Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಲಂಕೆಯಿಂದ ಸೀತೆಯನ್ನು ಹನುಮ ಏಕೆ ಕರೆತರಲಿಲ್ಲ? ಈ ಅಚ್ಚರಿ ಕಥೆ ಗೊತ್ತಾ?
ನಾವು ಚಿಕ್ಕವರಾಗಿದ್ದಾಗಿನಿಂದ ರಾಮಾಯಣದ ಕಥೆಗಳ ಕೇಳಿದ್ದೇವೆ. ಆದರೆ ಕೆಲವು ಕಥೆಗಳು ಮಾತ್ರ ಎಲ್ಲಿಯೂ ಕೇಳಿಲ್ಲ, ಅಂತಹ ಕಥೆಗಳಲ್ಲಿ ಹನುಮಂತ ಏಕೆ ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲಿಲ್ಲ ಎಂಬ ಅಚ್ಚರಿಯ ಕಥೆಯಾಗಿದೆ. ಈ ಕಥೆಯನ್ನು ಎಲ್ಲಿಯೂ ನಾವು ಓದಿರಲು ಸಾಧ್ಯವಿಲ್ಲ. ಕೆಲವೇ ಕೆಲವು ಕಡೆ ಈ ಕಥೆ ವಿವರಣೆ ಇದೆ. ಹಾಗಾದ್ರೆ ಸೀತೆಯ ಕಂಡು ಹನುಮಂತ ಆಕೆಯನ್ನು ವಾಪಾಸು ಏಕೆ ಕರೆದುಕೊಂಡು ಬರಲಿಲ್ಲ ಗೊತ್ತಾ.? ಈ ಕಥೆ ಓದಿ.
ಅಶೋಕವನದಲ್ಲಿ ಸೀತೆಯನ್ನು ಭೇಟಿಯಾಗಿದ್ದ ಹನುಮಂತ ಆಕೆಯಿಂದ ಉಂಗುರವನ್ನು ಪಡೆದಿದ್ದ ಎಂಬುದು ನಮಗೆಲ್ಲಾ ತಿಳಿದಿದೆ. ಆದರೆ ಆತ ಏಕೆ ಸೀತೆಯನ್ನು ಅಲ್ಲಿಯೇ ಬಿಟ್ಟು ಬಂದಿದ್ದ? ಆತ ಪರಿಯಾಗಿ ಕೇಳಿಕೊಂಡರೂ ಸೀತೆ ಏಕೆ ಒಪ್ಪಲಿಲ್ಲ. ಶ್ರೀರಾಮನೇ ಬಂದು ಕರೆದೊಯ್ಯಲಿ ಎಂದು ಸೀತೆ ಹೇಳಿದ್ದಳು ಎಂಬುದಷ್ಟೇ ನಮಗೆ ಗೊತ್ತಿದೆ. ಆದರೆ ಇದರ ಹಿಂದೆ ಕಥೆಯೊಂದಿದೆ.

ಹನುಮನ ಬಲ ಅನುಮಾನಿಸಿದ್ದ ಸೀತೆ
ಹನುಮಂತ ಸೀತೆಯನ್ನು ಕರೆದೊಯ್ಯುವುದಾಗಿ ಹೇಳಿದಾಗ ಸೀತೆ ಅನುಮಾನಿಸಿದ್ದಳು. ಆತ ತೀರ ಚಿಕ್ಕವನಿದ್ದು ನನ್ನನ್ನು ಸಾವಿರ ಕಿ.ಮೀ ದೂರ ಹೇಗೆ ಕೊಂಡೊಯ್ಯುತ್ತಾನೆ ಎಂದು ಅನುಮಾನಿಸಿದ್ದಳು. ಇದನ್ನೇ ಹನುಮನ ಬಳಿಯೂ ಆಕೆ ಹೇಳಿದ್ದಳು.
ಹನುಮನ ವಿರಾಟ್ ಸ್ವರೂಪ
ಸೀತಾಮಾತೆಯ ಈ ಅನುಮಾನವನ್ನು ಸ್ಥಳದಲ್ಲಿಯೇ ಹನುಮ ನಿವಾರಿಸಿದ್ದನಂತೆ. ತನ್ನ ವಿರಾಟ್ ರೂಪ ದರ್ಶನವನ್ನು ಸೀತಾಮಾತೆಗೆ ಮಾಡಿಸುತ್ತಾನೆ. ಹನುಮನ ಶರೀರವು ಆ ಚಿಕ್ಕ ಗಾತ್ರದಿ೦ದ ಬೆಳೆಯುತ್ತಾ ಸಾಗಿ ಮೇರು ಪರ್ವತದಷ್ಟು ಎತ್ತರವಾಗುತ್ತದೆ. ಇದನ್ನು ಕ೦ಡ ಸೀತಾಮಾತೆಯು ಹನುಮನ ಸಾಮರ್ಥ್ಯವನ್ನು ಕೊ೦ಡಾಡುತ್ತಾಳೆಯಾದರೂ ಕೂಡ, ಆತನೊ೦ದಿಗೆ ಬರಲು ಒಪ್ಪುವುದಿಲ್ಲವಂತೆ.
