Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವಕರ್ಮ ಜಯಂತಿ ಯಾವಾಗ..? ಯಾರು ಈ ವಿಶ್ವಕರ್ಮ ಎಂಬುದು ಗೊತ್ತಾ?
ಬ್ರಹ್ಮ ಇಡಿ ಬ್ರಹ್ಮಾಂಡವನ್ನೇ ಸೃಷ್ಟಿಸಿದನು ಎಂಬುದನ್ನು ಹಿಂದೂ ಧರ್ಮದ ಗ್ರಂಥಗಳು ಹೇಳುತ್ತವೆ. ಅದೇ ರೀತಿ ಈ ಬ್ರಹ್ಮಾಂಡವನ್ನ ರೂಪಕ್ಕೆ ಇಳಿಸಿದ್ದು ವಿಶ್ವಕರ್ಮ ಎಂದು ನಂಬಲಾಗಿದೆ. ಹೀಗಾಗಿ ವಿಶ್ವಕರ್ಮ ಜಯಂತಿಯೂ ಹುಟ್ಟಿಕೊಂಡಿತು. ಸ್ವರ್ಗಲೋಕದಲ್ಲಿ ದೇವತೆಗಳಿಗೆ ಅರಮನೆ ನಿರ್ಮಿಸಿದವನುಈ ವಿಶ್ವಕರ್ಮ, ದೇವರ ಆಯುಧಗಳು ಅವರ ವಾಹನಗಳ ನಿರ್ಮಾತೃ ಕೂಡ ಇದೇ ವಿಶ್ವಕರ್ಮ.
ಈ ವಿಶ್ವಕರ್ಮನ ಜಯಂತಿಯನ್ನು ಪ್ರತಿ ವರ್ಷ ಕನ್ಯಾ ಸಂಕ್ರಾಂತಿಯಂದು ಆಚರಿಸಲಾಗುವುದು. ಇಡೀ ಭೂ ಮಂಡಲವನ್ನು ನಿರ್ಮಿಸಿದ ಈತನನ್ನು ವಾಸ್ತು ಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗಿದೆ. ಹೀಗಾಗಿ ಪ್ರತಿ ವರ್ಷ ಒಂದು ದಿನ ಆತನಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದೇ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಆಚರಿಸಲಾಗುತ್ತದೆ.

ಕನ್ಯಾ ಸಂಕ್ರಾಂತಿಯ ದಿನದಂದು ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಶ್ರಾದ್ಧ ಕರ್ಮ, ತರ್ಪಣ, ಪಿಂಡ ದಾನ ಮಾಡಬೇಕೆಂಬ ನಿಯಮವಿದೆ. ವಿಶ್ವಕರ್ಮನು ಶಿಲ್ಪಕಲೆಗಳ ದೇವರು ಎಂದು ಕರೆಯಿಸಿಕೊಂಡಿದ್ದು, ಇವರನ್ನು ದೇವ ಶಿಲ್ಪಿ ಎಂದೂ ಕರೆಯಲಾಗುತ್ತದೆ. ನಾಲ್ಕ ತಲೆಗಳನ್ನು ಇವರು ಹೊಂದಿದ್ದು, ನಾಲ್ಕು ಕೈಗಳನ್ನು ಹೊಂದಿದ್ದಾರೆ. ತಮ್ಮ ಕೈಗಳಲ್ಲಿ ತನ್ನ ಪರಿಕರಗಳನ್ನು ಹಿಡಿದುಕೊಂಡು ಇವರು ಚಿನ್ನದ ಒಡವೆಯನ್ನು ಧರಿಸಿಕೊಂಡು ಚಿನ್ನದ ಆಸನದಲ್ಲಿ ಕುಳಿತಿರುತ್ತಾರೆ ಎಂಬ ಉಲ್ಲೇಖಗಳು ಗ್ರಂಥಗಳಲ್ಲಿ ಸಿಗುತ್ತದೆ.
ವಿಶ್ವಕರ್ಮನು ಬ್ರಹ್ಮನ ಪುತ್ರನಾಗಿದ್ದು ವಿಶ್ವದ ತಂದೆ ಎಂದೂ ಇವರನ್ನು ಕರೆಯುತ್ತಾರೆ. ಪ್ರತಿಯೊಂದನ್ನು ತಿಳಿದಿರುವ ದೇವರು ಎಲ್ಲವನ್ನೂ ಅರಿತುಕೊಳ್ಳುವ ದೇವರು ಎಂಬುದಾಗಿ ಕೂಡ ವಿಶ್ವಕರ್ಮನನ್ನು ಕರೆಯುತ್ತಾರೆ.
