Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಾಹ್ಯಾಕಾಶಕ್ಕೆ ಹಂಸ ತೆಗೆದುಕೊಂಡು ಹೋಗಿದ್ಯಾಕೆ? ಶುಭಾಂಶು ಶುಕ್ಲಾ ಹೇಳಿದ್ದೇನು ಗೊತ್ತಾ?
ಆಕ್ಸಿಯಮ್ -4 ಮಿಷನ್ ಯಶಸ್ವಿ ಉಡಾವಣೆಯೊಂದಿಗೆ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದಾರೆ. ಅವರೊಂದಿಗೆ ಮೂವರು ಇನ್ನಿತರೆ ಗಗನಯಾತ್ರಿಗಳು ಕೂಡ ಬಾಹ್ಯಾಕಾಶ ನಿಲ್ದಾಣ ಸೇರಿದ್ದಾರೆ. ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್‌ನಲ್ಲಿ ಹಾರಾಟದ ನಂತರ ಶುಭಾಂಶು ಶುಕ್ಲಾ ತಮ್ಮ ಮೊದಲ ಸಂದೇಶ ಹಂಚಿಕೊಂಡಿರು.
ಬಾಹ್ಯಾಕಾಶದಲ್ಲಿನ ತಮ್ಮ ಮೊದಲ ಅನುಭವವನ್ನು ಅವರು ಹಂಚಿಕೊಂಡಿರುವ ವಿಡಿಯೋ ಇದಾಗಿದೆ. ಈ ಫಾಲ್ಕನ್ 9 ರಾಕೆಟ್ ನಿಗಧಿಗಿಂತ 40 ನಿಮಿಷ ಮೊದಲೇ ಬಾಹ್ಯಾಕಾಶ ತಲುಪಿತ್ತು. ನಾಲ್ವರು ಗಗನಯಾತ್ರಿಗಳು ಯಶಸ್ವಿಯಾಗಿ ನಿಲ್ದಾಣ ತಲುಪಿದರು. ಈ ಮೂಲಕ ಭಾರತ ಕೂಡ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಿತು.

ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಗಿತ್ತು. ಪುತ್ರ ಶುಭಾಂಶು ಶುಕ್ಲಾರ ಗಗನಯಾನ ಕ್ಷಣವನ್ನು ಅವರ ಪೋಷಕರು, ಪತ್ನಿ ಕಣ್ತುಂಬಿಕೊಂಡರು. ಹಾಗೆ ಆವರು ಬಾಹ್ಯಾಕಾಶದಿಂದ ಮೊದಲ ಸಂದೇಶ ರವಾನಿಸಿರು. ಅಚ್ಚರಿಯಾಗಿ ಅವರು ಹಂಚಿಕೊಂಡ ವಿಡಿಯೋದಲ್ಲಿ ತಮ್ಮ ತಂಡದ ನಾಯಕನನ್ನು ಪರಿಚಯಿಸುವುದು ನೋಡಬಹುದು.
ನಾನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ ಕ್ಷಣ... ಈ ಸಿಬ್ಬಂದಿ ನನಗೆ ತುಂಬಾ ಸ್ವಾಗತಾರ್ಹ ಭಾವನೆ ಮೂಡಿಸಿದ್ದಾರೆ. ನೀವು ಅಕ್ಷರಶಃ ನಮಗಾಗಿ ನಿಮ್ಮ ಮನೆಯ ಬಾಗಿಲುಗಳನ್ನು ತೆರೆದಂತೆ ಭಾಸವಾಯಿತು. ಈ ಸ್ವಾಗತ ನಿಜಕ್ಕೂ ಅದ್ಭುತವಾಗಿದೆ ಎಂದು ಅವರು ಬಾಹ್ಯಾಕಾಶ ನಿಲ್ದಾಣ ತಲುಪಿ ವಿಡಿಯೋ ಮೂಲಕ ಸಂದೇಶ ರವಾನಿಸಿದರು.
ಹಾಗೆ ಶುಭಾಂಶು ಶುಕ್ಲಾ ಅವರು ಬಿಳಿ ಬಣ್ಣದ ಹಂಸವೊಂದನ್ನು ಪರಿಚಯಿಸುವುದು ನೋಡಬಹುದು. ಅದರಲ್ಲೂ ಹಂಸವು ಏಕೆ ಮುಖ್ಯ ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. 'ಇದು ನಿಜವಾಗಿಯೂ ಇಲ್ಲಿ ಮುದ್ದಾಗಿ ಕಾಣಿಸುತ್ತಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಮಗೆ ಹಂಸ ಬಹಳ ಮುಖ್ಯವಾಗಿದೆ. ಹಂಸ ಬುದ್ಧಿವಂತಿಕೆಯನ್ನು ಸಂಕೇತಿಸಲಿದೆ. ಇದು ಯಾವ ವಿಚಾರಗಳ ಮೇಲೆ ಗಮನ ಹರಿಸಬೇಕು? ಯಾವುದರ ಮೇಲೆ ಗಮನಹರಿಸಬಾರದು ಎಂಬುದನ್ನು ಗ್ರಹಿಸುವ ಸಾಮರ್ಥ್ಯ ಸಹ ಹೊಂದಿದೆ' ಎಂದು ಅವರು ಹೇಳಿದ್ದಾರೆ.
