Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
17 ವರ್ಷ, ಒಂದೇ ಕನಸು! ಚೆನಾಬ್ ಬ್ರಿಡ್ಜ್ ಹಿಂದೆ ಬೆಂಗಳೂರು ಮಹಿಳೆ.. ಯಾರು ಈ ಮಾಧವಿ ಲತಾ?
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಬ್ರಿಡ್ಜ್ (Chenab Bridge) ಲೋಕಾರ್ಪಣೆಗೊಂಡಿದೆ. ಈ ಮೂಲಕ ಕೊನೆಗೂ ಹಲವು ವರ್ಷಗಳ ಕಾಲ ನಡೆದ ಕಾಮಗಾರಿ ಪೂರ್ಣಗೊಂಡಿದೆ. ಇದೀಗ, ವಿಶ್ವದ ಅತಿ ಎತ್ತರದ ಈ ಸೇತುವೆ ರೈಲು ಸಂಚಾರಕ್ಕೆ ಮುಕ್ತವಾಗಿದೆ. ವಿಶೇಷವೆಂದರೆ, ಚೆನಾಬ್ ಬ್ರಿಡ್ಜ್ ಯಶಸ್ಸಿನ ಹಿಂದೆ ಬೆಂಗಳೂರು ಪ್ರಾಧ್ಯಾಪಕಿಯ ಶ್ರಮವಿದೆ. ಹೌದು, ಜಗತ್ತಿನ ಎಂಜಿನಿಯರಿಂಗ್ ಅದ್ಭುತ ಎಂದು ಪರಿಗಣಿಸಿರುವ ಈ ಕಮಾನು ಸೇತುವೆ ನಿರ್ಮಾಣದಲ್ಲಿ ಬೆಂಗಳೂರಿನ ಐಐಎಸ್‌ಸಿ (Bengaluru IISc) ಪ್ರೊಫೆಸರ್ ಪಾತ್ರವೂ ಇದೆ. 17 ವರ್ಷ ಶ್ರಮಿಸಿದ್ದ ಮಾಧವಿ ಲತಾ ಯಾರು? ಇವರ ಪ್ರಮುಖ ಪಾತ್ರ ಏನು? ಎಂಬ ಬಗ್ಗೆ ನೀವು ತಿಳಿಯಲೇಬೇಕು.
ಪಹಲ್ಲಾಮ್ ಉಗ್ರರ ದಾಳಿ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಜೂನ್ 6 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದರು. ಭಾರತೀಯ ರೈಲ್ವೆ ಇಲಾಖೆ ಚಿನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಾಣ ಮಾಡಿದೆ. ಜಮ್ಮು ಕಾಶ್ಮೀರವನ್ನು ಭಾರತದ ಉಳಿದ ಭಾಗದ ಜೊತೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ಇದಾಗಿದೆ. ಈ ರೈಲ್ವೆ ಸೇತುವೆಯನ್ನು ಕಠಿಣ ಭೂಕಂಪ ಮತ್ತು ಬಿರುಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಈ ಬ್ರಿಡ್ಜ್ ನಿರ್ಮಾಣದ ಹಿಂದೆ ಬೆಂಗಳೂರಿನ ಐಐಎಸ್‌ಸಿ ಮಹಿಳಾ ಪ್ರೊಫೆಸರ್ ಮಾಧವಿ ಲತಾ (Madhavi Latha) ಅವರ ಪಾತ್ರ ಪ್ರಮುಖವಾಗಿದೆ.

ಐಫಲ್ ಟವರ್‌ಗಿಂತ ಎತ್ತರದ ರೈಲ್ವೆ ಬ್ರಿಡ್ಜ್
ಚೆನಾಬ್ ರೈಲ್ವೆ ಬ್ರಿಡ್ಜ್ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ. ಇದು ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. ಚೆನಾಬ್ ಸೇತುವೆಯು ಕಾಶ್ಮೀರ ಕಣಿವೆಯಲ್ಲಿ ವರ್ಷಪೂರ್ತಿ ರೈಲು ಸಂಪರ್ಕ ಕಲ್ಪಿಸುತ್ತದೆ. ಇದು ಚೆನಾಬ್ ನದಿಯಿಂದ 359 ಮೀಟರ್ ಎತ್ತರ, 1.3 ಕಿಲೋಮೀಟರ್ ಉದ್ದ (1,315 ಮೀ.) ಮತ್ತು 15 ಬಿಲಿಯನ್ (1,486 ಕೋಟಿ ರೂಪಾಯಿ) ವೆಚ್ಚದೊಂದಿಗೆ ನಿರ್ಮಾಣಗೊಂಡಿದೆ. ಇದು ಶ್ರೀನಗರ ಮತ್ತು ಜಮ್ಮು ಹೆದ್ದಾರಿಯ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ. ಗಡಿ ಪ್ರದೇಶಗಳಿಗೆ ಮಿಲಿಟರಿ ಲಾಜಿಸ್ಟಿಕ್ಸ್ ಅನ್ನು ವೇಗಗೊಳಿಸುತ್ತದೆ.