ಸತ್ಯ ಯುಗದಲ್ಲಿ ವಿಶ್ವಕರ್ಮನು ಸ್ವರ್ಗ ಲೋಕವನ್ನು ಸೃಷ್ಟಿಸಿದರು ಎಂದು ಹೇಳಲಾಗಿದೆ. ಅಂತೆಯೇ ತ್ರೇತಾ ಯುಗದಲ್ಲಿ ಲಂಕೆಯನ್ನು, ದ್ವಾಪರ ಯುಗದಲ್ಲಿ ದ್ವಾರಕೆ ಮತ್ತು ಹಸ್ತಿನಾಪುರವನ್ನು ಕಲಿಯುಗದಲ್ಲಿ ಇಂದ್ರಪ್ರಸ್ಥವನ್ನು ನಿರ್ಮಿಸಿದ್ದರು. ದೇವತೆಗಳು, ಪಟ್ಟಣಗಳು, ನಗರಗಳು ಮತ್ತು ದೇವಸ್ಥಾನಗಳಂತಹ ಸ್ಥಳಗಳಿಗಾಗಿ ವಿಶ್ವಕರ್ಮನು ವಿನ್ಯಾಸ ಮತ್ತು ರಚನೆ ಕಲೆಯನ್ನು ಹೊಂದಿದ್ದಾರೆ. ದ್ವಾರಕೆಯು ಕೃಷ್ಣನ ರಾಜಧಾನಿಯಾಗಿತ್ತು ಅಂತೆಯೇ ಹಸ್ತಿನಾಪುರ ಪಾಂಡವರ ರಾಜಧಾನಿಯಾಗಿತ್ತು ಇವರು ಕೌರವರಿಂದ ಯುದ್ಧ ಮಾಡಿ ಈ ಸ್ಥಳವನ್ನು ಪಡೆದುಕೊಂಡಿದ್ದರು. ಇಂದ್ರಪ್ರಸ್ಥವನ್ನು ಮಹಾಭಾರತದಲ್ಲಿದ್ದ ಪಟ್ಟಣವಾಗಿತ್ತು. ಇದೆಲ್ಲವನ್ನೂ ವಿಶ್ವಕರ್ಮ ನಿರ್ಮಿಸಿದ್ದರು ಎಂದು ಹೇಳಲಾಗಿದೆ.
ರಾವಣನ ಅರಮನೆಯೂ ವಿಶ್ವಕರ್ಮನ ಚಮತ್ಕಾರ
ಲಂಕಾದ ರಾವಣನ ಅರಮನೆಯ ವಿಶೇಷಗಳು ನಿಮಗೆಲ್ಲಾ ತಿಳಿದಿರಬಹುದು. ಆ ಅರಮನೆ ಬರಿ ಚಿನ್ನದಿಂದಲೇ ಕಟ್ಟಲಾಗಿತ್ತು. ಅಷ್ಟೇ ಅಲ್ಲ ಆತನ ಮಲಗುವ ಕೋಣೆಯಲ್ಲಿ ಚಿನ್ನ, ವಜ್ರ, ಬೆಳ್ಳಿಗಳು ತುಂಬಿದ್ದವು, ಅರಮನೆಯ ಮೆಟ್ಟಿಲು ಸಹ ಚಿನ್ನದಿಂದ ಕೂಡಿತ್ತು, ಈ ಅರಮನೆಯನ್ನೂ ಸಹ ಕಟ್ಟಿದ್ದು ಇದೇ ವಿಶ್ವಕರ್ಮ ಎಂದು ನಂಬಲಾಗಿದೆ. ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳು ಮತ್ತು ಮಹಾಭಾರತದ ದೈವಿಕ ಪಾತ್ರಗಳು ಮತ್ತು ರಾಮಾಯಣವನ್ನು ಹೊಂದಿದ್ದ ರಥಗಳು ಆತನನ್ನು ವಿನ್ಯಾಸಗೊಳಿಸಿದ್ದು ಕೂಡ ವಿಶ್ವಕರ್ಮನಂತೆ.
ಈ ಹಬ್ಬವನ್ನು ವಿಶೇಷವಾಗಿ ಕುಶಲ ಕರ್ಮಿಗಳು ಮತ್ತು ವಾಸ್ತುಶಿಲ್ಪಿಗಳು ವಿಶೇಷವಾಗಿ ವಿಶ್ವಕರ್ಮ ಪೂಜೆಯನ್ನು ನಡೆಸುತ್ತಾರೆ. ಈ ಪೂಜೆಯನ್ನು ನಡೆಸುವುದರಿಂದ ಉತ್ಪದಾನೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಅದರಲ್ಲೂ ವಿಶ್ವಕರ್ಮ ಸಮುದಾಯದ ಮಂದಿಗೆ ಇದೊಂದು ಪ್ರಮುಖ ಹಬ್ಬವಾಗಿದೆ, ಅಂದು ಅವರು ತಮ್ಮ ಮನೆಯಲ್ಲಿರುವ ಹಳೆಯ ಆಯುಧಗಳು ಅವರ ಕೆಲಸದ ವಸ್ತುಗಳು, ವಾಹನಗಳಿಗೆ ಪೂಜೆ ಸಲ್ಲಿಸುತ್ತಾರೆ.



Click it and Unblock the Notifications


