Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಯಾರು ಈ ರಣವೀರ್ ಅಲಹಾಬಾದಿಯಾ? ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿದ್ಯಾಕೆ?
ಡಿಜಿಟಲ್ ಕಂಟೆಂಟ್ ಕ್ರಿಯೇಟರ್, ಇನ್‌ಪ್ಯೂಯೆನ್ಸರ್ ರಣವೀರ್ ಅಲಹಾಬಾದಿಯಾ ಕೀಳುಮಟ್ಟದ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ, ಇಂಡಿಯಾ ಗಾಟ್ ಲೇಟೆಂಟ್ ಶೋನಲ್ಲಿ ಆತ ನೀಡಿದ್ದ ಹೇಳಿಕೆ ಭಾರೀ ವೈರಲ್ ಆಗಿದೆ. ಹಾಗೆ ಎಫ್‌ಐಆರ್‌ಗಳು, ನೋಟಿಸ್ ಜಾರಿಯಾಗುತ್ತಲೇ ಇದೆ. ಕಳೆದೊಂದು ವಾರದಿಂದ ನೆಮ್ಮದಿ ಇಲ್ಲದ ದಿನ ಆತ ಕಂಡಿದ್ದಾನೆ.
ತಂದೆ ತಾಯಿ ಕುರಿತಂತೆ ಆತ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಕಿಡಿ ಹೊತ್ತಿದೆ. ಆತನ ಬಂಧನಕ್ಕೆ ಭಾರೀ ಒತ್ತಾಯಗಳು ಕೇಳಿಬಂದಿವೆ. ಆತನ ಜೊತೆಗೆ ಶೋ ನಡೆಸುತ್ತಿದ್ದವರಿಗೂ ಕೂಡ ಆಘಾತ ಎದುರಾಗಿದೆ. ಪಾಡ್ ಕಾಸ್ಟ್ ಚಾನಲ್ ಮೂಲಕ ಅತ್ಯಂತ ಉದ್ಯಮಿಗಳು, ರಾಜಕಾರಣಿಗಳು, ಸಾಧಕೆ ಸಂದರ್ಶನ ನಡೆಸಿದ್ದ ಆತ ಏಕಾಏಕಿ ಇಂತಹ ಕೀಳು ಮಟ್ಟದ ಹೇಳಿಕೆ ನೀಡಿ ಎಲ್ಲರ ಆಕ್ರೋಶಕ್ಕೆ ಕಾರಣನಾಗಿದ್ದಾನೆ.

ಸಮಯ್ ರೈನಾ ಎಂಬಾತ ನಡೆಸಿಕೊಡುವ ಇಂಡಿಯಾ ಗಾಟ್ ಲ್ಯಾಟೆಂಟ್ ಎಂಬ ಶೋನಲ್ಲಿ ರಣವೀರ್ ಪೋಷಕರ ಲೈಂಗಿಕತೆಯ ಕುರಿತಾಗಿ ಅಶ್ಲೀಲವಾಗಿ ಮಾತನಾಡಿದ್ದರು. ಈ ಶೋ ಯೂಟ್ಯೂಬ್‌ನಲ್ಲಿ ಹಂಚಿಕೊಂಡ ಬಳಿಕ ಎಲ್ಲರಿಗೂ ಶಾಕ್ ಕಾದಿತ್ತು, ಆದ್ರೆ ಆಕ್ರೋಶ ಹೆಚ್ಚಾದಂತೆ ಆತ ಕ್ಷಮೆಯಾಚಿಸಿದ್ದ ಇಷ್ಟಾದರೂ ಸಮಸ್ಯೆ ಬಗೆಹರಿದಿಲ್ಲ. ಮಹಿಳಾ ಆಯೋಗ ಕೂಡ ನೋಟಿಸ್ ಜಾರಿ ಮಾಡಿದ್ದರೆ, ರಾಜಕೀಯ ಗಣ್ಯರು, ಉದ್ಯಮಿಗಳು, ಯೂಟ್ಯೂಬರ್‌ಗಳು ಕೂಡ ಆತನ ಹೇಳಿಕೆ ಖಂಡಿಸಿದ್ಧಾರೆ.
ಯಾರು ಈ ರಣವೀರ್ ಅಲಹಾಬಾದಿಯಾ? ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿದ್ದೇಕೆ ಗೊತ್ತಾ?
ರಣವೀರ್ ಅಲಹಾಬಾದಿಯಾ ಈಗ ಭಾರತದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ. ಹಿಂದೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಿಂದಲೇ ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ ಪಡೆದಿದ್ದರು. ಹೀಗಾಗಿ ಬಹುಬೇಗ ಅವರ ಯೂಟ್ಯೂಬ್ ಚಾನಲ್ ಸದ್ದು ಮಾಡಿತ್ತು. ಆತ ತನ್ನ 22ನೇ ವಯಸ್ಸಿನಲ್ಲೇ ಯೂಟ್ಯೂಬ್ ಚಾನಲ್ ಆರಂಭಿಸಿದ್ದರು, ಈಗ ದೊಡ್ಡ ದೊಡ್ಡ ಬಾಲಿವುಡ್ ನಟರು ಕೂಡ ಅವರ ಪಾಡ್‌ಕಾಸ್ಟ್‌ನಲ್ಲಿ ಬಂದು ಹೋಗಿದ್ದಾರೆ.
