Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಸಲ್ಮಾನ್ ಹತ್ಯೆಗೆ ಪದೇ ಪದೇ ಯತ್ನ ಆಗುತ್ತಿರೋದೇಕೆ..? ಬಿಷ್ಣೋಯ್ ಗ್ಯಾಂಗ್ ದಶಕಗಳ ವೈರತ್ವವೇನು?
ಬಾಲಿವುಡ್ ಸೂಪರ್ ಸ್ಟಾರ್, ಬಾಕ್ಸ್ ಆಫಿಸ್ ಸುಲ್ತಾನ್ ಅಂತ ಕರೆಸಿಕೊಳ್ಳುವ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಸಲ್ಮಾನ್ ಖಾನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅವರ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತೆ. ಆದರೆ ಅವರು ಜೀವನದಲ್ಲಿ ಹಲವು ಏಳು ಬೀಳುಗಳ ಕಂಡಿದ್ದಾರೆ. ಜೊತೆಗೆ ಒಂದಿಷ್ಟು ವಿವಾದಗಳಿಂದಲೂ ಸುದ್ದಿಯಾಗುತ್ತಾರೆ.
ಕಳೆದೆರಡು ದಿನದ ಹಿಂದೆ ಮುಂಬೈನಲ್ಲಿರುವ ಅವರ ನಿವಾಸ ಮೇಲೆ ಇಬ್ಬರು ಗುಂಡಿನ ದಾಳಿ ನಡೆಸಿದ್ದ ಘಟನೆ ನಡೆದಿತ್ತು. ಇದು ಖ್ಯಾತನಾಮರ ಭದ್ರತೆ ಕುರಿತು ಪ್ರಶ್ನೆ ಹುಟ್ಟುಹಾಕಿತ್ತು. ಬೈಕ್‌ನಲ್ಲಿ ಬಂದಿದ್ದ ಇಬ್ಬರು 5 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಆದರೆ ಘಟನೆಯಲ್ಲಿ ಯಾರಿಗೂ ಹಾನಿಯಾಗಿರಲಿಲ್ಲ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದರು. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮೇಲೆ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದರು. ಇನ್ನು ಈ ಘಟನೆ ನಡೆದು ಒಂದು ದಿನದ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಇಬ್ಬರು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯವರು ಎಂದು ತಿಳಿದುಬಂದಿದೆ.
ಹಾಗಾದ್ರೆ ಈ ಲಾರೆನ್ಸ ಬಿಷ್ಣೋಯ್ ಯಾರು.? ಆತನಿಗೂ ಬಾಲಿವುಡ್‌ಗೂ ಏನು ನಂಟು? ಆತ ಸಲ್ಮಾನ್ ಹತ್ಯೆಗೆ ಮುಂದಾಗಿರುವುದಾದರು ಏಕೆ? ಏನಿದು ದಶಕಗಳ ಹಿಂದಿನ ದ್ವೇಷ ಎಂಬ ಕುರಿತ ಸಂಪೂರ್ಣ ಮಾಹಿತಿ ನಾವಿಂದು ತಿಳಿಯೋಣ.
ಸಲ್ಮಾನ್ ಖಾನ್ ಹತ್ಯೆಗೆ ಸಂಚು ಏಕೆ ಮಾಡುತ್ತಿದ್ದಾರೆ ಎಂದು ಹುಡುಕಲು ಮುಂದಾದರೆ ಈ ಕಥೆ 1998ಕ್ಕೆ ಕರೆದೊಯ್ಯುತ್ತೆ. ಹೌದು ಈ ಸಲ್ಮಾನ್ ಖಾನ್ ಮೇಲಿನ ದಾಳಿ, ಹತ್ಯೆಗೆ 1998ರಲ್ಲಿ ನಡೆದಿದ್ದ ಕೃಷ್ಣ ಮೃಗ ಬೇಟೆ. ಹೌದು ಸಲ್ಮಾನ್ ಖಾನ್ 1998ರಲ್ಲಿ ಎರಡು ಕೃಷ್ಣ ಮೃಗ ಬೇಟಿಯಾಡಿದ ಆರೋಪದಲ್ಲಿ ಜೈಲು ಸೇರಿದ್ದರು, ನ್ಯಾಯಾಲಯ ಅವರಿಗೆ 5 ವರ್ಷಗಳ ಸಜೆ ನೀಡಿತ್ತು. ಆದರೆ ಜಾಮೀನಿನ ಮೇಲೆ ಅವರು ಹೊರಬಂದಿದ್ದರು.
ಕೃಷ್ಣ ಮೃಗ ಬೇಟೆಗೂ ಲಾರೆನ್ಸ್‌ಗೂ ಇರೋ ಸಂಬಂಧವೇನು?
