Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ರಕ್ತ ಚಂದನ ಮರಕ್ಕೆ ಇಷ್ಟು ಬೇಡಿಕೆ ಏಕೆ? ಒಂದು ಕೆಜಿಗೆ ಎಷ್ಟು ಬೆಲೆ ಇದೆ ಗೊತ್ತಾ?
ಭೂಮಿ ಮೇಲೆ ಒಂದೊಂದು ವಸ್ತುಗಳಿಗೂ ಕೂಡ ಅದರದ್ದೇ ಆದ ಬೆಲೆ ಇದೆ. ಅದರಲ್ಲೂ ಮರಗಳಿಗೆ ಈಗ ಬಂಗಾರದ ಬೆಲೆ ಇದೆ. ಕೆಲವೊಂದು ಜಾತಿ ಮರಗಳ ಬೆಲೆ ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ. ಅದ್ರಲ್ಲೂ ಶ್ರೀಗಂಧದ ಮರ, ಬೀಟೆ, ತೇಗ, ಹಲಸು, ಮಾವು ಹೀಗೆ ಕೆಲವೊಂದು ಮರಗಳು ಬಹಳ ಉಪಕಾರಿಯ ಜೊತೆಗೆ ದುಬಾರಿಯೂ ಹೌದು.
ಇನ್ನು ರಕ್ತ ಚಂದನ ಮರದ ಕುರಿತು ನೀವು ಕೇಳಿರಬಹುದು. ಈಗ ರಕ್ತ ಚಂದನ ಮರದ ಹೆಸರಿನ ಜೊತೆಗೆ ಕೇಳುತ್ತಿರುವ ಹೆಸರು ಪುಷ್ಪರಾಜ್. ಅಲ್ಲು ಅರ್ಜುನ್ ನಟನೆಯ ಈ ಪುಷ್ಪಾ ಸಿನಿಮಾದಲ್ಲೂ ಈ ರಕ್ತ ಚಂದನ ಮರದ ಕಥೆ ನೋಡಬಹುದು. ರಕ್ತ ಚಂದನ ಮರ ಕಡಿದು ಮಾರಾಟ ಮಾಡಿ ಕೋಟಿ ಕೋಟಿ ರೂಪಾಯಿ ಗಳಿಸುವುದು ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ.

ಪುಷ್ಪಾ ಆಗಿ ಅಲ್ಲು ಅರ್ಜುನ್ ರಕ್ತಚಂದನ ಮರ ಕಡಿದು ಮಾರಾಟ ಮಾಡಿ ಹಣ ಮಾಡುವ ವ್ಯಕ್ತಿ. ಹಾಗಾದ್ರೆ ರಕ್ತಚಂದನಕ್ಕೆ ಅಷ್ಟೊಂದು ಬೆಲೆ ಏಕೆ? ಇದರಿಂದ ಆಗುವ ಪ್ರಯೋಜನವೇನು? ಯಾವ ಕಾರಣಕ್ಕೆ ರಕ್ತ ಚಂದನ ಬಳಕೆಯಾಗುತ್ತೆ ಅನ್ನೋದನ್ನು ನಾವಿಂದು ತಿಳಿಯೋಣ.
ಕೆಂಪು ಚಂದನವು ಭಾರತಕ್ಕೆ ಸ್ಥಳೀಯವಾಗಿ ಅತ್ಯಂತ ದುಬಾರಿ ಮತ್ತು ಅಪರೂಪದ ಮರವಾಗಿದೆ, ವಿಶೇಷವಾಗಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕಂಡುಬರುತ್ತದೆ. ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹೆಚ್ಚಾಗಿ ಈ ಮರಗಳು ಕಾಣಬಹುದು. ಈ ಮರಗಳು ಆಕಾಶದೆತ್ತರಕ್ಕೆ ಬೆಳೆಯುತ್ತವೆ.
