Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
ವಿಶ್ವದ ಬಹುತೇಕ ಭಾಗವಿಂದು ತಾಪಮಾನ ಏರಿಕೆ, ಪ್ರವಾಹ, ಬರದಂತಹ ಪರಿಸ್ಥಿತಿಯಲ್ಲಿ ಸಿಲುಕಿ ನಲುಗುತ್ತಿವೆ. ಅದರಲ್ಲೂ ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶದಲ್ಲಿ ನೈಸರ್ಗಿಕ ವಿಕೋಪಗಳು ಮತ್ತು ಬರದಂತಹ ಛಾಯೆ ಹೆಚ್ಚಾಗುತ್ತಿದೆ. ಭಾರತದಲ್ಲೇ ನಾವು ಉದಾಹರಣೆಯಾಗಿ ನೋಡುವುದಾದರೆ ಬರ ಆವರಿಸಿದೆ. ಇತ್ತ ಮರುಭೂಮಿ ದುಬೈನಲ್ಲಿ ಪ್ರವಾಹವೇ ಸಂಭವಿಸುತ್ತಿದೆ.
ಮಳೆಗಾಲದಲ್ಲಿ ಅತೀಯಾದ ಮಳೆ, ಬೇಸಿಗೆಯಲ್ಲಿ ಮೈಸುಡುವ ಬಿಸಿಲು, ಚಳಿಗಾಲದಲ್ಲಿ ಮೈ ಕೊರೆಯುವ ಚಳಿ ಜನರನ್ನು ಹಿಂಡಿ ಹಿಪ್ಪೆ ಮಾಡತೊಡಗಿದೆ. ಎಲ್ಲಾ ಪರಿಸ್ಥಿತಿಗೂ ಅನಿವಾರ್ಯವಾಗಿ ಹೊಂದಿಕೊಳ್ಳಲೇಬೇಕಾಗಿರುವ ಸ್ಥಿತಿ ಮಾನವ ಹಾಗೂ ಪ್ರಾಣಿ ಸಂಕುಲಗಳಿಗೆ ಬಂದೊದಗಿದೆ. ಇದು ಜಾಗತಿಕವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ.

ಇನ್ನು ಮಳೆಗಾಲದ ವಿಚಾರಕ್ಕೆ ಬಂದರೆ, ಮಳೆಗಾಲದ ಆರಂಭದ ದಿನಗಳಲ್ಲಿ ಅತೀ ಹೆಚ್ಚು ಮಳೆ ಸುರಿಯದಿದ್ದರೂ ಅಲ್ಲಲ್ಲಿ ಮಳೆ ಆರ್ಭಟ ಜೋರಾಗುತ್ತದೆ. ಈ ನಡುವೆ ಕೆಲ ಭಾಗದಲ್ಲಿ ಭೀಕರ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗುತ್ತದೆ. ಪ್ರವಾಹದ ಆರ್ಭಟ ಹೇಗಿರುತ್ತೆ ಅಂದ್ರೆ ಇನ್ನೆಂದು ಇಷ್ಟು ಮಳೆ ಬರುವುದೇ ಬೇಡ, ಮಳೆಗಾಲಕ್ಕಿಂತ ಉರಿ ಬಿಸಿಲು ಎಷ್ಟೋ ಮೇಲು ಎಂಬ ಭಾವನೆ ಬರುವಷ್ಟು ಪ್ರವಾಹ ಅಬ್ಬರಿಸುತ್ತೆ.
