Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಿಂದೂ ಧರ್ಮದಲ್ಲಿ ಸತ್ತಾಗ Rest in Peace ಬದಲು ಸದ್ಗತಿ ಎಂದು ಹೇಳಬೇಕು ಯಾಕೆ?
ಪ್ರತಿ ಧರ್ಮದಲ್ಲೂ ಹುಟ್ಟು-ಸಾವಿಗೆ ಸಂಬಂಧಿಸಿದಂತೆ ಬೇರೆಯದ್ದೇ ಕಲ್ಪನೆಗಳು ಇರುತ್ತದೆ. ಕೆಲವು ಧರ್ಮದಲ್ಲಿ ಸತ್ತವರು ಮತ್ತೆ ಹುಟ್ಟಿ ಬರುತ್ತಾರೆ ಅಂತ ಹೇಳಿದ್ರೆ, ಇನ್ನೂ ಕೆಲವು ಧರ್ಮದಲ್ಲಿ ಮನುಷ್ಯನಿಗೆ ಹುಟ್ಟು-ಸಾವು ಒಂದೇ ಸಲ ಬರೋದು ಅಂತಾನೂ ಹೇಳಲಾಗುತ್ತದೆ.

ಬೇರೆ ಧರ್ಮಗಳಿಗೆ ಹೋಲಿಕೆ ಮಾಡಿದ್ರೆ ಹಿಂದೂ ಧರ್ಮದಲ್ಲಿ ಮರಣದ ಬಗ್ಗೆ ಬೇರೆಯದ್ದೇ ಕಲ್ಪನೆಗಳಿದೆ. ಒರ್ವ ವ್ಯಕ್ತಿ ಸತ್ತ ಮೇಲೆ ಆತನಿಗೆ "ರೆಸ್ಟ್ ಇನ್ ಪೀಸ್"(Rest in Peace) ಅಂತ ಹೇಳುವುದುಂಟು. ಅಂದ್ರೆ ಶಾಂತಿಯಿಂದ ವಿಶ್ರಾಂತಿಸಿ ಅಥವಾ ಸ್ವರ್ಗ ಅಂತ ಅರ್ಥ ಆಗುತ್ತದೆ. ಆದರೆ ಹಿಂದೂ ಧರ್ಮದಲ್ಲಿ "ಸದ್ಗತಿ" ಅಂತ ಹೇಳುತ್ತಾರೆ. ಅಷ್ಟಕ್ಕೂ ಹಿಂದೂ ಧರ್ಮದಲ್ಲಿ ಯಾಕೆ ಸತ್ತಾಗ ಸದ್ಗತಿ ಅಂತ ಹೇಳೋದು ಅನ್ನೋದನ್ನು ತಿಳಿಯೋಣ.
ಸಾವು ಎನ್ನುವುದು ಬಟ್ಟೆ ಬದಲಾಯಿಸಿದಂತೆ!
ಭಗವದ್ಗೀತೆ, ಕಠೋಪನಿಷತ್, ಶಿವ ಆಗಮಗಳು, ಪುರಾಣಗಳು ಸೇರಿದಂತೆ ಎಲ್ಲಾ ಪ್ರಮುಖ ಹಿಂದೂ ಪವಿತ್ರ ಗ್ರಂಥಗಳು ಹಾಗೂ ಕಾನೂನುಗಳ ಪ್ರಕಾರ ಜೀವಾತ್ಮವನ್ನು ನಾಶಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಜೀವಾತ್ಮ ಎನ್ನುವುದು ಪರಮಾತ್ಮದ ಪ್ರತಿಬಿಂಬವಾಗಿದೆ. ಅದು ಕರ್ಮ ಮತ್ತು ಮಾಯೆಯಿಂದ ಬಂಧಿತವಾಗಿದೆ. ಮತ್ತು ಅಂತಿಮ ವಿಮೋಚನೆಯ ಕಡೆಗೆ ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ತನ್ನ ಪ್ರಯಾಣವನ್ನು ಮುಂದುವರೆಸುತ್ತದೆ.
