Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸಫಾರಿಗೆ ಹೋದಾಗ ಸಿಂಹ ಸಿಕ್ರೆ ಅದು ಮನುಷ್ಯನ ಮೇಲೆ ದಾಳಿ ಮಾಡಲ್ಲ, ಏಕೆ?
ನೀವು ಸಫಾರಿ ಹೋಗಿದ್ದೀರಾ? ಹೋಗಿಲ್ಲ ಎನ್ನುವವರು ಸಫಾರಿ ವೀಡಿಯೋಗಳನ್ನು ನೋಡಿರುತ್ತೀರಾ, ಸಫಾರಿ ಗಾಡಿಯಲ್ಲಿ ಹೋಗುವಾಗ ಹುಲಿ, ಸಿಂಹ, ಆನೆ ಮುಂತಾದ ಅಪಾಯಕಾರಿ ಪ್ರಾಣಿಗಳು ಕಾಣ ಸಿಗುತ್ತವೆ, ಅದರಲ್ಲಿಯೂ ಸಿಂಹವನ್ನು ನೀವು ಗಮನಿಸಬಹುದು, ಅವು ನಿಮ್ಮತ್ತ ನೋಡುತ್ತವೆ, ಆದರೆ ಆಕ್ರಮಣ ಮಾಡಲು ಮುಂದಾಗುವುದಿಲ್ಲ. ಸಫಾರಿ ಗಾಡಿಯಲ್ಲಿ ಹೋಗುವಾಗ ಕಾಡಿನ ಸಿಂಹವೇಕೆ ದಾಳಿ ಮಾಡುವುದಿಲ್ಲ ಎಂದು ಯೋಚಿಸಿದ್ದೀರಾ? ಇಲ್ಲಿದೆ ಕೆಲ ಆಸಕ್ತಿಕರ ಸಂಗತಿಗಳು

ಸಿಂಹಣಿ ಮರಿಗಳ ಜೊತೆ ಇದ್ದರೆ ತುಂಬಾನೇ ಅಪಾಯಕಾರಿ
ಸಿಂಹ-ಸಿಂಹಣಿ ತುಂಬಾನೇ ಅಪಾಯಕಾರಿ, ಅದರಲ್ಲಿಯೂ ಮರಿಗಳ ಜೊತೆ ಇದ್ದರೆ ಅವುಗಳು ತುಂಬಾನೇ ಆಕ್ರಮಣಕಾರಿ, ಅದು ಆನೆಯಾದರೂ ಸರಿ, ಒಂಟಿ ಆನೆಗಿಂತ ಅಪಾಯಕಾರಿ ಮರಿ ಜೊತೆ ಬರುವ ಆನೆಗಳು. ಅವುಗಳಿಗೆ ಮನುಷ್ಯರನ್ನು ನೋಡಿದರೆ ಭಯವಾಗುತ್ತೆ, ಮನುಷ್ಯನಿಂದ ನಮ್ಮ ಮರಿಗಳಿಗೆ ಏನಾದರೂ ಅನಾಹುತ ಉಂಟಾಗುತ್ತೆ ಎಂಬ ಭಯದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿರುತ್ತದೆ. ಅದರಲ್ಲಿಯೂ ರಾತ್ರಿ ಹೊತ್ತು ತುಂಬಾನೇ ಅಪಾಯಕಾರಿ.
ಸಿಂಹವು ದಾಳಿಗೆ ಮುಂದಾಗುವ ಮುನ್ನ ಲೆಕ್ಕಾಚಾರ ಮಾಡಿ ದಾಳಿ ಮಾಡುತ್ತದೆ
ಸಾಮಾನ್ಯವಾಗಿ ಸಿಂಹವು ಮನುಷ್ಯನ ಕಂಡ ತಕ್ಷಣ ಆಹಾರ ಸಿಕ್ತು ಎಂದು ದಾಳಿ ಮಾಡುವುದಿಲ್ಲ, ಅವನು ಹೇಗೆ ವರ್ತಿಸುತ್ತಾನೆ ಎಂಬುವುದನ್ನು ಗಮನಿಸುತ್ತದೆ, ಮನುಷ್ಯ ಒಂಟಿಯಾಗಿದ್ದರೆ ದಾಳಿ ಮಾಡುತ್ತದೆ, ಇನ್ನು ವಯಸ್ಸಾದ ಅಥವಾ ಗಾಯವಾದ ಸಿಂಹಕ್ಕೆ ಬೇಟೆಯಾಡಲು ಕಷ್ಟವಾಗುವುದು ಅಂಥ ಸಿಂಹಗಳು ಮನುಷ್ಯ ಮೇಲೆ ದಾಳಿ ಮಾಡುತ್ತದೆ, ಸಿಂಹದ ಓಡಾಟ ಇರುವ ಕಡೆ ಮನುಷ್ಯ ಓಡಾಡುವುದು ಅಷ್ಟೊಂದು ಸುರಕ್ಷಿತವಲ್ಲ.
ಸಫಾರಿ ಗಾಡಿಯಲ್ಲಿ ಹೋಗುವಾಗ ದಾಳಿ ಮಾಡಲ್ಲ ಏಕೆ?
