ರಾಮ ನವಮಿ ಹಬ್ಬ ಏಕೆ ಆಚರಿಸಬೇಕು? ಇದರ ಮಹತ್ವವೇನು ಗೊತ್ತಾ?

ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಸಾಲು ಸಾಲು ಹಬ್ಬಗಳು ನಮ್ಮೆದುರು ಬರಲಿವೆ. ಅದರಲ್ಲೂ ಯುಗಾದಿ ಹಿಂದೂಗಳ ಪಾಲಿಗೆ ಪವಿತ್ರ ಹಾಗೂ ಪ್ರಮುಖ ಹಬ್ಬವಾಗಿದೆ. ವಸಂತ ಋತು ಆರಂಭವಾಗುವ ಹಿನ್ನೆಲೆ ಈ ಹಬ್ಬಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇನ್ನು ಯುಗಾದಿಯ ಬಳಿಕ ಒಂದಲ್ಲಾ ಒಂದು ಹಬ್ಬಗಳು ಬರುತ್ತವೆ.

ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವ ದೇವತೆಗಲಿದ್ದಾರೆ. ವಿಷ್ಣು ಹಾಗೂ ಶಿವನ ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶ್ರೀರಾಮ ಕೂಡ ವಿಷ್ಣುವಿನ ಅವತಾರವೆಂದು ಹೇಳಲಾಗುತ್ತದೆ. ಹೀಗಾಗಿ ಭಾರತದಲ್ಲಿ ಶ್ರೀರಾಮ ದೇವರನ್ನು ಕೋಟ್ಯಂತರ ಮಂದಿ ಪೂಜಿಸುವರು. ಶ್ರೀರಾಮ ದೇವರ ಹುಟ್ಟುಹಬ್ಬವನ್ನು ನಾವೆಲ್ಲರೂ ಶ್ರೀರಾಮ ನವಮಿ ಎಂದು ಆಚರಿಸುತ್ತೇವೆ.

Why Celebrate Rama Navami Festival Do You Know The Significance Of This

ಇದೇ ಎಪ್ರಿಲ್ 17ರಂದು ರಾಮ ನವಮಿ ಆಚರಿಸಲಾಗುತ್ತಿದೆ. ಈ ಬಾರಿಯ ರಾಮ ನವಮಿ ವಿಶೇಷವಾಗಿರಲಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣವಾದ ಬಳಿಕ ನಡೆಯಲಿರುವ ಮೊದಲ ರಾಮ ನವಮಿ ಇದಾಗಿದ್ದು, ಹೀಗಾಗಿ ವಿಶೇಷ ನವಮಿ ಎನಿಸಿದೆ.

ರಾಮ ನವಮಿ ಹಬ್ಬದ ಪ್ರಾಮುಖ್ಯತೆ ಏನು?

ವಿಷ್ಣುವಿನ ಅವತಾರ ಎಂದು ಹೇಳಲಾಗುವ ರಾಮ ದೇವರ ಹುಟ್ಟುಹಬ್ಬವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ರಾಮ ದೇವರು ಭೂಲೋಕದಲ್ಲಿ ರಾಜ ದಶರಥ ಮತ್ತು ರಾಣಿ ಕೌಶಲ್ಯೆಯ ಮಗನಾಗಿ ಅಯೋಧ್ಯೆಯಲ್ಲಿ ಜನ್ಮ ತಾಳಿದರು ಎಂದು ಪುರಾಣಗಳು ಹೇಳುತ್ತವೆ. ಅವರು ತ್ರೇತಾಯುಗದಲ್ಲಿ ಜನ್ಮ ಪಡೆದರು ಎಂದು ಹೇಳಲಾಗುತ್ತದೆ.

ರಾಮ ದೇವರು ವಿಷ್ಣುವಿನ ಏಳನೇ ಅವತಾರ ಎಂದು ನಂಬಲಾಗುತ್ತದೆ ಮತ್ತು ಅವರನ್ನು ಪೂಜಿಸುವ ಕಾರಣದಿಂದ ದುಷ್ಟಶಕ್ತಿಗಳು ದೂರವಾಗುವುದು ಮತ್ತು ಭೂಮಿ ಮೇಲೆ ದೈವಿ ಶಕ್ತಿಯ ಪ್ರವೇಶವಾಗುವುದು ಎಂದು ನಂಬಲಾಗಿದೆ.

ರಾಮ ನವಮಿ ಆಚರಣೆ ಹೇಗೆ?

