Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಸಂಚಾರ್ ಸಾಥಿ ಅಪ್ಲಿಕೇಶನ್ ಏಕೆ ಕಡ್ಡಾಯ? ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಆನ್‌ಲೈನ್ ವಂಚನೆಯಂತಹ ಕೃತ್ಯವನ್ನು ತಡೆಯುವ ಉದ್ದೇಶದಿಂದ ಸರ್ಕಾರವು ಹಲವು ರೀತಿಯ ನಿಯಮಗಳ ತರಲು ಮುಂದಾಗಿದೆ. ಈಗಾಗಲೆ ವಾಟ್ಸಾಪ್ ಕುರಿತಾದ ಹೊಸ ನಿಯಮ ಜಾರಿ ಮಾಡಲು ಮುಂದಾಗಲಾಗಗಿದೆ. ಹಾಗೆ ಈಗ ವಂಚನೆ ತಡೆಯುವ ಉದ್ದೇಶದಿಂದ ಹಾಗೆ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ ಅನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.
ಹಾಗೆ ಹೊಸ ಮೊಬೈಲ್‌ಗಳು ಕಡ್ಡಾಯವಾಗಿ ಈ ಸಂಚಾರ್ ಸಾಥಿ ಆಪ್ಲಿಕೇಶನ್ ಅನ್ನು ಪ್ರಿ ಇನ್ಸ್‌ಸ್ಟಾಲ್ ಮಾಡಿ ಬಳಿಕ ಗ್ರಾಹಕರಿಗೆ ನೀಡುವಂತೆ ಸೂಚಿಸಲಾಗಿದೆ. ಆದ್ರೆ ಈ ಅಪ್ಲಿಕೇಶನ್ ಈಗೀಗ ಆರಂಭಗೊಂಡಿದ್ದಲ್ಲ ಬದಲಿಗೆ ಇದು 2023ರಿಂದಲೂ ಬಳಕೆಯಲ್ಲಿದೆ. ಈಗಾಗಲೇ ಮಿಲಿಯನ್‌ಗೂ ಅಧಿಕ ಬಳಕೆದಾರರು ಬಳಸುತ್ತಿದ್ದಾರೆ.

ಈ ಆಪ್ಲಿಕೇಶನ್ ಅನ್ನು ತೆಗೆದು ಹಾಕದಂತೆ ಫೋನ್‌ನಲ್ಲಿ ನಿರ್ಬಂಧ ವಿಧಿಸಲು ತಿಳಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಹಳೆಯ ಫೋನ್‌ಗಳಿಗೂ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಈ ಆ್ಯಪ್ ಅನ್ನು ಕಳುಹಿಸಿಕೊಡುವಂತೆ ಟೆಲಿಕಾಂ ಇಲಾಖೆ ಸೂಚಿಸಿದೆ. ಸದ್ಯ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್‌ನಲ್ಲಿ ಮಿಲಿಯನ್‌ಗೂ ಅಧಿಕ ಡೌನ್‌ಲೋಡ್ ಆಗಿದೆ.
ಸಂಚಾರ್ ಸಾಥಿ ಬಳಸಿ ಏನು ಮಾಡಬಹುದು?
ಸಂಚಾರ ಸಾಥಿ ಸರ್ಕಾರಿ ಅಪ್ಲಿಕೇಶನ್ ಆಗಿದೆ. ಇದು ವಂಚನೆ ತಡೆಯುವ ಉದ್ದೇಶದಿಂದ ಹಾಗೆ ಗ್ರಾಹಕರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲು ಮುಂದಾಗಲಾಗಿದೆ. ಭಾರತದಲ್ಲಿ ಬಳಸಲು ಉದ್ದೇಶಿಸಲಾದ ಮೊಬೈಲ್ ಫೋನ್ ಗಳ ಎಲ್ಲಾ ತಯಾರಕರು ಮತ್ತು ಆಮದುದಾರರು ಈ ನಿರ್ದೇಶನಗಳನ್ನು ನೀಡಿದ 120 ದಿನಗಳ ಒಳಗೆ ಟೆಲಿಕಾಂ ಇಲಾಖೆಗೆ ಅನುಸರಣಾ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ವಂಚನೆ ಕರೆ ಅಥವಾ ಸಂದೇಶ
ನೀವು ವಂಚನೆ ಸಂಬಂಧಿತ ಕರೆ ಅಥವಾ ಮೆಸೇಜ್ ಅನ್ನು ಪಡೆದಿದ್ದರೆ ಅದನ್ನು ಈ ಅಪ್ಲಿಕೇಶನ್ ಮೂಲಕ ದೂರನ್ನು ಸಲ್ಲಿಸಬಹುದು, ಇಲ್ಲವೆ ರಿಪೋರ್ಟ್ ಮಾಡಬಹುದು. ಚಕ್ಷು ಎಂಬ ಆಪ್ಷನ್ ಮೇಲ್ ಕ್ಲಿಕ್ ಮಾಡಿ ನಿಮಗೆ ವಂಚನೆ ಕರೆ ಅಥವಾ ಸಂದೇಶ ಬಂದಿದೆಯೇ ಎಂಬುದನ್ನು ಸೆಲೆಕ್ಟ್ ಮಾಡಬೇಕು. ಅನಂತರ ಮೊಬೈಲ್ ಸಂಖ್ಯೆ ಹಾಕಬೇಕು. ಆ ಕರೆ ಅಥವಾ ಸಂದೇಶ ಯಾವುದಕ್ಕೆ ಸಂಬಂಧಿಸಿದೆ ಎಂಬುದನ್ನು ವಿವರಿಸಬೇಕು. ಹಾಗೆ ಅದರ ಸ್ಕ್ರೀನ್ ಶಾಟ್ ದಾಖಲಿಸಬೇಕು. ನಂತರ ಸಮಯ ಹಾಗೂ ದಿನಾಂಕ ಸೂಚಿಸಬೇಕು. ಹಾಗೆ ನೀವು ಆ ಕುರಿತಾಗಿ ಮಾಹಿತಿ ಬರೆಯಬಹುದು. ಅನಂತರ ನಿಮ್ಮ ಹೆಸರು ಸರಿ ಇದೆಯೇ ಎಂಬುದನ್ನು ಪರೀಕ್ಷಿಸಿ ಬಳಿಕ ಸಬ್ಮಿಟ್ ಮಾಡಬೇಕು.
