Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಯನಾಡ್‌ನಲ್ಲಿ ಜಾತಿ-ಮತ ಬೇಧವಿಲ್ಲದೆ ಎಲ್ಲರನ್ನೂ ರಕ್ಷಿಸುತ್ತಿರುವ ಈ ದೇವರುಗಳಿಗೆ ನಮ್ಮ ಸಲಾಂ
ನಾವು ಕಷ್ಟದಲ್ಲಿ ಇರುವಾಗ ನಮ್ಮನ್ನು ರಕ್ಷಣೆ ಮಶಾಡಲು ದೇವರು ಬರುತ್ತಾರೆ ಎಂದು ಪ್ರತಿಯೊಬ್ಬರು ಭಾವಿಸುತ್ತೇವೆ, ಆದರೆ ನಾವು ಕಣ್ಣಿಗೆ ಕಾಣದ ದೇವರುಗಳನ್ನು ನಮ್ಮ ಮತಕ್ಕೆ ಸೇರಿದ ದೇವರುಗಳನ್ನು ಪ್ರಾರ್ಥಿಸುತ್ತೇವೆ, ಆದರೆ ಜಾತಿ ಬೇಧ, ಮತ ಬೇಧವಿಲ್ಲದೆ ಎಲ್ಲರನ್ನು ರಕ್ಷಿಸಲು ಬರುವ ದೇವರುಗಳೆಂದರೆ ಅದು ನಮ್ಮ ಸೈನ್ಯ.

ಅವರು ತಮ್ಮ ಜೀವನದ ಹಂಗು ತೊರೆದು ಅಲ್ಲಿ ಗಡಿ ಕಾಯುತ್ತಿರುವುದಕ್ಕೆ ನಾವು ನೆಮ್ಮದಿಯ ನಿದ್ದೆ ಮಾಡುತ್ತಿದ್ದೇವೆ. ನೈಸರ್ಗಿಕ ವಿಕೋಪಗಳಿಂದ ಜನರು ತತ್ತರಿಸುವಾಗ ಅಲ್ಲಿಗೂ ಜೀವ ರಕ್ಷಣೆಗೆ ಬರುವವರು ನಮ್ಮ ಸೈನಿಕರು, ಇದನ್ನು ಪ್ರತಿಬಾರಿಯೂ ಸಾಬೀತು ಮಾಡುತ್ತಿದ್ದಾರೆ, ಇದೀಗ ಕೇರಳದ ವಯನಾಡ್‌ನಲ್ಲಿ ಸೈನ್ಯ ಜನರಿಗೆ ಸಹಾಯ ಮಾಡುತ್ತಿರುವ ಪರಿ ನೋಡಿ ಕೇರಳದ ಜನರು ಮಾತ್ರವಲ್ಲ ಇಡೀ ದೇಶದ ಜನರು ಸಲ್ಯೂಟ್ ಮಾಡುತ್ತಿದ್ದಾರೆ.
ತಮ್ಮ ಹಸಿವು, ನಿದ್ದೆ ಎಲ್ಲಾ ಬದಿಗೊತ್ತಿ ನಿರಂತ ಜನರ ಕ್ಷಣೆ ಮಾಡುತ್ತಿರುವ ಸೇನೆ
ಸೈನಿಕರು ಮನುಷ್ಯರು ಅವರಿಗೆ ನಿದ್ದೆ ಬರುತ್ತದೆ, ಹಸಿವು ಇರುತ್ತದೆ ಆದರೆ ದೇಶ, ದೇಶದ ಜನತೆ ಎಂದು ಬಂದಾಗ ಎಲ್ಲಾ ಮರೆತು ಬಿಡುತ್ತಾರೆ, ವಯನಾಡ್‌ನ ಸಂತ್ರಸ್ತರ ಜನರ ನೆರವಿಗೆ ಬಂದಿರುವ ಸೇನೆ ಒಂದು ಕ್ಷಣವೂ ವ್ಯರ್ಥ ಮಾಡದೆ ಜನರ ರಕ್ಷಣೆ ಮಾಡುತ್ತಿದ್ದಾರೆ. ಇದುವರೆಗೆ 700 ಜನರನ್ನು ರಕ್ಷಣೆ ಮಾಡಿದ್ದಾರೆ, ರಕ್ಷಣಾ ಕಾರ್ಯ ಮುಂದುವರೆಯುತ್ತಲೇ ಇದೆ.
ದಿನ ಬೆಳಗಾಗುವುದರಲ್ಲಿ ಸೇತುವೆ ನಿರ್ಮಾಣ ಮಾಡಿರುವ ಸೇನೆ
ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ವಯನಾಡ್‌ನ ಮೊಂಡಚೇರಿ ಎಂಬ ಪ್ರದೇಶ ಈಗ ಗುರುತೂ ಸಿಗುತ್ತಿಲ್ಲ, ಎಲ್ಲೆಡೆ ಕೆಸರು--ಕೆಸರು, ಅಂತಸ್ತಿನ ಕಟ್ಟಗಳು ಇದ್ದವು ಎಂಬುವ ಕುರುಹೂ ಇಲ್ಲದಂತೆ ನೆಲ ಸಮವಾಗಿರುವ ಭೂಮಿ, ಅಲ್ಲಲ್ಲಿ ಸಿಗುವ ಶವಗಳು, ಜೀವರಕ್ಷಣೆಗೆ ಕಾಯುತ್ತಿರುವ ಜೀವಗಳು ಹೀಗೆ ಸುಂದರ ವಯನಾಡ್‌ನ ಸಂಪೂರ್ಣ ಚಿತ್ರವೇ ಬದಲಾಗಿದೆ.