ಹಾಗೆ ಭಾರತ ಮಾತ್ರವಲ್ಲ ಹಂಸವು ಹಂಗೇರಿ, ಪೋಲೆಂಡ್‌ನಲ್ಲೂ ಪ್ರಮುಖ ಸ್ಥಾನ ಪಡೆದಿದೆ. ಇದು ಕಾಕತಾಳಿಯ ಅಲ್ಲ, ಇದು ಕೂಡ ನಮ್ಮ ಹೃದಯದಲ್ಲಿ ನೆಲೆಸಲಿದೆ ಎಂದಿದ್ದಾರೆ. ಇದನ್ನು ಝೀರೋ ಜೀ ಸೂಚಕವಾಗಿ ಮಾತ್ರವೇ ನಾವು ನೋಡುತ್ತಿಲ್ಲ ಎಂದಿದ್ದಾರೆ. ಈ ಹಂಸದ ಹೆಸರು ಜಾಯ್ ಎಂದು ಅವರು ಹೇಳಿಕೊಂಡಿದ್ದಾರೆ.
ಝೀರೋ ಜೀ ಸೂಚಕ ಎಂದರೆ ಬಾರವಿಲ್ಲದ, ಬಹಳ ಹಗುರವಾದ ಆಟಿಕೆಯಾಗಿದೆ. ಹಿಂದಿನಿಂದಲೂ ಬಾಹ್ಯಾಕಾಶ ಯಾನಿಗಳು ಈ ರೀತಿ ತೂಕವಿಲ್ಲದ ಆಟಿಕೆಗಳನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದಾರೆ. ಸದ್ಯ ಈಗ ಈ ಹಂಸವನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಲಾಗಿದೆ.
ಹಂಸವನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?
ಭಾರತ, ಹಂಗೇರಿ, ಪೋಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರತಿನಿಧಿಸುವ ಆಕ್ಸಿಯಮ್ -4 ಸಿಬ್ಬಂದಿ ಹಂಸವನ್ನೇ ತಮ್ಮ ಝೀರೋ ಜಿ ಸೂಚಕವಾಗಿ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಇದು ಬುದ್ದಿವಂತಿಕೆಯ ಹಾಗೆ ಹಿಂದೂ ಪುರಾಣಗಳ ಪ್ರಕಾರ ಸರಸ್ವತಿಯ ವಾಹನವೆಂದು ಪರಿಗಣಿಸಲಾಗುತ್ತದೆ. ಹಾಗೆ ಉಳಿದಂತೆ ಹಂಗೇರಿಯನ್ ಸಂಸ್ಕೃತಿ ಹಾಗೂ ಪೋಲೆಂಡ್ ಸಂಸ್ಕೃತಿಯಲ್ಲೂ ಕೂಡ ಹಂಸವನ್ನು ಪ್ರಮುಖ ಪಕ್ಷಿಯನ್ನಾಗಿ ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ.
ಬಾಹ್ಯಾಕಾಶ ತಲುಪಿದ ಭಾರತೀಯ ತಿಂಡಿ
ಇನ್ನು ಇದೇ ಮೊದಲ ಬಾರಿಗೆ ಬಾಹ್ಯಾಕಾಶ ತಲುಪಿದ ಭಾರತೀಯ ಶುಭಾಂಶು ಶುಕ್ಲಾ ಅಲ್ಲಿ ಭಾರತೀಯ ತಿಂಡಿಯನ್ನು ಕೂಡ ತೆಗೆದುಕೊಂಡು ಹೋಗಿ ಹಂಚಿದ್ದಾರೆ. ಅವರು ಕ್ಯಾರೆಟ್ ಹಲ್ವಾ, ಮೂಂಗ್ ದಾಲ್ ಹಲ್ವಾ, ಮಾವಿನ ಕಾಯಿಯ ಮಕರ ಸೇರಿ ಜನಪ್ರಿಯ ಸಿಹಿ ತಿಂಡಿಯನ್ನು ತೆಗೆದುಕೊಂಡು ಹೋಗಿ ಹಂಚಿಕೊಂಡು ಸವಿದಿದ್ದಾರೆ.



Click it and Unblock the Notifications
