Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಶ್ರೀ ಕೃಷ್ಣ ಮಂತ್ರ ದಿನ ಯಾವ ಸಮಯದಲ್ಲಿ ಪಠಿಸಿದರೆ ತುಂಬಾ ಒಳ್ಳೆಯದು? ಮುಟ್ಟಿನ ಸಮಯದಲ್ಲಿ ಪಠಿಸಬಹುದೇ?
ಶ್ರೀ ಕೃಷ್ಣನ ಮಂತ್ರಗಳನ್ನು ಪಠಣೆ ಮಾಡುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದು, ಶ್ರೀ ಕೃಷ್ಣನ ಮಂತ್ರಗಳನ್ನು ಪಠಣೆ ಮಾಡುವುದರಿಂದ ನಿಮ್ಮೆಲ್ಲಾ ಇಷ್ಟಾರ್ಥಗಳು ನೆರವೇರುವುದು.
ಶ್ರೀಕೃಷ್ಣನ ಮಂತ್ರ ಪಠಣೆಗೆ ಕೆಲ ನಿಯಮಗಳಿವೆ, ಅಲ್ಲದೆ ದಿನದಲ್ಲಿ ಯಾವ ಸಮಯದಲ್ಲಿ ಮಂತ್ರ ಪಠಣೆ ಮಾಡಿದರೆ ಆ ಮಂತ್ರಗಳ ಶಕ್ತಿ ಹೆಚ್ಚರುತ್ತದೆ ಎಂಬುವುದೆಲ್ಲಾ ಇದೆ.
ಶ್ರೀ ಕೃಷ್ಣನ ಮಂತ್ರಗಳ ಪಠಣೆ ಮಾಡುವಾಗ ಈ ನಿಯಮಗಳನ್ನು ಪಾಲಿಸಿ
- ಶಾಂತವಾದ ಸ್ಥಳದಲ್ಲಿ ಕುಳಿತುಕೊಳ್ಳಬೇಕು.
- ನಂತರ ಓಂ ಕೃಷ್ಣಾಯ ನಮಃ ಎಂದು ಮಂತ್ರವನ್ನು ಪಠಣೆ ಮಾಡಿ.
- ಮಂತ್ರವನ್ನು ಪಠಣೆ ಮಾಡುವಾಗ ಆ ಮಂತ್ರಗಳನ್ನು ನಿಮ್ಮ ಕಿವಿಗೆ ಬೀಳುವಂತೆ ಪಠಣೆ ಮಾಡಿ, ಇದರಿಂದ ಮನಸ್ಸನ್ನು ಒಂದು ಕಡೆ ಕೇಂದ್ರೀಕರಿಸಲು ಸಹಾಯವಾಗುವುದು.
- ಮಂತ್ರವನ್ನು ತುಂಬಾ ವೇಗವಾಗಿಯೂ ಪಠಿಸಬಾರದು. ಪ್ರತಿಯೊಂದು ಮಂತ್ರವನ್ನು ಸ್ಪಷ್ಟವಾಗಿ ಪಠಿಸಬೇಕು.

ಮಂತ್ರವನ್ನು ಯಾವ ಸಮಯದಲ್ಲಿ ಪಠಣೆ ಮಾಡಿದರೆ ಒಳ್ಳೆಯದು?
ಶ್ರೀ ಕೃಷ್ಣನ ಮಂತ್ರಗಳನ್ನು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ನಂತರ ದೇವರನ್ನು ಪ್ರಾರ್ಥಿಸಿ ಮಂತ್ರಗಳ ಪಠಣೆ ಮಾಡಬಹುದು.
ಸಂಜೆ ಹೊತ್ತಿನಲ್ಲಿಯೂ ಮಂತ್ರ ಪಠಣೆ ಮಾಡಬಹುದು. ದೇವರ ದೀಪ ಹಚ್ಚಿ ಕೃಷ್ಣನನ್ನು ಮನಸ್ಸಿನಲ್ಲಿ ಧ್ಯಾನಿಸಿ ನಂತರ ಮಂತ್ರ ಪಠಣೆ ಮಾಡಬೇಕು.
ಮಲಗುವ ಮುನ್ನ ಕೂಡ ಮಂತ್ರಪಠಣೆ ಮಾಡಬಹುದು.
