Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಅನಂತ ಚತುರ್ದಶಿಯಂದು ಗಣೇಶನ ವಿಸರ್ಜನೆ ಮಾಡುವುದೇಕೆ? ವಿಸರ್ಜನೆ ವೇಳೆ ಈ ತಪ್ಪು ಮಾಡಲೇಬೇಡಿ
ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಬರುವ ಚತುರ್ದಶಿಯನ್ನು ಅನಂತ ಚತುರ್ದಶಿ ಎಂದು ಕರೆಯಲಾಗುವುದು. ಈ ದಿನ ತುಂಬಾ ವಿಶೇಷವಾದ ದಿನವಾಗಿದೆ. ಈ ದಿನದಂದು ಶ್ರೀ ವಿಷ್ಣುಅನಂತ ಪದ್ಮನಾಗಿ ಅವತಾರ ತಾಳಿದ ದಿನವವಾಗಿದೆ ಎಂದು ನಂಬಲಾಗಿದೆ. ಈ ಅನಂತ ಚತುರ್ದಶಿಯಂದು ಗಣೇಶನ ವಿಸರ್ಜನೆ ಮಾಡುವುದು ಕೂಡ ಈ ದಿನ ಮಹತ್ವವನ್ನು ಹೆಚ್ಚಿಸಿದೆ.

ಅನಂತ ಚತುರ್ದಶಿ ಸೆಪ್ಟೆಂಬರ್ 17
ದಿನ ಮಂಗಳವಾರ
ಚತುರ್ದಶಿ ತಿಥಿ ಪ್ರಾರಂಭ ಸೆಪ್ಟೆಂಬರ್ 16ರಿಂದ 03:10ರಿಂದ ಪ್ರಾರಂಭವಾಗಿ
ಸೆಪ್ಟೆಂಬರ್ 17 ಬೆಳಗ್ಗೆ 11:444ಕ್ಕೆ ಮುಕ್ತಾಯವಾಗಲಿದೆ.
ಅನಂತ ಚತುರ್ದಶಿಯಂದು ಗಣೇಶನ ವಿಸರ್ಜನೆ ಮಾಡುವುದೇಕೆ?
ಚೌತಿಯಂದು ಗಣೇಶನನ್ನು ಪ್ರತಿಷ್ಟಾಪಿಸಿ ಪ್ರತಿನಿತ್ಯವೂ ಶ್ರೀ ಗಣೇಶನನ್ನು ಪೂಜಿಸಿ ಅನಂತ ಚತುರ್ದಶಿಯಂದು ಪೂಜೆ ಸಲ್ಲಿಸಿ ನೀರಿನಲ್ಲಿ ವಿಸರ್ಜನೆ ಮಾಡಲಾಗುವುದು.
ಗಣೇಶನ ಪ್ರತಿಷ್ಟಾಪನೆ ವಿಸರ್ಜನೆ ಎಲ್ಲವೂ ನಮ್ಮ ಜನ್ಮದ ಬಗ್ಗೆ ಹೇಳುತ್ತದೆ
ಗಣೇಶನ ಪ್ರತಿಷ್ಠಾಪನೆ ನಮ್ಮ ಹುಟ್ಟು
ನಂತರ ನಾವು ಗಣೇಶನ ಆರಶಧನೆ ಮಾಡುತ್ತೇವೆ, ಅದು ನಮ್ಮ ಜೀವನ
ಕೊನೆಗೆ ವಿಸರ್ಜನೆ ಮಾಡಲಾಗುವುದು, ಅಂದರೆ ನಮ್ಮ ದೇಹವು ಕೂಡ ಕೊನೆಗೆ ಪರಮಾತ್ಮನಲ್ಲಿ ಐಕ್ಯವಾಗುತ್ತದೆ
ನಮ್ಮ ಜೀವನವನ್ನು ಗೌರವದಿಂದ ಜನರು ಮೆಚ್ಚಿ ಕೊಂಡಾಡುವಂತೆ ಬಾಳಬೇಕು, ನಮ್ಮಿಂದ ಆಗುವ ಉಪಕಾರ ಮಾಡಬೆಕು ಎಂಬ ಅರ್ಥವನ್ನೂ ಸೂಚಿಸುತ್ತದೆ.
ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆ ಯಾವಾಗ ಮಾಡಬೇಕು?
ಗಣೇಶ ಹಬ್ಬ 10 ದಿನದ ಆಚರಣೆಯಾಗಿದೆ, ಎಲ್ಲಾ ವಿಘ್ನಗಳನ್ನು ನಿವಾರಿಸಿ ವಿಘ್ನ ನಿವಾರಕನ್ನು ಕೇಳಿಕೊಂಡು ಅನಂತ ಚತುರ್ದಶಿಯಂದು ಗನೇಶನನ್ನು ವಿಸರ್ಜನೆ ಮಾಡಲಾಗುವುದು.
ಗಣೇಶನನ್ನು ವಿಸರ್ಜನೆ ಮಾಡಲು ಸೂಕ್ತ ಸಮಯ
ಬೆಳಗ್ಗೆ ಮುಹೂರ್ತ: ಬೆಳಗ್ಗೆ 09:30ರಿಂದ ಮಧ್ಯಾಹ್ನ 02:04ಕ್ಕೆ
ಮಧ್ಯಾಹ್ನದ ಮುಹೂರ್ತ: ಮಧ್ಯಾಹ್ನ 03:36ರಿಂದ ಸಂಜೆ 05:07ರವರೆಗೆ
ರಾತ್ರಿಯ ಮುಹೂರ್ತ: ರಾತ್ರಿ 08:07ರಿಂದ ರಾತ್ರಿ 09:36
ತಡರಾತ್ರಿ 11:04ರಿಂದ ಸೆಪ್ಟೆಂಬರ್ 18 03:30ರವರೆಗೆ ಸಮಯವಿದೆ.