ಅದರಲ್ಲೂ ಬಿರು ಬೇಸಿಗೆ ಮುಗಿದ ತಕ್ಷಣವೇ ಈ ಪ್ರವಾಹ ಪರಿಸ್ಥಿತಿ ಎದುರಾಗುವುದು ಸಾಮಾನ್ಯ ಎನ್ನುವಂತಾಗಿದೆ. ಹಾಗಾದ್ರೆ ಬೇಸಿಗೆ ಮುಗಿದು ಆರಂಭಿಕ ಮಳೆಯಲ್ಲಿ ಪ್ರವಾಹ ಉಂಟಾಗುವುದೇಕೆ? ಈ ಪ್ರವಾಹ ಸೃಷ್ಟಿಗೆ ನಿಜವಾಗಲೂ ಕಾರಣವೇನು? ಭೀಕರ ಬರಗಾಲ ಎದುರಿಸುತ್ತಿದ್ದ ರಾಷ್ಟ್ರಗಳು ಈಗ ಪ್ರವಾಹದಲ್ಲಿ ಸಿಲುಕಿರುವುದೇಕೆ ಎಂಬ ನಿಮ್ಮ ಪ್ರಶ್ನೆಗೆ ಸುಲಭದ ಉತ್ತರ ಹುಡುಕಲಾಗಿದೆ.
ಭೀಕರ ಬರಗಾಲ ಕಾಡಿನ ಬಳಿಕ ಪ್ರವಾಹ ಉಂಟಾಗಲು ಹಲವು ಕಾರಣಗಳಿವೆ ಅದರಲ್ಲಿ ಮುಖ್ಯವಾಗಿ ಭೂಮಿ ಒರಟಾಗಿ ಮೇಲ್ಭಾಗವು ನೀರು ಹೀರಿಕೊಳ್ಳುವ ಶಕ್ತಿ ಕಳೆದುಕೊಳ್ಳುವುದು ಸಹ ಕಾರಣವಾಗಿದೆ. ಹೌದು ಈ ಕಾರಣ ತಿಳಿದುಬಂದಿರುವುದು ಸಣ್ಣದೊಂದು ಅಧ್ಯಯನದಲ್ಲಿ. ಯೂನಿವರ್ಸಿಟಿ ಆಫ್ ರೀಡಿಂಗ್‌ನ ಡಾ.ರೋಬ್ ಥಾಮ್ಸನ್ ಎಂಬಾತ ಮಾಡಿದ್ದ ಒಂದು ಸಣ್ಣ ಪ್ರಯೋಗದಲ್ಲಿ ಪ್ರವಾಹಕ್ಕೆ ಕಾರಣ ಆಗುವ ಅಂಶವೇನು ಎಂಬುದು ಸಾಬೀತಾಗುತ್ತದೆ.
ಏನಿದು ಪ್ರಯೋಗ.?
ಆತ ಮೂರು ಪ್ಲಾಸ್ಟಿಕ್ ಕಪ್‌ನಲ್ಲಿ ನೀರ ತುಂಬಿ ಅದನ್ನು ಒದ್ದೆಯಾದ ಹುಲ್ಲಿನ ಮೇಲೆ ಹಾಗೂ ಸಾಮಾನ್ಯ ಬೇಸಿಗೆಯ ಹುಲ್ಲು ಹಾಗೂ ಹೀಟ್‌ವೇವ್‌ಗೆ ಒಳಗಾದ ಭೂಮಿ ಮೇಲೆ ಇಟ್ಟು ನೋಡುತ್ತಾನೆ. ಈ ಲೋಟವನ್ನು ತಲೆಕೆಳಗಾಗಿ ಇಟ್ಟಾಗ ಒದ್ದೆಯಾದ ಹುಲ್ಲು ಬಹುಬೇಗನೆ ನೀರನ್ನು ಹೀರಿಕೊಳ್ಳುತ್ತೆ. ಸಾಮಾನ್ಯ ಬೇಸಿಗೆಗೆ ಒಡ್ಡಿಕೊಂಡಿದ್ದ ಹುಲ್ಲು ಸ್ವಲ್ಪ ನಿಧಾನವಾಗಿ ನೀರನ್ನು ಹೀರಿಕೊಳ್ಳುತ್ತದೆ. ಆದರೆ ತೀವ್ರ ಬರದಿಂದ ಒಣಗಿದ್ದ ಭೂಮಿಯೂ ಒಂದು ಚೂರು ನೀರನ್ನು ಹೀರಿಕೊಳ್ಳುವುದೇ ಇಲ್ಲ.
