Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕಟ್ಟಿದ ರಾಖಿಯನ್ನು ಯಾವಾಗ ತೆಗೆಯಬೇಕು? ಈ ಮಾಹಿತಿ ನಿಮಗೆ ತಿಳಿದಿದ್ಯಾ?
ಶ್ರಾವಣ ಹುಣ್ಣಿಮೆಯ ಈ ದಿನವನ್ನು ರಕ್ಷಾ ಬಂಧನ ಅಥವಾ ರಾಖಿ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನದಂದು ಸಹೋದರರಿಗೆ ತಂಗಿ ರಾಖಿ ಕಟ್ಟಿ ಅವರಿಂದ ರಕ್ಷಣೆ ಬೇಡುವ ಹಬ್ಬ ಎಂದು ಪರಿಗಣಿಸಲಾಗಿದೆ. ಹೀಗಾಗಿ ದೇಶದ ಎಲ್ಲಾ ಭಾಗದಲ್ಲೂ ಇದನ್ನು ಆಚರಿಸುತ್ತಾರೆ. ಹಾಗೆ ಸಹೋದರರು ತನ್ನ ತಂಗಿಯ ರಕ್ಷಣೆ ಮಾಡುವ ಮಾತು ನೀಡುತ್ತಾರೆ.
ಈ ಹಬ್ಬದಂದು ಸಂಭ್ರಮದ ಜೊತೆಗೆ ಒಂದಿಷ್ಟು ಜವಾಬ್ದಾರಿಯನ್ನು ನೆನಪಿಸುವ ಹಬ್ಬ ಎನ್ನಬಹುದು, ಹಾಗೆ ಬಣ್ಣ ಬಣ್ಣದ ದುಬಾರಿ ಬೆಲೆಯ ರಾಖಿಯನ್ನು ಕಟ್ಟು ಹಾಗೆ ದೂರದಲ್ಲಿರುವ ಸಹೋದರರಿಗೆ ಕಳುಹಿಸುವ ವಿಶೇಷ ರೀತಿ ಆಚರಣೆಯ ಹಬ್ಬ ಇದು. ಹಾಗೆ ದುಬಾರಿ ರಾಖಿಗಳು ಕೂಡ ಈಗ ಮಾರುಕಟ್ಟೆಯ್ಲಿ ಗಮನ ಸೆಳೆಯುತ್ತವೆ.

ಇನ್ನು ಈ ರಾಖಿ ಹಬ್ಬದ ಸಮಯದಲ್ಲಿ ಕೈಗೆ ಕಟ್ಟಿರುವ ರಾಖಿಯನ್ನು ಯಾವಾಗ ತೆಗೆಯಬೇಕು? ತೆಗೆಯುವ ಸೂಕ್ತ ಸಮಯ ಏನು?, ರಾಖಿಯನ್ನು ತೆಗೆದು ಏನು ಮಾಡಬೇಕು ಎಂಬುದನು ನಿಮಗೆ ಗೊತ್ತಾ? ಸಾಮಾನ್ಯವಾಗಿ ರಾಖಿಯನ್ನು ಕೈಗೆ ಕಟ್ಟಲು ಕೂಡ ಸಮಯ ಹಾಗೂ ಮುಹೂರ್ತ ನೋಡಲಾಗುತ್ತದೆ. ಆದ್ರೆ ಇತ್ತೀಚಿಗೆ ಎಲ್ಲಾ ಸಮಯದಲ್ಲು ರಾಖಿ ಕಟ್ಟುವುದು ನೋಡಬಹುದು.
ಆದ್ರೆ ರಾಖಿಯನ್ನು ಯಾವಾಗ ಕೈಯಿಂದ ತೆಗೆಯಬೇಕು? ತೆಗೆದ ಬಳಿಕ ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನ ಈ ಹಬ್ಬ ಆಚರಿಸುವುದು ನಿಮಗೆಲ್ಲಾ ತಿಳಿದಿದೆ. ಇದನ್ನು ನೂಲ ಹುಣ್ಣಿಗೆ ಹಬ್ಬ ಎಂದು ಕೂಡ ಕರೆಯುತ್ತಾರೆ. ರಾಮಾಯಣ ಕಾಲದಲ್ಲಿ ಈ ಹಬ್ಬ ಆರಂಭಗೊಂಡಿತ್ತು ಎಂದು ಹೇಳಲಾಗಿದೆ. ರಾಖಿ ಕಟ್ಟುವುದರಿಂದ ಅಣ್ಣ ತಂಗಿಯ ನಡುವಿನ ಬಾಂಧವ್ಯ ಹೆಚ್ಚಾಗಲಿದೆ. ಸಂಬಂಧ ಗಟ್ಟಿಯಾಗಲಿದೆ ಎಂದು ನಂಬಲಾಗಿದೆ.