ಈ ಮರಗಳು ಕೆಂಪು ಬಣ್ಣದಿಂದ ಕೂಡಿರುತ್ತದೆ ಹಾಗೆ ಬಹಳ ಬಲಶಾಲಿಯಾಗಿರುತ್ತವೆ. ದಟ್ಟ ಅರಣ್ಯದಲ್ಲಿ ಕಂಡುಬರುವ ಈ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡಲಾಗುತ್ತದೆ. ಈ ಮರವನ್ನು ಪೀಠೋಪಕರಣ, ಪ್ರತಿಮೆ ತಯಾರಿಕೆ, ಅಲಂಕಾರಿಕಾ ವಸ್ತುಗಳ ತಯಾರಿಕೆ, ಸುಗಂಧ ದ್ರವ್ಯ, ಗೃಹೋಪಯೋಗಿ ವಸ್ತುಗಳು ಸೇರಿ ಹಲವು ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಈ ಮರದಿಂದ ಮಾಡಿದ ಪ್ರತಿಯೊಂದು ವಸ್ತುಗಳು ಅತ್ಯಂತ ಗಟ್ಟಿಮುಟ್ಟಾಗಿರುತ್ತದೆ. ಹಾಗೆ ಬಹಳ ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಹೀಗಾಗಿಯೆ ಈ ಮರಕ್ಕೆ ಬಹಳ ಬೇಡಿಕೆ ಇದೆ. ಆದ್ರೆ ಪ್ರತಿಯೊಂದು ಮರಕ್ಕೂ ಅದರದ್ದೇ ಆದ ಗುಣಗಳ ಆದಾರದ ಮೇಲೆ ಅವುಗಳ ಬೆಲೆ ನಿರ್ಧಾರವಾಗುತ್ತದೆ. ಕೆಂಪು ಚಂದನದ ಸರಾಸರಿ ಬೆಲೆ ಕೆಜಿಗೆ ₹50,000 ರಿಂದ ₹1,00,000 ವರೆಗೆ ಇರುತ್ತದೆ. ಆದರೆ, ಉತ್ತಮ ಗುಣಮಟ್ಟದ ಕೆಂಪು ಚಂದನದ ಬೆಲೆ ಕೆ.ಜಿ.ಗೆ ₹2,00,000 ವರೆಗೆ ಇರುತ್ತದೆ. ಈ ಬೆಲೆ ಅದರ ವಿಶಿಷ್ಟತೆ, ಗುಣಮಟ್ಟದ ಆದಾರದ ಮೇಲೆ ನಿರ್ಧರಿತವಾಗುತ್ತದೆ.
ಕೆಂಪು ಚಂದನದ ಹೆಚ್ಚಿನ ಬೆಲೆಗೆ ಮಾರಾಟವಾಗಲು ಮತ್ತೊಂದು ಕಾರಣವೆಂದರೆ ಅದರ ಔಷಧಿ ಗುಣಗಳು, ರಕ್ತಚಂದನವು ಶ್ರೀಗಂಧದಂತೆ ಸಾಂಪ್ರದಾಯಿಕ ಔಷಧಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ಉರಿಯೂತ, ಸಂಧಿವಾತ, ಸರ್ಮದ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿಯಾಗಿದೆ. ಇದರ ನಂಜುನಿರೋಧಕ ಗುಣಲಕ್ಷಣಗಳು ಗಾಯಗಳನ್ನು ಗುಣಪಡಿಸಲು ಮತ್ತು ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಕೆಂಪು ಶ್ರೀಗಂಧವನ್ನು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ, ಇದನ್ನು ಚರ್ಮದ ಆರೈಕೆಯಲ್ಲಿ ಸುಗಂಧ ತೈಲದ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಭಾರತವು 1960 ರವರೆಗೆ ವಿಶ್ವದ ಅತಿ ಹೆಚ್ಚು ಶ್ರೀಗಂಧ ಹಾಗೂ ರಕ್ತಚಂದನ ಉತ್ಪಾದಕರಾಗಿದ್ದರು, ಆದರೆ ನಂತರ, ಸರ್ಕಾರದ ಕ್ರಮಗಳಿಂದ, ಭಾರತದಲ್ಲಿ ಶ್ರೀಗಂಧದ ಉತ್ಪಾದನೆಯು ತೀವ್ರವಾಗಿ ಕುಸಿಯಿತು. ಪ್ರಸ್ತುತ, ಆಸ್ಟ್ರೇಲಿಯವು ಶ್ರೀಗಂಧದ ಮರದ ಪ್ರಪಂಚದ ಅತಿದೊಡ್ಡ ಉತ್ಪಾದಕವಾಗಿದೆ. ರಕ್ತಚಂದನವಂತು ಈಗ ದಟ್ಟ ಅರಣ್ಯದಲ್ಲಿ ಅಲ್ಲಲ್ಲಿ ಮಾತ್ರ ಕಾಣಸಿಗುತ್ತದೆ.



Click it and Unblock the Notifications