ಕೆಲವೊಂದು ಸಫಾರಿ ಗಾಡಿಯಲ್ಲಿ ಗ್ರಿಲ್ಡ್ ಹಾಕಿ ರಕ್ಷಣೆಗೆ ವ್ಯವಸ್ಥೆ ಮಾಡಲಾಗಿರುತ್ತದೆ, ಆದರೆ ಈ ವೈಲ್ಡ್‌ಲೈಫ್ ಫೋಟೋಗ್ರಫಿ ಮಾಡುವವರು ಅಥವಾ ಕಾಡಿನ ಬಗ್ಗೆ ಅಧ್ಯಯನ ಮಾಡಲು ಹೋಗುವ ಸಫಾರಿ ಗಾಡಿ ಓಪನ್ ಇರುತ್ತದೆ, ಆದರೂ ಸಿಂಹವೇಕೆ ಅವರ ಮೇಲೆ ದಾಳಿ ಮಾಡಲ್ಲ ಎಂಬ ಪ್ರಶ್ನೆ ಮೂಡುತ್ತದೆ.
ಮನುಷ್ಯ ಸಿಂಹಕ್ಕೆ ಲೆಕ್ಕವಲ್ಲ, ಆದರೆ ಅವನು ಗಾಡಿಯೊಳಗಡೆ ಇರುವ ನನಗೆ ಆಹಾರ ಸಿಗುವ ಸಾಧ್ಯತೆ ಬಗ್ಗೆ ಲೆಕ್ಕಾಚಾರ ಮಾಡುತ್ತೆ, ಗಾಡಿ ನೋಡಿದಾಗ ಇದರಿಂದ ನನಗೆ ಹಾನಿಯಾಗಬಹುದ ಎಂದು ಹಹೆದರಿ ದಾಳಿ ಮಾಡಲು ಬರುವುದಿಲ್ಲ. ಸಾಮಾನ್ಯವಾಗಿ ಸಿಂಹ ದೊಡ್ಡ ಗಾತ್ರದ ಪ್ರಾಣಿ ಉದಾಹರಣೆಗೆ ಆನೆ ಇದರ ಮೇಲೆ ಅಷ್ಟು ಸುಲಭವಾಗಿ ದಾಳಿ ಮಾಡುವುದಿಲ್ಲ. ಏಕೆಂದರೆ ದಾಳಿ ಮಾಡಿದರೆ ಅವುಗಳಿಂದ ನನಗೆ ತೊಂದರೆಯಾಗಬಹುದು ಎಂದು ಸಾಮಾನ್ಯವಾಗಿ ದೊಡ್ಡ ಗಾತ್ರದ ಪ್ರಾಣಿಗಳ ತಂಟೆಗೆ ಹೋಗುವುದಿಲ್ಲ. ಇದೇ ಕಾರಣದಿಂದಲೇ ಸಫಾರಿ ಗಾಡಿ ಸಮೀಪ ಕೂಡ ಹೋಗುವುದಿಲ್ಲ.
ಆದರೂ ನಮ್ಮ ಸುರಕ್ಷತೆ ಕಡೆಗೆ ಗಮನಹರಿಸಬೇಕು
ಸಫಾರಿ ಟೂರ್ ನೀಡುವಾಗ ಎಲ್ಲಾ ಸುರಕ್ಷತೆ ಕ್ರಮಕ ತೆಗೆದುಕೊಂಡೇ ಸಫಾರಿಗೆ ಕರೆದುಕೊಂಡು ಹೋಗುತ್ತಾರೆ. ಕೆಲವೊಂದು ಪ್ರದೇಶದಲ್ಲಿ ಇಳಿಯಬವಾರದೆಂದು ಮಾಹಿತಿ ನೀಡಿರುತ್ತಾರೆ, ಅಲ್ಲಿ ಇಳಿಯಲು ಪೋಟೋ ತೆಗೆಯಲು ಬಿಡುವುದಿಲ್ಲ, ಲೋಕಲ್ ಗೈಡ್‌ಗೆ ಸಾಮಾನ್ಯವಾಗಿ ಈ ಬಗ್ಗೆ ಒಳ್ಳೆಯ ಅರಿವು ಇರುತ್ತದೆ. ಅಲ್ಲದೆ ಸಫಾರಿ ಹೋದಾಗ ಕಾಡು ಪ್ರಾಣಿಗಳು ಎದುರಾದರೆ ಅವುಗಳ ತಂಟೆಗೆ ಹೋಗಬಾರದು.
ಸಫಾರಿಗೆ ಹೋಗುವಾಗ ಈ ನಿಯಮಗಳನ್ನು ಪರಿಶೀಲಿಸುವುದು ಒಳ್ಳೆಯದು
ಗಾಡಿ ಬಿಟ್ಟು ಕೆಲಗೆ ಇಳಿಯಬಾರದು
ಗಾರಿ ಹೊರಗಡೆ ಕೈ ಹಾಕುವುದು, ಅದರ ಹೊರಗಡೆ ಇಣುಕಿ ನೋಡುವುದು ಮಾಡಬಾರದು
ಪ್ರಾಣಿಗಳ ಸಮೀಪ ಗಾಡಿ ಹೋಗಬಾರದು
ಗಾಡಿಯ ವಿಂಡೋ ಓಪನ್ ಮಾಡಬಾರದು
ಗಾಡಿನಲ್ಲಿ ನಡೆಯುವುದಾದರೆ ಸೂ ಅಥವಾ ಗಂಬೂಟ್ ಧರಿಸಿ
ರಾತ್ರಿ ಹೊತ್ತು ಕಾಡಿನಲ್ಲಿ ಟೆಂಟ್ ಹಾಕುವುದು ಸುರಕ್ಷಿತವಲ್ಲ.



Click it and Unblock the Notifications