ಈ ಹಿಂದೆ ಅವರು ಕಲಾವಿದೆ ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾ ಅವರ ಸಂದರ್ಶನದ ವೇಳೆ ತನ್ನ ಉಪನಾಮ ಹಾಗೂ ಪಾಕಿಸ್ತಾನದೊಂದಿಗಿನ ಸಂಬಂಧ ಕುರಿತು ಹೇಳಿದ್ದರು. ಅವರು ಅಲಹಾಬಾದ್‌ನಿಂದ ಮುಂಬೈಗೆ ಹೇಗೆ ಬಂದರು ಎಂಬ ಕುರಿತು ಹಾಗೆ ಪಾಕಿಸ್ತಾನದ ನಂಟಿನ ಕುರಿತಂತೆಯೂ ವಿವರಿಸಿದ್ದರು.
ನನ್ನ ಕುಟುಂಬ ಮೂಲತಃ ಪಾಕಿಸ್ತಾನದಿಂದ ಇಲ್ಲಿಗೆ ಬಂದಿದೆ ಎಂದು ನಮ್ಮ ಕುಟುಂಬದಲ್ಲಿ ಆಗಾಗ ಹೇಳುತ್ತಿದ್ದರು. ಪಾಕಿಸ್ತಾನದಲ್ಲಿ ನಮ್ಮ ಮುತ್ತಾತ ಒಬ್ಬರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಆಗೆಲ್ಲಾ ಸಾಧನೆ ಮಾಡಿದವರು, ಶಿಕ್ಷಣದಲ್ಲಿ ಉನ್ನತ ಸ್ಥಾನ ಪಡೆದವರಿಗೆ ಬಿರುದು ಕೊಡುತ್ತಿದ್ದರು. ಹೀಗಾಗಿ ನನ್ನ ಮುತ್ತಾತನಿಗೆ ಇಲಾಮ್ ವಾಡಿ ಎಂಬ ಬಿರುದು ನೀಡಲಾಗಿತ್ತು. ಆದರೆ ಕಾಲಾಂತರದಲ್ಲಿ ನಾವು ಭಾರತಕ್ಕೆ ಬಂದು ನೆಲೆಸಿದೆವು. ತದನಂತರ ನಮ್ಮ ಹೆಸರಿನ ಮುಂದೆ ಅಲ್ಲಾಹವಾದಿಯಾ ಎಂದು ಬದಲಾಯಿತು. ಆದ್ರೆ ಇದು ನಿಜ ಎಂದು ನನಗೆ ತಿಳಿದಿಲ್ಲ ಎಂದು ಅವರು ಹೇಳಿಕೊಂಡಿದ್ದರು.
'ಬಿಯರ್‌ಬೈಸೆಪ್ಸ್' ಎಂಬುದಾಗಿಯೇ ಅವರು ಫೇಮಸ್ ಆಗಿದ್ದರು. ಆದ್ರೆ ಈಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅವರೊಬ್ಬರೆ ಅಲ್ಲ ಅದೇ ದಿನ ಅದೇ ಶೋನಲ್ಲಿ ಜಸ್ಪ್ರೀತ್ ಸಿಂಗ್ ಎಂಬಾತ ಕೂಡ ಕೇರಳದ ಕುರಿತು ಅವಹೇಳನಕಾರಿ ಮಾತನಾಡಿದ್ದರು. ಇದು ಕೇರಳ ಮಂದಿಯ ಭಾವನೆಗೆ ಧಕ್ಕೆ ಉಂಟಾಗಿದ್ದು, ಆತನ ವಿರುದ್ಧವೂ ಆಕ್ರೋಶ ಕೇಳಿಬಂದಿದೆ. ಆತನ 100ರಷ್ಟು ಸಾಕ್ಷರತೆ ಹೊಂದಿರುವ ಕೇರಳವನ್ನು ಶಿಕ್ಷಣದ ಆಧಾರದ ಮೇಲೆಯೇ ಕುಹಕವಾಗದ್ದ, ತನ ವಿರುದ್ಧ ಕೂಡ ಈಗ ಆಕ್ರೋಶ ಕೇಳಿಬಂದಿದೆ. ಆಗೆ ಈ ಶೋ ಅನ್ನು ಶಾಶ್ವತವಾಗಿ ನಿಷೇಧಿಸುವಂತೆ ಕೂಗು ಕೇಳಿಬಂದಿದೆ.



Click it and Unblock the Notifications