Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ನಿತ್ಯಾನಂದನ ಕೈಲಾಸ ಎಲ್ಲಿದೆ, ಈ ಗುರು ಪೂರ್ಣಿಮೆಯಂದು ಜಗತ್ತಿಗೆ ತಿಳಿಯುವುದೇ?
ಬಿಡದಿಯಿಂದ ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಅನ್ನೋ ದೇಶದಲ್ಲಿ ವಿರಾಜಮಾನನಾಗಿದ್ದಾನೆ. ಆದರೆ ಈ ಕೈಲಾಸ ದೇಶ ಎಲ್ಲಿದೆ ಅನ್ನೋದು ಇದುವರೆಗೂ ಯಾರಿಗೂ ತಿಳಿದಿಲ್ಲ. ಕೊನೆಗೂ ಈ ಕೈಲಾಸ ದೇಶದ ವಿಳಾಸ ಬಯಲಾಗಲಿದೆ. ಜುಲೈ 21ಕ್ಕೆ ನಿತ್ಯಾನಂದ ಮಹತ್ವದ ಘೋಷಣೆ ಮಾಡಲಿದ್ದಾರೆ.

ನಿತ್ಯಾನಂದ ಹೆಸರು ಯಾರು ತಾನೆ ಕೇಳಿಲ್ಲ, ಸ್ವಯಂ ಘೋಷಿಸತ ದೇವಮಾನವ ನಿತ್ಯಾನಂದ ಬಿಡದಿಯಲ್ಲಿ ರಾಜಾರೋಷವಾಗಿ ಸಾಮ್ರಾಜ್ಯ ಕಟ್ಟಿಕೊಂಡಿದ್ದಾಗ ಲೈಂಗಿಕ ಹಗರಣ ಪ್ರಕರಣದಲ್ಲಿ ಸಿಕ್ಕಾಕಿಕೊಂಡು ಭಾರತ ಬಿಟ್ಟು ಮಾಯವಾಗಿದ್ದ, ಆದರೆ ಅದಾದ ಬಳಿಕ ನಿತ್ಯಾಂತ ಕೈಲಾಸ ಎಂಬ ದೇಶ ಕಟ್ಟಿಕೊಂಡಿದ್ದೇನೆ ಎಂದು ವೀಡಿಯೋ ಮೂಲಕ ಹೇಳಿದಾಗ ಯಾರೂ ನಂಬಿರಲಿಲ್ಲ, ನಂತರ ಆತ ಎಲ್ಲಿಯೋ ಕೈಲಾಸ ಎಂದು ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದಾನೆ ಎಂಬುವುದು ಹೊರ ಜಗತ್ತಿಗೆ ತಿಳಿಯಿತು. ಕೈಲಾಸಕ್ಕೆ ಸಂಬಂಧಿಸಿದ ಅನೇಕ ವೀಡಿಯೋಗಳ ಸ್ವತಃ ನಿತ್ಯಾನಂದರೇ ಹರಿಬಿಡುತ್ತಾ ಇರ್ತಾನೆ.
ಒಂದೊಂದು ವೀಡಿಯೋವೂ ಟ್ರೋಲ್ ಆಗ್ತಾ ಇರುತ್ತದೆ, ಅರೇ ಈ ಕೈಲಾಸ ಹೇಗಿರುತ್ತೆ ಒಮ್ಮೆ ಹೋಗಿ ನೋಡಿ ಬರೋಣ ಎನ್ನುವವರಿಗೆ ಅದರ ಅಡ್ರೆಸ್ ಗೊತ್ತಿರಲಿಲ್ಲ, ಅಲ್ಲಿಗೆ ಹೋಗಲು ಪಾಸ್‌ಪೋರ್ಟ್, ವೀಸಾ ಬೇಕೆಂಬುವುದೂ ಗೊತ್ತಿಲ್ಲ, ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯದಲ್ಲಿಯೇ ಉತ್ತರ ಸಿಗಬಹುದೇನೋ, ಏಕೆಂದರೆ ಈ ಗುರು ಪೂರ್ಣಿಮಾ ದಿನದಂದು ನಿತ್ಯಾನಂತ ತಾನಿರುವ ಕೈಲಾಸದ ವಿಳಾಸ ತಿಳಿಸಲಿದ್ದಾನೆ.
