Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ವಿಷ್ಣು ಅವತಾರ ಆಮೆ ಉಂಗುರ ಏಕೆ ಧರಿಸುತ್ತಾರೆ? ಇದರಿಂದಾಗುವ ಲಾಭವೇನು ಗೊತ್ತಾ?
ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಹತ್ತು ಅವತಾರಗಳಲ್ಲಿ ಕೂರ್ಮಾವತಾರ ಅಂದ್ರೆ ಆಮೆಯ ಅವತಾರ ಕೂಡ ಒಂದಾಗಿದೆ. ಲಕ್ಷ್ಮೀ ದೇವಿಯು ಕೂಡ ನೀರಿನಿಂದ ಹುಟ್ಟುಕೊಂಡಿದ್ದು, ಹೀಗಾಗಿ ಯಾರು ಭಕ್ತಿಯಿಂದ ಲಕ್ಷ್ಮೀಯನ್ನು ಪೂಜೆ ಮಾಡುತ್ತಾರೆಯೋ ಅವರಿಗೆ ಅಷ್ಟೈಶ್ವರ್ಯ ವೃದ್ಧಿಯಾಗುತ್ತೆ ಎನ್ನುವ ನಂಬಿಕೆಯಿದೆ.
ಆಮೆಯನ್ನು ಶುಭಕರ ಎಂದು ಪರಿಗಣಿಸಲಾಗಿದೆ. ಹೀಗಾಗಿ ಮನೆಯಲ್ಲಿ ಆಮೆಯನ್ನು ಇಡುತ್ತಾರೆ ಇದರ ಜೊತೆಗೆ ಆಮೆ ಉಂಗುರವನ್ನೂ ಧರಿಸುತ್ತಾರೆ. ಹಾಗಾದರೆ ಆಮೆ ಉಂಗುರು ಧರಿಸುವುದರ ಹಿಂದಿನ ಕಥೆ ಏನು? ಆಮೆ ಉಂಗುರ ಧರಿಸುವುದರಿಂದ ಏನೆಲ್ಲಾ ಲಾಭವಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜ್ಯೋತಿಷ್ಯಶಾಸ್ತ್ರದಲ್ಲಿ ಆಮೆಯನ್ನು ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಸಂಪತ್ತನ್ನು ತರುವ ಲಕ್ಷ್ಮಿ ದೇವಿಗೆ ನೇರವಾಗಿ ಸಂಬಂಧಿಸಿದೆ. ವಾಸ್ತವವಾಗಿ, ಹಿಂದೂ ಧರ್ಮದಲ್ಲಿ, ಭಗವಾನ್ ವಿಷ್ಣುವನ್ನು ಪೂಜಿಸುವಾಗ ಆಮೆಗೂ ಒಂದು ಪೂಜೆ ವಿಶೇಷವಾಗಿ ಮಾಡಲಾಗುತ್ತದೆ.

ಆಮೆಯು ನೀರಿನಲ್ಲಿ ವಾಸಿಸುವ ಪ್ರಾಣಿಯಾಗಿದೆ. ಇನ್ನೊಂದೆಡೆ ಲಕ್ಷ್ಮಿ ದೇವಿಯು ನೀರಿನಿಂದ ಹುಟ್ಟಿಕೊಂಡಿದ್ದಾಳೆ ಎಂಬ ನಂಬಿಕೆ ಇದೆ. ಆಮೆ ಉಂಗುರವನ್ನು ಧರಿಸುವಾಗ ನೀವು ನಿಯಮಗಳನ್ನು ತಿಳಿದಿದ್ದರೆ, ಅದು ಸಂಪತ್ತಿನ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಜೀವನದಲ್ಲಿ ಸೌಕರ್ಯಗಳ ಕೊರತೆ, ಹಣದ ಕೊರತೆ ನೀಗಿಸುತ್ತದೆ. ಶಾಂತಿ ಮತ್ತು ಸಂತೋಷ, ನೆಮ್ಮದಿ ಇರದಿದ್ದರೆ 'ಆಮೆಯ ಉಂಗುರ' ಧರಿಸುವುದರಿಂದ ಜೀವನದಲ್ಲಿ ಆಹ್ಲಾದಕರ ಬದಲಾವಣೆಗಳನ್ನು ತರುತ್ತದೆ ಎಂದು ಹೇಳಲಾಗಿದೆ.
ಅಮೆ ಉಂಗುರ ಧರಿಸುವಾವ ಯಾವ ನಿಯಮ ನೆನೆಪಿನಲ್ಲಿಡಬೇಕು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ಹಾಗೂ ಕನ್ಯಾ ರಾಶಿಯವರು ತಮ್ಮ ಜಾತಕದ ಅನುಸಾರವಾಗಿ ಈ ಆಮೆ ಉಂಗುರವನ್ನು ಧರಿಸಬೇಕು ಎನ್ನಲಾಗಿದೆ. ಆಮೆಯ ಉಂಗುರ ಧರಿಸುವಾಗ, ಮೊದಲನೆಯದಾಗಿ, ಆಮೆಯ ಮುಖವು ನಿಮ್ಮ ಕಡೆಗೆ ಇರಬೇಕೆಂದು ಗಮನಿಸಿ. ಈ ಹಣವು ನಿಮ್ಮ ಕಡೆಗೆ ಆಕರ್ಷಿತವಾಗುತ್ತದೆ ಮತ್ತು ಕುಟುಂಬದಲ್ಲಿ ಸಂಪತ್ತು ಮತ್ತು ಸಂತೋಷವು ಬರುತ್ತದೆ.