ರಾಮ ನವಮಿಯು ಹಿಂದೂಗಳಿಗೆ ಹೆಚ್ಚು ಪವಿತ್ರವಾಗಿದ್ದು, ಈ ದಿನದಂದು ಹೆಚ್ಚಿನ ಜನರು ದಿನವಿಡಿ ಉಪವಾಸ ಮಾಡುವರು. ಇದು ಬೆಳಗ್ಗಿನಿಂದ ಆರಂಭವಾಗಿ ಮರುದಿನ ಬೆಳಗ್ಗಿನ ತನಕ ಇರುತ್ತದೆ. ಇವರು ರಾಮ ಜಪ ಮಾಡುವರು ಅಥವಾ ರಾಮಾಯಣ ಅಥವಾ ನಮ ರಾಮಾಯಣವನ್ನು ಪಠಿಸುವರು. ರಾಮ ನವಮಿಯ ಮೆರವಣಿಗೆ ವೇಳೆ ರಾಮ ಮತ್ತು ಸೀತೆಗೆ ಮದುವೆ ಕೂಡ ಮಾಡಲಾಗುತ್ತದೆ.

ರಾಮ ನವಮಿಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಭಜನೆ ಮತ್ತು ಕೀರ್ತನೆಗಳು ನಡೆಯುತ್ತಲೇ ಇರುತ್ತದೆ.

ರಾಮ ನವಮಿ ಉಪವಾಸ

ರಾಮ ನವಮಿ ಸಂದರ್ಭದಲ್ಲಿ ಉಪವಾಸ ಮಾಡುವವರು ತುಂಬಾ ಕಠಿಣ ವ್ರತಾಚರಣೆ ಮಾಡುವರು. ಇವರು ಯಾವುದೇ ಅನ್ನಾಹಾರ, ನೀರು ಸೇವಿಸದೆ ಉಪವಾಸ ಮಾಡುವರು. ಕೆಲವು ಭಕ್ತರು ನೀರು ಮತ್ತು ಹಣ್ಣುಗಳನ್ನು ಸೇವಿಸುವರು.

ರಾಮ ದೇವರು ಅಯೋಧ್ಯೆಯಲ್ಲಿ ಜನಿಸಿದರು ಎಂದು ನಂಬಲಾಗಿದೆ ಮತ್ತು ರಾಮನವಮಿಯನ್ನು ಅಯೋಧ್ಯೆಯಲ್ಲಿ ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಾಮ ನವಮಿ ಸಂದರ್ಭದಲ್ಲಿ ಭಕ್ತರು ಅಯೋಧ್ಯೆಗೆ ಬಂದು ಸರಾಯು ನದಿಯಲ್ಲಿ ಸ್ನಾನ ಮಾಡುವರು ಮತ್ತು ಹುಟ್ಟುಹಬ್ಬದ ಆಚರಣೆಗೆ ರಾಮ ಮಂದಿರಗಳಿಗೆ ಭೇಟಿ ನೀಡುವರು.

ರಾಮ ನವಮಿ ಶುಭ ಮುಹೂರ್ತ

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯು ಏಪ್ರಿಲ್ 16 ರಂದು ಮಧ್ಯಾಹ್ನ 01:23 ಕ್ಕೆ ಪ್ರಾರಂಭವಾಗುತ್ತದೆ. ಈ ದಿನಾಂಕವು ಏಪ್ರಿಲ್ 17 ರಂದು ಮಧ್ಯಾಹ್ನ 03:14 ಕ್ಕೆ ಕೊನೆಗೊಳ್ಳಲಿದೆ. ಉದಯ ತಿಥಿಯ ಪ್ರಕಾರ, ಏಪ್ರಿಲ್ 17 ರ ಬುಧವಾರದಂದು ರಾಮ ನವಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ರಾಮ ನವಮಿಯ ಶುಭ ಮುಹೂರ್ತ - ಬೆಳಗ್ಗೆ 11:03 ರಿಂದ ಮಧ್ಯಾಹ್ನ 1:38.

ಹಿ೦ದೂ ಚ೦ದ್ರಮಾನದ ಪ್ರಕಾರ, ಪ್ರತಿವರ್ಷವೂ ಚೈತ್ರಮಾಸದ ಒ೦ಭತ್ತನೆಯ ದಿನದ೦ದು (ಮಾರ್ಚ್ - ಏಪ್ರಿಲ್) ಈ ಮ೦ಗಳಕರ ದಿನವನ್ನು ಆಚರಿಸಲಾಗುತ್ತದೆ.ಭಗವಾನ್ ಶ್ರೀ ರಾಮಚ೦ದ್ರನ ಜನ್ಮದಿನವನ್ನು ಆಚರಿಸುವುದರೊ೦ದಿಗೆ, ಇದೇ ದಿನವನ್ನು ರಾಮ ಹಾಗೂ ಸೀತೆಯರ ವಿವಾಹದ ದಿನವನ್ನಾಗಿಯೂ ಆಚರಿಸಲಾಗುತ್ತದೆ.

English summary

Why Celebrate Rama Navami Festival? Do You Know The Significance Of This?

Rama Navami is celebrated on April 17. This time Ram Navami will be special. Why Celebrate Rama Navami Festival? Do You Know The Significance Of This?
Story first published: Wednesday, April 10, 2024, 7:00 [IST]
X
Desktop Bottom Promotion