ಇದೇ ಸಮಯದಲ್ಲಿ ಮಂತ್ರ ಪಠಿಸಬೇಕೆಂಬ ಕಠಿಣ ನಿಮಯವಿಲ್ಲ, ಆದರೆ ಈ ಸಮಯಗಳಲ್ಲಿ ಪಠಣೆ ಮಾಡಿದರೆ ಹೆಚ್ಚು ಒಳ್ಳೆಯದು.
ಮಂತ್ರ ಪಠಣೆಯನ್ನು ಈ ಸಮಯದಲ್ಲಿ ಮಾಡಿದರೆ ಏಕಾಗ್ರತೆ ತುಂಬಾ ಹೆಚ್ಚಾಗುವುದು, ಬೆಳಗ್ಗೆ ಮಾಡಿದರೆ ಮನಸ್ಸು ಲವಲವಿಕೆಯಿಂದ ಕೂಡಿರುತ್ತದೆ, ಸಂಜೆ ಮಾಡಿದರೆ ದಣಿದ ಮನಸ್ಸು, ದೇಹಕ್ಕೆ ವಿಶ್ರಾಂತಿಯ ಅನುಭವ ಸಿಗುವುದು, ಮಲಗುವ ಮುನ್ನ ಪಠಣೆ ಮಾಡಿದರೆ ಎಲ್ಲಾ ಚಿಂತೆ ಬಿಟ್ಟು ಸುಖ ನಿದ್ದೆಗೆ ಜಾರಲು ಸಹಾಯವಾಗುವುದು.
ಮಹಿಳೆಯರು ಮುಟ್ಟಿನ ಸಮಯದಲ್ಲಿ ಶ್ರೀಕೃಷ್ಣ ಮಂತ್ರ ಪಠಣೆ ಮಾಡಬಹುದೇ?
ಮಂತ್ರ ಪಠಣೆಯನ್ನು ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಾಡಬಹುದು. ಅವರಿಗೆ ಆ ದಿನ ಯಾವುದೇ ಅಸ್ವಸ್ಥತೆ ಇಲ್ಲದಿದ್ದರೆ ಮನಸ್ಸನ್ನು ಧ್ಯಾನದ ಕಡೆಗೆ ಕೊಡಲು ಸಾಧ್ಯವಾದರೆ ಮಂತ್ರ ಪಠಿಸಬಹುದು.
ಸರ್ವ ಸಿದ್ಧಿಗೆ
ಓಂ ಕೃಷ್ಣಾಯ ನಮಃ
ಆರೋಗ್ಯ ವೃದ್ಧಿಗೆ
ಓಂ ನಮೋ ಭಗವತೇ ತಸ್ಮೈ ಕೃಷ್ಣಾಯ ಕುಂಠ ಮೇಧಸೇ|
ಸರ್ವ ವ್ಯಾಧಿ ವಿನಾಶಾಯ ಪ್ರಭೋ ಮಾಮಮೃತಂ ಕಧಿ|
ಯಶಸ್ವಿಗೆ
ಓಂ ಶ್ರೀ ಕೃಷ್ಣ ಶರಣಂ ನಮಃ
ವಿವಾಹವಾಗಲು
ಓಂ ನಮೋ ಭಾಗ್ವತೇ ಶ್ರೀ ಗೋವಿಂದಾಯೇ
ಓಂ ಕ್ಲೀಂ ಕೃಷ್ಣಾಯ ಗೋಪಿಜಾನ್ ವಲ್ಲಾಬಾಯ್ ಸ್ವಾಹಾ
ಹರೇ ಕೃಷ್ಣ ಮಹಾ ಮಂತ್ರ
ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೆ ಹರೇ
ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ
ಕೃಷ್ಣ ಗಾಯತ್ರಿ ಮಂತ್ರ
|| ಓಂ ದೇವಕಿ ನಂದನಾಯ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ಕೃಷ್ಣಃ ಪ್ರಚೋದಯಾತ್ ||
|| ಓಂ ದೇವಕಿನಂದನಾಯ ವಿದ್ಮಿಹೇ ವಾಸುದೇವಾಯ ಧೀಮಹಿ |
ತನ್ನೋ: ಕೃಷ್ಣಃ ಪ್ರಚೋದಯಾತ್ ||



Click it and Unblock the Notifications




