Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಜನರು ಶನಿ ದೇವನಿಗೆ ಸಾಸಿವೆಯೆಣ್ಣೆ ಅರ್ಪಿಸುವುದು ಏಕೆ?
ಶನಿಯು ಕರ್ಮದ ಅನುಸಾರ ಫಲವನ್ನು ನೀಡುವ ದೇವರು. ಒಳ್ಳೆಯದು ಮಾಡಿದರೆ ಒಳ್ಳೆಯ ಫಲ ನೀಡುತ್ತಾನೆ, ಅದೇ ಕೆಟ್ಟದ್ದು ಮಾಡಿದರೆ ಇದರ ಪ್ರಭಾವ ಕೂಡ ಅಷ್ಟೇ ತೀಕ್ಷ್ಣವಾಗಿರುತ್ತದೆ. ಆದ್ದರಿಂದ ಶನಿ ಕೋಪಕ್ಕೆ ತುತ್ತಾದರೆ ಜನ ಭಯ ಬೀಳುತ್ತಾರೆ. ಅಲ್ಲದೆ ಶನಿ ಸಾಡೇಸಾತಿ ಅಥವಾ ಶನಿ ಧೈಯ್ಯಾ ಇದ್ದರಂತೂ ಕಷ್ಟಗಳ ಸರಮಾಲೆಯೇ ಬರುವುದು.
ಈ ಕಾರಣಕ್ಕೆ ಜನ ತುಂಬಾನೇ ಭಯ ಬೀಳುತ್ತಾರೆ. ಶನಿಯ ಕೋಪ ತಣಿಸಲು, ಶನಿಯ ಕೃಪೆಗೆ ಪಾತ್ರರಾಗಲು ಶನಿದೇವನಿಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿದರೆ ಒಳ್ಳೆಯದು ಎಂದು ಹೇಳಲಾಗುವುದು. ಸಾಸಿವೆಯೆಣ್ಣೆಯ ದೀಪ ಹಚ್ಚುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ:

ಸಾಸಿವೆ ಎಣ್ಣೆ ಅರ್ಪಿಸುವುದರ ಹಿಂದಿರುವ ಪೌರಾಣಿಕ ಕತೆ
ಪೌರಾಣಿಕ ಕತೆಯ ಪ್ರಕಾರ ರಾವಣ ಸೀತಾ ಮಾತೆಯನ್ನು ಅಪಹರಿಸಿ ಲಂಕೆಯಲ್ಲಿ ಬಚ್ಚಿಟ್ಟಿದ್ದಾಗ ಹನುಮಂತ ಸೀತಾ ಮಾತೆಯನ್ನು ಹುಡುಕಿಕೊಂಡು ಲಂಕೆಗೆ ಬರುತ್ತಾರೆ. ರಾವಣ ಶನಿದೇವನನ್ನು ಬಂಧಿಸಿಟ್ಟಿರುತ್ತಾನೆ. ಹನುಮಂತ ಶನಿಯನ್ನು ಬಂಧ ಮುಕ್ತಗೊಳಿಸಿ ಅಲ್ಲಿಂದ ಸುರಕ್ಷಿತ ಜಾಗ ತಲುಪಲಿ ಎಂದು ಶನಿಯನ್ನುಎಸೆಯುತ್ತಾನೆ, ಆದರೆ ಇದರಿಂದ ಶನಿಗೆ ನೋವಾಗುತ್ತದೆ, ಆಗ ಅಲ್ಲಿಗೆ ಬಂದ ಹನುಮಂತ ಸಾಸಿವೆಎಣ್ಣೆ ಹಚ್ಚುತ್ತಾನೆ, ಶನಿಗೆ ನೋವು ಕಡಿಮೆಯಾಗುವುದು. ಹೀಗಾಗಿ ಶನಿಗೆ ಸಾಸಿವೆಯೆಣ್ಣೆ ದೀಪ ಹಚ್ಚುವ ಪದ್ಧತಿ ಬಂದಿದೆ ಎಂದು ಹೇಳಲಾಗುವುದು.
