Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಜಯದಶಮಿಯ ಶುಭ ಮುಹೂರ್ತ ಯಾವಾಗ? ತಿಥಿ, ಗಳಿಗೆ ಹಬ್ಬದ ಕಥೆ ಇಲ್ಲಿದೆ..!
ದಸರಾ ಹಬ್ಬ ಕೊನೆಯಾಗುವುದೇ ವಿಜಯ ದಶಮಿಯಂದು. 9 ದಿನಗಳ ಬಳಿಕ ಆಯುಧ ಪೂಜೆ ನೆರವೇರಿಸಿ ವಿಜಯ ದಶಮಿಯ ದಿನದಂದು ದಸರಾ ಹಬ್ಬ ಆಚರಿಸಲಾಗುತ್ತದೆ. ದೇಶದ ನಾನಾ ಭಾಗದಲ್ಲಿ ವಿಜಯ ದಶಮಿ ಹಬ್ಬ ವಿವಿಧ ಹೆಸರುಗಳಿಂದ ವಿವಿಧ ಬಗೆಯಲ್ಲಿ ಆಚರಿಸಲಾಗುತ್ತದೆ. ಹಾಗೆ ಕರ್ನಾಟಕದಲ್ಲಿ ಇದೊಂದು ವಿಜಯದ ಸಂಕೇತವಾಗಿ ಆಚರಿಸಲ್ಪಡುತ್ತದೆ.
ಕೆಡುಕಿನ ವಿರುದ್ಧ ಸತ್ಯತ ಜಯವಾಗಿ ಈ ಹಬ್ಬವನ್ನ ಆಚರಿಸಲಾಗುತ್ತದೆ. ಅಶ್ವಿನಾ ಮಾಸದಲ್ಲಿ ಶುಕ್ಲ ಪಕ್ಷದ ದಶಮಿ ತಿಥಿಯಂದು (ಹತ್ತನೇ ದಿನ) ದಸರಾವನ್ನು ಆಚರಿಸಲಾಗುತ್ತದೆ. ರಾಜ್ಯದಲ್ಲಿ ನಾಳೆ ಅ.12ರಂದು ವಿಜಯ ದಶಮಿ ಹಬ್ಬ ಆಚರಿಸಲಾಗುತ್ತಿದೆ. ವಿಜಯ ಮುಹೂರ್ತವು ಅಕ್ಟೋಬರ್ 12, 2024, ಮಧ್ಯಾಹ್ನ 01:30 ರಿಂದ 02:17 ರವರೆಗೆ ಇದೆ. ಹಾಗೆ ಪೂಜೆಯ ಮುಹೂರ್ತವು ಮಧ್ಯಾಹ್ನ 12:43 ರಿಂದ 03:04 ರವರೆಗೆ ಇರಲಿದೆ.

ಹಬ್ಬಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳನ್ನು ನಡೆಸಲು ಈ ಸಮಯಗಳು ಮುಖ್ಯವಾಗಿದೆ. ಮಹಿಷಾಸುರ ಎಂಬ ರಾಕ್ಷಸನನ್ನು ಚಾಮುಂಡಿ ದೇವಿ ಸಂಹಾರ ಮಾಡಿದ ದಿನವನ್ನಾಗಿಯೂ ಆಚರಿಸಲಾಗುತ್ತಿದೆ. ಹಾಗೆ ಉತ್ತರ ಭಾರತದಲ್ಲಿ ರಾವಣನ ಪ್ರತಿಕೃತಿ ದಹಿಸಲಾಗುತ್ತದೆ. ಈ ದಿನ ರಾಮನು ರಾವಣನ ಮೇಲೆ ಜಯಗಳಿಸಿದ ದಿನವನ್ನಾಗಿ ಅವರು ಆಚರಿಸುತ್ತಾರೆ.
ಮಹಿಷಾಸುರ ಎಂಬ ರಾಕ್ಷಸ ದೇವರಿಂದ ವರ ಪಡೆದು ತನಗೆ ಸಾವು ಬಂದರೆ ಅದು ಹೆಣ್ಣಿನಿಂದ ಬರಲಿ ಎಂಬ ವರ ಗಳಿಸಿದ್ದ. ಹೀಗಾಗಿ ಆತನ ಎದುರು ಯಾರು ಸಹ ನಿಲ್ಲುತ್ತಿರಲಿಲ್ಲ. ಇಡೀ ಮಾನವ ಕುಲ ಮಾತ್ರವಲ್ಲ ದೇವರಿಗೆ ಆತ ಸವಾಲಾಗಿದ್ದ. ಹೀಗಾಗಿ ಆತನ ಸಂಹಾರ ಮಾಡಲು ಚಾಮುಂಡಿ ಅವತಾರವೇತ್ತಿ ಭೂಲೋಕದಲ್ಲಿ ಆತನನ್ನು ಸಂಹಾರ ಮಾಡಿದಳು ಎಂಬ ಕಥೆ ಇದೆ. ವಿಜಯ ದಶಮಿಯ ದಿನದಂದು ಆತನ ಸಂಹಾರ ಮಾಡಿದ್ದರಿಂದ ಈ ದಿನವನ್ನ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ.
