Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಯಾರು ಈ ಅನುರಾಧಾ ತಿವಾರಿ..! ಈ ಒಂದು ಪೋಸ್ಟ್‌ಗೆ ವಿರೋಧವೇಕೆ..?
ಸಾಮಾಜಿಕ ಜಾಲತಾಣದಲ್ಲಿ ಈ ಯುವತಿಯ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಸ್ತೆ ಬದಿಯಲ್ಲಿ ಎಳನೀರು ಕುಡಿಯುತ್ತಿರುವ ಫೋಟೋ ಇದಾಗಿತ್ತು ಆದರೆ ಅದಕ್ಕೆ ಆಕೆ ಬ್ರಾಹ್ಮಿನ್ ಜೀನ್ಸ್ ಎಂಬ ಕ್ಯಾಪ್ಷನ್ ನೀಡಿದ್ದಳು. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದಲ್ಲದೆ. ಆಕೆಯ ಜಾತಿ ಸೂಚಕ ಪೋಸ್ಟ್ ವಿರುದ್ದ ಟೀಕೆಯೂ ಕೇಳಿಬಂದಿತ್ತು.
ಈ ಫೋಟೋ ಹಂಚಿಕೊಂಡಿದ್ದಾಕೆಯ ಹೆಸರು ಅನುರಾಧಾ ತಿವಾರಿ. ಇವರು ಬೆಂಗಳೂರು ಮೂಲದ ಉದ್ಯಮಿಯಾಗಿದ್ದು, ಆಕೆ ಕಂಟೆಂಡ್ ರಯಟಿಂಗ್ ಏಜೆನ್ಸಿ ನಡೆಸುತ್ತಿದ್ದಾರೆ. ಅವರ ಈ ಫೋಟೋ ಕುರಿತಂತೆ ವಾದ ಪ್ರತಿವಾದ ಎದ್ದಿದೆ. ಜಾತಿ ಸೂಚಕ ಪೋಸ್ಟ್ ಹಾಕಿದ್ದಕ್ಕೆ ಭಾರೀ ಟೀಕೆಗಳು ಕೇಳಿಬಂದಿದೆ. ಆದರೆ ಈ ಚರ್ಚೆ ಈಗ ಮೇಲ್ಜಾತಿ ಹಾಗೂ ಕೆಳಜಾತಿ ಎಂಬ ವಾದ ಹುಟ್ಟುಹಾಕಿದೆ.

ಈ ಪೋಸ್ಟ್ ಸಮರ್ಥಿಸಿಕೊಂಡಿದ್ದ ಅನುರಾಧಾ ತಿವಾರಿ ನನ್ನನ್ನು ಟೀಕಿಸುತ್ತಿರುವವರು ಕೆಳವರ್ಗದ ಜೀವಿಗಳು ಎಂದು ಉಲ್ಲೇಖಿಸಿದ್ದರಲ್ಲದೆ. ಮೇಲ್ಜಾತಿ ಮಂದಿ ವ್ಯವಸ್ಥೆಯಿಂದ ಯಾವ ಪ್ರಯೋಜನವನ್ನೂ ಪಡೆಯುವುದಿಲ್ಲ. ಎಲ್ಲವನ್ನೂ ತಮ್ಮ ಸ್ವಂತ ಅರ್ಹತೆಯ ಮೇಲೆ ಗಳಿಸುತ್ತಾರೆ ಎಂದು ಪ್ರತಿಪಾದಿಸಿದರು. ಈ ಪೋಸ್ಟ್ ಸಹ ಮತ್ತಷ್ಟು ಕಿಡಿ ಹೊತ್ತಿಸಿದೆ.
ಯಾರು ಈ ಅನುರಾಧಾ ತಿವಾರಿ
ಅನುರಾಧಾ ತಿವಾರಿ ಕಂಟೆಂಟ್ ಏಜೆನ್ಸಿಯ ಮುಖ್ಯಸ್ಥರಾಗಿದ್ದು ಹಲವು ಕಂಪನಿಗಳಿಗೆ ಬೇಕಾಗುವಂತಹ ಕಂಟೆಂಟ್‌ಗಳನ್ನು ರೆಡಿ ಮಾಡು ಕೊಡುವ ಸಂಸ್ಥೆಯನ್ನು ಕಟ್ಟಿದ್ದಾರೆ. ಮೂಲತಃ ಮುಂಬೈನವರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು 'JustBurstOut' ಎಂಬ ಸಂಸ್ಥೆ ಕಟ್ಟಿದ್ದಾರೆ. ಜೊತೆಗೆ TEDx ನಲ್ಲಿ ಅತ್ಯುತ್ತಮ ಭಾಷಣಗಾರ್ತಿಯೂ ಹೌದು. 2014ರಲ್ಲಿ ಇಂಡಿಯಾ ಟುಡೆಯ ಭಾರತದ ವಿಶಿಷ್ಟ ಉದ್ಯಮಿ ಎಂದು ಗುರುತಿಸಿದೆ. ಅವರು ಅಪೋಲೋ ಹಾಸ್ಪಿಟಲ್ಸ್, ರೇನ್ಬೋ ಹಾಸ್ಪಿಟಲ್ಸ್, ನಾರಾಯಣ ಹೆಲ್ತ್, ಅಮಿಟಿ ಯೂನಿವರ್ಸಿಟಿ, ಕೇರ್ ಹಾಸ್ಪಿಟಲ್ಸ್, ಅಪ್‌ಗ್ರ್ಯಾಡ್, ನಾಲೆಡ್ಜ್‌ಹಟ್ ಮತ್ತು ವೇದಾಂತು ಸೇರಿದಂತೆ 100 ಕ್ಕೂ ಹೆಚ್ಚು ಜಾಗತಿಕ ಕಂಪನಿಗಳಿಗೆ ತಮ್ಮ ಸಂಸ್ಥೆಯ ಮೂಲಕ ಕಂಟೆಂಟ್ ಸೇರಿ ಹಲವು ರೀತಿ ಸೇವೆ ನೀಡಿದ್ದಾರೆ.