ಈ ವಿದ್ಯಮಾನ ಸಂಭವಿಸುದೇಕೆ.?
ಒದ್ದೆಯಾಗಿದ್ದ ಭೂಮಿಯು ನೀರನ್ನು ಬೇಗನೇ ಹೀರಿಕೊಳ್ಳುತ್ತದೆ. ಏಕೆಂದತೆ ಅದರ ಮಣ್ಣಿನಲ್ಲಿ ಸಾಂಧ್ರತೆ ಇದ್ದು, ಮೃದುವಾಗಿರುತ್ತೆ. ಅಲ್ಲದೆ ನೀರನಿಂದ ನೆಂದ ಕಾರಣ ಭೂಮಿಯ ತಳದವರೆಗೂ ಮಣ್ಣು ಸಡಿಲವಾಗಿರುತ್ತದೆ. ಆದರೆ ಬಿರು ಬೇಸಿಗೆಯಲ್ಲಿ ಒಣಗಿರುವ ಭೂಮಿಯು ನೀರು ಹೀರಿಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿರುತ್ತದೆ. ಈ ಭಾಗದಲ್ಲಿ ಮೇಲ್ಮೈ ಮಣ್ಣು ಗಟ್ಟಿಯಾಗಿ, ಒರಟಾಗಿ ನೀರು ಭೂಮಿಯಲ್ಲಿ ಇಂಗಲು ಸಾಧ್ಯವಾಗುವುದೇ ಇಲ್ಲ. ಹೀಗಾಗಿ ಆರಂಭಿಕ ಮಳೆ ಬಿದ್ದಾಗ ಭೂಮಿ ನೀರು ಹೀರಿಕೊಳ್ಳದೆ ಪ್ರವಾಹಕ್ಕೆ ಕಾರಣವಾಗುತ್ತದೆ ಎಂದು ಈ ಪ್ರಯೋಗ ತೋರಿಸಿಕೊಡುತ್ತದೆ.
ಹೀಗಾಗಿ ನಾವು ದುಬೈ ಮತ್ತು ಮರುಭೂಮಿ ಪ್ರದೇಶದಲ್ಲಿ ಮಳೆ ಬಿದ್ದಾಗ ಅಲ್ಲಿ ಪ್ರವಾಹ ಸಂಭವಿಸಲು ಇದೊಂದು ಕಾರಣ ಎಂದು ಊಹಿಸಬಹುದು. ಅಲ್ಲಿನ ಭೂಮಿ ನೀರು ಹೀರಿಕೊಳ್ಳುವ ಶಕ್ತಿ ಕಳೆದುಕೊಂಡಿದೆ. ಹೀಗಾಗಿ ನೀರು ಎಲ್ಲೆಂದರಲ್ಲಿ ಹರಿಯುತ್ತದೆ. ಇತ್ತ ಭಾರತದಲ್ಲೂ ಮಳೆಗಾಲ ಆರಂಭವಾದಾಗ ಅಲ್ಲಲ್ಲಿ ಪ್ರವಾಹ, ನೀರು ನುಗ್ಗುವುದು ಇಂತಹ ಘಟನೆಗಳು ಸಂಭವಿಸುತ್ತದೆ. ಅಂದರೆ ಭೀಕರ ಬರಹಾಲ ಅಥವಾ ಬೇಸಿಗೆಯ ಬಳಿಕ ಆರಂಭವಾಗುವ ಮೊದಲ ಮಳೆಯು ಪ್ರವಾಹಕ್ಕೆ ಕಾರಣವಾಗಲು ಇದೊಂದು ಸಾಮಾನ್ಯ ಕಾರಣವಾಗಿದೆ.



Click it and Unblock the Notifications
