Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
200 ವರ್ಷಗಳಿಂದ ದೀಪಾವಳಿಯಂದು ಮೇಲುಕೋಟೆಯಲ್ಲಿ ಮಾತ್ರ ಕಾರ್ಗತ್ತಲು, ಸ್ಮಶಾನ ಮೌನ, ಏಕೆ?
ಮೇಲುಕೋಟೆ ಕರ್ನಾಟಕದಲ್ಲಿ ಇರುವವರಿಗೆ ಗೊತ್ತಿರುತ್ತದೆ, ಅಲ್ಲಿದೆ ಹೋಗಿಲ್ಲ ಎಂದರೂ ಆ ಸ್ಥಳದ ಹೆಸರನ್ನು ಕೇಳಿರುತ್ತೀರಿ, ಅದಕ್ಕೆ ಕಾರಣ ಅಲ್ಲಿರುವ ಚೆಲುವರಾಯ ಸ್ವಾಮಿ ದೇವಾಲಯ. ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಇದೂ ಕೂಡ ಒಂದು, ಇಲ್ಲಿಗೆ ಅನೇಕ ಪ್ರವಾಸಿಗರು ಕೂಡ ಭೇಟಿ ನೀಡುತ್ತಾರೆ.
ಮೇಲುಕೋಟೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿದೆ. ಇತಿಹಾಸದ ಪ್ರಕಾರ ಮಹಾನ್ ವೈಷ್ಣವ ಸಂತ ಶ್ರೀ ರಾಮಾನುಜಾರ್ಯರು ಕ್ರಿ. ಶ 12ನೇ ಶತಮಾನದಲ್ಲಿ ಇಲ್ಲಿ ಬಂದು 14 ವರ್ಷ ವಾಸವಾಗಿದ್ದರು, ಈ ಕಾರಣಕ್ಕೆ ಈ ಸ್ಥಳ ಅಯ್ಯಂಗಾರ್ ಬ್ರಾಹ್ಮಣರ ಪ್ರಮುಖ ಕೇಂದ್ರವಾಯ್ತು.

ಇತಿಹಾಸದಲ್ಲಿ ಗುರುತಿಸಿಕೊಂಡಿರು ಹಾಗೂ ಪ್ರಸ್ತುತ ಪ್ರಸಿದ್ಧ ಸ್ಥಳವಾಗಿರುವ ಮೇಲುಕೋಟೆಯಲ್ಲಿ ಮಾತ್ರ ದೀಪಾವಳಿಯ ಸಡಗರ ಇರುವುದಿಲ್ಲ. ಇಡೀ ದೇಶ ಬೆಳಕಿನ ಹಬ್ಬ ಕೊಂಡಾಡುತ್ತಿದ್ದರೆ ಮೇಲುಕೋಟೆಯಲ್ಲಿ ಮಾತ್ರ ಅಮವಾಸ್ಯೆಯ ಕತ್ತಲು ತುಂಬಿರುತ್ತದೆ, ಅಲ್ಲಿ ನೀರವ ಮೌನ ಆವರಿಸಿರುತ್ತದೆ, ಏಕೆ? ಸಂಭ್ರಮದ ಹಬ್ಬದ ದಿನದಂದು ಈ ಪ್ರದೇಶದಲ್ಲಿ ಮಾತ್ರ ಏಕೆ ಸೂತಕ ಛಾಯೆ? ಎಂದು ತಿಳಿಯಲು ಇತಿಹಾಸದ ಬಗ್ಗೆ ತಿಳಿಯಬೇಕು.
ಮೇಲುಕೋಟೆಯಲ್ಲಿ ದೀಪಾವಳಿಯ ಸಂಭ್ರಮ ಕಿತ್ತುಕೊಂಡ ಟಿಪ್ಪು ಸುಲ್ತಾನ್
ಟಿಪ್ಪುವಿನ ಆಡಳಿತ ಸಮಯದಲ್ಲಿ ಟಿಪ್ಪು ಮೇಲುಕೋಟೆಯಲ್ಲಿ ನರಮೆಧವನ್ನೇ ನಡೆಸಿದ್ದ. ಈ ಪ್ರದೇಶದಲ್ಲಿ ವಾಸವಿದ್ದ 700ರಿಂದ 800 ಬ್ರಾಹ್ಮಣರನ್ನು ಕೊಲ್ಲಲಾಯ್ತು. ಅದು ದೀಪಾವಳಿಯಂದೇ ಈ ಘೋರ ಘಟನೆ ಸಂಭವಿಸಿತ್ತು. ಮಹಿಳೆ-ಮಕ್ಕಳು ಎನ್ನದೆ ಅತಿ ಕ್ರೂರವಾಗಿ ಕೊಲ್ಲಲಾಯ್ತು.
