Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಂಖ್ಯಾಶಾಸ್ತ್ರ ಪ್ರಕಾರ ಯಾವ ಬಗೆಯ ಹರಳು ಧರಿಸಿದರೆ ನಿಮಗೆ ಮಂಗಳಕರ?
ಹರಳಿನ ಉಂಗುರ ಧರಿಸುವಾಗ ಹೆಚ್ಚಿನವರು ಹಾಗೇ ಸುಮ್ಮನೆ ಧರಿಸುವುದಿಲ್ಲ. ಜನ್ಮ ದಿನಾಂಕಕ್ಕೆ ತಕ್ಕಂತೆ ಧರಿಸುವುದರಿಂದ ಒಳ್ಳೆಯದು ಎಂದು ಹೇಳಲಾಗುವುದು.ಸಂಖ್ಯಾ ಶಾಸ್ತ್ರದಲ್ಲಿ ನಮ್ಮ ಜನ್ಮ ದಿನಾಂಕದ ಆಧಾರದ ಮೇಲೆ 9 ಸಂಖ್ಯೆಗಳಿವೆ. ಈ 9 ಸಂಖ್ಯೆಗಳಿಗೂ ನವಗ್ರಹಗಳಿಗೂ ಸಂಬಂಧವಿದೆ. ಒಂದೊಂದು ಸಂಖ್ಯೆ ಒಂದೊಂದು ಗ್ರಹವನ್ನು ಪ್ರತಿನಿಧಿಸುತ್ತದೆ. ನಿಮ್ಮ ಜನ್ಮ ದಿನಾಂಕಕ್ಕೆ ತಕ್ಕಂತೆ ಹರಳು ಧರಿಸಿದರೆ ಒಳ್ಳೆಯದು. ಇದರಿಂದ ನಿಮ್ಮ ಸಂಖ್ಯೆಯ ಗ್ರಹದ ಸಂಪೂರ್ಣ ಶುಭಫಲ ಪಡೆಯಬಹುದು.

ಸಂಖ್ಯೆ 1
1, 10, 19 ರಂದು ಜನಿಸಿದ ವ್ಯಕ್ತಿಯ ಆಡಳಿತ ಗ್ರಹ ಸೂರ್ಯ. ಸೂರ್ಯ ಗ್ರಹಗಳ ಅಧಿಪತಿ, ಪರಾಕ್ರಮದ ಸಂಕೇತ. ಸಂಖ್ಯಾ ಶಾಸ್ತ್ರದ ಪ್ರಕಾರ ಒಂದು ಸಂಖ್ಯೆ ನಿಮ್ಮದಾಗಿದ್ದರೆ ನೀವು ನೀಲಮಣಿ ಮತ್ತು ಹಳದಿ, ಪಚ್ಚೆ ಹರಳನ್ನು ಧರಿಸುವುದು ಒಳ್ಳೆಯದು. ಈ ಹರಳುಗಳು ನಿಮಗೆ ಮಂಗಳಕರ ಫಲಿತಾಂಶ ನೀಡುವುದು.
ಸಂಖ್ಯೆ 2
2, 11, 20 ಮತ್ತು 29 ರಂದು ಜನಿಸಿದವರ ಅಧಿಪತಿ ಮಂಗಳ ಗ್ರಹ. ಸಂಖ್ಯಾ ಶಾಸ್ತ್ರ ಪ್ರಕಾರ 2 ಸಂಖ್ಯೆ ಬರುವವರ ಅಧಿಪತಿ ಚಂದ್ರ. ನೀವು ಮುತ್ತಿನ ಆಭರಣಗಳನ್ನು ಧರಿಸುವುದು ಒಳ್ಳೆಯುವುದು ಎಂದು ಹೇಳಲಾಗುವುದು. ಮುತ್ತು ಧರಿಸುವುದರಿಂದ ಮುಂಗೋಪ ನಿಯಂತ್ರಣಕ್ಕೆ ಬರುತ್ತದೆ. ದಲ್ಲದೇ ರಾಡಿಕ್ಸ್ 2 ಗಾಗಿ ಮೋತಿ ರತ್ನ ಸಹಿಷ್ಣುತೆ ಮತ್ತು ಪ್ರೀತಿಯನ್ನು ತೋರಿಸುತ್ತದೆ.
ಸಂಖ್ಯೆ 3
3, 12, 21 ಮತ್ತು 30 ರಂದು ಜನಿಸಿದ ವ್ಯಕ್ತಿಗೆ ಸಂಖ್ಯಾಶಾಸ್ತ್ರ ಪ್ರಕಾರ 3 ಸಂಖ್ಯೆ ಬರುತ್ತದೆ, 3 ಸಂಖ್ಯೆಗೆ ರಾಹು ಅಧಿಪತಿ. ಹಿಂದೂ ನಂಬಿಕೆ ಪ್ರಕಾರ ರಾಹು ಶುಭ ಫಲವನ್ನು ನೀಡುವ ಗ್ರಹವಾಗಿದೆ. ಆದ್ದರಿಂದ ಕೆಂಪು ಹರಳು, ಹಳದಿ ಅಥವಾ ಹವಳದ ಆಭರಣ ನಿಮಗೆ ಶುಭವಾಗಿದೆ.