ರಕ್ಷಣೆಗೆ ಬಂದವರಿಗೂ ಈ ಕಡೆಯಿಂದ ಆ ಕಡೆ ಹೋಗಿ ಜನರ ರಕ್ಷಣೆ ಮಾಡುವುದೇ ಕಷ್ಟವಾಗಿತ್ತು
ಅಲ್ಲಿದ್ದ ಸೇತುವೆ ಕೊಚ್ಚಿ ಹೋಗಿತ್ತು, ತೋಡು ರೀತಿ ಹರಿಯುತ್ತಿದ್ದ ನೀರು ಸಮುದ್ರದಂತೆ ಹರಿಯುತ್ತಿದೆ, ಹೀಗಾಗಿ ರಕ್ಷಣೆ ಮಾಡುವುದೇ ಕಷ್ಟವಾಗಿತ್ತು. ಈ ಸಮಯದಲ್ಲಿ ಸೇನೆ ಒಂದೇ ದಿನದಲ್ಲಿ ತಾತ್ಕಾಲಿಕ ಅದರ ಬಲವಾದ ಸೇತುವೆ ನಿರ್ಮಿಸಿದೆ, ಹೀಗಾಗಿ ರಕ್ಷಣಾ ಕಾರ್ಯಕ್ಕೆ ತುಂಬಾನೇ ಸಹಾಯವಾಗುತ್ತಿದೆ.
#WayanadLandslide
— Southern Command INDIAN ARMY (@IaSouthern) August 1, 2024
Rescue efforts underway at three locations: Attamala, Mundakkai and Chooralmala by the columns of #IndianArmy in coordination with other rescue teams. Bodies recovered are being shifted to safer location for further action by civil administration. Maj Gen VT… pic.twitter.com/M8w5EoC5Xf
ಉತ್ತರ ಕನ್ನಡದ ಬರೆ ಕುಸಿತದಲ್ಲಿ ಅರ್ಜುನ್ ಸಿಕ್ಕಾಗ ಸೇನೆಯ ವಿರುದ್ಧ ಮಾತನಾಡಿದ್ದರು ಕೆಲವರು
ಅರ್ಜುನ್ ತಾಯಿ ಪ್ರೆಸ್ ಮೀಟ್ ಮಾಡುವಾಗ ಅವರ ತಾಯಿ ಮತ್ತೊಬ್ಬ ಮಹಿಳೆ ಸೇನೆ ಬಗ್ಗೆ ಕೂಡ ದೂರು ಹೇಳು ಎಂದು ಹೇಳುತ್ತಿರುವ ವೀಡಿಯೋ ವೈರಲ್ ಆಗಿತ್ತು, ಅಲ್ಲಿಯೂ ಎನ್‌ಡಿಆರ್‌ಎಫ್ ತಂಡ ಬಂದು ಹುಡುಕಾಟ ನಡೆಸಿತ್ತು, ನೌಕಾ ಸೇನೆಯೂ ಸಾಕಷ್ಟು ಪ್ರಯತ್ನ ಮಾಡಿತ್ತು, ನೀರಿನ ಸೆಳೆತ ಅಷ್ಟೊಂದು ಅಪಾಯ ಮಟ್ಟದಲ್ಲಿ ಇದ್ದ ಕಾರಣ ಅರ್ಜುನ್‌ನ ಹುಡುಕುವುದು ಕಷ್ಟವಾಯ್ತು, ಅಂದ ಮಾತ್ರಕ್ಕೆ ಸೇನೆಯನ್ನು ದೂರಲು ಹೇಗೆ ಮನಸ್ಸು ಬಂತೋ...
#WayanadLandslide
— Southern Command INDIAN ARMY (@IaSouthern) August 1, 2024
Rescue efforts underway at three locations: Attamala, Mundakkai and Chooralmala by the columns of #IndianArmy in coordination with other rescue teams. Bodies recovered are being shifted to safer location for further action by civil administration. Maj Gen VT… pic.twitter.com/M8w5EoC5Xf
ಸೈನಿಕರಿಗೆ ಕೈಯೆತ್ತಿ ಮಗಿಯುತ್ತಿರುವ ಕೇರಳ
ಸೈನಿಕರು ರಕ್ಷಣಾ ಕಾರ್ಯ ಮಾಡುವುದನ್ನು ನೋಡಿ ಕೇರಳಿಗರು ತಮ್ಮ ಮನಸ್ಸಿನಲ್ಲಿಯೇ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಯಾರೇ ಆಗಲಿ ಸೇನೆಯನ್ನು ದೂರಬೇಡಿ, ಸೈನಿಕರೇ ನಮ್ಮನ್ನು ಕಾಯುತ್ತಿರುವ ದೇವರುಗಳು, ಮರೆಯದಿರಿ...



Click it and Unblock the Notifications