ರಾಮನ ಬಿಟ್ಟು ಅನ್ಯರ ಜೊತೆ ಬರಲಾರೆ
ನೀನು ರಾಮನ ಬಂಟನೆ ಆಗಿರಬಹುದು, ಆದರೆ ರಾಮನ ಹೊರತು ಬೇರೆಯವರ ಜೊತೆ ನಾನು ಹೋಗುವುದಿಲ್ಲ ಎಂದು ಸೀತೆ ಪಟ್ಟು ಹಿಡಿಯುತ್ತಾಳೆ. ಅದೂ ಲಕ್ಷ್ಮಣನಾದರೂ ಸರಿಯೇ ಎಂದು ಸೀತೆ ವಾದಿಸುತ್ತಾಳೆ.
ಸೀತಾಮಾತೆಯ ಸ೦ಧಿಗ್ಧತೆ
ಹನುಮನು ಇ೦ತಹ ಮಾತುಗಳನ್ನಾಡಿದಾಗ, ಸೀತಾಮಾತೆಯು ಈಗ ನಿಜಕ್ಕೂ ಸ೦ಧಿಗ್ಧಕ್ಕೀಡಾಗುತ್ತಾಳೆ. ಅ೦ತಹ ಒ೦ದು ಪವಿತ್ರ ಬೇಡಿಕೆಯನ್ನು ಹೇಗೆ ತಿರಸ್ಕರಿಸುವುದೆ೦ದು ಆಕೆಗೆ ತೋಚದಾಗುತ್ತದೆ. ಹನುಮನು ಮು೦ದಿರಿಸಿರುವ ವಾದಕ್ಕೆ ಪ್ರತಿವಾದವಾಗಿ ಬಳಸಲು ಯಾವ ಹೇಳಿಕೆಯೂ ಅಲ್ಲಿ ಬಾಕಿ ಉಳಿದಿರುವುದಿಲ್ಲ. ಹೀಗಾಗಿ, ಆಕೆಯು ಅನ್ಯ ಮಾರ್ಗದ ಕುರಿತು ಚಿ೦ತಿಸತೊಡಗುತ್ತಾಳೆ.
ರಾಮನ ಬಗ್ಗೆ ಕಾಡಿತ್ತು ಚಿಂತೆ
ಪರಮ ವೀರ ರಾಮನ ಪತ್ನಿಗೆ ಮತ್ತೊಂದು ವಿಚಾರ ಕಾಡ ತೊಡಗಿತ್ತು. ಮಹಾರಾಜನಾಗಿದ್ದ ರಾಮ ಸ್ವತಃ ತನ್ನ ಪತ್ನಿಯನ್ನು ರಕ್ಷಿಸಲು ಪರರನ್ನು ಕಳುಹಿಸಿದ್ದಾನೆ ಎಂಬ ಕೆಟ್ಟ ಹೆಸರು ಬರಬಹುದು ಎಂದು ಯೋಚಿಸಿದ ಸೀತೆ ಹನುಮನ ಜೊತೆ ಬರಲು ನಿರಾಕರಿಸಿದ್ದಳು.
ಹನುಮನ ಒಪ್ಪಿಗೆ
ಸೀತೆಯು ತನ್ನ ತರ್ಕಬದ್ಧ ವಾದಸರಣಿಯನ್ನು ಈ ರೀತಿಯಾಗಿ ಮು೦ದಿರಿಸಿದಾಗ, ಹನುಮನು ಒಪ್ಪಿಕೊಳ್ಳುತ್ತಾನೆ. ಹಾಗೆ ಆಕೆಯ ನೆನಪಿಗಾಗಿ ಸೀತೆಯಿಂದ ಬಂಗಾರದ ಉಂಗುರವನ್ನು ಪಡೆದು ಅಶೋಕವನದಿಂದ ತೆರಳುತ್ತಾನೆ. ಭಗವಾನ್ ಶ್ರೀ ರಾಮಚ೦ದ್ರನಿಗೆ ಆಕೆಯ ಸ೦ದೇಶವನ್ನು ಅತೀ ಶೀಘ್ರವಾಗಿ ತಲುಪಿಸುವುದಾಗಿ ಆಕೆಗೆ ತಿಳಿಸುತ್ತಾನೆ.
ಸೀತೆಯ ಬಹುಮಾನ ನಿರಾಕರಿಸಿದ ಹನುಮ
ಸೀತೆಯನ್ನು ರಾವಣನಿಂದ ಕರೆತಂದ ಬಳಿಕ ಸೀತೆ ಹನುಮನಿಗೆ ಮುತ್ತಿನ ಹಾರವನ್ನು ಉಡುಗೊರೆಯಾಗಿ ನೀಡುತ್ತಾಳೆ. ಆದರೆ ಹನುಮ ಈ ಉಡುಗೊರೆಯನ್ನು ನಿರಾಕರಿಸಿದನಂತೆ. ಮುತ್ತಿನ ಹಾರದಲ್ಲಿ ಶ್ರೀರಾಮನ ಹೆಸರಿಲ್ಲ ಎಂಬ ಕಾರಣಕ್ಕೆ ಆತ ಉಡುಗೊರೆ ನಿರಾಕರಿಸಿದನಂತೆ. ರಾಮನ ಮೇಲೆ ಹನುಮನ ಭಕ್ತಿ ಅದಮ್ಯವಾಗಿತ್ತು ಮತ್ತು ಅದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಇದನ್ನರಿತ ರಾಮನು ಹನುಮಂತನಿಗೆ ಉತ್ತಮ ಆರೋಗ್ಯವನ್ನು ಆಶೀರ್ವದಿಸುತ್ತಾರೆ.



Click it and Unblock the Notifications