Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಇಂದು(ಸೆ.18) ಚಂದ್ರನನ್ನು ನೋಡಬಾರದು: ಒಂದು ವೇಳೆ ನೋಡಿದರೆ ಈ ಮಂತ್ರ ಪಠಿಸಿ
ಕನ್ನಡ ಬೋಲ್ಡ್‌ಸ್ಕೈ ಓದುಗರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಗಣೇಶ ನಿಮಗೆ ಸಂಪತ್ತು, ಸಮೃದ್ಧಿ, ಆರೋಗ್ಯ ನೀಡಲಿ, ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವಂತೆಯಾಗಲಿ.
ಸೆಪ್ಟೆಂಬರ್ 18,19ರಂದು ಗಣೇಶ ಚತುರ್ಥಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸೆಪ್ಟೆಂಬರ್ 18ರಂದು ಯಾವುದೇ ಕಾರಣಕ್ಕೆ ಚಂದ್ರನನ್ನು ನೋಡಬಾರದು ಎಂಬ ಧಾರ್ಮಿಕ ನಂಬಿಕೆಯಿದೆ. ಏಕೆ ಚಂದ್ರನನ್ನು ನೋಡಬಾರದು ಎಂದು ಹೇಳಲಾಗುವುದು, ಒಂದು ವೇಳೆ ನೋಡಿದರೆ ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಪೌರಾಣಿಕ ಕತೆ
ಧಾರ್ಮಿಕ ನಂಬಿಕೆ ಪ್ರಕಾರ ಶಿವನು ಭಾದ್ರಪದ ಮಾಸದ ನಾಲ್ಕನೇ ದಿನ (ಚೌತಿಯಂದು) ವಿನಾಯಕನಿಗೆ ಜಗತ್ತನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡುತ್ತಾನೆ. ಈ ಖುಷಿಯ ಸಂದರ್ಭ ಮೋದಕ, ಲಡ್ಡುಗಳು, ಮತ್ತಿತರ ಸಿಹಿ ತಿಂಡಿಗಳನ್ನು ತಯಾರಿಸಲಾಗುವುದು. ವಿನಾಯಕ ಖುಷಿಯಿಂದ ತುಂಬಾನೇ ಮೋದಕಗಳನ್ನು ಸವಿಯುತ್ತಾನೆ, ಕೆಲವೊಂದು ಸಿಹಿ ತಿಂಡಿಗಳನ್ನು ತನ್ನ ಮೋಷಿಕನಿಗೆ ನೀಡುತ್ತಾನೆ, ನಂತರ ಕೆಲವು ತಿಂಡಿಗಳನ್ನು ಕೈಯಲ್ಲಿ ಹಿಡಿದುಕೊಂಡು ಕೈಲಾಸಕ್ಕೆ ಬರುತ್ತಾನೆ.
ತಂದೆ-ತಾಯಿಯನ್ನು ನೋಡಿ ಅವರಿಗೆ ಪ್ರಣಾಮ ಮಾಡಿ, ನಂತರ ಅವರ ಪಾದಗಳಿಗೆ ನಮಸ್ಕರಿಸಿದಾಗ, ಕೈ ಅವರ ಪಾದ ಮುಟ್ಟುವ ಬದಲಿಗೆ ಗಣಪನ ಹೊಟ್ಟೆ ನೆಲವನ್ನು ಮುಟ್ಟುತ್ತದೆ, ಇದನ್ನು ನೋಡಿ ಶಿವನ ತಲೆಯಲ್ಲಿರುವ ಚಂದ್ರ ಗಣೇಶನನ್ನು ನೋಡಿ ತಮಾಷೆ ಮಾಡಿ ನಗುತ್ತಾನೆ. ಚಂದ್ರನ ಹೀಯಾಳಿಕೆಯಿಂದಾಗಿ ಗಣೇಶನ ಹೊಟ್ಟೆ ಒಡೆದುಹೋಗುತ್ತದೆ. ಇದನ್ನು ನೋಡಿದಾಗ ಪಾರ್ವತಿಗೆ ಬೇಸರವಾಗುತ್ತೆ, ಆದ್ದರಿಂದ ಈ ದಿನ ಚಂದ್ರನನ್ನು ನೋಡಿದರೆ ಶಾಪ ತಗುಲುವುದು ಎಂದು ಹೇಳಲಾಗುವುದು. ನಂತರ ಬ್ರಹ್ಮ ಕೈಲಾಸಕ್ಕೆ ಬಂದು ಗಣೇಶನ ಹೊಟ್ಟೆಯನ್ನು ಸರಿಪಡಿಸಲಾಗುವುದು, ನಂತರ ಪಾರ್ವತಿ ಬಳಿ ಚಂದ್ರನನ್ನು ಶಾಪದಿಂದ ಮುಕ್ತ ಎಂದು ಬೇಡಿಕೊಳ್ಳುತ್ತಾನೆ. ಗಣೇಶ ಮೊದಲಿನಂತಾಗಿದ್ದನ್ನು ನೋಡಿ ಖುಷಿ ಪಡುವ ಪಾರ್ವತಿ ಚಂದ್ರನನ್ನು ಶಾಪಮುಕ್ತಳಾಗಿಸುತ್ತಾಳೆ, ಆದ್ದರಿಂದ ಚೌತಿಯಂದು ಚಂದ್ರನನ್ನು ನೋಡಬಾರದು ಎಂದು ಹೇಳಲಾಗುವುದು.
ಚೌತಿಯಂದು ಚಂದ್ರನನ್ನು ನೋಡಿದ ಕಾರಣ ಕೃಷ್ಣನಿಗೂ ಶಾಪ ತಗುಲಿತ್ತು, ಆತನ ಮೇಲೆ ಶಮಂತ ಮಣಿಯನ್ನು ಕದ್ದ ಆರೋಪ ಶ್ರೀಕೃಷ್ಣನ ಮೇಲೆ ಬೀಳುತ್ತದೆ, ನಂತರ ಶ್ರೀ ಗಣೇಶ ಕೃಷ್ಣನನ್ನು ಆ ಆರೋಪದಿಂದ ಮುಕ್ತನಾಗಿಸುತ್ತಾನೆ. ಆದ್ದರಿಂದ ಕೃಷ್ಣನಿಗೆ ಆ ರೀತಿಯಾದ ಕಾರಣ ಮನುಷ್ಯರಾದ ನಾವು ಚೌತಿಯಂದು ಚಂದ್ರನನ್ನು ನೋಡಿದರೆ ನಮ್ಮ ಮೇಲೆ ಆರೋಪಗಳು ಬರುವುದು ಎಂಬ ನಂಬಿಕೆ ಇದೆ.
ಇಂದು ಈ ಸಮಯದಲ್ಲಿ ಚಂದ್ರನನ್ನು ನೋಡಲೇಬೇಡಿ
ಸೆಪ್ಟೆಂಬರ್ 18 ರಾತ್ರಿ 08:44ವರೆಗೆ ಚಂದ್ರನನ್ನು ನೋಡಬಾರದು.
ಒಂದು ವೇಳೆ ಚಂದ್ರನನ್ನು ನೋಡಿದರೆ ಈ ಮಂತ್ರ ಪಠಿಸಿ
ಸಿಂಹ ಪ್ರಸೇನಮವಧೀತ್ಸಿಂಹೋ ಹಂಭವತಾ ಹತಃ!
ಸುಕುಮಾರಕ ಮಾರೋದಿ ತವಹ್ಯೇಷ ಸ್ಯಮ್ಮಂತಕಃ!!



Click it and Unblock the Notifications