ಪ್ರಿಯವಾದ ವಸ್ತುವಾಗಿದೆ. ಇತ್ತ ಆಂಜನೇಯನಿಗೂ ತುಳಸಿಯೆಂದರೆ ಬಲು ಇಷ್ಟ. ಹೆಚ್ಚಾಗಿ ಆಂಜನೇಯನ ದೇವಸ್ಥಾನಗಳಲ್ಲಿ ನಾವು ತುಳಸಿ ಮಾಲೆಯನ್ನು ಆಂಜನೇಯನಿಗೆ ಅರ್ಪಿಸೋದನ್ನುನೋಡಿರ್ತೀವಿ. ಅಷ್ಟಕ್ಕೂ ಆಂಜನೇಯನಿಗೆ ತುಳಸಿಯನ್ನು ಅರ್ಪಿಸೋದು ಯಾಕೆ? ಇದರ ಹಿಂದಿರೋ ಕಥೆಯ ಬಗ್ಗೆ ಒಂದೊಂದಾಗಿಯೇ ತಿಳಿದುಕೊಳ್ಳೋಣ.
ಮನೆಯಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗುತ್ತದೆ!
ಹೌದು, ವಿಶೇಷ ಸಂದರ್ಭಗಳಲ್ಲಿ ಭಕ್ತರು ಭಕ್ತಿಯಿಂದ ತುಳಸಿ ಮಾಲೆಯನ್ನು ಆಂಜನೇಯನಿಗೆ ಅರ್ಪಿಸುತ್ತಾರೆ. ಇದರ ಹಿಂದಿನ ಕಾರಣ ಏನೆಂದರೆ ತುಳಸಿಯನ್ನು ಅರ್ಪಿಸೋದ್ರಿಂದ ಆಂಜನೇಯನು ಸಂತುಷ್ಟನಾಗುತ್ತಾನೆ. ಮತ್ತು ನಮ್ಮೆಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾನಂತೆ. ಅಷ್ಟೇ ಅಲ್ಲದೇ, ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ.
ಹೆಚ್ಚಿನವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ದುಡಿದ ದುಡ್ಡು ಕೈಯಲ್ಲಿ ಉಳಿಯೋದಿಲ್ಲ ಅನ್ನೋ ನೋವಿರುತ್ತದೆ. ಹೇಗಾದ್ರೂ ದುಡ್ಡು ಖರ್ಚಾಗುತ್ತಲೇ ಇರುತ್ತೆ. ಮನೆಯಲ್ಲಿ ಪ್ರತಿ ಸಾರಿ ಆರ್ಥಿಕ ಸಂಕಷ್ಟ ಎದುರಾಗುತ್ತೆ ಅನ್ನುವವರೂ ಕೂಡ ಈ ರೀತಿ ತುಳಸಿಯನ್ನು ಆಂಜನೇಯನಿಗೆ ಅರ್ಪಿಸೋದ್ರಿಂದ ನಮ್ಮೆಲ್ಲಾ ಕಷ್ಟಗಳನ್ನು ಆತ ಕಳೆಯುತ್ತಾನಂತೆ.
ಆಂಜನೇಯನಿಗೆ ತುಳಸಿ ಅರ್ಪಿಸೋದ್ರ ಹಿಂದಿನ ಕಥೆಯೇನು?
ಆಂಜನೇಯನು ಭಗವಾನ್ ರಾಮನ ಪರಮ ಭಕ್ತ. ಹಾಗೆಯೇ ಅವರು ಶ್ರೀರಾಮನನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುತ್ತಿದ್ದರು. ಜೊತೆಗೆ ಸೀತಾ ಮಾತೆಗೆ ಅವರು ತಾಯಿಯ ಸ್ಥಾನವನ್ನು ನೀಡಿದ್ದರು. ಹನುಮಂತನಿಗೆ ಯಾವುದೇ ಚಿಂತೆ ಅಥವಾ ಸಮಸ್ಯೆ ಎದುರಾದಾಗ, ಅವರು ಅದನ್ನು ಮೊದಲು ಭಗವಾನ್ ಶ್ರೀ ರಾಮ ಮತ್ತು ತಾಯಿ ಸೀತಾ ಮಾತೆಗೆ ಹೇಳುತ್ತಿದ್ದರಂತೆ.
