Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
'ಆಪರೇಷನ್ ಸಿಂಧೂರ್' ಎಂಬ ಹೆಸರು ಇಟ್ಟಿದ್ಯಾಕೆ? ಒಳಾರ್ಥವೇನು ಗೊತ್ತಾ?
ಪಹಲ್ಗಾಮ್‌ನಲ್ಲಿ ನಡೆದಿದ್ದ ವಿದ್ವಾಂಸ ಕೃತ್ಯಕ್ಕೆ ಭಾರತ ತಿರುಗೇಟು ನೀಡಲು ಮುಂದಾಗಿದೆ. ಹೀಗಾಗಿ ಇಂದು ಮಧ್ಯರಾತ್ರಿಯಿಂದಲೇ ಪಾಕಿಸ್ತಾನದ ಹಲವು ಕಡೆಗಳಲ್ಲಿ ವಾಯುದಾಳಿ ವರದಿಯಾಗುತ್ತಿದೆ. ಅದರಲ್ಲೂ ಅಡಗು ತಾಣಗಳ ಗುರಿಯಾಗಿಸಿಕೊಂಡು ಭಾರತೀ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕಾಗಿ ಆಪರೇಷನ್ ಸಿಂಧೂರ್ ಎಂದು ನಾಮಕರಣ ಮಾಡಲಾಗಿದೆ.
ರಾತ್ರಿಯಿಂದ ನಡೆದ ದಾಳಿಯಲ್ಲಿ ಪಾಕ್ ನೆಲೆಯಲ್ಲಿ ಬಹಳಷ್ಟು ಹಾನಿಯಾಗಿದೆ ಎಂದು ವರದಿಗಳಾಗಿವೆ. ಪಹಲ್ಗಾಮ್‌ನಲ್ಲಿ ನಡೆದಿದ್ದ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ್ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಭಾರತದಲ್ಲಿ ಮಾಕ್ ಡ್ರಿಲ್ ಮಾಡುವ ಕುರಿತಾದ ಸೂಚನೆ ನೀಡಿ ದಿಢೀರ್ ಪಾಕ್ ನೆಲೆಗಳ ಮೇಲೆ ದಾಳಿ ಮಾಡಿರುವುದು ಅಚ್ಚರಿ ಮೂಡಿಸಿದೆ.

ಹಾಗೆ ಈಗ ಪಾಕ್ ವಿರುದ್ಧ ಆರಂಭಗೊಂಡಿರುವ ಆಪರೇಷನ್ ಸಿಂಧೂರ್ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಹಾಗಾದ್ರೆ ಈ ಕಾರ್ಯಾಚರಣೆಗೆ ಸಿಂಧೂರ್ ಎಂದು ಹೆಸರು ಇಟ್ಟಿದ್ದು ಏಕೆ? ಇದರ ಹಿಂದಿರುವ ಅರ್ಥವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಿಂದಿಯಲ್ಲಿ ಸಿಂಧೂರ್ ಎಂದು ಹೇಳಲಾಗುತ್ತದೆ. ಹಾಗೆ ಕನ್ನಡದಲ್ಲಿ ಇದನ್ನು ಸಿಂಧೂರ ಎನ್ನಬಹುದು. ಹಣೆ ಮೇಲೆ ಅಗಲವಾಗಿ ಇಡುವ ಕುಂಕುಮವಾಗಿದೆ.
ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 25 ಭಾರತೀಯರು ಹಾಗೆ ಓರ್ವ ನೇಪಾಳಿ ನಾಗರಿಕ ಮೃತಪಟ್ಟಿದ್ದರು. ಈ 25 ಮಂದಿ ಪುರುಷರು ಅವರ ಪತ್ನಿ, ಮಕ್ಕಳು, ಪೋಷಕರ ಮುಂದೆಯೇ ಪ್ರಾಣ ಕಳೆದುಕೊಂಡರು. ಅದರಲ್ಲೂ ಪತ್ನಿಯರನ್ನು ಬಿಟ್ಟು ಪತಿಯ ಮೇಲೆ ದಾಳಿ ಮಾಡಲಾಗಿತ್ತು. ಇದರಿಂದ ಪ್ರತಿಕಾರದ ರೂಪವಾಗಿ ಆಪರೇಷನ್ ಸಿಂಧೂರ್ ಎಂಬ ಹೆಸರು ನೀಡಲಾಗಿದೆ.