ಹಾಗೆ ದೇವಿ ಮಹಿಷನ ಸಂಹಾರ ಮಾಡಿ ಮತ್ತೆ ಶಿವನಲ್ಲಿ ಲೀನಳಾದ ದಿನವನ್ನಾಗಿಯೂ ಈ ದಿನವನ್ನ ಆಚರಿಸಲಾಗುತ್ತದೆ. ಆಕೆಯ ಅವತಾರ ತಾಳಿ ಭೂಲೋಕಕ್ಕೆ ಬಂದು ಬಳಿಕ 9 ಅವತಾರದಲ್ಲಿ ಕಾಣಿಸಿದಳು, ಕೊನೆಯಲ್ಲಿ ಪುನಃ ತನ್ನ ಪತಿ ಕೈಲಾಸವಾಸ ಶಿವನಿದ್ದ ಕಡೆಗೆ ಹಿಂತಿರುಗಿದ ದಿನವೆಂದು ಹೇಳಲಾಗುತ್ತದೆ.
ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ದುರ್ಗಾ ಪೂಜೆ ಹೆಸರಿನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಅಲ್ಲಿ ದುರ್ಗೆಯ ಮೂರ್ತಿಯನ್ನು ಪೂಜಿಸಿ ಬಳಿಕ ಕೊನೆಯ ದೊನ ನೀರಿನಲ್ಲಿ ನಿಮಜ್ಜನ ಮಾಡಲಾಗುತ್ತದೆ.
ರಾವಣನ ವಿರುದ್ಧ ರಾಮನ ವಿಜಯ
ಉತ್ತರ ಭಾರತದ ಹಲವು ಕಡೆಗಳಲ್ಲಿ ದಸರಾವು ಶ್ರೀರಾಮ ರಾವಣನನ್ನು ಯುದ್ಧದಲ್ಲಿ ಸೋಲಿಸಿದ ದಿನವಾಗಿ ಆಚರಿಸಲಾಗುತ್ತದೆ. ಸೀತೆಯನ್ನು ಅಪಹರಿಸಿದ್ದ ರಾವಣನನ್ನು ಈ ದಿನ ರಾಮ ಯುದ್ಧದಲ್ಲಿ ಸೋಲಿಸಿ ಮುಕ್ತಿ ನೀಡಿದ ಎಂದು ನಂಬಲಾಗಿದೆ. ಇದೇ ದಿನದಂದು ರಾವಣ ದೊಡ್ಡ ದೊಡ್ಡ ಪ್ರತಿಕೃತಿಗಳ ದಹಿಸಲಾಗುತ್ತದೆ. ರಾವಣ ಮಾತ್ರವಲ್ಲ ಸಹೋದರ ಕುಂಭಕರ್ಣ ಪುತ್ರ ಮೇಘನಾಥನ ಪ್ರತಿಕೃತಿಗಳನ್ನು ಕೂಡ ದಹಿಸಲಾಗುತ್ತದೆ.
ಇನ್ನೊಂದು ಕಥೆಯು ನೇರವಾಗಿ ಮಹಾಭಾರತಕ್ಕೆ ಸಂಬಂಧಿಸಿದೆ. ಪಾಂಡವರು ದಾಯಾದಿಗಳಾದ ಕೌರವರೊಡನೆ ಪಗಡೆ ಆಟದಲ್ಲಿ ಸೋತು, 12 ವರ್ಷ ವನವಾಸ ಹಾಗೂ 1 ವರ್ಷ ಅಜ್ಞಾತವಾಸ ಅನುಭವಿಸಬೇಕಾದ ಸಂದರ್ಭ ನೆನಪಿಸುತ್ತದೆ. ಈ ದಿನದಂದು ಪಾಂಡವರ ಅಜ್ಞಾತವಾಸ ಪೂರ್ಣಗೊಳ್ಳುತ್ತದೆ. ಅವರೆಲ್ಲರು ತಮ್ಮ ರಾಜ್ಯಕ್ಕೆ ಬರುವ ದಿನ ಇದಾಗಿದೆ. ಕಾಡಿನಿಂದ ರಾಜ್ಯಕ್ಕೆ ಆಗಮಿಸುವ ಅವರನ್ನು ವಿಜೃಂಭಣೆಯಿಂದ ಸ್ವಾಗತಿಸಿ ಹಬ್ಬ ಆಚರಿಸಲಾಯಿತು ಎಂಬ ಪ್ರತೀತಿ ಇದೆ.



Click it and Unblock the Notifications