Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
3 ಸಾವಿರ ಕೋಟಿಯ ಬ್ರಹತ್ ಸಾಮ್ರಾಜ್ಯ ಕಟ್ಟಿದ್ದ ಸಿ.ಜೆ ರಾಯ್: ಮಾರುತಿ 800 ಕಾರಿಗೆ ₹10 ಲಕ್ಷ ನೀಡಿದ್ದ ಉದ್ಯಮಿ!
ಬೆಂಗಳೂರು ರಿಯಲ್ ಎಸ್ಟೇಟ್ ಲೋಕದ ದಿಗ್ಗಜ, ಖ್ಯಾತ ಉದ್ಯಮಿ ಮತ್ತು ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಹಲವರಲ್ಲಿ ಆಘಾತ ತರಿಸಿದೆ. ಇಂದು ಐಟಿ ದಾಳಿ ನಡುವೆ ಅವರು ಈ ರೀತಿಯ ಹೆಜ್ಜೆ ಇಟ್ಟಿದ್ದಾರೆ ಎಂದು ವರದಿಯಾಗಿವೆ. ತಕ್ಷಣ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ ಎಂದು ವರದಿಯಾಗಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್‌ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ನಡೆಸಿದರು. ಐಟಿ ದಾಳಿಗೆ ಸಂಬಂಧಿಸಿದ ಭಯ ಮತ್ತು ಒತ್ತಡದಿಂದಾಗಿ ಅವರು ಆತ್ಮಹತ್ಯೆಗೆ ಮುಂದಾದರು ಎಂದು ವರದಿಗಳಾಗಿವೆ. ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ, ಆದರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಅವರ ದಿಢೀರ್ ನಿಧನದ ಸುದ್ದಿ ಆಘಾತ ತಂದಿದೆ.

ಸಿಜೆ ರಾಯ್ ಎಂದು ಕರೆಯಲ್ಪಡುವ ಡಾ. ರಾಯ್ ಚಿರಿಯಂಕಂದತ್ ಜೋಸೆಫ್ ಬೆಂಗಳೂರು ಸೇರಿ ದೇಶದ ವಿವಿಧ ಕಡೆ ತಮ್ಮ ರಿಯಲ್ ಎಸ್ಟೇಟ್ ಉದ್ಯಮ ವಿಸ್ತರಿಸಿದ್ದಾರೆ, ಹಾಗೆ ವಿದೇಶದಲ್ಲೂ ತಮ್ಮ ಉದ್ಯಮ ಮುನ್ನಡೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮುಕ್ತಾಯಗೊಂಡಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದ ಪ್ರಥಮ ಬಹುಮಾನವಾದ 50 ಲಕ್ಷ ರೂಪಾಯಿ ಕೂಡ ಅವರೇ ನೀಡಿದ್ದರು.
ಅವರು ಬೆಂಗಳೂರಿನಲ್ಲಿ ದೊಡ್ಡ ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದರು. ಸಿಜೆ ರಾಯ್ 65 ಕ್ಕೂ ಹೆಚ್ಚು ಯೋಜನೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಶೂನ್ಯ-ಸಾಲದ ವ್ಯವಹಾರ ಮಾದರಿಯನ್ನು ಅನುಸರಿಸಲು ಹೆಸರುವಾಸಿಯಾಗಿದ್ದರು. ಅವರ ಬಳಿ ವಿಶ್ವದ ಐಷಾರಾಮಿ ಕಾರುಗಳ ಸಂಗ್ರಹವೇ ಇತ್ತು, ಕಳೆದ ವರ್ಷ ಅವರು ತಮ್ಮ 12ನೇ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದರು.
ಕೇರಳದ ಕೊಚ್ಚಿ ಮೂಲದ ಅವರು ಬೆಂಗಳೂರಿನಲ್ಲಿ ನೆಲೆಸಿ ದಶಕಗಳೇ ಕಳೆದಿವೆ. ಸಣ್ಣ ರಿಯಲ್ ಎಸ್ಟೇಟ್ ಉದ್ಯಮದಿಂದ ಆರಂಭಗೊಂಡಿದ್ದ ಪ್ರಯಾಣ ಈಗ ವಿದೇಶದಲ್ಲೂ ಸೇರಿ ನೂರಾರು ಕೋಟಿ ಉದ್ಯಮ ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಮಾರುತಿ 800 ಕಾರಿಗೆ 10 ಲಕ್ಷ ರೂ.ನೀಡಿದ್ದ ಉದ್ಯಮಿ
ಇತ್ತೀಚಿಗೆ ಅವರು ತಮ್ಮ ಮೊದಲ ಕಾರು ಮಾರುತಿ 800 ಅನ್ನು ಮರಳಿ ಪಡದಿದ್ದರು, ಬರೋಬ್ಬರಿ 10 ಲಕ್ಷ ರೂಪಾಯಿ ನೀಡಿ ಇದನ್ನು ಖರೀದಿಸಿದ್ದರು. 1994 ರಲ್ಲಿ ಖರೀದಿಸಿದ್ದ 800 ಕಾರನ್ನು ಮರಳಿ ಪಡೆಯಲು ಅವರು ಯೋಜನೆ ರೂಪಿಸಿದ್ದರು. ತಮ್ಮ ಮೊದಲ ಕಾರನ್ನು ಹುಡುಕಿ ತಂದವರಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರು. ಅವರನ್ನು ತಂಡವೊಂದು ಸಂಪರ್ಕಿಸಿತ್ತು. ಈ ಕಾರು ಚಲಾವಣೆಯಲ್ಲಿ ಇಲ್ಲದೆ ಮೂಲೆಯಲ್ಲಿ ಬಿದ್ದಿತ್ತು. ಅದನ್ನು 10 ಲಕ್ಷ ನೀಡಿ ಖರೀದಿಸಿದರು.
ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಆಸ್ತಿ
ಸಿಜೆ ರಾಯ್ ಬರೋಬ್ಬರಿ 3 ಸಾವಿರ ಕೋಟಿ ರೂ.ನ ದೊಡ್ಡ ಸಾಮ್ರಾಜ್ಯ ಕಟ್ಟಿದ್ದಾರೆ. ಬೆಂಗಳೂರು, ಕೇರಳ, ದುಬೈನಲ್ಲೂ ರಿಯಲ್ ಎಸ್ಟೇಟ್ ಉದ್ಯಮ ಹೊಂದಿದ್ದಾರೆ. ಹಾಗೆ ಸಿನಿಮಾ ನಿರ್ಮಾಣದಿಂದ ಹಿಡಿದು ಮನೊರಂಜನಾ ವಲಯದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು.



Click it and Unblock the Notifications