ವೇದಗಳು ಮತ್ತು ಉಪನಿಷತ್ತುಗಳಲ್ಲಿ "ಏಕೋಹಂ ಬಹುಷ್ಯಂ" ಎಂದು ಹೇಳಲಾಗದೆ. ಆದ್ದರಿಂದ ಜೀವಾತ್ಮನಿಗೆ ಮರಣವು ಬಟ್ಟೆಯನ್ನು ಬದಲಾಯಿಸಿದಂತಿದೆ. ಜೀವಾತ್ಮವು ಒಂದು ದೇಹ ಮತ್ತು ಮನಸ್ಸಿನಿಂದ ಇನ್ನೊಂದಕ್ಕೆ ಪ್ರಯಾಣಿಸುತ್ತದೆ. ಮತ್ತು ತನ್ನ ಪ್ರಯಾಣವನ್ನು ಮುಂದುವರೆಸುತ್ತಲೇ ಇರುತ್ತದೆ. ನಂಬಿಕೆಗಳ ಪ್ರಕಾರ ಜೀವಾತ್ಮವು ತನ್ನ ಹಿಂದಿನ ಜನ್ಮದಲ್ಲಿ ಹೊಂದಿದ್ದ ಸಂದರ್ಭಗಳು ಮತ್ತು ಸಂಪನ್ಮೂಲಗಳನ್ನು ಮುಂದಿನ ಜನ್ಮದಲ್ಲೂ ಹೊಂದಿರುತ್ತಂತೆ.
ಎಷ್ಟೇ ಜನ್ಮ ಎತ್ತಿದರೂ ಕರ್ಮ ಕಳೆಯೋದಿಲ್ಲ!
ನಾವು ಹೇಗೆ ಕೊಳೆ ಬಟ್ಟೆಯನ್ನು ತೆಗೆದು ಹೊಸ ಬಟ್ಟೆಯನ್ನು ಧರಿಸುತ್ತೇವೆಯೋ ಅದೇ ರೀತಿ ಜೀವಾತ್ಮವು ಒಂದು ದೇಹವನ್ನು ಬಿಟ್ಟು ಮತ್ತೊಂದು ದೇಹವನ್ನು ಸೇರುತ್ತಂತೆ. ಜೀವವು ಒಂದು ದೇಹವನ್ನು ಬಿಟ್ಟು ಮುಂದಿನ ದೇಹಕ್ಕೆ ಹೋಗುವುದರಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ. ಅದರ ಕರ್ಮವು ಹಿಂದಿನ ದೇಹ ಮತ್ತು ಮನಸ್ಸಿನಿಂದ ಮುಂದಿನದಕ್ಕೆ ವರ್ಗಾಯಿಸಲ್ಪಡುತ್ತದೆ.
ಜೀವಾತ್ಮವು ದೇಹವನ್ನು ತೊರೆಯುವಾಗ ಯಾವುದೇ ದುಃಖವನ್ನು ಅನುಭವಿಸುವುದಿಲ್ಲ. ಆದರೆ ಕೆಲವು ನಂಬಿಕೆಗಳ ಪ್ರಕಾರ ಜೀವಾತ್ಮವು ದೇಹವನ್ನು ಬಿಟ್ಟು ಹೋಗುವಾಗ ಮನುಷ್ಯ ಸಿಕ್ಕಾಪಟ್ಟೆ ನೋವು ಅನುಭವಿಸುತ್ತಾನೆಂದು ಹೇಳುವುದುಂಟು. ಜೀವವು ಒಂದು ದೇಹವನ್ನು ತೊರೆದಾಗ ಅದು ಮತ್ತೊಮ್ಮೆ ಆ ಜನ್ಮದ ಎಲ್ಲಾ ಶಕ್ತಿಯುತ ಅನುಭವಗಳ ಮೂಲಕ ಹಾದುಹೋಗುತ್ತಂತೆ.
"RIP" ಬದಲು ಸದ್ಗತಿ ಎಂದು ಹೇಳಬೇಕು ಯಾಕೆ?
