Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಉದ್ದಿನ ವಡೆ ಮಧ್ಯದಲ್ಲಿ ತೂತು ಇರುವುದು ಏಕೆ? ನೀವು ಎಂದಾದ್ರು ಯೋಚಿಸಿದ್ದೀರಾ?
ದಕ್ಷಿಣ ಭಾರತದ ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದ್ರಲ್ಲೂ ದೋಸೆ, ಇಡ್ಲಿ, ವಡೆ, ಪೊಂಗಲ್, ಪೂಳಿಯೋಗೆ, ಅಪ್ಪಂ, ನೀರ್ ದೋಸೆ, ರೊಟ್ಟಿ, ಮುದ್ದೆ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಹಾಗೆ ಈ ಎಲ್ಲಾ ರುಚಿ ರುಚಿಯ ಖಾದ್ಯಗಳನ್ನು ನಿತ್ಯ ಮಾಡಿ ಸವಿಯೋದನ್ನು ನೋಡಬಹುದು. ಅದ್ರಲ್ಲೂ ಕೆಲ ತಿಂಡಿಗಳು ಹೋಟೆಲ್, ರೆಸ್ಟೋರೆಂಟ್‌ನಲ್ಲಿ ದುಬಾರಿ ಬೆಲೆಗೆ ಹಾಗೆ ಅದನ್ನೇ ಸವಿಯಲು ಜನರು ಸಾಲು ಗಟ್ಟಿ ಗಂಟೆಗಟ್ಟಲೆ ನಿಂತು ಖರೀದಿಸುತ್ತಾರೆ.
ಇಂತಹ ರುಚಿಕರ ಹಾಗೆ ವಿಶೇಷ ಖಾದ್ಯದಲ್ಲಿ ವಡೆ ಕೂಡ ಒಂದು. ಉದ್ದಿನ ಬೇಳೆ ಬಳಸಿ ಮಾಡುವ ವಡೆ ಇಡ್ಲಿ ಜೊತೆ ಸವಿಯಲು ಬಹುತೇಕರು ಇಷ್ಟಪಡುತ್ತಾರೆ. ಹಾಗೆ ವಡೆ ಮುಳುಗುವಷ್ಟು ಸಾಂಬಾರ್ ಹಾಕಿಕೊಂಡು ಸವಿಯುವುದು ಹಲವರ ಇಷ್ಟದ ಬ್ರೇಕ್ ಫಾಸ್ಟ್. ಇನ್ನು ವಡೆ ಸಹ ದಕ್ಷಿಣ ಭಾರತದ ಬಹಳ ಇಷ್ಟದ ಹಾಗೆ ಬಹಳ ರುಚಿಕರ ತಿಂಡಿ.

ಆದ್ರೆ ಈ ವಡೆಯನ್ನು ಹಲವು ಬಗೆಯಲ್ಲಿ ಹಲವು ರೀತಿಯಲ್ಲಿಯೂ ಮಾಡಿ ಸವಿಯಬಹುದು. ಆದ್ರೆ ಎಲ್ಲಾ ಉದ್ದಿನ ವಡೆಗಳು ಒಂದೇ ರೀತಿ ಆಕಾರದಲ್ಲಿ ಇರುವುದು ಕಾಮನ್. ವೃತ್ತಾಕಾರವಾಗಿ ಹಾಗೆ ಮಧ್ಯದಲ್ಲಿ ಒಂದು ತೂತು ಸಹ ಇರುವುದು ಸಾಮಾನ್ಯವಾಗಿ ಕಂಡುಬರುವ ರಚನೆಯಾಗಿದೆ. ಆದ್ರೆ ನೀವು ಎಂದಾದ್ರು ಆಲೋಚಿಸಿದ್ದೀರಾ? ಈ ವಡೆಗೆ ಮಧ್ಯದಲ್ಲಿ ತೂತು ಇರುವುದು ಏಕೆ? ಈ ರೀತಿಯ ರಚನೆಯ ವಡೆಯನ್ನೇ ಏಕೆ ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಾ?
ವಡೆ ಮಧ್ಯದಲ್ಲಿ ತೂತು ಇರುವುದು ಆಕೆ ಅನ್ನೋದು ಹಲವರಿಗೆ ತಿಳಿದಿರುವುದಿಲ್ಲ. ಇದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಆಕಾರ ಎಂದು ಹಲವರು ಭಾವಿಸಿದ್ದಾರೆ. ಹಾಗೆ ಈ ತೂತು ಇರುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಆಕಾರ ಎಂದು ಹೇಳಲಾಗಿದೆ. ಆದ್ರೆ ಇದರ ಹಿಂದೆ ದೊಡ್ಡ ಉದ್ದೇಶವಿದೆ ಎಂಬುದು ನಿಮಗೆ ಗೊತ್ತಾ?