ಇದಿಷ್ಟೇ ಅಲ್ಲ ಅವರು ಆರಂಭದಲ್ಲಿ ದುಬಾರಿ ಕೋಚಿಂಗ್ ಶುಲ್ಕವನ್ನು ಪಡೆಯಲು ಸಾಧ್ಯವಾಗದ JEE ಆಕಾಂಕ್ಷಿಗಳಿಗಾಗಿ TORQUIES ಎಂಬ ಕೋಚಿಂಗ್ ಸಂಸ್ಥೆಯನ್ನು ಪ್ರಾರಂಭಿಸಿದರು. ಇಲ್ಲಿ ಸುಲಭವಾಗಿ ಕಡಿಮೆ ಶುಲ್ಕದಲ್ಲಿ ಕೋಚಿಂಗ್ ನಡೆಸುತ್ತಿದ್ದರು. ನಂತರ ತಿವಾರಿ ಎನ್‌ಜಿಒ ಎಂಪವರಿಂಗ್ ಇಂಡಿಯನ್ ವುಮೆನ್ (ಇಐಡಬ್ಲ್ಯು) ಅನ್ನು ಸ್ಥಾಪಿಸಿದರು, ಇದು ಮಹಿಳೆಯರಿಗೆ ಮೂಲಭೂತ ಶಿಕ್ಷಣವನ್ನು ಒದಗಿಸುತ್ತದೆ.
ಆದರೆ ಈಗ ಅವರು ಹಾಕಿರುವ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಹಲವು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಲ್ಲವನ್ನು ಜಾತಿ ಆಧಾರದ ಮೇಲೆ ಏಕೆ ಅಳೆಯಬೇಕು. ಅವರ ಜಾತಿ ಅವರು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಕೆಲವರು ಅನುರಾಧಾ ಆವರ ಪರ ನಿಂತಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಬೇರೆ ಯಾವ ಜಾತಿಯವರನ್ನು ನಿಂದಿಸಿಲ್ಲ. ಅವರ ಹೆಸರನ್ನೂ ಬಳಸಿಲ್ಲ. ಆದರೆ ಉಳಿದವರು ಈ ಪೋಸ್ಟ್ ನೋಡಿ ಆಕೆಯ ವಿರುದ್ಧ ಸಿಟ್ಟಿಗೆದ್ದಿದ್ದು ಏಕೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆದರೆ ಮತ್ತೊಂದಿಷ್ಟು ಜನ ಆಕೆ ತನ್ನ ಜಾತಿಯ ಉಲ್ಲೇಖಿಸಿ ಪೋಸ್ಟ್ ಹಾಕಿದ್ದರ ಪರಿಣಾಮ ಟೀಕೆ ಕೇಳಬೇಕಾಗಿ ಬಂದಿದೆ. ಆಕೆಗೆ ಅದು ಇಷ್ಟವಿಲ್ಲದಿದ್ದರೆ ಜಾತಿ ಹೆಸರನ್ನು ತರಬಾರದಿತ್ತು. ತಂದ ಮೇಲೆ ಅದರ ವಿರುದ್ಧ ಹಾಗೂ ಪರ ಎರಡೂ ವಾದವನ್ನು ಒಪ್ಪಿಕೊಳ್ಳಬೇಕು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಆದರೆ ಅವರ ಈ ಪೋಸ್ಟ್ ಇಷ್ಟೊಂದು ವೈರಲ್ ಆಗುವುದರ ಹಿಂದೆ ಯಾವ ವಿಚಾರವೂ ಇಲ್ಲ ಎಂಬುದು ಮತ್ತೆ ಸಮಾಜದ ಮುಖ ಬಹಿರಂಗಗೊಳ್ಳುವಲ್ಲಿ ಸಾಕ್ಷಿಯಾಗಿದೆ.



Click it and Unblock the Notifications