25 ಸ್ತ್ರೀಯರ ಜೀವನ ಕಸಿದುಕೊಂಡಿದ್ದರಿಂದ ಅವರಿಗೆ ನ್ಯಾಯ ಒದಗಿಸಿ ಕೊಡುವ ಉದ್ದೇಶದಿಂದ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ಎಂಬ ನಾಮಕರಣ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರವಾಸಿಗರ ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಅವರ ಹೆಸರು ಕೇಳಿದ ಬಳಿಕ ಗುಂಡು ಹಾರಿಸಲಾಗಿತ್ತು ಎಂದು ವರದಿಗಳಾಗಿವೆ. ಅದರಲ್ಲಿ ನವ ವಿವಾಹಿತರಿದ್ದರು. ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಮೃತದೇಹದ ಪಕ್ಕದಲ್ಲಿ ನವವಿವಾಹಿತ ಹಿಮಾಂಶಿ ನರ್ವಾಲ್ ಕಣ್ಣೀರಿಡುತ್ತಿದ್ದ ದೃಶ್ಯಗಳು ವೈರಲ್ ಆಗಿದ್ದವು. ಇವರ ವಿವಾಹವಾಗಿ ಕೆಲವೇ ದಿನಗಳು ಕಳೆದಿದ್ದವು.
ಭಾರತೀಯ ಸಂಸ್ಕೃತಿಯಲ್ಲಿ ಸಿಂಧೂರಕ್ಕೆ ಇದೆ ಮಹತ್ವ
ಮಹಿಳೆ ಸಿಂಧೂರ ಇಡುವು ಆಕೆ ಮುತೈದೆ ಎಂಬುದನ್ನು ಪ್ರತಿನಿಧಿಸುತ್ತದೆ. 5 ಮುತ್ತುಗಳಿಂದ ತುಂಬಿರುವ ಹೆಸರನ್ನು ಇದು ಒಳಗೊಂಡಿದೆ. ಅದರಲ್ಲಿ ಈ ಹಣೆಯಲ್ಲಿ ಇಡುವ ಸಿಂಧೂರವೂ ಒಂದು. ಆಕೆ ಮದುವೆಯ ಬಳಿಕ ತಪ್ಪದೆ ಸಿಂಧೂರ ಇಡುವ ಸಂಪ್ರದಾಯ ರೂಢಿಯಲ್ಲಿದೆ. ಹಿಂದೂ ಪುರಾಣಗಳಲ್ಲಿ ಸಿಂಧೂರವು ಅಪಾರ ಮಹತ್ವವನ್ನು ಹೊಂದಿದೆ.
ಶಿವನ ಪತ್ನಿ ಪಾರ್ವತಿ ತನ್ನ ಪತಿಯ ಮೇಲಿನ ಭಕ್ತಿ ಸಂಕೇತವಾಗಿ ಹಣೆಯ ಮೇಲೆ ಸಿಂಧೂರವನ್ನು ಧರಿಸುತ್ತಿದ್ದಳು. ಆಕೆ ಶಿವನಿಂದ ಆಶೀರ್ವಾದ ಪಡೆಯುವ ಮುನ್ನ ಹಣೆಯಲ್ಲಿ ಸಿಂಧೂರ ಇಟ್ಟಿದ್ದಳು, ಹೀಗಾಗಿ ಸಿಂಧೂರವು ದೀರ್ಘ ಮತ್ತು ಆನಂದದಾಯಕ ದಾಂಪತ್ಯ ನೀಡಲಿದೆ ಎಂದು ಹೇಳಲಾಗಿದೆ. ಅಲ್ಲಿಂದ ಪಾರ್ವತಿ ಒಂದೂ ದಿನವೂ ಸಿಂಧೂರ ಇಡುವುದನ್ನು ತಪ್ಪಿಸಿರಲಿಲ್ಲವಂತೆ.
ಸಿಂಧೂರವು ದೈವಿಕ ಸೌಂದರ್ಯವನ್ನು ನೀಡುತ್ತದೆ. ಕೆಂಪು ಬಣ್ಣವನ್ನು ಪ್ರೀತಿ ಮತ್ತು ಉತ್ಸಾಹದ ಬಣ್ಣ ಎಂದೂ ಕರೆಯಲಾಗುತ್ತದೆ. ಸಿಂಧೂರವನ್ನು ಶಕ್ತಿ ದೇವತೆಗೂ ಹೋಲಿಸಲಾಗುತ್ತದೆ. ಆಪತ್ತಿನ ಕಾಲದಲ್ಲಿ ಸಿಂಧೂರವು ಮಹಿಳೆಯ ಕಾಪಾಡುತ್ತದೆ ಎಂಬ ನಂಬಿಕೆ ಇದೆ. ಹಾಗೆ ಪತಿಯ ಮರಣದ ನಂತರ ಆಕೆ ಸಿಂಧೂರ ಇಡುವುದನ್ನು ನಿಷೇಧಿಸಲಾಗಿದೆ. ಆಕೆ ತನ್ನ ಜೀವನದ ಒಂದು ಭಾಗ ಕಳೆದುಕೊಂಡಂತೆ ಎಂಬ ಸೂಚಕ ಇದಾಗಿರಲಿದೆ.



Click it and Unblock the Notifications
