Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2024ರ ಮೊದಲ ಏಕಾದಶಿ ಯಾವಾಗ? ಸಫಲ ಏಕಾದಶಿಯ ಸಮಯ, ದಿನ, ಮಹತ್ವವೇನು?
ಹಿಂದೂ ಧರ್ಮದಲ್ಲಿ ಏಕಾದಶಿ ಉಪವಾಸ ಹೀಗೆ ಹತ್ತಾರು ಆಚರಣೆಗಳಿಗೆ ವಿಶೇಷ ಮಹತ್ವವಿದೆ. ಎಲ್ಲಾ ಉಪವಾಸಗಳಲ್ಲಿ ಇದು ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಒಂದು ವರ್ಷದಲ್ಲಿ 24 ಏಕಾದಶಿ ಉಪವಾಸಗಳು ಬರುತ್ತವೆ ಮತ್ತು ಈ ಉಪವಾಸಗಳನ್ನು ಆಚರಿಸುವುದರಿಂದ ಆರೋಗ್ಯ, ಐಶ್ವರ್ಯ ವೃದ್ಧಿಯಾಗಲಿದೆ ಎಂದು ನಂಬಲಾಗಿದೆ. ಹಾಗಾದರೆ 2024ರ ಆರಂಭದಲ್ಲಿ ಮತ್ತು ಈ ವರ್ಷದ ಮೊದಲ ಏಕಾದಶಿ ಯಾವಾಗ ಎಂಬುದನ್ನು ತಿಳಿಯೋಣ.
ಪ್ರತಿ ಏಕಾದಶಿಯ ವಿವಿಧ ಹೆಸರುಗಳು ಮತ್ತು ಮಹತ್ವವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ. ಎಲ್ಲಾ ಏಕಾದಶಿ ದಿನಾಂಕಗಳು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿವೆ. ಏಕಾದಶಿಯಂದು ವಿಧಿವಿಧಾನಗಳು ಮತ್ತು ಭಕ್ತಿಯಿಂದ ಉಪವಾಸ ಮಾಡುವುದರಿಂದ, ಭಗವಾನ್ ವಿಷ್ಣುವು ಶೀಘ್ರದಲ್ಲೇ ತನ್ನ ಭಕ್ತರೊಂದಿಗೆ ಸಂತೋಷಪಡುತ್ತಾನೆ ಮತ್ತು ಅವರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಮತ್ತು ಭಕ್ತರು ತಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತಾರೆ ಎಂದು ನಂಬಲಾಗಿದೆ.

ಈ ವರ್ಷ ಮೊದಲನೆ ಏಕಾದಶಿಯಾಗಿ ಸಫಲ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ಏಕಾದಶೀಯ ಮಹತ್ವವೇನು? ಯಾವ ದಿನದಂದು ಈ ಏಕಾದಶಿ ಆಚರಿಸಬೇಕು ಎಂಬ ಕುರಿತು ಮಾಹಿತಿ ಇಲ್ಲಿದೆ.
ಸಫಲ ಏಕಾದಶಿ 2024 ಯಾವಾಗ?
ದಿನಾಂಕ: ಜನವರಿ 7
ಏಕಾದಶಿ ತಿಥಿ ಆರಂಭ - ಜನವರಿ 06, 2024 ಮಧ್ಯರಾತ್ರಿ 12:41ರಿಂದ ಪ್ರಾರಂಭ
ಏಕಾದಶಿ ತಿಥಿ ಮುಕ್ತಾಯ: ಜನವರಿ 7 ಬೆಳಗ್ಗೆ 12:46ಕ್ಕೆ
ಪಾರಣ ಸಮಯ: ಜನವರಿ 8 ಬೆಳಗ್ಗೆ 07:09ರಿಂದ 09:03ರವರೆಗೆ
ಸಫಲ ಏಕಾದಶಿ ಪೂಜಾ ವಿಧಾನ
ದಶಮಿ ತಿಥಿಯಂದು ಸೂರ್ಯಾಸ್ತದಿಂದ ಏಕಾದಶಿ ಉಪವಾಸ ಪ್ರಾರಂಭವಾಗುತ್ತದೆ. ದಶಮಿ ತಿಥಿಯಂದು ಸೂರ್ಯಾಸ್ತದ ಮೊದಲು ಆಹಾರ ಸೇವಿಸಿ. ಇದಾದ ನಂತರ ಏಕಾದಶಿಯ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು. ನಂತರ ವಿಷ್ಣುವಿಗೆ ಹಾಲು ಮತ್ತು ಗಂಗಾಜಲದಿಂದ ವಿಧಿವತ್ತಾಗಿ ಪೂಜಿಸಬೇಕು.