ಆಮೆಯ ಮುಖವು ನಿಮ್ಮ ಮುಖದ ವಿರುದ್ಧ ದಿಕ್ಕಿನಲ್ಲಿದ್ದರೆ, ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು, ಬಲಗೈಯ ಮಧ್ಯದ ಬೆರಳಿಗೆ ಮಾತ್ರ ಆಮೆಯ ಉಂಗುರವನ್ನು ಧರಿಸಬೇಕು ಎಂದು ಹೇಳಲಾಗಿದೆ.
ಇದನ್ನು ಶುಕ್ರವಾರದಂದು ಮಾತ್ರ ಧರಿಸಬೇಕು (ಶುಕ್ರವಾರ ಲಕ್ಷ್ಮಿ ದೇವಿಯ ದಿನ). ಆಮೆ ಉಂಗುರವನ್ನು ಬೆಳ್ಳಿಯಲ್ಲಿ ಮಾತ್ರ ಮಾಡಬೇಕು. 'ಟರ್ಟಲ್ ರಿಂಗ್' ಅನ್ನು ತಯಾರಿಸುವಾಗ, ಆಮೆಯ ಹಿಂಭಾಗದಲ್ಲಿ 'ಶ್ರೀ' ಹಚ್ಚೆ ಹಾಕಲಾಗಿದೆ ಎಂಬುದನ್ನು ನೆನಪಿನಲ್ಲಿಡಿ.
ಆಮೆಯ ಉಂಗುರ ತೆಗೆದು ಎಲ್ಲೆಂದರಲ್ಲಿ ಇಡಬಾರದು ಅದನ್ನು ಪೂಜಾ ಕೋಣೆಯಲ್ಲಿ ಅಥವಾ ದೇವರ ಫೋಟೋ ಮುಂದೆ ಇಡಬೇಕು. ನೀರಿನಲ್ಲಿ ಹಾಕಿ ಇಟ್ಟರೆ ಉತ್ತಮ.
ಒಮ್ಮೆ ತೆಗೆದಿಟ್ಟು ಮತ್ತೊಮ್ಮೆ ಧರಿಸಬೇಕೆಂಬ ನಿಯಮವೂ ಇದೆ. ಹಾಲು ತುಂಬಿದ ಬಟ್ಟಲಿನಲ್ಲಿ ಹಾಕಿ ನಂತರ ಅದನ್ನು ಲಕ್ಷ್ಮಿ ದೇವಿಯ ಪಾದಗಳಿಗೆ ಸ್ಪರ್ಶಿಸಿ ಧರಿಸಿ.
ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಚೀನಿ ಶಾಸ್ತ್ರದ ಪ್ರಕಾರ ನಿಮ್ಮ ಜೀವನದಲ್ಲಿ ಸಮತೋಲನ, ಸಕಾರಾತ್ಮಕತೆ ಮತ್ತು ಪ್ರಶಾಂತತೆಯನ್ನು ತರಲು ಆಮೆಯ ಉಂಗುರವನ್ನು ಧರಿಸಲು ಶಿಫಾರಸು ಮಾಡಲಾಗುತ್ತದೆ. ಇದು ನಿಮ್ಮ ವೈಯಕ್ತಿಕ ಸಂಬಂಧಗಳ ಮೇಲೆ ಧನಾತ್ಮಕ ಪರಿಣಾಮ ಬೀರುವುದಲ್ಲದೇ ಪ್ರೀತಿ ಮತ್ತು ಬಾಂಧವ್ಯವನ್ನು ಕೂಡ ಹೆಚ್ಚು ಮಾಡುತ್ತದೆ.
ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಜೊತೆ ನಿಕಟ ಸಂಪರ್ಕ ಹೊಂದಿರುವುದರಿಂದ ಆಮೆಯ ಉಂಗುರವನ್ನು ಧರಿಸುವುದರಿಂದ ನಿಮ್ಮ ಮೇಲೆ ಲಕ್ಷ್ಮೀ ಹಾಗೂ ವಿಷ್ಣುವಿನ ಆಶೀರ್ವಾದ ಯಾವಾಗಲೂ ಇರುತ್ತಂತೆ. ಹಾಗೂ ನೀವು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಜೊತೆಗೆ ನಿಮ್ಮ ಜೀವನದಲ್ಲಿ ಯಶಸ್ಸು ಪಡೆದುಕೊಳ್ಳಲು ಸಾಧ್ಯವಾಗುತ್ತಂತೆ.



Click it and Unblock the Notifications