ಬಿಷ್ಣೋಯಿ ಸಮುದಾಯ ಈ ಕೃಷ್ಣ ಮೃಗವನ್ನು ದೇವರೆಂದೇ ಪರಿಗಣಿಸಿದೆ. ಹೀಗಾಗಿ ಅವರ ಸಮುದಾದಯದಲ್ಲಿ ಪ್ರಾಣಿ ವಧೆ ನಿಷೇಧ ಅದರಲ್ಲೂ ಕೃಷ್ಣ ಮೃಗವನ್ನು ಗೋವುಗಳಿಗಿಂತಲು ವಿಶೇಷವಾಗಿ ಅವರು ಪೂಜಿಸುತ್ತಾರೆ. ಈ ಕೃಷ್ಣ ಮೃಗವನ್ನು ನಟ ಸಲ್ಮಾನ್ ಖಾನ್ ಬೇಟೆಯಾಡಿದ್ದು ಆ ಸಮುದಾಯದ ಕೋಪಕ್ಕೆ ಕಾರಣವಾಗಿತ್ತು.
ಸಲ್ಮಾನ್ ಖಾನ್ ಹತ್ಯೆ ಖಚಿತ ಎಂದಿದ್ದ ಲಾರೆನ್ಸ್
ಲಾರೆನ್ಸ್ ಆಗಿನ್ನು ಸಣ್ಣ ಪುಟ್ಟ ಗಲಾಟೆ, ಗ್ಯಾಂಗ್‌ವಾರ್‌ಗಳಲ್ಲಿ ಭಾಗಿಯಾಗಿ ಜೈಲು ಪಾಲಾಗುತ್ತಿದ್ದ ಸಮಯ. ಈ ವೇಳೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಸಲ್ಮಾನ್ ಖಾನ್ ಒಂದು ದಿನ ನನ್ನ ಗ್ಯಾಂಗ್‌ನಿಂದ ಹತ್ಯೆಯಾಗುತ್ತಾನೆ ಎಂದು ಹೇಳಿಕೆ ನೀಡಿದ್ದ. 2018ರಲ್ಲಿ ಕೇಸ್ ಒಂದರಲ್ಲಿ ಲಾರೆನ್ಸ್ ಅರೆಸ್ಟ್ ಆಗುವಾಗ ''ನಾವೇನು ಮಾಡದಿದ್ದರೂ ನಮ್ಮನ್ನು ಅರೆಸ್ಟ್ ಮಾಡಲಾಗುತ್ತಿದೆ, ಮುಂದೊಂದು ದಿನ ನಾವು ಜೋದ್ಪುರದಲ್ಲಿ ಸಲ್ಮಾನ್ ಖಾನ್ ಹತ್ಯೆ ಮಾಡಿದಾಗ ಅವರಿಗೆ ತಿಳಿಯುತ್ತೆ. ನಾವೇನು ಮಾಡದಿದ್ದರೆ ನಮ್ಮನ್ನು ಇನ್ವಾಲ್ ಮಾಡಲಾಗ್ತಿದೆ''ಎಂದು ಹೇಳಿಕೆ ನೀಡಿದ್ದ. ಇದಾಗಿ 2023ರಲ್ಲಿ ಸಲ್ಮಾನ್ ಖಾನ್ ಹೆಸರಿಗೆ ಒಂದು ಬೆದರಿಕೆ ಪತ್ರ ಬಂದಿತ್ತು. ಅದರಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು.
ಹೀಗಾಗಿ ಈಗ ಸಲ್ಮಾನ್ ಖಾನ್‌ಗೆ ಭದ್ರತೆ ಹಚ್ಚಿಸಲಾಗಿದೆ. ಲಾರೆನ್ಸ್ ಜೈಲಿನಲ್ಲಿದ್ದಾನೆ. ಆದರೆ ಆತನ ಸಹೋದರ ಈ ಕೆಲಸಕ್ಕೆ ಇಬ್ಬರನ್ನು ಕಳುಹಿಸಿದ್ದ ಎನ್ನಲಾಗಿದೆ. ಈ ಘಟನೆ ನಡೆದ ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಲಾರೆನ್ಸ್ ಸಹೋದರ ಅನ್ಮೋಲ್ ಬಿಶ್ಣೋಯ್ ''ಇದಿನ್ನು ಟ್ರೈಲರ್ ಫಿಲ್ಮ್ ಇನ್ನೂ ಬಾಕಿ ಇದೆ'' ಎಂದು ಮತ್ತೆ ಬೆದರಿಕೆ ಹಾಕಿದ್ದಾನೆ. ಜೊತೆಗೆ ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದ ದಾಳಿಗೆ ನಾವೇ ಹೊಣೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ.



Click it and Unblock the Notifications