2 ಶತಮಾನದಿಂದ ಇಲ್ಲಿ ದೀಪಾವಳಿಯ ಆಚರಣೆಯಿಲ್ಲ
2 ಶತಮಾನದಿಂದ ಇಲ್ಲಿ ದೀಪಾವಳಿಯ ಆಚರಣೆಯಿಲ್ಲ, ಈಗಲೂ ಮೇಲುಕೋಟೆಯಲ್ಲಿ ಹೆಚ್ಚು ಬ್ರಾಹ್ಮಣ ಕುಟುಂಬಗಳು ನೆಲೆಸಿವೆ. ತಮ್ಮ ಹಿರಿಯರಿಗೆ ಆದ ಗತಿಯನ್ನು ಇಂದಿಗೂ ನೆನೆಸಿಕೊಂಡು ಈ ದಿನ ಶೋಕಾಚರಣೆ ಮಾಡುತ್ತಾರೆ.
ಬ್ರಾಹ್ಮಣರು ಮತಾಂತರ ಆಗಿಲ್ಲ ಎಂದು ಕೊಲೆ ಮಾಡಿದ್ದ ಟಿಪ್ಪು ಸುಲ್ತಾನ್
ಅಯ್ಯಂಗಾರ್ ಬ್ರಾಹ್ಮಣರು ಚೆಲುವನಾರಾಯಣ ದೇವಾಸ್ಥಾನದ ಅಧಿಕಾರ ಸೇರಿದಂತೆ ಪ್ರಮುಖ ಆಡಳಿತ ಹಾಗೂ ಧಾರ್ಮಿಕ ಹುದ್ದೆಗಳನ್ನು ಆಕ್ರಮಿಸಿಕೊಂಡಿದ್ದರು. ಟಿಪ್ಪು ಆಳ್ವಿಕೆಗೆ ಬಂದಾಗ ಮತಾಂತರ ಜೋರಾಗಿತ್ತು. ಮೇಲುಕೋಟೆಯ ಬ್ರಾಹ್ಮಣರು ದೀಪಾವಳಿ ಆಚರಿಸಲು ಶ್ರೀರಂಗ ಪಟ್ಟಣದಲ್ಲಿರುವ ನರಸಿಂಹಸ್ವಾಮಿ ದೇವಾಸ್ಥಾನದ ಸಭೆ ಸೇರಿದ್ದರು. ಇದನ್ನು ತಿಳಿದ ಟಿಪ್ಪು ಇಡೀ ಸಮುದಾಯದ ಹತ್ಯಕಾಂಡಕ್ಕೆ ಆದೇಶ ನೀಡುತ್ತಾನೆ. ಅಲ್ಲಿ ಬ್ರಾಹ್ಮಣರ ನರಮೇಧವೇ ನಡೆಯಿತು, ದೀಪದ ಬೆಳಕಿನೊಂದಿಗೆ ಹಬ್ಬ ಆಚರಿಸಬೇಕಾಗಿದ್ದ ನಾಡು ರಕ್ತದೋಕುಳಿಯಲ್ಲಿ ಸ್ಮಶಾನ ಮೌನಕ್ಕೆ ಜಾರಿತು.
ಸ್ವಾತಂತ್ರ್ಯ ಬಂದರೂ ಆ ಕಹಿ ನೆನಪು ಮರೆತಿಲ್ಲ
ಮೇಲುಕೋಟೆಯವರು ಟಿಪ್ಪು ನಾಶವಾದರೂ, ಸ್ವಾತಂತ್ರ್ಯ ಸಿಕ್ಕರೂ ಆ ಕೆಟ್ಟ ಕ್ಷಣವನ್ನು ಮರೆಯಲು ಸಿದ್ಧರಿಲ್ಲ. ಇಂದಿಗೂ ದೀಪವಾಳಿಯಂದು ಮೇಲುಕೋಟೆಯಲ್ಲಿ ದೀಪಗಳ ಸಂಭ್ರಮವಿಲ್ಲ......



Click it and Unblock the Notifications