ಸಂಖ್ಯೆ 4
4, 13, 22 ಮತ್ತು 31 ರಂದು ಜನಿಸಿದರೆ ಸಂಖ್ಯಾ ಶಾಸ್ತ್ರ ಪ್ರಕಾರ ನಿಮ್ಮ ಸಂಖ್ಯೆ 4 ಆಗಿದೆ. ನಿಮಗೆ ನೀಲಮಣಿ ಅದೃಷ್ಟದ ಹರಳಾಗಿದೆ, ನೀಲಮಣಿ ದುಬಾರಿ, ಆದ್ದರಿಂದ ನೀವು ಪಂಚ ಲೋಹದ ಆಭರಣ ಕೂಡ ಧರಿಸಬಹುದು.
ಸಂಖ್ಯೆ 5
5, 14 ಮತ್ತು 23 ರಂದು ಜನಿಸಿದವರು 5 ಸಂಖ್ಯೆಯನ್ನು ಹೊಂದಿರುತ್ತಾರೆ. ನಿಮ್ಮ ಆಡಳಿತ ಗ್ರಹ ಬುಧವಾಗಿದ್ದು ನಿಮಗೆ ಪಚ್ಚೆ ಹರಳು ಶುಭವಾಗಿದೆ . ಬುಧ ನಮ್ಮ ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವ ಗ್ರಹವಾಗಿದೆ. ಬುಧದ ಪ್ರಭಾವ ಬಲವಾಗಿದ್ದರೆ ನಮ್ಮ ಸಂವಹನ ಸಾಮರ್ಥ್ಯದಿಂದ ಮುಂದುವರೆಯಲು ಸಾಧ್ಯವಾಗುವುದು.
ಸಂಖ್ಯೆ 6
6, 15 ಮತ್ತು 24 ರ ಜನ್ಮ ಸಂಖ್ಯೆಗಳು 6. 6 ಸಂಖ್ಯೆ ಹೊಂದಿರುವವರಿಗೆ ಶುಕ್ರ ಆಡಳಿತ ಗ್ರಹವಾಗಿದೆ. ಇದು ವ್ಯಕ್ತಿಯ ಜಾತಕದಲ್ಲಿ ಶುಭ ಯೋಗವನ್ನು ಸೃಷ್ಟಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಸಂಖ್ಯೆ 6 ರ ಜನ್ಮ ದಿನಾಂಕದ ಪ್ರಕಾರ, ಮಂಗಳಕರ. ನಿಮಗೆ ವಜ್ರದ ಆಭರಣ ಶುಭವಾಗಿದೆ.
ಸಂಖ್ಯೆ 7
7, 16 ಮತ್ತು 25 ರಂದು ಜನಿಸಿದ ಜನರು 7 ರ ಜನ್ಮ ಸಂಖ್ಯೆಯನ್ನು ಹೊಂದಿರುತ್ತಾರೆ. ಈ ಸಂಖ್ಯೆಯವರಿಗೆ ಬೆಳ್ಳಿ ಅತ್ಯಂತ ಶುಭವಾಗಿದೆ. ನಿಮ್ಮ ಕೈಯಲ್ಲಿ ಬೆಳ್ಳಿಯ ಉಂಗುರ ಅಥವಾ ಕಡಗ ಇದ್ದರೆ ಒಳ್ಳೆಯದು. ಬೆಳ್ಳಿಯ ಉಂಗುರದಲ್ಲಿ ಯಾವುದೇ ಹರಳು ಇರುವ ಆಭರಣ ಧರಿಸಬಹುದು.
ಸಂಖ್ಯೆ 8
8, 17 ಮತ್ತು 26 ರಂದು ಜನಿಸಿದ ಜನರು 8 ರ ಜನ್ಮ ಸಂಖ್ಯೆಯನ್ನು ಹೊಂದಿರುತ್ತಾರೆ. ಜನ್ಮ ಸಂಖ್ಯೆ 8 ರ ಆಡಳಿತ ಅಧಿಪತಿ ಶನಿ. ನಿಮಗೆ ನೀಲಮಣಿ ಹರಳು ಶುಭವಾಗಿದೆ. ನೀವು ಕಪ್ಪು ದಾರ ಅಥವಾ ಕಪ್ಪು ಮಣಿಗಳನ್ನು ಧರಿಸುವುದು ಕೂಡ ಶುಭವಾಗಿದೆ.
ಸಂಖ್ಯೆ 9
9, 18 ಮತ್ತು 27 ರಂದು ಜನಿಸಿದ ಜನರು 9 ಸಂಖ್ಯೆಯನ್ನು ಹೊಂದಿರುತ್ತಾರೆ. ಈ ಸಂಖ್ಯೆ ಬರುವವರಿಗೆ ಹವಳ ನಿಮ್ಮ ಅದೃಷ್ಟದ ಕಲ್ಲು. ನಿಮ್ಮ ಬಳಿ ಹಳವದ ಆಭರಣವಿದ್ದರೆ ಅದು ನಿಮಗೆ ಶುಭವಾಗಿದೆ.



Click it and Unblock the Notifications