ಒಮ್ಮೆ ವಾಲ್ಮೀಕಿ ಋಷಿಗಳ ಆಶ್ರಮದಲ್ಲಿ ತಾಯಿ ಸೀತಾ ಮಾತೆ ಅಡುಗೆ ಮಾಡುತ್ತಿದ್ದಳು. ಆ ಸಮಯದಲ್ಲಿ ಅಲ್ಲಿಗೆ ಬಂದ ಆಂಜನೇಯನು ತಾಯಿ ನನಗೆ ತುಂಬಾ ಹಸಿವಾಸಿದೆ ಊಟ ಕೊಡು ಎಂದು ಸೀತಾ ಮಾತೆಯನ್ನು ಕೇಳುತ್ತಾನೆ. ನಂತರ ತಾಯಿ ಸೀತಾ ಮಾತೆ ಹನುಮಂತನಿಗೆ ಊಟ ಬಡಿಸಿದಳು. ಆಂಜನೇಯ ಎಷ್ಟು ಆಹಾರವನ್ನು ಸೇವಿಸಿದ್ರೂ ಕೂಡ ಆತನ ಹಸಿವು ನೀಗೋದೇ ಇಲ್ಲ.
ಇತ್ತ ಉಗ್ರಾಣವೇ ಖಾಲಿಯಾದರೂ ಕೂಡ ಆಂಜನೇಯನ ಹಸಿವನ್ನು ಮಾತ್ರ ನೀಗಿಸೋದು ಕಷ್ಟ ಎನ್ನುವಂತಾಯ್ತು. ಆಗ ಸೀತೆಯೂ ತನ್ನ ಪತಿಯಾದ ಶ್ರೀರಾಮನಲ್ಲಿ ಈ ವಿಚಾರವನ್ನು ಹೇಳುತ್ತಾಳೆ. ನಂತರ ಶ್ರೀ ರಾಮನ ಆಜ್ಞೆಯ ಮೇರೆಗೆ ತಾಯಿ ಸೀತಾ ಮಾತೆ ಆಂಜನೇಯನಿಗೆ ತಿನ್ನಲು ತುಳಸಿ ಎಲೆಯನ್ನು ನೀಡಿದಳು. ಆಂಜನೇಯ ತುಳಸಿ ಎಲೆಗಳನ್ನು ತಿಂದ ತಕ್ಷಣ ಅವರ ಹಸಿವು ತಕ್ಷಣವೇ ನೀಗಿತು.
ಅಂದಿನಿಂದ ಇಂದಿನವರೆಗೂ ಆಂಜನೇಯನ ಪೂಜೆಯಲ್ಲಿ ತುಳಸಿಯನ್ನು ಬಳಸಲಾಗುತ್ತದೆ ಎನ್ನುವ ಪ್ರತೀತಿ ಇದೆ. ಇದೇ ಕಾರಣಕ್ಕಾಗಿ ಇಷ್ಟಾರ್ಥಗಳ ಸಿದ್ಧಿಗಾಗಿ ಆಂಜನೇಯನಿಗೆ ತುಳಸಿಯನ್ನು ಅರ್ಪಿಸುವುದು.
ಆಂಜನೇಯನನ್ನು ಭಜಿಸುವ ಮಂತ್ರಗಳು!
1. ಹನುಮಾನ್ ಮೂಲ ಮಂತ್ರ
ಓಂ ಹನುಮತೇ ನಮಃ
2. ಹನುಮಾನ್ ಬೀಜ ಮಂತ್ರ
ಶ್ರೀ ರಾಮದೂತಾಯ ನಮಃ
3. ಹನುಮಾನ್ ಗಾಯತ್ರಿ ಮಂತ್ರ
ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ।
ತನ್ನೋ ಹನುಮತ್ ಪ್ರಚೋದಯಾತ್



Click it and Unblock the Notifications