ವಿಷ್ಣುವನ್ನು ಹಳದಿ ವಸ್ತ್ರ, ಹಣ್ಣು ಮತ್ತು ಹೂವುಗಳಿಂದ ಅಲಂಕರಿಸಿ ಮತ್ತು ಧೂಪ, ದೀಪ, ಪಂಚಾಮೃತ ರೋಲಿ, ಅಕ್ಷತೆ, ಶ್ರೀಗಂಧ, ಹೂವುಗಳು, ತುಳಸಿ ಎಲೆಗಳು, ಧೂಪದ್ರವ್ಯಗಳು, ವೀಳ್ಯದೆಲೆ ಇತ್ಯಾದಿಗಳನ್ನು ಅರ್ಪಿಸಿ. ಇದಾದ ನಂತರ ಸಫಲ ಏಕಾದಶಿಯ ಕಥೆಯನ್ನು ಓದಿ ದೇವರ ಆರತಿ ಮಾಡಿ ಪ್ರಸಾದವನ್ನು ಅರ್ಪಿಸಿ. ನಂತರ ಏಕಾದಶಿಯ ದಿನಾಂಕದಂದು, ದಿನವಿಡೀ ಉಪವಾಸವನ್ನು ಆಚರಿಸಿ ಮತ್ತು ರಾತ್ರಿಯಲ್ಲಿ ನಾರಾಯಣನ ಭಜನೆ ಮತ್ತು ಕೀರ್ತನೆಗಳನ್ನು ಪಠಿಸುತ್ತಾ ಎಚ್ಚರವಾಗಿರಿ. ಮರುದಿನ, ಪಾರಣ ಮುಹೂರ್ತದ ಸಮಯದಲ್ಲಿ ಉಪವಾಸವನ್ನು ಮುರಿಯಿರಿ ಮತ್ತು ನಿಮ್ಮ ಸಾಮರ್ಥ್ಯದ ಪ್ರಕಾರ, ಯಾವುದೇ ಅಗತ್ಯವಿರುವ ವ್ಯಕ್ತಿಗೆ ಆಹಾರವನ್ನು ನೀಡಿ ಮತ್ತು ದಾನ ಮಾಡಿ.
ಸಫಲ ಏಕಾದಶಿಯ ಮಹತ್ವವೇನು?
ಶ್ರೀಕೃಷ್ಣನು ಧರ್ಮರಾಜ ಮತ್ತು ಯುಧಿಷ್ಠಿರನಿಗೆ ಸಫಲ ಏಕಾದಶಿಯ ಮಹತ್ವವನ್ನು ಬೋಧಿಸಿದನು. ಸಫಲ ಏಕಾದಶಿಯ ದಿನ ಉಪವಾಸ ಮಾಡುವುದರಿಂದ ಎಷ್ಟೇ ಯಾಗ, ಉಪವಾಸ, ಯಜ್ಞ ಮಾಡಿದರೂ ಸಿಗದ ತೃಪ್ತಿ ಸಿಗುತ್ತದೆ ಎಂದು ಶ್ರೀ ಕೃಷ್ಣ ಹೇಳಿದ್ದಾನೆ ಎಂದು ನಂಬಲಾಗಿದೆ.
ಸಫಲ ಏಕಾದಶಿ ವ್ರತದ ಕಥೆ ಏನು ಗೊತ್ತಾ?
ಚಂಪಾವತಿ ಎಂಬ ಶ್ರೀಮಂತ ನಗರವನ್ನು ಮಹಿಷ್ಮಾನ್ ಎಂಬ ರಾಜ ಆಳುತ್ತಿದ್ದನಂತೆ. ಆದರೆ ರಾಜನಂತೆ ಆತನ ಮಗ ದಾನಿಯೂ, ಸಹಿಷ್ಣನು ಆಗಿರದೆ ಬಹಳ ಒರಟನಾಗಿದ್ದನಂತೆ. ಆತ ಜನರಿಗೆ ಕಷ್ಟಗಳ ನೀಡಲು ಮುಂದಾದಾಗ ರಾಜ ತನ್ನ ಮಗನ ಎಂದು ನೋಡದೆ ಲುಂಭಕ ಎಂಬ ಪುತ್ರನಿಗೆ ರಾಜ್ಯ ಬಹಿಷ್ಕಾರದ ಶಿಕ್ಷೆ ನೀಡಿದನಂತೆ.
ಆತ ರಾಜ್ಯ ಬಿಟ್ಟು ಕಾಡು ಮೇಡು ಅಲೆದಾಡಿ ಕಡೆಗೊಮ್ಮೆ ಕುಸಿದು ಬಿದ್ದಿದ್ದನಂತೆ. ಆ ದಿನ ಏಕಾದಶಿಯಾದ್ದರಿಂದ ಅರಿವಿಲ್ಲದೆ ಉಪವಾಸ ಆಚರಿಸಿದ ಲುಂಭಕನಿಗೆ ವಿಷ್ಣು ಕಾಣಿಸಿಕೊಂಡು ಮರಳಿ ರಾಜ್ಯ ನೀಡಿದನೆಂದು ಪುರಾಣಗಳು ಹೇಳುತ್ತವೆ. ಅಂದಿನಿಂದ ಲುಂಭಕನು ಸದಾಚಾರದಿಂದ ಆಳ್ವಿಕೆ ನಡೆಸುತ್ತಾ ಜನರ ಮೆಚ್ಚುಗೆಗೆ ಪಾತ್ರನಾದನು. ಅದಕ್ಕಾಗಿಯೇ ಏಕಾದಶಿಯ ದಿನದಂದು ಉಪವಾಸ ಮಾಡಿ ವಿಷ್ಣುವನ್ನು ಪೂಜಿಸುವವರು ತಮ್ಮ ಇಷ್ಟಾರ್ಥ ಈಡೇರೆಸಿಕೊಂಡು ವಿಷ್ಣುವಿನ ಲೋಕ ಸೇರಲಿದ್ದಾರೆ ಎಂಬ ನಂಬಿಕೆ ಹುಟ್ಟಿಕೊಂಡಿದೆ.



Click it and Unblock the Notifications