ಗಣೇಶ ವಿಸರ್ಜನೆ ಪೂಜಾ ವಿಧಿಗಳೇನು?
ಗಣಪತಿಗೆ ಪೂಜೆಯನ್ನು ಸಲ್ಲಿಸಲಾಗುವುದು, ಭಕ್ತಾಧಿಗಳು ಗನೇಶನಿಗೆ ಹೂವು -ಹಣ್ಣುಗಳನ್ನು ಅರ್ಪಿಸುತ್ತಾರೆ, ನಂತರ ಜೋರಾಗಿ ಗಣಪತಿ ಬಪ್ಪ ಮೋರಯಾ ಎಂದು ಜೋರಾಗಿ ಹೇಳುತ್ತಾ ಗಣಪತಿಯನ್ನು ನೀರಿನಲ್ಲು ಮುಳುಗಿಸಿ ಬಿಡಲಾಗುವುದು.
ಅನಂತ ಚತುರ್ದಶಿಯಂದೇ ಗಣೇಶನ ವಿಸರ್ಜನೆ ಮಾಡುವುದೇಕೆ?
ಈ ದಿನ ಶ್ರೀ ವಿಷ್ಣುವಿನ ಅನಂತ ಅವತಾರವನ್ನು ಆರಾಧಿಸಲಾಗುವುದು, ಅನಂತ ಎಂದರೆ ಅಂತ್ಯವಿದ್ದಲ್ಲದ್ದು ಎಂದರ್ತ, ಹಾಗಾಗಿ ಈ ದಿನದಂದು ಗಣೇಶನ ಆರಾಧನೆ ಮಾಡಲಾಗುವುದು.
ಗಣೇಶ ವಿಸರ್ಜನೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
ಈಗ ಸೋಷಿಯಲ್ ಮೀಡಿಯಾದಲ್ಲಿ ಗಣೇಶ ವಿಸರ್ಜನೆಯ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ, ಅಷ್ಟೊಂದು ದಿನ ಭಯ-ಭಕ್ತಿಯಿಂದ ಪೂಜಿಸಿದ ಗಣೇಶನನ್ನು ವಿಸರ್ಜನೆ ಮಾಡಲು ಕೂಡ ಕ್ರಮವಿದೆ. ಆದರೆ ಕೆಲವು ಕಡೆ ಗಣೇಶನನ್ನು ಟ್ಯಾಕ್ಟರ್‌ನಿಂದ ತಳ್ಳಿ ಹಾಕುವುದು, ತಲೆ ಕೆಳಗಾಗುವಂತೆ ಬಿಸಾಡುವುದನ್ನು ನೀಡುವಾಗ ಮನಸ್ಸಿಗೆ ನೋವುಂಟಾಗುವುದು ಅಲ್ಲವೇ?
ಗಣೇಶನನ್ನು ನೀರಿನಲ್ಲಿ ಮುಳಗಿಸಬೇಕೆ ಹೊರತು ಎಸೆಯುವುದಲ್ಲ
ಗಣೇಶನನ್ನು ಯಾರೂ ಎಸೆಯಬೇಡಿ, ಬದಲಿಗೆ ನೀರಿನಲ್ಲಿ ಮುಳುಗಿಸಿ ಬಿಡಬೇಕು. ಹಾಗಾಗಿಯೇ ಪರಿಸರ ಸ್ನೇಹಿ ಗಣೇಶನ ಬಳಸಲು ಹೇಳಲುವುದು, ನೀರಿನಲ್ಲಿ ಮುಳುಗಿಸಿದಾಗ ಮೂರ್ತಿ ಕರಗುತ್ತದೆ. ಬದಲಿಗೆ ಗಾಡಿಯಿಂದ ನೇರವಾಗಿ ಎಸೆಯುವ ತಪ್ಪು ಮಾಡಬೇಡಿ.
ಗಣೇಶನ ಮುಳುಗಿಸುವಾಗಲೂ ಜಾಗ್ರತೆವಹಿಸಿ
ಈಜು ಬರುವವರು ಗಣೇಶನ ವಿಸರ್ಜನೆ ಮಾಡಲು ಹೋದರೆ ಒಳ್ಳೆಯದು, ನೀರು ಸ್ವಲ್ಪ ಆಳವಿದ್ದರೆ ಲೈಫ್ ಜಾಕೆಟ್ ಧರಿಸಿ, ಇದರಿಂದ ಯಾವುದೇ ಅವಘಡ ಸಂಭವಿಸದಂತೆ ಜಾಗ್ರತೆವಹಿಸಬಹುದು. ಗಣೇಶನ ಮೂರು ಬಾರಿ ನೀರಿನಲ್ಲಿ ಮುಳುಗಿಸಿ ನಂತರ ಬಿಡಲಾಗುವುದು. ಬಳಿಕ ಗಣೇಶನಿಗೆ ನಮಸ್ಕರಿಸಿ ಬನ್ನಿ.
ಗಣೇಶ ಎಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ತರಲಿ ಎಂದು ಪ್ರಾರ್ಥಿಸಿ.



Click it and Unblock the Notifications