ಮತ್ತೊಂದು ಕತೆಯ ಪ್ರಕಾರ
ಹನುಮಂತ ಶ್ರೀರಾಮನ ಧ್ಯಾನದಲ್ಲಿರುತ್ತಾನೆ. ಅಲ್ಲಿಗೆ ಬರುವ ಶನಿ ನೀನು ತುಂಬಾ ಶಕ್ತಿಶಾಲಿ ದೇವರು ಎಂದು ಕೇಳಿರುವೆ, ನೀನು ಕಣ್ಣುಗಳನ್ನು ತೆರೆದು ನನ್ನೊಂದಿಗೆ ಹೋರಾಡು, ಯಾರು ಗೆಲ್ಲುತ್ತೇವೆ ಎಂದು ನೋಡೋಣ ಎಂದು ಹನುಮಂತನಿಗೆ ಸವಾಲು ಹಾಕುತ್ತಾನೆ. ಹನುಮಂತ ನಾನು ನನ್ನ ದೇವರ ಧ್ಯಾನದಲ್ಲಿರುವೆ, ನೀನು ಸುಮ್ಮನೆ ಹೋಗು ಎಂದು ಹೇಳಿದರೂ ಶನಿ ಹನುಮಂತನ ಕೆಣಕುತ್ತಾನೆ. ಕೋಪಗೊಂಡ ಹನುಮಂತ ತನ್ನ ಬಾಲವನ್ನು ಉದ್ಧವಾಗಿ ಬೆಳೆಸಿ, ಅದರಲ್ಲಿ ಶನಿಯನ್ನು ಬಂಧಿಸುತ್ತಾನೆ, ಶನಿಗೆ ಅಲುಗಾಡಲು ಸಾಧ್ಯವಾಗುವುದಿಲ್ಲ. ಶನಿಯನ್ನು ಬಾಲದಲ್ಲಿ ಸುತ್ತಿ, ಅಲ್ಲಿದ್ದ ಬಂಡೆಗೆ ಬಡೆಯುತ್ತಾನೆ, ಆವಾಗ ಶನಿಯ ಮೈಯಿಂದ ರಕ್ತ ಸೋರಲಾರಂಭಿಸುತ್ತದೆ, ಶನಿ ತಪ್ಪಾಯ್ತು ಎಂದು ಕೇಳುತ್ತಾನೆ, ಆವಾಗ ಹನುಮಂತ ನನ್ನ ರಾಮನ ಭಕ್ತರಿಗೆ ನೀನು ಯಾವತ್ತೂ ತೊಂದರೆ ಕೊಡಬಾರದು ಎಂದು ಹೇಳಿದಾಗ ನಿನ್ನ ರಾಮ ಹಾಗೂ ನಿನ್ನ ಭಕ್ತರಿಗೆ ಯಾವತ್ತಿಗೂ ತೊಂದರೆ ಕೊಡುವುದಿಲ್ಲ ಎಂದು ಹೇಳುತ್ತಾನೆ. ಹೀಗಾಗಿ ಶನಿ ಕೋಪದಿಂದ ಪಾರಾಗಲು ಜನರು ಹನುಮಂತನ ಪ್ರಾರ್ಥಿಸುತ್ತಾರೆ.
ಶನಿ ದೇವನಿಗೆ ಸಾಸಿವೆಯೆಣ್ಣೆ ದೀಪ ಹಚ್ಚುವುದರಿಂದ ದೊರೆಯುವ ಪ್ರಯೋಜನಗಳು
* ಶನಿ ದೇವನಿಗೆ ಸಾಸಿವೆಯೆಣ್ಣೆ ದೀಪ ಹಚ್ಚುವುದರಿಂದ ಅನೇಕ ಕಷ್ಟಗಳು ದೂರಾಗುವುದು. ಶನಿ ದೇವನ ಕೃಪೆಯಿಂದ ಯಶಸ್ಸು ದೊರೆಯುತ್ತದೆ. ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿದೆ, ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ.
* ಸಾಸಿವೆಯೆಣ್ಣೆಯನ್ನು ಶನಿವಾರ ಶನಿದೇವನಿಗೆ ಅರ್ಪಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
* ಸಾಸಿವೆಯೆಣ್ಣೆ ಜೊತೆಗೆ ಕಪ್ಪು ಉದ್ದಿನ ಬೇಳೆ ಹಾಗೂ ಕಪ್ಪು ಎಳ್ಳು ಅರ್ಪಿಸಿದರೆ ಶನಿ ಸಾಡೇಸಾತಿ ಹಾಗೂ ಶನಿಧೈಯ್ಯಾ ಇರುವವರಿಗೆ ಕಷ್ಟಗಳು ಕಡಿಮೆಯಾಗಲಿದೆ.
* ಶನಿವಾರ ಆಲದ ಮರದ ಕೆಳಗಡೆ ಸಾಸಿವೆಯೆಣ್ಣೆ ದೀಪವನ್ನು ಹಚ್ಚಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಶನಿ ಜಯಂತಿಯಂದು ಶನಿ ದೇವನ ಈ ಮಂತ್ರಗಳನ್ನು ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ
ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ



Click it and Unblock the Notifications