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಬಳಸಲಾಗುತ್ತಿದೆ?
ನಿಮ್ಮ ಆಧಾರ್ ಸಂಖ್ಯೆ ಬಳಸಿಕೊಂಡು ನಿಮ್ಮನ್ನು ಹೊರತು ಪಡಿಸಿ ಬೇರೆ ಯಾರಾದರು ಸಿಮ್ ಬಳಸುತ್ತಿದ್ದಾರೆಯೇ ಎಂಬುದನ್ನು ಕೂಡ ಇಲ್ಲಿ ತಿಳಿಯಬಹುದು. ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಮೂಲಕ ಲಾಗ್ ಇನ್ ಆದರೆ ಅದರಲ್ಲಿ ನಿಮ್ಮ ಹೆಸರಿನಲ್ಲಿ ಹಾಗೆ ನೀವು ಬಳಸುತ್ತಿರುವ ಮೊಬೈಲ್‌ನಲ್ಲಿರುವ ಸಿಮ್ ನಂಬರ್‌ಗಳ ಸೂಚಿಸುತ್ತದೆ. ನೀವು ಬಳಸದೆ ಇರುವ ಸಿಮ್ ಅನ್ನು ಸಿಷ್ಕ್ರಿಯ ಗೊಳಿಸಬಹುದು.
ಮೊಬೈಲ್ ಕಳೆದರೆ ಬ್ಲಾಕ್ ಮಾಡಿ
ನಿಮ್ಮ ಮೊಬೈಲ್ ಕಳೆದರೆ ಬ್ಲಾಕ್ ಮಾಡಿಸಬಹುದು, ಅಥವಾ ಕಳೆದ ಮೊಬೈಲ್ ಸಿಕ್ಕರೆ ಅದನ್ನು ಅನ್‌ಬ್ಲಾಕ್ ಮಾಡಬಹುದು. ಇದರಿಂದ ನೀವು ತಕ್ಷಣ ದೂರು ನೀಡುವ ಮುನ್ನವೇ ಆ ಮೊಬೈಲ್ ಮತ್ತೆಲ್ಲೂ ಬಳಕೆಯಾಗದಂತೆ ತಡೆಯಬಹುದು.
ನಿಮ್ಮ ಮೊಬೈಲ್ ಅಸಲಿಯೇ ಅಥವಾ ನಕಲಿಯೇ ಪರಿಶೀಲಿಸಿ
ನೀವು ಬಳಸುತ್ತಿರುವ ಮೊಬೈಲ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಕೂಡ ಈ ಅಪ್ಲಿಕೇಶನ್ ಮೂಲಕ ಪತ್ತೆ ಮಾಡಬಹುದು. ಇಎಂಇಐ ನಂಬರ್ ಅನ್ನು ನಮೂದಿಸುವ ಮೂಲಕ ಮೊಬೈಲ್ ಇತಿಹಾಸ ಪಡೆಯಬಹುದು.
ಅಂತಾರಾಷ್ಟ್ರೀಯ ಕರೆಯನ್ನು ತಡೆಯಬಹುದು
ವಂಚನೆ ಎಸಗಲು ಹಲವರು ಭಾರತೀಯ ನಂಬರ್ ಅನ್ನು ಬಳಸಿ ವಿದೇಶಿ ನೆಲದಲ್ಲಿ ಕುಳಿತು ಕರೆ ಮಾಡಬಹುದು. ಅಥವಾ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಇಂಟರ್‌ನೆಟ್, ವಾಟ್ಸಾಪ್ ಕರೆ ಮಾಡಬಹುದು. ಇದರಿಂದ ತಪ್ಪಿಸಿಕೊಳ್ಳಲು ಆ ಸಂಖ್ಯೆಯನ್ನು ಇಲ್ಲಿ ನಮೂದಿಸಬಹುದು.



Click it and Unblock the Notifications