ಕೈಗೆ ಕಟ್ಟಿದ ರಾಖಿಯನ್ನು ಯಾವಾಗ ತೆಗೆಯಬೇಕು?
ಪ್ರೀತಿಯಿಂದ ಸಹೋದರಿಯರು ಕಟ್ಟಿದ ರಾಖಿಯನ್ನು ಕೆಲವು ಅದೇ ದಿನ ಸಂಜೆ ತೆಗೆಯುತ್ತಾರೆ. ಮತ್ತೆ ಕೆಲವರು ತಿಂಗಳುಗಳ ಕಾಲ ಹಾಗೆ ಕೈಯಲ್ಲಿ ಇಟ್ಟುಕೊಂಡಿರುತ್ತಾರೆ, ಮತ್ತೆ ಕೆಲವರು ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶನನ್ನು ನೀರಿನಲ್ಲಿ ನಿಮಜ್ಜನ ಮಾಡುವ ಸಮಯದಲ್ಲಿ ರಾಖಿಯನ್ನು ಬಿಚ್ಚಿ ನೀರಿಗೆ ಹಾಕುವುದು ನೋಡಬಹುದು. ಆದರೆ ಈ ರಾಖಿಯನ್ನು ನೀವು ಯಾವಾಗ ಬೇಕಾದರು ತೆಗೆಯಬಹುದು. ಇದಕ್ಕೆ ನಿರ್ಧಿಷ್ಟವಾಗಿ ಇಂತಹದ್ದೇ ದಿನ ಎಂದು ಹೇಳಲಾಗಿಲ್ಲ. ಆದ್ರೆ ಈ ರಾಖಿಯನ್ನು ಬರುವ ಅಮಾವಾಸ್ಯೆಯ ಒಳಗೆ ತೆಗೆಯುವುದು ಸೂಕ್ತ ಎಂದು ಹೇಳಲಾಗುತ್ತದೆ. ಹೀಗಾಗಿ ಗಣೇಶ ಚತುರ್ಥಿ ಸೂಕ್ತ ಸಮಯ ಎಂದು ಹೇಳಲಾಗಿದೆ.
ಹಾಗೆ ಹಲವರು ಕೃಷ್ಣ ಜನ್ಮಾಷ್ಠಮಿಯ ಮಾರನೆ ದಿನ ಈ ರಾಖಿಗಳ ತೆಗೆದು ನೀರಿಗೆ ಹಾಕುತ್ತಾರೆ. ರಾಖಿ ಹಬ್ಬದ ಮುಗಿದು 8ನೇ ದಿನಕ್ಕೆ ಕಷ್ಣ ಜನ್ಮಾಷ್ಠಮಿ ಹಬ್ಬ ಬರಲಿದೆ. ಈ ಹಬ್ಬದ ಮಾರನೆ ದಿನ ರಾಖಿಗಳ ಬಿಚ್ಚಿ ಕೆರೆ, ನದಿಗೆ ಹಾಕುವುದು ನೋಡಬಹುದು. ಹಾಗೆ ಈ ರಾಖಿಯನ್ನು ಕೈಯಿಂದ ಬಿಚ್ಚಿ ಎಲ್ಲೆಂದರಲ್ಲಿ ಎಸೆಯಬಾರದು. ರಾಖಿಯನ್ನು ನೀರಿಗೆ ಹಾಕುವುದು ಸೂಕ್ತ, ಹತ್ತಿರದಲ್ಲಿ ಯಾವುದೇ ನೀರಿನ ಮೂಲ ಇಲ್ಲದಿದ್ದರೆ ಈ ರಾಖಿಯನ್ನು ಹಾಲು ಮರದ ಕೆಳಗೆ ಇಡಬಹುದು. ಇಲ್ಲವೆ ಯಾರು ತುಳಿಯದಂತಹ ಜಾಗದಲ್ಲಿ ಇಡಬಹುದು.
(ಹಕ್ಕುತ್ಯಾಗ: ಈ ಮೇಲಿನ ಲೇಖನದಲ್ಲಿ ಹೇಳಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಈ ವಿಷಯವನ್ನು ಬೋಲ್ಡ್ ಸ್ಕೈ ಕನ್ನಡ ವೆಬ್‌ಸೈಟ್ ದೃಢೀಕರಿಸುವುದಿಲ್ಲ. ಹಾಗೆ ಇದನ್ನು ಅನುಸರಿಸುವುದು ಓದುಗರ ನಂಬಿಕೆ ಹಾಗೂ ಸ್ವಂತ ಜಬಾವ್ದಾರಿಯಾಗಿರಲಿದೆ. ಮಾಹಿತಿ ಒದಗಿಸುವುದು ಮಾತ್ರ ಈ ಲೇಖನದ ಉದ್ದೇಶವಾಗಿದೆ)



Click it and Unblock the Notifications