ಚೆನಾಬ್ ರೈಲ್ವೆ ಸೇತುವೆ ನಿರ್ಮಾಣದಲ್ಲಿ ಲತಾ ಪಾತ್ರ
ಡಾ.ಜಿ. ಮಾಧವಿ ಲತಾ ಅವರು ಚೆನಾಬ್ ಸೇತುವೆ ನಿರ್ಮಾಣ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪ್ರಾಧ್ಯಾಪಕಿ. 2008ರಲ್ಲಿ ಈ ಯೋಜನೆಯ ಕಾಮಗಾರಿ ಪ್ರಾರಂಭವಾಗಿತ್ತು. ಮಾಧವಿ ಲತಾ ಅವರು ಕಳೆದ 17 ವರ್ಷಗಳ ಕಾಲ ಚೆನಾಬ್ ಸೇತುವೆ ಯೋಜನೆಯಲ್ಲಿ ಭೂತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಭೂಕಂಪನ ವಲಯ, ಕಡಿದಾದ ಮತ್ತು ಸಡಿಲವಾದ ಮಣ್ಣು, ವೇಗವಾಗಿ ಹರಿಯುವ ನದಿಯ ಸವಾಲಿನ ಪ್ರದೇಶದಲ್ಲಿ ಈ ಸೇತುವೆಯ ನಿರ್ಮಾಣವು ದೊಡ್ಡ ಸವಾಲಾಗಿತ್ತು. ಈ ಪರಿಸ್ಥಿತಿಗಳಲ್ಲಿ ಅಡೆತಡೆಗಳ ಮೇಲೆ ಅಧ್ಯಯನ ನಡೆಸಿ, ಅದನ್ನು ಎದುರಿಸಲು ಅಗತ್ಯ ಯೋಜನೆಗಳನ್ನು ರೂಪಿಸುವಲ್ಲಿ ಮಾಧವಿ ಲತಾ ಅವರ ಕೊಡುಗೆ ಅಪಾರ.
ಯಾರು ಈ ಮಾಧವಿ ಲತಾ?
ಮಾಧವಿ ಲತಾ ಅವರು ಆಂಧ್ರದ ಪ್ರಕಾಶಂ ಜಿಲ್ಲೆಯ ಯದುಗುಂಡ್ಲಪಾಡು ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ HAG ಪ್ರಾಧ್ಯಾಪಕರಾಗಿದ್ದಾರೆ. ಇವರು ಐಐಎಸ್‌ಸಿನ ಮೊದಲ ಮಹಿಳಾ ಪ್ರಾಧ್ಯಪಕಿ ಆಗಿದ್ದಾರೆ. ಇವರು ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ (ಬಿ.ಟೆಕ್ ಸಿವಿಲ್ ಎಂಜಿನಿಯರಿಂಗ್) ಮುಗಿಸಿದರು. ವಾರಂಗಲ್‌ನ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಚಿನ್ನದ ಪದಕದೊಂದಿಗೆ ಎಂ.ಟೆಕ್ (ಸಿವಿಲ್ ಎಂಜಿನಿಯರಿಂಗ್) ಮಾಡಿದ್ದಾರೆ. ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಮದ್ರಾಸ್‌ನಿಂದ ಪಿಎಚ್‌ಡಿ (1995-2000) ಪಡೆದಿದ್ದಾರೆ. 2003 ರಿಂದ ಈವರೆಗೆ ಐಐಎಸ್‌ಸಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಮಾಧವಿ ಲತಾ ಮುಡಿಗೆ ಹಲವು ಪ್ರಶಸ್ತಿ
ಮಾಧವಿ ಲತಾ ಅವರು ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಅಧ್ಯಕ್ಷೆ ಆಗಿದ್ದಾರೆ. ಕಳೆದ ವರ್ಷಗಳಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2021ರಲ್ಲಿ ಭಾರತೀಯ ಭೂ ತಾಂತ್ರಿಕ ಸೊಸೈಟಿಯಿಂದ ಅತ್ಯುತ್ತಮ ಮಹಿಳಾ ಭೂ ತಾಂತ್ರಿಕ ಸಂಶೋಧಕ ಪ್ರಶಸ್ತಿ ಲಭಿಸಿದೆ. 2022ರಲ್ಲಿ ಭಾರತದ STEAMನಲ್ಲಿ ಟಾಪ್ 75 ಮಹಿಳೆಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇವರು 17 ವರ್ಷ ಚೆನಾಬ್ ಬ್ರಿಡ್ಜ್ ಸೇತುವೆಯ ಯೋಜನೆ, ವಿನ್ಯಾಸ ಮತ್ತು ನಿರ್ಮಾಣದಲ್ಲಿ ಶ್ರಮಿಸಿದ್ದಾರೆ.



Click it and Unblock the Notifications