ಯಾರಾದರೂ ಸತ್ತಾಗ ನೀವು "ಓಂ ಸದ್ಗತಿ" ಎಂದು ಹೇಳಿದರೆ ನೀವು ಜೀವಾತ್ಮವನ್ನು ಅದರ ಮುಂದಿನ ಜನ್ಮದಲ್ಲಿ ಉತ್ತಮ ಬದುಕನ್ನು ಕಂಡುಕೊಳ್ಳಲಿ ಪ್ರಾರ್ಥಿಸಿದಂತೆ. ಅಂತ್ಯ ಸಂಸ್ಕಾರವನ್ನು ಮಾಡಿ ಜೀವಕ್ಕೆ ಪೂರ್ಣತ್ವವನ್ನು ಪ್ರಾರ್ಥಿಸಿ. ಹಾಗೂ ಮುಕ್ತಿ ಪಡೆಯಲು "ಓಂ ಸದ್ಗತಿ" ಎಂದು ಹೇಳಿ. ಯಾವುದಾದರೂ ವ್ಯಕ್ತಿ ಸತ್ತಾಗ ಭಗವದ್ಗೀತೆ 14 ನೇ ಅಧ್ಯಾಯ ಮತ್ತು ಕಠೋಪನಿಷತ್ ಅನ್ನು ಪಠಿಸೋದು ಇದೇ ಕಾರಣಕ್ಕೆ.
ಇದನ್ನು ಪಠಿಸೋದ್ರಿಂದ ಜೀವಕ್ಕೆ ಅದರ ನಿಜವಾದ ಸ್ವರೂಪವನ್ನು ನೆನಪಿಸಲು ಸಾಧ್ಯವಾಗುತ್ತದೆ. ಈ ಪಠ್ಯಗಳು ಜೀವನ ಮತ್ತು ಮರಣದ ಬಗ್ಗೆ ಅತ್ಯಂತ ಪ್ರಮುಖವಾದ ಸತ್ಯಗಳನ್ನು ಮತ್ತು ಜೀವ ಆತ್ಮ ಮತ್ತು ಪರಮಾತ್ಮದ ನಿಜವಾದ ಸ್ವರೂಪವನ್ನು ಬಹಿರಂಗಪಡಿಸುತ್ತವೆ. ಜೀವವು ದೈವಿಕವೆಂದು ನಾವು ಎಷ್ಟು ನೆನಪಿಸಿಕೊಳ್ಳುತ್ತೇವೆಯೋ ಇದರಿಂದ ಆ ವ್ಯಕ್ತಿಗೆ ಮುಂದೆ ಉತ್ತಮವಾದ ಮುಂದಿನ ಜನ್ಮವನ್ನು ಪಡೆಯಲು ಸಾಧ್ಯವಾಗುತ್ತೆ ಎಂದು ನಂಬಲಾಗಿದೆ.
ಒಂದು ಜೀವವು ತನಗೆ ಬದುಕಲು ಒಂದೇ ಒಂದು ಜೀವನವಿದೆ ಎಂದು ನಂಬಿದರೆ ಆಗ ಅದು ದೀರ್ಘಕಾಲದವರೆಗೆ ಆ ಅಂಗದಲ್ಲಿ ಸಿಲುಕಿಕೊಂಡಿರುತ್ತದೆ. ಇನ್ನೊಂದು ದೇಹವನ್ನು ಸೇರುವ ಬಯಕೆ ಕೂಡ ಇರೋದಿಲ್ಲ. ಮುಂದಿನ ದೇಹದ ಬಗ್ಗೆ ಊಹಿಸಿಕೊಂಡಿರದೇ ಇರೋದ್ರಿಂದ ಮುಂದಿನ ಜನ್ಮದಲ್ಲಿ ಅತ್ಯತ್ತಮವಾದುದನ್ನು ಪಡೆಯಲು ಸಾಧ್ಯವಾಗುತ್ತದೆ. ನಾವು ಯಾರಿಗಾದರೂ "RIP" ಎಂದು ಹೇಳಿದರೆ ಅವರು ಪ್ರೇತಾತ್ಮವಾಗಿ ಉಳಿಯುತ್ತಾರಂತೆ. ಹೀಗಾಗಿ ಯಾರಾದರೂ ಸತ್ತಾಗ "ಸದ್ಗತಿ" ಎಂದು ಹೇಳಬೇಕು ಅನ್ನೋ ನಂಬಿಕೆ ಹಿಂದೂ ಧರ್ಮದಲ್ಲಿದೆ.



Click it and Unblock the Notifications