ಉದ್ದಿನ ಹಿಟ್ಟನ್ನು ಕೈಯಲ್ಲಿ ಹಿಡಿದು ಮಧ್ಯದಲ್ಲಿ ಸಣ್ಣ ತೂತು ಮಾಡಿ ಎಣ್ಣೆಯಲ್ಲಿ ಬಿಟ್ಟರೆ ವಡೆ ಚೆನ್ನಾಗಿ ಬೇಯುತ್ತದೆ. ಮಧ್ಯದಲ್ಲಿನ ರಂಧ್ರವು ಶಾಖವು ಎಲ್ಲಾ ಕಡೆ ತಾಕುವಂತೆ ಮಾಡಲಿದೆ. ಹಾಗೆ ವಡೆ ಒಳಗೂ ಸಹ ಚೆನ್ನಾಗಿ ಬೇಯಲು ಈ ತೂತು ಸಹಕಾರಿಯಾಗಲಿದೆ. ಮಧ್ಯದ ರಂಧ್ರವು ಶಾಖಕ್ಕೆ ಒಡ್ಡಿಕೊಳ್ಳುವ ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುತ್ತದೆ. ಇದು ವಡಾವನ್ನು ಒಳಗೆ ಮತ್ತು ಹೊರಗೆ ಸಮವಾಗಿ ಬೇಯಿಸಲು ಅನುವು ಮಾಡಿಕೊಡುತ್ತದೆ.
ವಡೆ ಮಧ್ಯ ಭಾಗದಲ್ಲಿ ದಪ್ಪ ರಚನೆ ಇರುವ ಕಾರಣ ಕಾದಿರುವ ಎಣ್ಣೆ ಮಧ್ಯಭಾಗ ತಲುಪಿ ಆ ಭಾಗ ಸಹ ಕರಿಯಬೇಕಾಗುತ್ತದೆ. ಹೀಗಾಗಿ ರಂಧ್ರವು ಎಣ್ಣೆಯ ಹರಿವನ್ನು ಸರಾಗಗೊಳಿಸಲು ಸಹಕಾರಿಯಾಗಲಿದೆ. ಇದರಿಂದ ವಡೆ ಎಲ್ಲಾ ಕಡೆಯೂ ಕ್ರಿಸ್ಪಿಯಾಗಿ ಬೇಯಲು ಅನುವು ಮಾಡಿಕೊಡಲಿದೆ. ವಡೆಯ ಒಳಗಿನ ಭಾಗ ಬೇಯುವುದು ಹಾಗೆ ಹೊರ ಭಾಗವು ಕರಿಕರಿಯಾಗಲು ನೆರವಾಗುತ್ತದೆ. ಹಾಗೆ ವಡೆ ವೃತ್ತಾಕಾರವಾಗಿ ಬರಲು ಕೂಡ ಈ ತೂತು ಸಹಾಯ ಮಾಡಲಿದೆ.
ಈ ಕಾರಣದಿಂದಾಗಿ ವಡೆಯ ರಚನೆಯಲ್ಲಿ ಮಧ್ಯದಲ್ಲಿ ತೂತು ನೋಡಬಹುದು. ಒಂದು ವೇಳೆ ತೂತು ಇಲ್ಲದೆ ಇದ್ದರೂ ವಡೆ ಮಾಡಬಹುದು. ಆದ್ರೆ ಬಹಳ ಸಮಯ ಎಣ್ಣೆಯಲ್ಲಿ ಕರಿಯಬೇಕಾಗಬಹುದು. ಇದು ಸಮಯ ಮತ್ತು ಎಣ್ಣೆಯ ನಷ್ಟಕ್ಕೆ ಕಾರಣವಾಗಲಿದೆ. ಹೀಗಾಗಿ ವಡೆಯ ಮಧ್ಯದಲ್ಲಿನ ತೂತು ಕೇವಲ ರಂಧ್ರವಲ್ಲ ಇದು ಹಲವು ರೀತಿಯಲ್ಲಿ ನಿಮಗೆ ಅನುಕೂಲಕರವಾಗಿದೆ. ವಡೆಯ ಈ ಆಕಾರವು ಈಗ ಎಲ್ಲಾ ಕಡೆ ಚಾಲ್ತಿಯಲ್ಲಿದೆ.



Click it and Unblock the Notifications