ವಿಚಿತ್ರ ವೇಷ ಭೂಷಣಗಳ ಮೂಲಕ ಗಮನ ಸೆಳೆಯುತ್ತಿರುವ ಸ್ವಯಂ ಘೋಷಿತ ದೇವ ಮಾನವ
ನಿತ್ಯಾನಂದ , ಅವನ ಅನುಯಾಯಿಗಳ ವೇಷ ಭೂಷಣ ನೋಡಿದರೆ ಅಚ್ಚರಿಯಾಗುತ್ತದೆ. ನಮ್ಮ ಪೌರಾಣಿಕ ಕತೆಯಲ್ಲಿ ಬರುವ ವೇಷಗಳಂತೆ ವೇಷ ಧರಿಸುತ್ತಾರೆ, ಅಲ್ಲದೆ ನಿತ್ಯಾನಂತ ಪರಮಾತ್ಮ ಎಂದರೆ ಅದು ನಾನೇ ಎಂದು ನಂಬಿಸಲು ಹೊರಟಿದ್ದಾನೆ ಎಂಬುವುದು ನೋಡಿದಾಗಲೇ ತಿಳಿಯುತ್ತದೆ. ನಿತ್ಯಾನಂದಿನಿಗೆ ದೇಶ-ವಿದೇಶದಿಂದ ಅನುಯಾಯಿಗಳು ಇದ್ದಾರೆ, ಹಾಗಂತ ಅವರೇನು ಲೋಕಜ್ಞಾನ ಇಲ್ಲದವರು ಎಂದು ಹೇಳಲು ಸಾಧ್ಯವಿಲ್ಲ. ಚೆನ್ನಾಗ ಓದಿಕೊಂಡಿರುವ ದೊಡ್ಡ ಹುದ್ದೆಯಲ್ಲಿರುವವರು ಕೂಡ ಈತನ ಅನುಯಾಯಿಗಳಾಗಿರುವುದು ನೋಡುವಾಗ ಅಚ್ಚರಿಯಾಗುತ್ತೆ. ಅದ್ಹೇಗೆ ಈತನ ಮೋಡಿಗೆ ಸಿಲುಕಿದ್ದಾರೋ, ವಿಜ್ಞಾನಿಗಳಾಗಿ ಗುರುತಿಸಿಕೊಂಡವರೂ ಇವನ ಅನುಯಾಯಿಯಾಗಳಾಗಿದ್ದಾರೆ ಗೊತ್ತಾ? ಏಕೆ ಇಂಥ ದೇವ ಮಾನವರಿಗೆ ಜನ ಮರಳಾಗುತ್ತಾರೋ ಗೊತ್ತಿಲ್ಲ...
ಅತ್ಯಾಚಾರ ಪ್ರಕರಣದಲ್ಲಿದ್ದ ಸಿಲುಕಿದ್ದ ವ್ಯಕ್ತಿ ಸ್ಟ್ರೈಟ್ ಬಡ್ತಿ ಪಡೆದಿದದ್ದು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಅಧಿಪತಿಯಾಗಿ
2019ರಲ್ಲಿ ಈತನ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು, ಅದರ ಮೊದಲು ಈತನ ಹಾಗೂ ನಟಿ ಖಾಸಗಿ ವೀಡಿಯೋಗಳೂ ಲೀಕ್ ಆಗಿತ್ತು. ಪೊಲೀಸರು ನಿತ್ಯಾನಂದನ ಹಿಡಿಯಲು ಹೋದಾಗ ಅಲ್ಲಿಂದ ಎಸ್ಕೇಪ್ ಆಗಿದ್ದ. ನಂತರ ಈತ ಎಲ್ಲಿದ್ದಾನೆ ಎಂಬುವುದು ಯಾರಿಗೂ ಗೊತ್ತಿರಲಿಲ್ಲ, ಆದರೆ ವೀಡಿಯೋಗಳು ಹೊರ ಬರ್ತಾ ಇತ್ತು, ತನ್ನ ಪ್ರವಚನಗಳನ್ನು ವೀಡಿಯೋ ಮೂಲಕ ಹೊರ ಬಿಡುತ್ತಿದ್ದ, ಆತನ ಪ್ರವಚನ ಕೇಳಿದರೆ ನಮ್ಮೆಲ್ಲಾ ಒತ್ತಡ ಮರೆತು ನಕ್ಕು ಬಿಡುತ್ತೇವೆ ಅಷ್ಟೊಂದು ಕಾಮಿಡಿಯಾಗಿರುತ್ತದೆ, ಹಾಗಾಗಿ ಈತನ ಪ್ರತಿಯೊಂದು ವೀಡಿಯೋಗಳೂ ಗಮನ ಸೆಳೆಯುತ್ತದೆ. ಅಲ್ಲದೆ ವಿಶ್ವಸಂಸ್ಥೆಯ ಸಭೆಗೆ ಈತ ತನ್ನ ಪ್ರತಿ ನಿಧಿಗಳನ್ನು ಕಳುಹಿಸಿದ್ದಾನೆ ಎಂಬ ವೀಡಿಯೋ ಕೂಡ ಗಮನ ಸೆಳೆದಿತ್ತು.
ನಿಜವಾಗಲೂ 21ಕ್ಕೆ ಕೈಲಾಸದ ಅಡ್ರೆಸ್ ಸಿಗುವುದೇ?
ನಿತ್ಯಾನಂದ ಕೈಲಾಸದ ವಿಳಾಸ ಬಹುರಂಗ ಪಡಿಸುವುದಾಗಿಯೂ, ಅಪ್ಪಟ ಹಿಂದೂಗಳು ಇಲ್ಲಿಯ ಪ್ರಜೆಯಾಗಬಹುದೆಂದೂ, ಈ ಅವಕಾಶ ಒಂದು ಬಾರಿಯಷ್ಟೇ ಸಿಗಲಿದೆ ಎಂದೆಲ್ಲಾ ಹೇಳಿದ್ದಾನೆ. ನಾಸಾಗೂ ಗೊತ್ತಿಲ್ಲದ ಕೈಲಾಸ ನಿತ್ಯಾನಂದನ ಲೋಕ ಅನಾವರಣ ಗೊಳ್ಳಲಿದೆಯೇ?... ಕಾದು ನೋಡುವ



Click it and Unblock the Notifications
